ಸಹಕಾರ ಬ್ಯಾಂಕುಗಳ ಕೃಷಿ ಸಾಲಮನ್ನಾ ಕುರಿತು ಸಚಿವ ಕೆ ಎನ್ ರಾಜಣ್ಣ ಸ್ಪಷ್ಟನೆ, ಯಾವ ರೈತರ ಎಷ್ಟು ಸಾಲ ಮನ್ನಾ ಆಗಲಿದೆ ಚೆಕ್ ಮಾಡಿ-Sala manna list

<Krushirushi> <ಬೆಳೆಸಾಲ ಮನ್ನಾ ಸ್ಟೇಟಸ್ 2024> <croploan wavier Status 2024> <ಬೆಳೆಸಾಲ ಬಡ್ಡಿಮನ್ನಾ> <belesala baddimanna> <croploan interest wavie off> <ಬೆಳೆಸಾಲ> <croploan> <croploanwavier> <belesala> <belesalamanna> <loan waiver> <Bele sala manna status Karnataka 2024> <bele sala manna status 2024> <ರೈತ> <ಹಣ> <ಸಂದಾಯ> <ಆಧಾರ್> <ಬೆಳೆಸುದ್ದಿ> <bele sala manna 2023 karnataka> <bele sala manna list 2024> <crop loan waiver scheme 2024> <bele sala manna> <bele sala manna> <Bele sala manna list 2024> <bele sala manna list>

ಸಹಕಾರ ಬ್ಯಾಂಕುಗಳ ಕೃಷಿ ಸಾಲಮನ್ನಾ ಕುರಿತು ಸಚಿವ ಕೆ ಎನ್ ರಾಜಣ್ಣ ಸ್ಪಷ್ಟನೆ, ಯಾವ ರೈತರ ಎಷ್ಟು ಸಾಲ ಮನ್ನಾ ಆಗಲಿದೆ ಚೆಕ್ ಮಾಡಿ-Sala manna list

ಸಹಕಾರ ಬ್ಯಾಂಕುಗಳ ಕೃಷಿ ಸಾಲಮನ್ನಾ ಕುರಿತು ಸಚಿವ ಕೆ ಎನ್ ರಾಜಣ್ಣ ಸ್ಪಷ್ಟನೆ, ಯಾವ ರೈತರ ಎಷ್ಟು ಸಾಲ ಮನ್ನಾ ಆಗಲಿದೆ ಚೆಕ್ ಮಾಡಿ-Sala manna list

ರಾಜ್ಯ ಸರ್ಕಾರ 2017 ಹಾಗೂ 2018ರಲ್ಲಿ ಘೋಷಿಸಿದ್ದ ಕೃಷಿ ಸಾಲ ಮನ್ನಾದ ಪ್ರಯೋಜನ 31 ಸಾವಿರ ರೈತರಿಗೆ ಇನ್ನೂ ಸಿಕ್ಕಿಲ್ಲ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಎಸ್. ರವಿ, ಬಿಜೆಪಿಯ ಸುನೀಲ್ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡಲಾಗಿದ್ದ ₹50 ಸಾವಿರ ಸಾಲ ಮನ್ನಾ ಪ್ರಯೋಜನವನ್ನು 21.57 ಲಕ್ಷ ರೈತರು, 2018ರಲ್ಲಿ ಘೋಷಿಸಿದ್ದ ₹1 ಲಕ್ಷ ಸಾಲ ಮನ್ನಾ ಪ್ರಯೋಜನವನ್ನು 17.37 ಲಕ್ಷ ರೈತರು ಪಡೆದುಕೊಂಡಿದ್ದರು. ಎರಡೂ ಸಾಲ ಮನ್ನಾಕ್ಕಾಗಿ ಸರ್ಕಾರ ಕ್ರಮವಾಗಿ ₹7,662.26 ಕೋಟಿ ಹಾಗೂ 7,987.47 ಕೋಟಿ ಬಿಡುಗಡೆ ಮಾಡಿತ್ತು ಎಂದರು.


