Male Mahithi-ಬಿಸಲ ಬೇಗೆಯಿಂದ ಬಳಲಿದ್ದ ರಾಜ್ಯದ ಈ ಜಿಲ್ಲೆಗಳಲ್ಲಿ ಮಾರ್ಚ್15 ರಿಂದ 17 ರವರೆಗೆ ಬಿಳಲಿದೆ ಮಳೆ
<Krushirushi> <ಮುಂಗಾರುಮಳೆ> <Rainyseason> <ಮಳೆಮುನ್ಸೂಚನೆ> <weatherforecast> <MAUSAM> <Meghdoot> <MEGHDOOT> <ಮೇಘದೂತ> <ಮಳೆಮಾಹಿತಿ> <ಮಳೆಮುನ್ಸೂಚನೆ> <Male munsuchane> <male Mahithi>
Male Mahithi-ಬಿಸಲ ಬೇಗೆಯಿಂದ ಬಳಲಿದ್ದ ರಾಜ್ಯದ ಈ ಜಿಲ್ಲೆಗಳಲ್ಲಿ ಮಾರ್ಚ್15 ರಿಂದ 17 ರವರೆಗೆ ಬಿಳಲಿದೆ ಮಳೆ
ಕರ್ನಾಟಕ (Karnataka ) ಬಿರು ಬೇಸಿಗೆಯ (Summer ) ಬೇಗೆ ಹೆಚ್ಚಿದ್ದು, ಸೂರ್ಯನ ಶಾಖ ಜೋರಾಗಿದೆ. ಈ ನಡುವೆ ಮಳೆಯ ಸಿಂಚನ ಆಗಲಿದೆ ಎಂದು ಹವಾಮಾನ ಇಲಾಖೆ (Weather Forecast ) ಹೇಳಿದೆ.
ಮಾ. 15ರಿಂದ 17ರವರೆಗೆ ರಾಜ್ಯದ ವಿವಿಧೆಡೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೆಕೆಯಿಂದ ಕಂಗಾಲಾಗಿರೋ ಜನರಿಗೆ ಮಳೆ ತಂಪೆರೆಯಲಿದೆ.
ಎಲ್ಲೆಲ್ಲಿ ಮಳೆ..?
ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.
ಮಾ.16ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾವೇರಿ, ಗದಗ, ಧಾರವಾಡ ಮತ್ತು ಕೊಪ್ಪಳ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು (ಗ್ರಾಮೀಣ), ಬೆಂಗಳೂರು (ನಗರ) ಮತ್ತು ರಾಮನಗರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ಲಭ್ಯವಾಗಿದೆ.
ಹಾಗೆಯೇ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣ ಹವಾಮಾನ ಇರುವ ಸಾಧ್ಯತೆಯಿದೆ. ಮಾ. 17ರಂದು ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಮುಂದಿನ 2 ದಿನಗಳವರೆಗೆ ಕರಾವಳಿಯಲ್ಲಿ ತೇವಾಂಶದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ್ಯಂತ ಬಿಸಿಲು, ಅಧಿಕ ತಾಪಮಾನ ಹಾಗೂ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಂಜೆ, ರಾತ್ರಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹಗಲು ಸಾಮಾನ್ಯಕ್ಕಿಂತ ಅಧಿಕ ಬಿಸಿಲಿನ ತಾಪ ಹಾಗೂ ಸಂಜೆ, ರಾತ್ರಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ರಾಜ್ಯದ ಉತ್ತರ ಒಳನಾಡು ಹೆಚ್ಚಿನ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಅಧಿಕ ತಾಪಮಾನದೊಂದಿಗೆ ಅಲ್ಲಲ್ಲಿ ಸಣ್ಣ ಪ್ರಮಾಣದ ಮೋಡದ ವಾತಾವರಣ ಇರಬಹುದು.
ಮಧ್ಯಮ ಸ್ತರದಲ್ಲಿ ಅಧಿಕ ತಾಪಮಾನದ ಪರಿಚಲನೆ ( Anti cyclonic circulation) ಮುಂದುವರಿದಿದ್ದು, ಮಾರ್ಚ್ 14ರ ಸುಮಾರಿಗೆ ಈ ಪರಿಚಲನೆಯು ವಿಸ್ತಾರಗೊಂಡು ಬಂಗಾಳಕೊಲ್ಲಿಯ ಮೂಲಕ ಗಾಳಿಯ ಬೀಸುವಿಕೆ ಪ್ರಭಲಗೊಳ್ಳುವ ಸೂಚನೆಗಳಿವೆ. ಇದರ ಪರಿಣಾಮದಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಾರ್ಚ್ 14 ಅಥವಾ 15ರಿಂದ ಗುಡುಗು ಸಹಿತ ಮಳೆ ಆರಂಭವಾಗುವ ಮುನ್ಸೂಚನೆಗಳಿವೆ.

