ಇಂದಿನಿಂದ ವಿಶಾಖ ಮಳೆ ಪ್ರಾರಂಭ,ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ-Hingaru Male-nakshatragalu-1647

<Krushirushi> < ಮಳೆ ನಕ್ಷತ್ರಗಳು 2024> <Male nakshatragalu> <Male nakshatragalu 2024> <male Mahiti> <Male munsuchane> <male> <rain forecast> <ಮಳೆ ನಕ್ಷತ್ರ> <ಮಳೆ ನಕ್ಷತ್ರಗಳು> <ಮಳೆ> <ಮಳೆ ಮಾಹಿತಿ> <ಮಳೆ ಮುನ್ಸೂಚನೆ> <ಮುಂಗಾರು ಮಳೆ> <ರೈತ> <ಬೆಳೆಸುದ್ದಿ> <ಮಳೆ ನಕ್ಷತ್ರ> <Male nakshatra>

ಇಂದಿನಿಂದ ವಿಶಾಖ ಮಳೆ  ಪ್ರಾರಂಭ,ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ-Hingaru Male-nakshatragalu-1647

ಈ ದಿನದಿಂದ ವಿಶಾಖ ಮಳೆ  ಪ್ರಾರಂಭ,ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ-Hingaru Male-nakshatragalu-1647

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಕೃಷಿ ಪರಿಕರಗಳನ್ನು ನಿಮ್ಮ ಮೊಬೈಲ್ ನಲ್ಲೇ ಆರ್ಡರ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದ್ದೇವೆ

 https://krishibuy.in/

ಪಂಚಾಂಗದಲ್ಲಿನ ಮಳೆ ನಕ್ಷತ್ರಗಳ ಪ್ರಕಾರ 2024ರಲ್ಲಿ ಮಳೆ ಹೇಗಿದೆ? ಎಂಬ ಮಾಹಿತಿ ಇಲ್ಲಿದೆ. ಅಶ್ವಿನಿ ಇಂದ ಹಿಡಿದು ವಿಶಾಖ ತನಕ ಮಳೆ ನಕ್ಷತ್ರಗಳಿವೆ. ಇವುಗಳಲ್ಲಿ ಮಾರ್ಚ್, ಏಪ್ರಿಲ್ ತಿಂಗಳ ಮಳೆ ನಕ್ಷತ್ರಗಳು ರಾಜ್ಯದಲ್ಲಿ ಮಳೆ ಸುರಿಸುವುದಿಲ್ಲ. ಮೇ, ಜೂನ್, ಜುಲೈ ಮತ್ತು ಆಗಸ್ಟ್, ಸೆಪ್ಟೆಂಬರ್‌ ತಿಂಗಳಿನಲ್ಲಿ ಮಳೆ ನಕ್ಷತ್ರಗಳ ಅನ್ವಯ ಮಳೆಯನ್ನು ಲೆಕ್ಕ ಹಾಕಲಾಗುತ್ತದೆ. ಈ ಮಳೆ ನಕ್ಷತ್ರಗಳ ಆಧಾರದ ಮೇಲೆಯೇ ಹಲವಾರು ಗಾದೆ ಮಾತುಗಳು ಸಹ ಹುಟ್ಟಿಕೊಂಡಿವೆ.

ಅಶ್ವಿನಿ ನಕ್ಷತ್ರ 13/4/2024 ರಿಂದ ಆನೆಯನ್ನು ವಾಹನವಾಗಿ ಮಾಡಿಕೊಂಡು ಬರಲಿದ್ದು, ಸಾಧಾರಣೆ ಮಳೆ ಎಂದು ಪಂಚಾಂಗ ಹೇಳುತ್ತದೆ. ಭರಣಿ ನಕ್ಷತ್ರ 27/4/2024 ಕತ್ತೆ ವಾಹನವಾಗಿದ್ದು, ಸಾಧಾರಣೆ ಮಳೆ ನಿರೀಕ್ಷಿಸಲಾಗಿದೆ. 11/5/2024 ರಿಂದ ಕೃತಿಕ ನಕ್ಷತ್ರ ಕಪ್ಪೆಯನ್ನು ವಾಹನ ಮಾಡಿಕೊಂಡು ಬರಲಿದ್ದು, ಉತ್ತಮ ಮಳೆ ನಿರೀಕ್ಷೆ ಇದೆ. ಅಂದರೆ ಮೇ ತಿಂಗಳಿನಲ್ಲಿ ಮಳೆಯ ಮುನ್ಸೂಚನೆ ಇದೆ.