ತಾಂತ್ರಿಕ ಕಾರಣಗಳಿಂದ 31 ಸಾವಿರ ರೈತರಿಗೆ ಸೌಲಭ್ಯ ಸಿಕ್ಕಿಲ್ಲ. ಅವರಿಗೆ ನೀಡಬೇಕಿರುವ ಮೊತ್ತ ₹167.51 ಕೋಟಿ, ಅರ್ಹತೆ ಗುರುತಿಸಲು ಬಾಕಿ ಇರುವ ರೈತರ ಬಾಬು ₹64.49 ಕೋಟಿ ಸೇರಿ ಒಟ್ಟು ₹232 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಎಲ್ಲರಿಗೂ ಪ್ರಯೋಜನ ದೊರಕಲಿದೆ ಎಂದು ಹೇಳಿದರು.

ಹಾಗಾದರೆ ಕರ್ನಾಟಕದಲ್ಲಿ ಇಲ್ಲಿಯವರೆಗೂ ಎಷ್ಟು ಬೆಳೆಸಾಲಮನ್ನಾ ಆಗಿದೆ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://mahitikanaja.karnataka.gov.in/department

ನಂತರ "ಕಂದಾಯ ಇಲಾಖೆ" ಮೇಲೆ ಕ್ಲಿಕ್ ಮಾಡಿ

ನಂತರ "ಕಂದಾಯ ಇಲಾಖೆ ಸೇವೆಗಳು" ಮೇಲೆ ಕ್ಲಿಕ್ ಮಾಡಿ

ನಂತರ ಸೊಸೈಟಿಯಲ್ಲಿನ ಸಾಲಮನ್ನಾ ಚೆಕ್ ಮಾಡಲು "Loan waiver report for primary agricultural cooperative societies" ಮೇಲೆ ಕ್ಲಿಕ್ ಮಾಡಿ

ನಂತರ ಮಾದರಿ "ರೈತ" ಎಂದು Select ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ ಮತ್ತು ಗ್ರಾಮವನ್ನು Select ಮಾಡಿ "ಸಲ್ಲಿಸು" ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಊರಿನಲ್ಲಿ ಯಾರಿಗೆಲ್ಲಾ ಸಾಲಮನ್ನಾ ಆಗಿದೆ ಎಂದು ಚೆಕ್ ಮಾಡಬಹುದು.Search button ಅಲ್ಲಿ ನಿಮ್ಮ ಹೆಸರು ಹಾಕಿದರೆ ನಿಮ್ಮ ಹೆಸರು ಸಿಗುತ್ತದೆ.

ಹಸಿರು ಪಟ್ಟಿಯಲ್ಲಿ ನಿಮ್ಮ ಅರ್ಹತೆ ಹೀಗೆ ಚೆಕ್ ಮಾಡಿ

https://mahitikanaja.karnataka.gov.in/department

ನಂತರ ಕಂದಾಯ ಇಲಾಖೆ ಮೇಲೆ ಕ್ಲಿಕ್ ಮಾಡಿ

ನಂತರ ಕಂದಾಯ ಇಲಾಖೆ ಸೇವೆಗಳು ಮೇಲೆ ಕ್ಲಿಕ್ ಮಾಡಿ

ನಂತರ CLWS ರೈತನ ಅರ್ಹತೆ ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ ಮತ್ತು ಬ್ಯಾಂಕ್ select ಮಾಡಿ,ಸಲ್ಲಿಸು ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ರೈತನ ಹೆಸರು,ಸಾಲ ಮನ್ನಾಗೆ ಬೇಕಾದ ಅರ್ಹತೆ ಹಾಗೂ ಸ್ಥಿತಿಗತಿ ಚೆಕ್ ಮಾಡಬಹುದು

ಈ ಕೆಳಗಿನಂತೆ ಹಸಿರು ಪಟ್ಟಿಯಲ್ಲಿ "Yes" ಎಂದು ಇದ್ದರೆ ನೀವು ಸಾಲಮನ್ನಾಗೆ ಅರ್ಹ ಎಂದು ಅರ್ಥ,"No" ಎಂದು ಇದ್ದರೆ ನೀವು ಸಾಲಮನ್ನಾಗೆ ಅರ್ಹರಲ್ಲ ಎಂದು ಅರ್ಥ