Bele sala manna list-ಕರ್ನಾಟಕದಲ್ಲಿ ಇಲ್ಲಿಯವರೆಗೂ ಯಾರಿಗೆಲ್ಲಾ ಎಷ್ಟು ಸಾಲ ಮನ್ನಾ ಆಗಿದೆ ಹೀಗೆ ಚೆಕ್ ಮಾಡಿ

<Krushirushi> <Bele sala manna list> <bele> <bele sala> <bele sala manna> <krushi sala> <krushi sala manna> <crop> <crop loan> <crop loan status> <crop loan wavier> <crop loan waiver status> <crop loan farmer list> <Karnatka bele sala manna list> <bele sala manna status> <ಬೆಳೆ> <ಬೆಳೆಸಾಲ> <ಬೆಳೆ ಸಾಲ ಮನ್ನಾ> <ಬೆಳೆ ಸಾಲ ಮನ್ನಾ ಸ್ಟೇಟಸ್> <ಬೆಳೆ ಸಾಲ ಮನ್ನಾ ಪಟ್ಟಿ> <ಬೆಳೆ ಸಾಲ ಮನ್ನಾ ಲಿಸ್ಟ್> <ರೈತ> <ಸಾಲ> <ಹಣ> <ಸಾಲಮನ್ನಾ> ಬ್ಯಾಂಕ್>

Bele sala manna list-ಕರ್ನಾಟಕದಲ್ಲಿ ಇಲ್ಲಿಯವರೆಗೂ ಯಾರಿಗೆಲ್ಲಾ ಎಷ್ಟು ಸಾಲ ಮನ್ನಾ ಆಗಿದೆ ಹೀಗೆ ಚೆಕ್ ಮಾಡಿ

Bele sala manna list-ಕರ್ನಾಟಕದಲ್ಲಿ ಇಲ್ಲಿಯವರೆಗೂ ಯಾರಿಗೆಲ್ಲಾ ಎಷ್ಟು ಸಾಲ ಮನ್ನಾ ಆಗಿದೆ ಹೀಗೆ ಚೆಕ್ ಮಾಡಿ

ನೆರೆಯ ತೆಲಂಗಾಣದಲ್ಲಿ ₹2 ಲಕ್ಷದವರೆಗೆ
ರೈತರ ಸಾಲ ಮನ್ನಾ ಮಾಡಲು ಅಲ್ಲಿನ ಸರ್ಕಾರ ನಿರ್ಧಾರ
ಮಾಡಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ರೈತರ ಸಾಲ ಮನ್ನಾ
ಮಾಡಿ ರೈತರನ್ನು ಋಣಮುಕ್ತರನ್ನಾಗಿಸಿ' ಎಂದು ವಿಧಾನಸಭೆ
ವಿರೋಧಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದ್ದಾರೆ

Belesala manna status 2024-ಬೆಳೆಸಾಲ ಮನ್ನಾ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್

ಇಲ್ಲಿಯವರೆಗೂ ಎಷ್ಟು ಬೆಳೆಸಾಲಮನ್ನಾ ಆಗಿದೆ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://mahitikanaja.karnataka.gov.in/department

ನಂತರ "ಕಂದಾಯ ಇಲಾಖೆ/Revenue department" ಮೇಲೆ ಕ್ಲಿಕ್ ಮಾಡಿ

ನಂತರ "ಕಂದಾಯ ಇಲಾಖೆ ಸೇವೆಗಳು/Revenue department services" ಮೇಲೆ ಕ್ಲಿಕ್ ಮಾಡಿ

ನಂತರ ವಾಣಿಜ್ಯ ಬ್ಯಾಂಕ್ ನ ಸಾಲಮನ್ನಾ ಚೆಕ್ ಮಾಡಲು "Loan waiver report for commercial bank" ಮೇಲೆ ಕ್ಲಿಕ್ ಮಾಡಿ. ಸೊಸೈಟಿಯಲ್ಲಿನ ಸಾಲಮನ್ನಾ ಚೆಕ್ ಮಾಡಲು "Loan waiver report for primary agricultural cooperative societies" ಮೇಲೆ ಕ್ಲಿಕ್ ಮಾಡಿ