15 ದಿನಗಳಲ್ಲಿ ಈ ಪಟ್ಟಿಯಲ್ಲಿರುವ ರೈತರ ಖಾತೆಗೆ ಬೆಳೆ ಪರಿಹಾರ ಜಮಾ.ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್-Bele parihara list 2024 - https://krushirushi.in/Bele-parihara-list-1635 

24/5/2024 ರಿಂದ ರೋಹಿಣಿ ಮಳೆ ನವಿಲು ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ. 7/6/2024 ರಿಂದ ಮೃಗಶಿರ ಮಳೆ ಕುದುರೆ ಮೇಲೆ ಬರಲಿದ್ದು, ಸಾಧಾರಣ ಮಳೆಯಾಗಲಿದೆ. ಸರ್ಕಾರದ ಲೆಕ್ಕದ ಪ್ರಕಾರ ಜೂನ್ 1ರಿಂದ ಸೆಪ್ಟೆಂಬರ್ 30 ನೈಋತ್ಯ ಮುಂಗಾರು ಮಳೆಯ ಅವಧಿಯಾಗಿದೆ.

21/6/2024 ರಿಂದ ಆರಿದ್ರ ಮಳೆ ಟಗರು ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ಇದೆ. ಪುನರ್ವಸು ಮಳೆ 5/7/2024 ರಿಂದ ಆನೆ ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ. 19/7/2024 ರಿಂದ ಪುಷ್ಯ ಮಳೆ ಕಪ್ಪೆ ವಾಹನವಾಗಿ ಬರಲಿದ್ದು, ಉತ್ತಮ ಮಳೆ ನಿರೀಕ್ಷೆ ಮಾಡಲಾಗಿದೆ.

ಆಶ್ಲೇಷ ಮಳೆ 2/8/2024 ರಿಂದ ಬರಲಿದ್ದು, ಟಗರು ವಾಹನವಾಗಿದೆ. ಸಾಧಾರಣ ಮಳೆ ನಿರೀಕ್ಷೆ. 16/8/2024 ರಿಂದ ಮಘ ಮಳೆ ಕುದುರೆ ವಾಹನವಾಗಿ ಬರಲಿದ್ದು, ಉತ್ತಮ ಮಳೆಯಾಗಲಿದೆ ಎಂದು ಪಂಚಾಂಗ ಅಂದಾಜಿಸಿದೆ. ಹುಬ್ಬ ಮಳೆ 30/8/2024ರಿಂದ ಇಲಿ ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ.

13/9/2024 ರಿಂದ ಉತ್ತರ ಮಳೆ ಆನೆ ವಾಹನವಾಗಿ ಬರಲಿದ್ದು, ಸಾಧಾರಣ ಮಳೆ ನಿರೀಕ್ಷೆ ಇದೆ. ಹಸ್ತ ಮಳೆ 26/9/2024 ರಿಂದ ಟಗರು ವಾಹನವಾಗಿ ಬರಲಿದ್ದು, ಉತ್ತಮ ಮಳೆಯ ನಿರೀಕ್ಷೆ ಇದೆ. ಚಿತ್ತ 10/10/2024 ರಿಂದ ಎಮ್ಮೆ ವಾಹನವಾಗಿ ಬರಲಿದ್ದು, ಉತ್ತಮ ಮಳೆಯಾಗಲಿದೆ. ಸ್ವಾತಿ ಮಳೆ 23/10/2023 ರಿಂದ ಬರಲಿದ್ದು, ಟಗರು ವಾಹನವಾಗಿದೆ. ಸಾಧಾರಣ ಮಳೆ. ವಿಶಾಖ 6/11/2024 ರಿಂದ ಸುರಿಯಲಿದ್ದು, ಟಗರು ವಾಹವಾಗಿದೆ. ಸಾಧಾರಣ ಮಳೆ ನಿರೀಕ್ಷೆ ಮಾಡಲಾಗಿದೆ.

ಭಾರತದಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 30ರ ತನಕ ಸುರಿಯುವ ನೈಋತ್ಯ ಮುಂಗಾರು ಮಳೆಗೆ ಭಾರೀ ಮಹತ್ವವಿದೆ. ಮುಂದಿನ ವರ್ಷದ ಬರ, ಬೆಳೆ ಎಲ್ಲವನ್ನೂ ಈ ಮಳೆಯ ನಿರ್ಧಾರ ಮಾಡಲಿದೆ. ಈ ಅವಧಿಯಲ್ಲಿ ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆಗಳಿಗೆ ಸಹ ಸಹಾಯಕವಾಗುತ್ತದೆ. ಡ್ಯಾಂಗಳು ಭರ್ತಿಯಾಗಿ ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುವುದಿಲ್ಲ.

