Marigold flower seeds-1 kg ಚೆಂಡು ಹೂವಿನ ಬೀಜದ ಬೆಲೆ 70,000 ರೂಪಾಯಿ,ಕಳ್ಳರ ಕಾಟಕ್ಕೆ ಹೆದರಿ CCTV ಹಾಕಿಸಿದ ರೈತರು
<Krushirushi> <Marigold seeds> <ಚೆಂಡು ಹೂವು> <Marigold flower seeds> <Marigold flower seeds rate>

Marigold flower seeds-1 kg ಚೆಂಡು ಹೂವಿನ ಬೀಜದ ಬೆಲೆ 70,000 ರೂಪಾಯಿ,ಕಳ್ಳರ ಕಾಟಕ್ಕೆ ಹೆದರಿ CCTV ಹಾಕಿಸಿದ ರೈತರು
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬೀರನಕೊಪ್ಪ ಗ್ರಾಮದ ಚೆಂಡುಹೂ ಬೆಳೆಗಾರರು ಕಳ್ಳರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಚೆಂಡು ಹೂ ಬೀಜಕ್ಕೆ ಕೆ.ಜಿ.ಗೆ 70 ಸಾವಿರ ರೂಪಾಯಿ ಬೆಲೆ ಇದೆ.
ಕಂಪನಿಗಳು ರೈತರಿಗೆ ಚೆಂಡುಹೂ ನೀಡಿ ಅವರಿಂದ ಬೆಳೆದ ಚೆಂಡುಹೂ ಬೀಜಗಳ ಖರೀದಿ ಮಾಡುವ ಕುರಿತಂತೆ ಒಪ್ಪಂದ ಮಾಡಿಕೊಂಡಿರುತ್ತವೆ. ಈ ಚೆಂಡುಹೂಗಳ ಬೀಜವನ್ನು ಲಕ್ಷ ಲಕ್ಷ ರೂಪಾಯಿ ಕೊಟ್ಟು ಖರೀದಿಸಿ ರೈತರು ತಮ್ಮ ಜಮೀನಿನಲ್ಲಿ ಹಾಕಿ ಬೆಳೆಯುತ್ತಾರೆ. ಇತ್ತೀಚೆಗೆ ರೈತರು ಕ್ರಾಸ್ ಮಾಡಿ ಬೀಜ ತಯಾರಿಸುತ್ತಿದ್ದಾರೆ. ಚೆಂಡುಹೂ ಕ್ರಾಸ್ ಮಾಡಿದ ನಂತರ ಚೆಂಡುಹೂ ಬೀಜಗಳು ಮಾರಾಟಕ್ಕೆ ಹೋಗುತ್ತವೆ.
ಇಂತಹ ಜಮೀನುಗಳನ್ನೇ ಟಾಗೆರ್ಟ್ ಮಾಡುವ ಕಳ್ಳರು ರಾತ್ರಿ ವೇಳೆ ಈ ಬೀಜಗಳನ್ನು ಕದ್ದು ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೋಸಿಹೋಗಿರುವ ಬೀರನಕೊಪ್ಪ ರೈತರು ಸಿಸಿಟಿವಿ ಮೊರೆ ಹೋಗಿದ್ದಾರೆ. ಚೆಂಡುಹೂಗಳ ರಕ್ಷಣೆಗೆ 20 ರಿಂದ 40 ಸಾವಿರ ರೂಪಾಯಿ ಹಣ ಖರ್ಚು ಮಾಡಿ ಸಿಸಿಟಿವಿ ಕ್ಯಾಮೆರಾ ತಂದು ಜಮೀನಿನಲ್ಲಿ ಸ್ಥಾಪಿಸುತ್ತಿದ್ದಾರೆ.