ನಂತರ ಮಾದರಿ "ರೈತ/farmer" ಎಂದು Select ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ ಮತ್ತು ಗ್ರಾಮವನ್ನು Select ಮಾಡಿ "ಸಲ್ಲಿಸು" ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆಲ್ಲಾ ಸಾಲಮನ್ನಾ ಆಗಿದೆ ಎಂದು ಚೆಕ್ ಮಾಡಬಹುದು.Search button ಅಲ್ಲಿ ನಿಮ್ಮ ಹೆಸರು ಹಾಕಿದರೆ ನಿಮ್ಮ ಹೆಸರು ಸಿಗುತ್ತದೆ.

ಹಸಿರು ಪಟ್ಟಿಯಲ್ಲಿ ನಿಮ್ಮ ಅರ್ಹತೆ ಹೀಗೆ ಚೆಕ್ ಮಾಡಿ

https://mahitikanaja.karnataka.gov.in/department

ನಂತರ ಕಂದಾಯ ಇಲಾಖೆ ಮೇಲೆ ಕ್ಲಿಕ್ ಮಾಡಿ

ನಂತರ ಕಂದಾಯ ಇಲಾಖೆ ಸೇವೆಗಳು ಮೇಲೆ ಕ್ಲಿಕ್ ಮಾಡಿ

ನಂತರ CLWS ರೈತನ ಅರ್ಹತೆ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ ಮತ್ತು ಬ್ಯಾಂಕ್ select ಮಾಡಿ,ಸಲ್ಲಿಸು ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ರೈತನ ಹೆಸರು,ಸಾಲ ಮನ್ನಾಗೆ ಬೇಕಾದ ಅರ್ಹತೆ ಹಾಗೂ ಸ್ಥಿತಿಗತಿ ಚೆಕ್ ಮಾಡಬಹುದು

ಈ ಕೆಳಗಿನಂತೆ ಹಸಿರು ಪಟ್ಟಿಯಲ್ಲಿ "Yes" ಎಂದು ಇದ್ದರೆ ನೀವು ಸಾಲಮನ್ನಾಗೆ ಅರ್ಹ ಎಂದು ಅರ್ಥ,"No" ಎಂದು ಇದ್ದರೆ ನೀವು ಸಾಲಮನ್ನಾಗೆ ಅರ್ಹರಲ್ಲ ಎಂದು ಅರ್ಥ

 

 ಅಡಕೆ ಹಿಂಗಾರು ಒಣಗು ರೋಗ-Arecanut inflorescence dieback


ಅಡಕೆ ಬೆಳೆಯಲ್ಲಿ ಕಾಣಿಸಿಕೊಳ್ಳುವ ಹಿಂಗಾರು ಒಣಗು ರೋಗ (Arecanut Inflorescence Die-back) ಮತ್ತು ಹಿಂಗಾರು ಬೆಳೆ ಒಣಗುವಿಕೆಗೆ ಸಂಬಂಧಿಸಿದ ಪ್ರಮುಖ ವಿವರಗಳು ಇಲ್ಲಿವೆ:

1. ಅಡಕೆ ಹಿಂಗಾರು ಒಣಗು ರೋಗ (ಕಾರಣಗಳು)

• ಶಿಲೀಂಧ್ರದ ಸೋಂಕು: ಕೊಲ್ಲೆಟೋಟ್ರೈಕಂ ಗ್ಲಿಯೋಸ್ಪೋರಿಯಾಡಿಸ್ (Colletotrichum gloeosporioides) ಎಂಬ ಶಿಲೀಂಧ್ರದಿಂದ ಈ ರೋಗ ಬರುತ್ತದೆ.
• ಕಾಣಿಸಿಕೊಳ್ಳುವ ಸಮಯ: ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್ ತಿಂಗಳಿನಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
• ಕೀಟಗಳ ಬಾಧೆ: ಕೆಲವು ಸಂದರ್ಭಗಳಲ್ಲಿ ಹಿಂಗಾರನ್ನು ತಿನ್ನುವ ಹುಳುಗಳು ಅಥವಾ ಕೀಟಗಳ ಬಾಧೆಯಿಂದಲೂ ಹಿಂಗಾರು ಒಣಗುತ್ತದೆ.