ನೈಋತ್ಯ ಮುಂಗಾರು ಹೊರತುಪಡಿಸಿ ವಾತಾವರಣದಲ್ಲಿ ಆಗುವ ಬದಲಾವಣೆಗಳಿಂದ ಚಂಡಮಾರುತ, ವಾಯುಭಾರ ಕುಸಿತ ಉಂಟಾಗಿ ಮಳೆಯಾಗುವ ಸಾಧ್ಯತೆಯೂ ಇದೆ.

ಮಳೆ ಪ್ರಾರಂಭ ದಿನಾಂಕ ಹಾಗು ಯಾವ ಮಳೆ ಉತ್ತಮ ಮತ್ತು ಯಾವ ಮಳೆ ಸಾಮಾನ್ಯ

• ಅಶ್ವಿನಿ ಮಳೆ: ದಿನಾಂಕ-13-4-2024ಸಾಮಾನ್ಯ ಮಳೆ 

• ಭರಣಿ ಮಳೆ: ದಿನಾಂಕ-27-4-2024 ಸಾಮಾನ್ಯ ಮಳೆ 

• ಕೃತಿಕಾ ಮಳೆ: ದಿನಾಂಕ-11-5-2024 ಉತ್ತಮ ಮಳೆ

•ರೋಹಿಣಿ ಮಳೆ: ದಿನಾಂಕ-24-5-2024 ಸಾಮಾನ್ಯ ಮಳೆ 

•ಮೃಗಶಿರ ಮಳೆ: ದಿನಾಂಕ-07-06-2024 ಸಾಮಾನ್ಯ ಮಳೆ 

•ಆರಿದ್ರಾ ಮಳೆ: ದಿನಾಂಕ-21-06-2024 ಸಾಮಾನ್ಯ ಮಳೆ 

•ಪುನರ್ವಸು ಮಳೆ: ದಿನಾಂಕ-05-7-2024 ಸಾಮಾನ್ಯ ಮಳೆ 

• ಪುಷ್ಯ ಮಳೆ: ದಿನಾಂಕ-19-7-2024 ಉತ್ತಮ ಮಳೆ 

•ಆಶ್ಲೇಷ ಮಳೆ: ದಿನಾಂಕ-02-08-2024 ಸಾಮಾನ್ಯ ಮಳೆ 

• ಮಘ ಮಳೆ: ದಿನಾಂಕ-16-08-2024 ಉತ್ತಮ ಮಳೆ 

• ಹುಬ್ಬಮಳೆ: ದಿನಾಂಕ-30-8-2024 ಸಾಮಾನ್ಯ ಮಳೆ 

• ಉತ್ತರ ಮಳೆ: ದಿನಾಂಕ-13-09-2024 ಸಾಮಾನ್ಯ ಮಳೆ 

• ಹಸ್ತ ಮಳೆ: ದಿನಾಂಕ-26-09-2024 ಉತ್ತಮ ಮಳೆ 

• ಚಿತ್ತ ಮಳೆ: ದಿನಾಂಕ-10-10-2024 ಉತ್ತಮ ಮಳೆ 

• ಸ್ವಾತಿ ಮಳೆ: ದಿನಾಂಕ-23-10-2024 ಸಾಮಾನ್ಯ ಮಳೆ 

• ವಿಶಾಖ ಮಳೆ: ದಿನಾಂಕ-6-11-2024 ಸಾಮಾನ್ಯ ಮಳೆ

2023 ನೇ ಸಾಲಿನ ಮಳೆ ನಕ್ಷತ್ರಗಳು(Male nakshatragalu)

1.ಅಶ್ವಿನಿ-

ದಿನಾಂಕ-13.04.2024

ಸಾಮಾನ್ಯ ಮಳೆ

ಗಾದೆ-ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು, ಅಶ್ವೀನಿ ಸನ್ಯಾಸಿನೀ,

2.ಭರಣಿ

ದಿನಾಂಕ-27-4-2024

ಸಾಮಾನ್ಯ ಮಳೆ

ಗಾದೆ-ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,ಭರಣಿ ಸುರಿದರೆ ಧರಣಿ ಬದುಕೀತು

