Silage business-ಮೆಕ್ಕೆಜೋಳ ಬೆಳೆಗೆ ಎಕರೆಗೆ 20,೦೦೦ ಲಾಭ ಸಿಗ್ತಿತ್ತು,ಅದನ್ನೇ ರಸಮೇವು ಮಾಡಿದ್ದಕ್ಕೆ 45 ಸಾವಿರ ಲಾಭ ಸಿಗ್ತಿದೆ
<Krushirushi> <silage> <silage business> <Rasamevu> <Animal Feed> <Animal Food> <ರಸಮೇವು>

Silage business-ಮೆಕ್ಕೆಜೋಳ ಬೆಳೆಗೆ ಎಕರೆಗೆ 20,೦೦೦ ಲಾಭ ಸಿಗ್ತಿತ್ತು,ಅದನ್ನೇ ರಸಮೇವು ಮಾಡಿದ್ದಕ್ಕೆ 45 ಸಾವಿರ ಲಾಭ ಸಿಗ್ತಿದೆ
ಎಲ್ಲ ರೈತ ಬಾಂಧವರಿಗೂ Krushi Rushi ವೆಬ್ ಸೈಟಿಗೆ ಸ್ವಾಗತ, Krushi Rushi ವೆಬ್ಸೈಟ್ನ ಈ ಲೇಖನದಲ್ಲಿ ರಸಮೇವು ಬಗ್ಗೆ ತಿಳಿಸಿಕೊಡುತ್ತಿದ್ದೇನೆ. ಏನಪ್ಪಾ ಇದು ರಸಮೇವು ಅಂತೀರಾ?
ರಸ ಮೇವು (ಸೈಲೇಜ್) ಇದು ವರ್ಷಪೂರ್ತಿ ಜಾನುವಾರುಗಳಿಗೆ ಹಸಿಮೇವನ್ನು ಒದಗಿಸುತ್ತದೆ.ಇನ್ನು ಮೇಲೆ ವರ್ಷಪೂರ್ತಿ ಹಸಿರು ಮೇವು ಕೊಡಬಹುದು’– ಹೀಗೆ ಹೇಳಿದರೆ, ‘ಇವನಿಗೆಲ್ಲ ತಲೆ ಸರಿ ಇಲ್ಲ’ ಎನ್ನುವವರೇ ಹೆಚ್ಚು. ಏಕೆಂದರೆ, ಇವತ್ತಿನ ಕೂಲಿ ಆಳುಗಳ ಕೊರತೆಯಲ್ಲಿ ವರ್ಷ ಪೂರ್ತಿ ಹಸಿರು ಮೇವು ಬೆಳೆಸುವುದು ಅಸಾಧ್ಯ. ಒಳಸುರಿಯ ಖರ್ಚು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಹಸಿರು ಮೇವು ಬೆಳೆಸಿ, ರಾಸುಗಳಿಗೆ ಕೊಡುವುದು ಸಾಹಸದ ಕೆಲಸ. ಇನ್ನು ರಸ ಮೇವು ತಯಾರಿಕೆ ವಿಧಾನ ಹೇಳಿಕೊಟ್ಟಿದ್ದರೂ, ಆ ಮೇವನ್ನು ಕಾಪಾಡುವುದುಕ್ಕೆ ತುಂಬಾ ಪರಿಶ್ರಮ ಹಾಕಬೇಕು.
ಮೆಕ್ಕೆಜೋಳವನ್ನು ಕಾಳುಗಳಿಗೆ ಬೆಳೆಯುವ ರೈತರು ಅಬ್ಬಬ್ಬ ಎಂದರೆ ನಲವತ್ತು ಸಾವಿರ ಆದಾಯ ಗಳಿಸಬಹುದು, ಒಂದು ಎಕರೆಗೆ 20 ಕ್ವಿಂಟಲ್ ಮೆಕ್ಕೆಜೋಳ ಬೆಳೆದರೂ ಸಹ ಅದನ್ನು 2,000 ಕ್ವಿಂಟಲ್ನಂತೆ ಮಾರಿದರೆ ನಿಮಗೆ 40,000 ಸಿಗಲಿದೆ, ಆದರೆ ಬೀಜ ಗೊಬ್ಬರ ಆಳು ಕಟಾವು ಔಷಧಿ ಹೇಗೆ ಲೆಕ್ಕ ಹಾಕುತ್ತಾ ಹೋದರೆ ಕನಿಷ್ಠ 20,000 ಖರ್ಚು ತೆಗೆದು ನಿಮಗೆ 20,000 ಮಾತ್ರ ಲಾಭ ಸಿಗಲಿದೆ.