2. ಹತೋಟಿ ಮತ್ತು ಪರಿಹಾರ ಕ್ರಮಗಳು

• ಔಧಷ ಸಿಂಪಡಣೆ: ಶಿಲೀಂಧ್ರನಾಶಕ ಔಷಧಗಳನ್ನು (200 ಲೀಟರ್ ನೀರಿಗೆ 2 ಲೀಟರ್ ಅಥವಾ 2 ಕೆಜಿ ಟ್ರೈಕೊಡರ್ಮಾ ಹಾಕಿ ಹಿಂಗಾರು ಅರಳಿದ ನಂತರ ಒಮ್ಮೆ ಮತ್ತು 20 ರಿಂದ 25 ದಿನಗಳ ನಂತರ ಮತ್ತೊಮ್ಮೆ ಸಿಂಪಡಿಸಬೇಕು.
• ತೋಟದ ನಿರ್ವಹಣೆ: ಅಡಕೆ ತೋಟದಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ರೋಗಗ್ರಸ್ತ ಹಿಂಗಾರನ್ನು ಕತ್ತರಿಸಿ ನಾಶಪಡಿಸುವುದು ಉತ್ತಮ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

8431212910

ಬಾಳೆಯಲ್ಲಿ ಪನಾಮಾ ಸೊರಗು ರೋಗ-Panama wilt in Banana


ಬಾಳೆಯಲ್ಲಿ ಬರುವ ಪನಾಮಾ ಸೊರಗು ರೋಗ (Panama Wilt / Panama Disease) ಮಣ್ಣಿನಲ್ಲಿ ವಾಸಿಸುವ ಫ್ಯುಸಾರಿಯಮ್ ಆಕ್ಸಿಸ್ಪೊರಮ್ (Fusarium oxysporum f. sp. cubense) ಎಂಬ ಶಿಲೀಂಧ್ರದಿಂದ (Fungus) ಉಂಟಾಗುವ ಅತ್ಯಂತ ವಿನಾಶಕಾರಿ ರೋಗವಾಗಿದೆ.

ರೋಗದ ಲಕ್ಷಣಗಳು:

• ಎಲೆಗಳ ಹಳದಿ ಬಣ್ಣ: ಗಿಡದ ಕೆಳಗಿನ ಅಥವಾ ಹಳೆಯ ಎಲೆಗಳ ಅಂಚುಗಳು ಮತ್ತು ತುದಿಗಳು ಮೊದಲು ಹಳದಿ ಬಣ್ಣಕ್ಕೆ ತಿರುಗುತ್ತವೆ.
• ಎಲೆಗಳು ಒಣಗಿ ಜೋತು ಬೀಳುವಿಕೆ: ಹಳದಿ ಬಣ್ಣಕ್ಕೆ ತಿರುಗಿದ ಎಲೆಗಳು ತೊಟ್ಟಿನ ಬಳಿ ಮುರಿದು ಕಾಂಡದ ಸುತ್ತಲೂ 'ಸ್ಕರ್ಟ್' (Skirt) ರೂಪದಲ್ಲಿ ಜೋತು ಬೀಳುತ್ತವೆ.
• ಕಾಂಡದ ಒಳಭಾಗದಲ್ಲಿ ಬಣ್ಣ ಬದಲಾವಣೆ: ರೋಗಪೀಡಿತ ಬಾಳೆ ಗಿಡದ ಕಾಂಡವನ್ನು ಸೀಳಿ ನೋಡಿದರೆ, ಅದರ ಒಳನಾಳಗಳು ಹಳದಿಯಿಂದ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗಿರುತ್ತವೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

8431212910

ಅಡಿಕೆಗೆ ಗೊಬ್ಬರದ ಜೊತೆ ಏನು ಕೊಡಬೇಕು?

