Puchanthe prapanch-ಮತ್ತೆ ಮುಂಗಾರು! ಪೂಚಂತೇ ಪರಪಂಚದಲ್ಲಿ ಏನೆಲ್ಲಾ ಲಭ್ಯ...?
ಚಳಿ ಕೊಡವಿ, ಬೇಸಿಗೆಗೆ ಬೆರಗಿನ ತಿಳಿ ಹಸಿರ ನಗು ಚೆಲ್ಲಿ ನಿಂತ ಪ್ರಕೃತಿ ಅಂಬರದ ಕಾರ್ಮೋಡದ ಮುತ್ತಿನ ಹನಿಗಳ ಸ್ಪರ್ಶಕ್ಕೆ ರೋಮಾಂಚನಗೊಂಡಿಹಳು. ಬೇಸಾಯವನ್ನೇ ಬದುಕಾಗಿಸಿಕೊಂಡು ಬಣ್ಣದ ಭಾವಗಳ ಜೊತೆ ಈಸೋ ಜೈಸೋ ರೈತನಿಗೀಗ ಮತ್ತೆ ಮುಂಗಾರು!

Puchanthe prapanch-*ಮತ್ತೆ ಮುಂಗಾರು!*
ನಿಮಗೆಲ್ಲಾ ತಿಳಿದಿರುವಂತೆ ಭೂಮಿಗೂ, ಬೆಳೆಗಾರರಿಗೂ ಮಮತೆಯ ಮಾಮರವಾದ ತೋಟಗಳ ನಿರ್ಮಾಣಕ್ಕೆ ಅನ್ನದಾತರೊಂದಿಗೆ ತನ್ನ ಇತಿಮಿತಿಯಲ್ಲಿ ಮಿಡಿಯುವುದು, ತುಡಿಯುವುದು ಹಾಗೂ ಮಳೆ ಆಶ್ರಿತ ಅಲ್ಪಾವಧಿ ಬೆಳೆಗಳ ರೈತರೂ ತಮ್ಮ ಜಮೀನಿನಲ್ಲಿ ತಮಗಾಗಿ ಹತ್ತಾರು ಹಣ್ಣಿನ ಗಿಡಮರಗಳನ್ನ ಬೆಳೆಸುವಂತೆ ಪ್ರೇರೇಪಿಸುವುದು *ಪೂಚಂತೇ ಪರಪಂಚ* ದ ಧ್ಯೇಯ.
ಸದ್ಯ ಗಿಡ ನೆಟ್ಟು ಬೆಳೆಸಲು ಸಕಾಲ. ತಮ್ಮ ಕನಸಿನ ತೋಟದ ನಿರ್ಮಾಣಕ್ಕೆ ನೈಸರ್ಗಿಕ ಆರೈಕೆಗೆ ಒಗ್ಗಿರುವ, ಬಿಸಿಲಲ್ಲಿ ನೊಂದಿರುವ, ಛಲದಿಂದ ಹಸಿರ ನಗು ಚೆಲ್ಲುತ್ತಿರುವ ಒಂದಷ್ಟು ವೈವಿಧ್ಯ ಗಿಡಗಳು ಪೂಚಂತೇ ಪರಪಂಚದಲ್ಲಿ ಲಭ್ಯ. ಆಸಕ್ತ ರೈತ ಬಾಂಧವರು ಗಮನಿಸಿ, ಆಲೋಚಿಸಿ, ಸಂಪರ್ಕಿಸಿ-
*ಪೂಚಂತೇ ಪರಪಂಚ*
ವಿಸ್ಮಯಗಳ ಅಕ್ಷಯ ಪಾತ್ರೆ!
ಬೆಳವಾಡಿ
ಅರಕಲಗೂಡು ತಾಲ್ಲೂಕು
ಹಾಸನ 573113
9591066583
1. *ಜಗದ್ವಿಖ್ಯಾತ ಬಿಜಾಪುರ ಕಾಗ್ಜಿ ನಿಂಬೆ ಹಣ್ಣಿನ ಗಿಡಗಳು* 50-100
2. ಹಿರಳಿಕಾಯಿ 70-100
3. ಕೊಡಗು ಕಿತ್ತಳೆ 100-110
4. ಮೋಸಂಬಿ 200-220
5. ನಾಗಪುರ ಕಿತ್ತಳೆ 200-210
6. ದೇವನಹಳ್ಳಿ ಚಕ್ಕೋತ 200-220
7. ಒಕ್ಕೂಟ ಭಾರತ ಸರ್ಕಾರದ ಜೀವ ವೈವಿಧ್ಯ ಇಲಾಖೆಯಿಂದ ಮಾನ್ಯತೆ ಪಡೆದಿರುವ *(NCS-TCP ಪ್ರಮಾಣೀಕೃತ)* ಪ್ರತಿಷ್ಠಿತ *Green Leaf* ಸಂಸ್ಥೆಯ ಅಂಗಾಂಶ ಕೃಷಿ ಏಲಕ್ಕಿ ಬಾಳೆ ಮತ್ತು ವಿಲಿಯಮ್ಸ್ ಪಚ್ಚ ಬಾಳೆ ಗಿಡಗಳು 23 & 15
8. ಜಾಯಿಕಾಯಿ 60-150
9. ದಾಲ್ಚಿನ್ನಿ 40-60
10. ಲವಂಗ 40-60
11. ಸರ್ವ ಸಾಂಬಾರು 100-120
12. ಸಿದ್ದು ಹಲಸು 250-300
13. ಚಂದ್ರ ಹಲಸು 150-180
14. ರಸಬಕ್ಕೆ 150-180
15. ಮಲ್ಲಪಾಳಂ ಹಲಸು 150-180
16. ಗೋಡಂಬಿ ಹಲಸು 150-180
17. ತಾಲಿಪಾರಂ ಹಲಸು 150-180