ಅದೇ ಮೆಕ್ಕೆಜೋಳವನ್ನ ರಸಮೇವು ಮಾಡಿದರೆ ಎಕರೆಗೆ 45,000 ಲಾಭ ಸಿಗಲಿದೆ. ಅದು ಹೇಗೆ ಅಂತೀರಾ? ಹೌದು ಮೆಕ್ಕೆಜೋಳವನ್ನು ರಸ ಮೇವು ಉದ್ದೇಶಕ್ಕೆ ಬೆಳೆದರೆ ಎಕ್ರೆಗೆ 20 ರಿಂದ 22 ಟನ್ ಮೆಕ್ಕೆಜೋಳ ಸೊಪ್ಪೆ ಸಿಗಲಿದೆ, ಇದನ್ನು ಎರಡುವರೆ ಸಾವಿರ ರೂಪಾಯಿಗೆ ಮಾರಾಟ ಮಾಡಿದರೆ ನಿಮಗೆ ನಿವ್ವಳ 45,000 ಲಾಭ ಸಿಗಲಿದೆ. ಇಲ್ಲಿ ನಿಮಗೆ ಬೀಜ ಗೊಬ್ಬರದ ಖರ್ಚು ಬಿಟ್ಟರೆ ಬೇರೆ ಯಾವುದೇ ಖರ್ಚು ಬರುವುದಿಲ್ಲ, ರಸಮೇವು ಮಾಡುವವರು ರಸಮೇವು ಮಷೀನ್ ನಿಮ್ಮ ಹೊಲಕ್ಕೆ ತೆಗೆದುಕೊಂಡು ಬಂದು ಅವರೇ ಕಟಾವು ಮಾಡಿ ರಸಮೇವು ತಯಾರಿಸಿ ತೆಗೆದುಕೊಂಡು ಹೋಗುತ್ತಾರೆ.
ಪ್ಯಾಕ್ಡ್ ರಸಮೇವು ತಯಾರಿ
ಈ ರಸಮೇವಿನ ಮೂಲ ಸರಕು ಆಫ್ರಿಕನ್ ಟಾಲ್ ತಳಿಯ ಮೇವಿನ ಜೋಳ. ಇದರ ಗಿಡವನ್ನು ಯಂತ್ರದ ಮೂಲಕ ಸಣ್ಣದಾಗಿ ಕತ್ತರಿಸಿ ಲ್ಯಾಕ್ಟೋಬ್ಯಾಸಿಲ್ಲಸ್‍ನಂತಹ ಸೂಕ್ಷ್ಮಾಣುಜೀವಿಯನ್ನು ಸೇರಿಸುತ್ತಾರೆ. ಇದು ಮೇವಿನ ಗುಣಮಟ್ಟ ಕಾಪಾಡಲು ಅಗತ್ಯವಾದ ಹುದುಗುವಿಕೆಗೆ ಸಹಾಯ ಮಾಡುತ್ತದೆ. ನಂತರ ಇದನ್ನು ಯಂತ್ರದ ಮೂಲಕ ಫುಡ್‌ಗ್ರೇಡ್ ಪ್ಲಾಸ್ಟಿಕ್ ಹಾಳೆಯಿಂದ ಉಂಡೆಯ ರೂಪದಲ್ಲಿ ಬಿಗಿಯಾಗಿ ಸುತ್ತುತ್ತಾರೆ. ಈ ಬಿಗಿತ ಎಷ್ಟು ಗಟ್ಟಿಯಾಗಿರುತ್ತದೆಂದರೆ ಒಳಗೆ ಕೊಂಚಕೂಡ ಗಾಳಿ ಸೇರುವುದಿಲ್ಲ. ನಂತರ ಇದನ್ನು 21 ದಿನಗಳವರೆಗೆ ಹುದುಗುವಿಕೆ (ಮೈಕ್ರೋಬಿಯಲ್ ಫರ್ಮಂಟೇಶನ್)ಗೆ ಬಿಡುತ್ತಾರೆ. ಇದೀಗ ಹಸಿರುಮೇವು ಬಿಸ್ಕೆಟ್ ಬಣ್ಣಕ್ಕೆ ತಿರುಗುತ್ತದೆ. ಒಳ್ಳೆಯ ಸುವಾಸನೆಯೂ ಬರುತ್ತದೆ. ಬೇಗ ಕೆಡುವುದಿಲ್ಲ. 75-80 ಕಿಲೋ ತೂಕದ ಉಂಡೆ ಈಗ ಮಾರುಕಟ್ಟೆಗೆ ಸಿದ್ಧ. ಇದನ್ನು ಒಮ್ಮೆ ತೆರೆದಮೇಲೆ ಶಿಲೀಂಧ್ರ ಬೆಳೆಯಲು ಅವಕಾಶವಾಗದಂತೆ ವಾರದ ಒಳಗೇ ಬಳಸಿಬಿಡಬೇಕು. ಹಾಗೆಂದು ಒಡೆಯದೇ ಈ ಉಂಡೆಯನ್ನು ಹಾಗೆಯೇ ಇಟ್ಟರೆ ಒಂದೂವರೆ ವರ್ಷಗಳ ತನಕ ಹಾಳಾಗುವುದಿಲ್ಲ.