ಅಡಿಕೆಗೆ ನೀವು ಕೊಡುವ ಸಾರಜನಕ,ರಂಜಕ,ಪೊಟ್ಯಾಶ್,ಜಿಂಕ್ ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ಸಿಗಲು bio NPK Consortia ಬಳಸಬೇಕು, ಇದು ನೀವು ಕೊಡುವ ಗೊಬ್ಬರದಲ್ಲಿರುವ ಸಾರಜನಕ,ರಂಜಕ,ಪೊಟ್ಯಾಶ್,ಜಿಂಕ್ ನ್ನು ಕರಗಿಸಿ ಗಿಡಗಳಿಗೆ ಒದಗಿಸಿ ಬೆಳವಣಿಗೆ ಮತ್ತು ಹೆಚ್ಚಿನ ಇಳುವರಿಗೆ ಸಹಾಯ ಮಾಡುತ್ತದೆ.

ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳು:

• ಸಂಯೋಜನೆ: ಇದರಲ್ಲಿ ಸಾರಜನಕವನ್ನು ಸ್ಥಿರೀಕರಿಸುವ (N-fixing), ರಂಜಕ ಮತ್ತು ಸತುವು ಕರಗಿಸುವ (P & Zn-solubilizing) ಹಾಗೂ ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುವ (PGPR) ಸೂಕ್ಷ್ಮಜೀವಿಗಳು ಒಂದೇ ಸೂತ್ರೀಕರಣದಲ್ಲಿ (Single formulation) ಇರುತ್ತವೆ.
• ⁠ಸಾರಜನಕ,ರಂಜಕ,ಪೊಟ್ಯಾಶ್,ಜಿಂಕ್ ಗೊಬ್ಬರವನ್ನು ಕರಗಿಸಿ ಗಿಡಗಳಿಗೆ ಒದಗಿಸುತ್ತದೆ.
• ಸಮಯ ಮತ್ತು ವೆಚ್ಚ ಉಳಿತಾಯ: ರೈತರು ಬೇರೆ ಬೇರೆ ಬ್ಯಾಕ್ಟೀರಿಯಾ ಉತ್ಪನ್ನಗಳನ್ನು ಪ್ರತ್ಯೇಕವಾಗಿ ತಂದು ಬಳಸುವ ಅವಶ್ಯಕತೆ ಇರುವುದಿಲ್ಲ. ಇದು ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತದೆ.
• ಬಳಕೆಯ ವಿಧಾನ: ಇದನ್ನು ಬೀಜೋಪಚಾರ, ಮಣ್ಣಿಗೆ ಹಾಕುವುದು, ನೀರಿನೊಂದಿಗೆ ಬೆರೆಸಿ (ಡ್ರಿಪ್ ಇರಿಗೇಶನ್) ಅಥವಾ ನರ್ಸರಿ ಮಾಧ್ಯಮದಲ್ಲಿ (ಕೊಕೊ-ಪೀಟ್) ಬಳಸಬಹುದು.
• ⁠200 ಲೀಟರ್ ನೀರಿಗೆ 2 ಕೆಜಿ ಅಥವಾ 2 ಲೀಟರ್ NPK consortia ಬಳಸಿ ಡ್ರೆಂಚ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

8431212910

ಅಡಿಕೆ ಗಿಡಕ್ಕೆ ಅಡಿಕೆ ಸಿಪ್ಪೆ ಹಾಕಬೇಕಾ? ಬೇಡವಾ?