18. ವಿಯೆಟ್ನಾಂ ಅರ್ಲಿ ಹಲಸು 150-180
19. ಗಮ್ ಲೆಸ್ ಹಲಸು 150-180
20. ಆಲ್ ಟೈಂ ಹಲಸು 120-180
21. ಮಲ್ಲಿಕಾ ಮಾವು 130-150
22. ರಸಪುರಿ ಮಾವು 130-150
23. ತೋತಾಪುರಿ (ಗಿಣಿ) ಮಾವು 130-140
24. ಜೀರಿಗೆ ಮಿಡಿ ಮಾವು 130-150
25. ಅಲ್ಫಾನ್ಸೋ ಮಾವು 150-180
26. ಕೇಸರ್ ಮಾವು 150-180
27.ಜಂಭೂ ನೇರಳೆ (ಕಲ್ಕತ್ತಾ) 150-200
28.ಬಿಳಿ ನೇರಳೆ 120-150
29. ಪನ್ನೇರಳೆ 80-100
30. ವಾಟರ್ ಆಪಲ್ ಗ್ರೀನ್ 80-100
31. ವಾಟರ್ ಆಪಲ್ ರೆಡ್ 150-200
32. ಅಗಸೆ ಗಿಡ 8-10
33. PKM1 ನುಗ್ಗೆ 15
34. NMK GOLD ಸೀತಾಫಲ 70-100
35. ರಾಮಫಲ 60-80
36. ಲಕ್ಷ್ಮಣ ಫಲ 50-100
37. PKM1 ಹುಣಸೇ 150-200
38.ಸ್ಟಾರ್ ಫ್ರೂಟ್ 150-180
39. ಬೆಟ್ಟದ ನೆಲ್ಲಿಕಾಯಿ 80-150
40. ಕಿರು ನೆಲ್ಲಿಕಾಯಿ 50-70
41. ಎಗ್ ಫ್ರೂಟ್ 150-200
42. ಬೇಲದ ಹಣ್ಣು 90-120
43. ಸಿಹಿ ಅಮಟೆ 200-220
44. ಬಟರ್ ಫ್ರೂಟ್ 60-70
45. ಗೋಡಂಬಿ 100-150
46. ಸಿಹಿ ಹುಣಸೇ 120-150
47. ಬಿಳಿ ಸಪೋಟ 100
48. ಅಂಜೂರ 80-90
49. ಕ್ರಿಕೆಟ್ ಬಾಲ್ ಸಪೋಟ 160-200
50. ಬಾರ್ಬಡೋಸ್ ಚೆರ್ರಿ 120-150
51. ಅಲಹಾಬಾದ್ ಸಫೇದಾ ಸೀಬೆ 100-120
52. ಲಕ್ನೋ 49 ಸೀಬೆ 100-120
53. ಥೈವಾನ್ ಪಿಂಕ್ ಸೀಬೆ 80-120
54. ದಾಂಡೇಲಿ ತೇಗ 20-35
55. ಜೇನು ಕೃಷಿಗೆ ಪೂರಕ ಅಂಟುವಾಳ 30-50
*ಮತ್ತು ಇತ್ತಾದಿ...
ನೈಸರ್ಗಿಕ-ಸಾವಯವ ಕೃಷಿ ವಿಧಾನದಲ್ಲಿ... ಕೊಟ್ಟಿಗೆ ಗೊಬ್ಬರ, ಜೀವಾಮೃತ, ಹುಳಿ ಮಜ್ಜಿಗೆ, ಕೊಬ್ಬರಿ ಎಣ್ಣೆ-ಮೊಟ್ಟೆ ಇತ್ಯಾದಿಗಳ ಸಹಜ ಆರೈಕೆಯಲ್ಲಿ ಗಿಡಗಳು ಗಟ್ಟಿಮುಟ್ಟಾಗಿರುವವು. ಗಿಡಗಳ ಬೆಲೆಯೂ ಆ ಗಿಡಗಳ ಎತ್ತರ, ಬೆಳವಣಿಗೆ, ಕವರ್ ಅಳತೆ, ಆಯಸ್ಸು, ಮತ್ತು ತಳಿ ಆಧರಿಸಿ ವಿಭಿನ್ನವಾಗಿರುತ್ತದೆ.
ಆರಂಭಿಕ ನೈಸರ್ಗಿಕ ಕೃಷಿಕರಿಗೆ ಅನುಕೂಲವಾಗುವಂತೆ ಜೀವಾಮೃತ, ಹುಳಿ ಮಜ್ಜಿಗೆ ಮತ್ತು ಫಿಶ್ ಟಾನಿಕ್ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಅವಶ್ಯಕತೆ ಇರುವವರು ಬಳಸಿಕೊಳ್ಳಿ.
*ಅಲ್ಪಾವಧಿ ಬೆಳೆಗಳೊಂದಿಗೆ ಸಾಕು ಜಂಜಾಟ, ನಿಖರ ಆದಾಯಕ್ಕೂ, ಸ್ವಾದಿಷ್ಟ ಹಣ್ಣು ಹಂಪಲಿಗೂ ಇರಲಿ ಒಂದಿಷ್ಟು ಸುಂದರ ತೋಟ❤️