7 ಲಕ್ಷ ಮೌಲ್ಯದ ಚಂಡುಹೂ ಬೀಜ ಕದ್ದೊಯ್ದಿದ್ದ ಕಳ್ಳರು:ಅದರ ವಿಡಿಯೋ ಮೊಬೈಲ್ನಲ್ಲಿ ಬರುವಂತೆ ಡಾಟಾ ಆನ್ ಮಾಡಿಕೊಂಡು ಮನೆಯಲ್ಲಿಯೇ ಕುಳಿತು ಚೆಂಡುಹೂ ಕಾಯುತ್ತಿದ್ದಾರೆ. ಈ ಹಿಂದೆ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಕಳ್ಳರು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಚೆಂಡುಹೂ ಬೀಜವನ್ನು ಕೆಲ ದಿನಗಳ ಹಿಂದೆ ಕದ್ದುಕೊಂಡು ಹೋಗಿದ್ದರು. ಇದರಿಂದ ಆತಂಕಗೊಂಡ ರೈತರು ಪೊಲೀಸ್ ಠಾಣೆಗೂ ಹೋಗಿ ದೂರು ನೀಡಿದ್ದರು. ಆದರೆ ರಕ್ಷಣೆ ಸಿಗದೇ ಹತಾಶರಾದ ರೈತರು ಕೊನೆಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಜಮೀನುಗಳನ್ನು ಕಾಪಾಡುತ್ತಿದ್ದಾರೆ.
ಸಾಕಷ್ಟು ಕಷ್ಟಪಟ್ಟು ಚೆಂಡು ಹೂ ಬೆಳೆದಿದ್ದೇವೆ ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಇನ್ನೇನು ಕೈಗೆ ಬಂದು ತುತ್ತು ಬಾಯಿಗೆ ಬಂತು ಎನ್ನುವಷ್ಟರಲ್ಲಿ ಕಳ್ಳರು ಕರಾಮತ್ತು ತೋರಿಸುತ್ತಿದ್ದಾರೆ. ಇದಕ್ಕಾಗಿ ನಾವು ಸಿಸಿಟಿವಿ ಕ್ಯಾಮೆರಾ ಮೊರೆ ಹೋಗಿದ್ದೇವೆ. ಸೋಲಾರ್ ಪ್ಲೇಟ್‌ನಿಂದ ವಿದ್ಯುತ್ ಸಂಪರ್ಕ ಉತ್ಪಾದಿಸಿ ಅದರಿಂದ ಸಿಸಿಟಿವಿ ಕ್ಯಾಮರಾಗಳು ಕೆಲಸ ಮಾಡುತ್ತಿವೆ.
ಡಾಟಾ ಆನ್ ಮಾಡಿದ ತಕ್ಷಣ ಹೊಲ ಕಣ್ಮುಂದೆ ಪ್ರತ್ಯಕ್ಷ:ಡಾಟಾ ಆನ್ ಮಾಡಿದರೆ ಕೈಯಲ್ಲಿನ ಮೊಬೈಲ್‌ಗೆ ಜಮೀನಿನ ಚಿತ್ರಣ ಸಿಗುತ್ತದೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆನ್ಸರ್ ಡಿಟೆಕ್ ಮಾಡುತ್ತಿದ್ದಂತೆ ಸದ್ದು ಆರಂಭವಾಗುತ್ತೆ, ಇದರಿಂದ ಹೆದರುವ ಕಳ್ಳರು ಜಮೀನಿನಿಂದು ಓಡಿಹೋಗುತ್ತಾರೆ. ಈ ಹಿಂದೆ ಜಮೀನಿನಲ್ಲಿ ಬೆದರು ಬೊಂಬೆ ನಿಲ್ಲಿಸುತ್ತಿದ್ದೆವು. ಆದರೆ ಈಗ ಕಳ್ಳರು ಬದಲಾಗಿದ್ದಾರೆ, ನಾವು ಸಹ ಬದಲಾಗಬೇಕಿದೆ ಇಲ್ಲದಿದ್ದರೇ ಕಷ್ಟಪಟ್ಟು ಬೆಳೆದ ಫಸಲು ಕೈಗೆ ಸಿಗದಂತಾಗುತ್ತದೆ" ಎನ್ನುತ್ತಾರೆ ರೈತರು.