ಅಡಿಕೆ ಸಿಪ್ಪೆ ಗೊಬ್ಬರವಾಗುತ್ತೆ ಅಂತಾ ನೀವೆನಾದರೂ ಅಡಿಕೆೆ ತೋಟಕ್ಕೆ ಹಾಕಿದರೆ ಅದು ಸರಿಯಾಗಿ ಕಳೆಯುವುದಿಲ್ಲ, ಹೀಗೆ ಸರಿಯಾಗಿ ಕಳಿಯದ ಅಡಿಕೆ ಸಿಪ್ಪೆಯಿಂದ ಅಡಿಕೆ ಗಿಡದ ಬುಡದಲ್ಲಿ ಅಣಬೆ ಬೆಳೆಯುತ್ತದೆ.


ಅಡಿಕೆ ತೋಟದಲ್ಲಿ ಕಾಣಿಸಿಕೊಳ್ಳುವ ಅಣಬೆ ರೋಗ (ಇದನ್ನು 'ಬುಡಕೊಳೆ ರೋಗ' ಅಥವಾ Ganoderma Wilt / Foot Rot ಎಂದು ಕರೆಯಲಾಗುತ್ತದೆ) ಗ್ಯಾನೋಡರ್ಮಾ ಲೂಸಿಡಂ (Ganoderma lucidum) ಎಂಬ ಶಿಲೀಂಧ್ರದಿಂದ ಬರುವ ಅತ್ಯಂತ ಮಾರಣಾಂತಿಕ ರೋಗವಾಗಿದೆ.

ಪ್ರಮುಖ ರೋಗ ಲಕ್ಷಣಗಳು

• ಎಲೆಗಳು ಬಾಡುವುದು: ಅಡಿಕೆ ಮರದ ಹೊರಭಾಗದ ಎಲೆಗಳು ಹಳದಿಯಾಗಿ, ನಂತರ ಒಣಗಿ ತಳಕ್ಕೆ ಬಾಗುತ್ತವೆ.
• ಕಾಂಡದ ಬುಡದಲ್ಲಿ ಅಂಟು: ಮರದ ಬುಡದ ಭಾಗದಲ್ಲಿ ಕಂದು ಬಣ್ಣದ ಕಲೆಗಳು ಮೂಡಿ, ಒಸರು ಅಥವಾ ಅಂಟು ದ್ರವ ಸೋರುತ್ತದೆ.
• ಅಣಬೆಗಳ ಬೆಳವಣಿಗೆ: ರೋಗ ತೀವ್ರವಾದಂತೆ ಮರದ ಬುಡದ ಬಳಿ ಅಥವಾ ಬೇರುಗಳ ಹತ್ತಿರ ಅಣಬೆಗಳಂತಹ (Bracket fungi / Basidiocarps) ಕಠಿಣವಾದ ರಚನೆಗಳು ಹೊರಹೊಮ್ಮುತ್ತವೆ.
• ಬೇರು ಕೊಳೆತ: ಮರದ ಬೇರುಗಳು ಸಂಪೂರ್ಣವಾಗಿ ಕೊಳೆತು, ಮರವು ತನ್ನ ಆಧಾರ ಕಳೆದುಕೊಂಡು ಗಾಳಿಗೆ ಅಥವಾ ಭಾರಕ್ಕೆ ಸುಲಭವಾಗಿ ಉರುಳಿ ಬೀಳುತ್ತದೆ.