ಸ್ವತಃ ರೈತರೇ ರಸಮೇವಿನ ಮಷೀನ್ ಬಳಸಿಕೊಂಡರೆ ಇನ್ನೂ ಹೆಚ್ಚಿನ ಲಾಭ ಪಡೆಯಬಹುದು, ನೀವು ಬೆಳೆದ ಮೆಕ್ಕೆಜೋಳವನ್ನು ನೀವೇ ರಸಮೇವು ತಯಾರಿಸಿ ಮಾರಾಟ ಮಾಡಿದರೆ ನಿಮಗೆ ದುಪ್ಪಟ್ಟು ಲಾಭವಾಗಲಿದೆ, ಈಗಿನ ಮಾರುಕಟ್ಟೆಯಲ್ಲಿ ರಸ ಮೇವಿಗೆ ಏಳರಿಂದ ಏಳೂವರೆ ಸಾವಿರ ರೂಪಾಯಿ ಬೆಲೆ ಇದೆ.
ಯಾರಿಗಾದರೂ ರಸಮೇವು ತಯಾರಿಸುವ ಯಂತ್ರ ಬೇಕಾದಲ್ಲಿ ಕೃಷಿ ಇಲಾಖೆಯ ಪಿಎಂಎಫ್ಎಂಇ ಯೋಜನೆಯಡಿ 50 ಪರ್ಸೆಂಟ್ ಸಬ್ಸಿಡಿ ಯೊಂದಿಗೆ ಖರೀದಿಸಬಹುದಾಗಿದೆ. ಯಂತ್ರವು ಎರಡುವರೆ ಲಕ್ಷದಿಂದ ಆರೂವರೆ ಲಕ್ಷದವರೆಗೆ ಸಿಗಲಿದೆ.
ನೀಡುವ ವಿಧಾನ
ಈ ರಸಮೇವು ಸುವಾಸನೆ ಬೀರುವುದರಿಂದ ಜಾನುವಾರುಗಳು ಇಷ್ಟಪಟ್ಟು ತಿನ್ನುತ್ತವೆ. ಅವುಗಳಿಗೆ ರೂಢಿಯಾಗುವ ತನಕ ರಸಮೇವಿನ ಪೆಂಡಿ(ಬೇಲ್)ಯನ್ನು ತೆರೆದು ಅರ್ಧ ಗಂಟೆ ಬಿಟ್ಟು ತಿನ್ನಿಸುವುದು ಉತ್ತಮ. ಹೊಸದಾಗಿ ಪ್ರಾರಂಭಿಸುವಾಗ ಮೊದಲ ದಿನ ಒಂದು ಕೆ.ಜಿಯಿಂದ ಪ್ರಾರಂಭಿಸಿ ಪ್ರತಿದಿನ ಅರ್ಧ ಕೆ.ಜಿ ಹೆಚ್ಚಿಸುತ್ತ ಬರಬೇಕು. ಸುಮಾರು ಹದಿನೈದು ದಿನಗಳಲ್ಲಿ ದಿನದಲ್ಲಿ ಎರಡು ಸಲದಂತೆ ತಲಾ ಏಳೂವರೆ ಕೆ.ಜಿ ನೀಡಬಹುದು. ಹೀಗೆ ಮಾಡಿದಾಗ ಇದು ಜಾನುವಾರುಗಳ ಜೀರ್ಣಕ್ರಿಯೆಗೆ ಸರಿಯಾಗಿ ಹೊಂದಿಕೊಳ್ಳುವುದಲ್ಲದೇ ಹೊಟ್ಟೆ ಆಮ್ಲೀಯವಾಗುವುದನ್ನು ತಡೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