ವಾಯುಭಾರ ಕುಸಿತವಾಗಿ ದುರ್ಬಲಗೊಂಡ ದಿತ್ವಾ ಚಂಡಮಾರುತ, ತಮಿಳುನಾಡಿನ ಹಲವು ಭಾಗಗಳಿಗೆ ಅಲರ್ಟ್‌ ಘೋಷಣೆ

ವಾಯುಭಾರ ಕುಸಿತವಾಗಿ ದುರ್ಬಲಗೊಂಡ ದಿತ್ವಾ ಚಂಡಮಾರುತ, ತಮಿಳುನಾಡಿನ ಹಲವು ಭಾಗಗಳಿಗೆ ಅಲರ್ಟ್‌ ಘೋಷಣೆ

ವಾಯುಭಾರ ಕುಸಿತವಾಗಿ ದುರ್ಬಲಗೊಂಡ ದಿತ್ವಾ ಚಂಡಮಾರುತ, ತಮಿಳುನಾಡಿನ ಹಲವು ಭಾಗಗಳಿಗೆ ಅಲರ್ಟ್‌ ಘೋಷಣೆ

ದಿತ್ವಾ' ಚಂಡಮಾರುತವು ಭಾರತದ ಪೂರ್ವ ಕರಾವಳಿ ಪ್ರದೇಶಗಳ ಕಡೆಗೆ ಹತ್ತಿರವಾಗುತ್ತಿದೆ. ನಿನ್ನೆ ತಮಿಳುನಾಡು ಮತ್ತು ಪುದುಚೇರಿಯ ಕೆಲವು ಭಾಗಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸಿದೆ. ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ 'ದಿತ್ವಾ' ಚಂಡಮಾರುತವು (Cyclone Ditwah) ದುರ್ಬಲಗೊಂಡು, ಗಂಟೆಗೆ 10 ಕಿ.ಮೀ ವೇಗದಲ್ಲಿ ಉತ್ತರದ ಕಡೆಗೆ ಸಾಗಿ, ಸೋಮವಾರ ಮಧ್ಯಾಹ್ನದ ವೇಳೆಗೆ ಮತ್ತಷ್ಟು ದುರ್ಬಲಗೊಳ್ಳುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ.

ಸೋಮವಾರ ಮುಂಜಾನೆ ಪುದುಚೇರಿಗೆ ಭಾರತೀಯ ಹವಾಮಾನ ಇಲಾಖೆಯು ಆರೆಂಜ್‌ ಅಲರ್ಟ್‌ (Orange alert) ಘೋಷಿಸಿದ್ದು, ತಮಿಳುನಾಡಿನ ಕೆಲವು ಭಾಗಗಳಿಗೆ ಯೆಲ್ಲೋ ಎಚ್ಚರಿಕೆ ನೀಡಲಾಗಿದೆ. ನೆಲ್ಲೂರು, ಕಾಕಿನಾಡ, ವಿಶಾಖಪಟ್ಟಣಂ, ಅನಕಪಲ್ಲಿ ಮತ್ತು ಇತರ ಪ್ರದೇಶಗಳು ಸೇರಿದಂತೆ ಆಂಧ್ರಪ್ರದೇಶದ ಹಲವಾರು ಪ್ರದೇಶಗಳು ಡಿಸೆಂಬರ್ 1ರ ಸೋಮವಾರ ಬೆಳಿಗ್ಗೆ 7 ಗಂಟೆಯ ವರೆಗೆ ಆರೆಂಜ್‌ ಅಲರ್ಟ್‌ನಲ್ಲಿ ಇರಲಿದೆ.

ದಿತ್ವಾ ಚಂಡಮಾರುತದ ಕುರಿತಾದ ಪ್ರಮುಖ ಅಂಶಗಳು

ಹವಾಮಾನ ಸಂಸ್ಥೆಯ ಪ್ರಕಾರ, ಚಂಡಮಾರುತವು ಇದೀಗ ದುರ್ಬಲಗೊಂಡಿದೆ ಮತ್ತು ಡಿಸೆಂಬರ್ 1ರ ಮಧ್ಯಾಹ್ನದ ವೇಳೆಗೆ ಕ್ರಮೇಣ ದುರ್ಬಲಗೊಳ್ಳುವ ನಿರೀಕ್ಷೆಯಿದೆ. ಆಂಧ್ರಪ್ರದೇಶದ ಹಲವಾರು ಜಿಲ್ಲೆಗಳಿಗೆ ಸೋಮವಾರ ಬೆಳಿಗ್ಗೆ 7.00 ಗಂಟೆಯ ವರೆಗೆ ಐಎಂಡಿ ಆರೆಂಜ್‌ ಅಲರ್ಟ್‌ ನೀಡಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ, ವಿಪತ್ತು ಪ್ರತಿಕ್ರಿಯೆ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಮತ್ತೊಂದು ವಿಮಾನ ಇಂದು ಕೊಲಂಬೊದಲ್ಲಿ ಬಂದಿಳಿದಿದೆ ಎಂದು ಹೇಳಿದರು.

 

ಹಲವು ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ

ತಿರುವಲ್ಲೂರು, ಕಾಂಚಿಪುರಂ, ಚೆನ್ನೈ, ಚೆಂಗಲ್ಪಟ್ಟು, ವೆಲ್ಲೂರು ಮತ್ತು ರಾಣಿಪೇಟೆ ಜಿಲ್ಲೆಗಳ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಅಥವಾ ಅತಿ ಭಾರೀ ಮಳೆಯಾಗಬಹುದು. ತಮಿಳುನಾಡು ಮತ್ತು ಪುದುಚೇರಿ ಮತ್ತು ಕಾರೈಕಲ್ ಪ್ರದೇಶದಾದ್ಯಂತ ಕೆಲವು ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಜೊತೆಗೆ ಒಂದು ಅಥವಾ ಎರಡು ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.

ಉತ್ತರ ತಮಿಳುನಾಡು, ಪುದುಚೇರಿ ಮತ್ತು ಹತ್ತಿರದ ದಕ್ಷಿಣ ಆಂಧ್ರಪ್ರದೇಶದ ಕರಾವಳಿಗಳಿಗೆ ಐಎಂಡಿ ರೆಡ್‌ ಅಲರ್ಟ್‌ ನೀಡಿದೆ. ತಮಿಳುನಾಡಿನಲ್ಲಿ ದಿತ್ವಾ ಚಂಡಮಾರುತದಿಂದ ಉಂಟಾದ ಮಳೆ ಸಂಬಂಧಿತ ಘಟನೆಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ತಿಳಿಸಿದ್ದಾರೆ.