ಹತೋಟೆ ಕ್ರಮಗಳು
ಸೋಂಕಿತ ಮರಗಳ ತೆರವು: ರೋಗ ತೀವ್ರವಾಗಿರುವ ಮರಗಳನ್ನು ಬೇರು ಸಹಿತ ಕತ್ತರಿಸಿ, ಬೇರುಗಳ ಸಮೇತ ಕಿತ್ತು ಸುಟ್ಟು ಹಾಕಿರಿ (ಬೇರೆಡೆಗೆ ಎಸೆಯಬಾರದು)
1. ಜೈವಿಕ ನಿಯಂತ್ರಣ: ಮಣ್ಣಿನ ಆರೋಗ್ಯ ಮತ್ತು ರೋಗ ಹತೋಟಿಗೆ ಟ್ರೈಕೋಡರ್ಮಾ (Trichoderma) ಜೈವಿಕ ಶಿಲೀಂಧ್ರನಾಶಕ ಹಾಗೂ ಬೇವಿನ ಹಿಂಡಿಯನ್ನು (1.5 ರಿಂದ 2 ಕೆ.ಜಿ. ಪ್ರತಿ ಮರಕ್ಕೆ) ಕಡ್ಡಾಯವಾಗಿ ಬಳಸಿ.
2. ತೋಟದ ನಿರ್ವಹಣೆ: ತೋಟದಲ್ಲಿ ನೀರು ನಿಲ್ಲದಂತೆ ಉತ್ತಮ ಬಸಿಗಾಲುವೆ ವ್ಯವಸ್ಥೆ ಮಾಡುವುದು ಮತ್ತು ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ ಹಾಗೂ ಹಸಿರೆಲೆಗಳನ್ನು ಸಮರ್ಪಕವಾಗಿ ಒದಗಿಸುವುದು.

ಅಡಿಕೆಯಲ್ಲಿ ಗೊಣ್ಣೆಹುಳು


ಅಡಿಕೆ ತೋಟಗಳಲ್ಲಿ ಗೊಣ್ಣೆ ಹುಳು (Root Grub) ಅಥವಾ ಬೇರು ಹುಳುಗಳ ಬಾಧೆಯು ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಈ ಹುಳುಗಳು ಮಣ್ಣಿನ ಅಡಿಯಲ್ಲಿ ವಾಸಿಸುತ್ತಾ ಅಡಿಕೆ ಮರದ ಬೇರುಗಳನ್ನು ತಿಂದು ನಾಶಪಡಿಸುತ್ತವೆ. ಇದರಿಂದ ಮರಗಳಿಗೆ ಪೋಷಕಾಂಶ ಮತ್ತು ನೀರು ಸರಬರಾಜು ಮಾಡುವ ಸಾಮರ್ಥ್ಯ ಕುಂಠಿತಗೊಂಡು, ಇಳುವರಿ ಕಡಿಮೆಯಾಗುತ್ತದೆ ಮತ್ತು ತೀವ್ರ ಬಾಧೆಯಿದ್ದಲ್ಲಿ ಮರಗಳು ಒಣಗಿ ಸಾಯುತ್ತವೆ.

ಗೊಣ್ಣೆ ಹುಳುವಿನ ಲಕ್ಷಣಗಳು

• ಅಡಿಕೆ ಮರದ ಗರಿಗಳು ಹಳದಿ ಬಣ್ಣಕ್ಕೆ ತಿರುಗುವುದು.
• ಮರದ ಬೆಳವಣಿಗೆ ಸಂಪೂರ್ಣವಾಗಿ ಕುಂಠಿತಗೊಳ್ಳುವುದು.
• ಮರವನ್ನು ಅಲ್ಲಾಡಿಸಿದರೆ ಬೇರುಗಳ ಬಲವಿಲ್ಲದೇ ಸುಲಭವಾಗಿ ಕದಡುವುದು ಅಥವಾ ಬಿದ್ದುಹೋಗುವುದು.

ಹತೋಟೆ ಕ್ರಮಗಳು
1 ಟನ್ ಕೊಟ್ಟಿಗೆ ಗೊಬ್ಬರಕ್ಕೆ 3 ರಿಂದ 5 ಕೆಜಿ ಮೆಟರೈಜಿಯಂ ಬಳಸಿ 

200 ಲೀಟರ್ ನೀರಿಗೆ 2 ಕೆಜಿ ಅಥವಾ 2 ಲೀಟರ್ ಮೆಟರೈಜಿಯಂ ಹಾಕಿ ಪ್ರತಿ ಗಿಡಕ್ಕೆ 1 ಲೀಟರ್ ದ್ರಾವಣ ಡ್ರೆಂಚ್ ಮಾಡಿ