3.ಕೃತಿಕಾ

ದಿನಾಂಕ-11-5-2024

ಸಾಮಾನ್ಯ ಮಳೆ

ಗಾದೆ-ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

4.ರೋಹಿಣಿ-

ದಿನಾಂಕ-24-5-2024

ಉತ್ತಮ ಮಳೆ

 ಗಾದೆ-ರೋಹಿಣಿ ಮಳೆ ಓಣಿಯೆಲ್ಲಾ ಕೆಸರು

5.ಮೃಗಶಿರ

ದಿನಾಂಕ-ಜೂನ್ 7 ರಿಂದ ಜೂನ್ 21ರವರೆಗೆ

ಉತ್ತಮ ಮಳೆ

ಗಾದೆ-ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು

6.ಆರಿದ್ರಾ

ದಿನಾಂಕ(ಜೂನ್ 21 ರಿಂದ ಜುಲೈ 4ರವರೆಗೆ)

ಉತ್ತಮ ಮಳೆ

ಗಾದೆ-ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ, ಆರಿದ್ರಾ ಮಳೆ ಆರದೆ ಹುಯ್ಯುತ್ತೇ, ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ, ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.

7.ಪುನರ್ವಸು

ದಿನಾಂಕ-5-7-2023

ಉತ್ತಮ ಮಳೆ

ಗಾದೆ: ಪುನವ೯ಸು ಮಳೆ ಬಂದು ಪಂಚಾಂಗ ಓದಾಯ್ತು, ಎಳೆ ಕರು ರಾಸಾಯ್ತು. 

8.ಪುಷ್ಯ

ದಿನಾಂಕ-19-7-2023

ಉತ್ತಮ ಮಳೆ

ಗಾದೆ: ಪುಷ್ಯ ಮಳೆ ಭಾಷೆ ಕೂಟ್ಟ ಮಳೆ (ತಪ್ಪಿಸುವುದಿಲ್ಲ)  ಪುಷ್ಯದಲಿ ನೆಟ್ಟ ಗಿಡ ಪುಟುಗೋಸಿ ಆದೀತು.

9.ಆಶ್ಲೇಷ

ದಿನಾಂಕ-ಆಗಸ್ಟ್ 2 ರಿಂದ ಆಗಸ್ಟ್ 15ರವರೆಗೆ

ಗಾದೆ-ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ, ಅಸಲೆ ಮಳೆ ಕೈತುಂಬಾ ಬೆಳೆ, ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು

10.ಮಘ

ದಿನಾಂಕ-ಆಗಸ್ಟ್ 17 ರಿಂದ ಆಗಸ್ಟ್ 29ರವರೆಗೆ

ಉತ್ತಮ ಮಳೆ

ಗಾದೆ-ಬಂದರೆ ಮಗೆ ಹೋದರೆ ಹೊಗೆ, ಬಂದರೆ ಮಘೆ ಇಲ್ಲದಿದ್ದರೆ ಧಗೆ, ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.

11.ಹುಬ್ಬ

ದಿನಾಂಕ-30-8-2023

ಉತ್ತಮ ಮಳೆ

ಗಾದೆ-ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.  ಹುಬ್ಬೆ ಮಳೆ ಅಬ್ಬೇ ಹಾಲು ಉಂಡಂತೆ

12.ಉತ್ತರ

ದಿನಾಂಕ-13-09-2023

ಉತ್ತಮ ಮಳೆ

ಗಾದೆ-ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ. ಉತ್ತರ ಎದುರುತ್ತರದ ಮಳೆ

13.ಹಸ್ತ

ದಿನಾಂಕ-26-9-2023

ಉತ್ತಮ ಮಳೆ

14.ಚಿತ್ತ

ದಿನಾಂಕ-10-10-2023

ಉತ್ತಮ ಮಳೆ

ಗಾದೆ-ಕುರುಡು ಚಿತ್ತೆ ಎರಚಿದತ್ತ ಬೆಳೆ.

15.ಸ್ವಾತಿ

ದಿನಾಂಕ-23-10-2023

ಉತ್ತಮ ಮಳೆ

ಗಾದೆ-ಸ್ವಾತಿ ಮಳೆ ಮುತ್ತಿನ ಬೆಳೆ.

ಈ ದಿನದಿಂದ ವಿಶಾಖ ಮಳೆ  ಪ್ರಾರಂಭ,ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ

16.ವಿಶಾಖ

ದಿನಾಂಕ-6-11-2023

ಉತ್ತಮ ಮಳೆ

ಗಾದೆ-ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.

ಆಧಾರ್ ಲಿಂಕ್ ಆಗದ ಬೆಳೆ ಪರಿಹಾರ ರೈತರ ಪಟ್ಟಿ ಬಿಡುಗಡೆ, ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ ಲಿಂಕ್ ಮಾಡಿದರೆ ಬೆಳೆಪರಿಹಾರ ಜಮಾ-Aadhaar not linked croploss farmers list - https://krushirushi.in/Aadhaar-not-linked-croploss-farmers-list-1636