ಯುಗಾದಿ ಹಬ್ಬದಂದು ಬಿಡುಗಡೆ ಆಯ್ತು ಗೃಹಲಕ್ಷ್ಮಿ 27ನೇ ಕಂತು,ನಿಮಗೇಷ್ಟು ಕಂತು ಜಮಾ ಆಯ್ತು ಚೆಕ್ ಮಾಡಿ-Gruhalakshmi 27th instalment
ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣ ಬಿಡುಗಡೆಯಾಗುತ್ತಿದೆ. ಈಗಾಗಲೇ 15 ಕ್ಕೂ ಅಧಿಕ ಜಿಲ್ಲೆಯ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮೆಯಾಗಿದ್ದು, ಇನ್ನೆರಡು ಮೂರು ದಿನಗಳಲ್ಲಿ ಬಾಕಿ ಉಳಿದ ಜಿಲ್ಲೆಗಳ ಮಹಿಳೆಯರಿಗೆ ಹಣ ತಲುಪಲಿದೆ.
ಯುಗಾದಿ ಹಬ್ಬದಂದು ಬಿಡುಗಡೆ ಆಯ್ತು ಗೃಹಲಕ್ಷ್ಮಿ 27ನೇ ಕಂತು,ನಿಮಗೇಷ್ಟು ಕಂತು ಜಮಾ ಆಯ್ತು ಚೆಕ್ ಮಾಡಿ-Gruhalakshmi 27th instalment
ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣ ಬಿಡುಗಡೆಯಾಗುತ್ತಿದೆ. ಈಗಾಗಲೇ 15 ಕ್ಕೂ ಅಧಿಕ ಜಿಲ್ಲೆಯ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮೆಯಾಗಿದ್ದು, ಇನ್ನೆರಡು ಮೂರು ದಿನಗಳಲ್ಲಿ ಬಾಕಿ ಉಳಿದ ಜಿಲ್ಲೆಗಳ ಮಹಿಳೆಯರಿಗೆ ಹಣ ತಲುಪಲಿದೆ.
ಯಾವೆಲ್ಲಾ ಜಿಲ್ಲೆಗಳ ಮಹಿಳೆಯರಿಗೆ ಹಣ ಜಮೆಯಾಗುತ್ತಿದೆ?
ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಚಿತ್ರದುರ್ಗ, ಬೆಳಗಾವಿ, ಗದಗ, ಬಾಲಕೋಟೆ, ದಾವಣಗೆರೆ, ಕಲಬುರಗಿ, ಹಾಸನ, ಮೈಸೂರು, ಕೊಡಗು ಸೇರಿದಂತೆ 15 ಕ್ಕೂ ಅಧಿಕ ಜಿಲ್ಲೆಗಳ ಖಜಾನೆಯಿಂದ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಇನ್ನೂ ಮೂರು ದಿನಗಳೊಳಗೆ ಬಾಕಿ ಇರುವ ಜಿಲ್ಲೆಗಳ ಫಲಾನುಭವಿಗೆ ಹಣ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.
ಯುಗಾದಿ, ರಂಜಾನ್ ಹಬ್ಬಕ್ಕೆ ಅನುಕೂಲ
27 ನೇ ಕಂತು ಬಿಡುಗಡೆಯಾಗುತ್ತಿರುವ ಮುಂಬರುವ ಯುಗಾದಿ, ರಂಜಾನ್ ಹಬ್ಬದ ಖರ್ಚಿಗೆ ಅನುಕೂಲವಾಗಲಿದೆ. ಅದರಲ್ಲೂ ಒಂದೇ ತಿಂಗಳ ಅಂತರೊಳಗೆ (30 ದಿನ) ಮೂರು ಕಂತು ಜಮೆಯಾಗಿದ್ದು, 6 ಸಾವಿರ ರೂ. ಮಹಿಳೆಯರಿಗೆ ಸಿಕ್ಕಿವೆ. ಇದು ಕೂಡ ಹಬ್ಬದ ಸಡಗರ ಹೆಚ್ಚಿಸಲಿದೆ ಎನ್ನುತ್ತಾರೆ ಜಗಳೂರಿನ ಗ್ರಾಮ್ ಒನ್ ಸಹಾಯಕ ಸಂದೀಪ್.
ಎಷ್ಟು ಕಂತುಗಳು ಬಾಕಿ?
ಆಗಸ್ಟ್ 2023 ರಿಂದ ಯೋಜನೆ ಜಾರಿಯಾಗಿದ್ದು, ಸದ್ಯ 31 ತಿಂಗಳಾಗಿವೆ. ಈಗ 27 ನೇ ಕಂತಿನ ಹಣ ಬಿಡುಗಡೆಯಾಗುತ್ತಿದೆ. ತಾಂತ್ರಿಕ ಕಾರಣದಿಂದ ಕಳೆದ ವರ್ಷದ 3 ಕಂತಿನ ಹಣ ಬಾಕಿ ಇದೆ. ಸದ್ಯ 2026 ಜನವರಿ ಕಂತಿನ ಹಣ ಮಹಿಳೆಯರ ಖಾತೆಗೆ ಜಮೆಯಾಗುತ್ತಿದೆ ಎಂದು ಇಲಾಖೆ ಮೂಲಗಳು ಹೇಳಿವೆ.
ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನ ಪಟ್ಟಿಯಲ್ಲಿರುವ(Gruhalakshmi list)ಅರ್ಹ ಗೃಹಿಣಿಯರಿಗೆ ಮಾತ್ರ ಗೃಹಲಕ್ಷ್ಮಿ ಹಣ(Gruhalakshmi amount) ಜಮಾ(dbt) ಆಗಲಿದೆ.
Gruhalakshmi status-ಗೃಹಲಕ್ಷ್ಮಿ ಇಲ್ಲಿಯವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ
https://play.google.com/store/apps/details?id=com.dbtkarnataka
ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ
ನಂತರ payment status ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ಇಲ್ಲಿಯವರೆಗೆ ಎಷ್ಟು ಗೃಹಲಕ್ಷ್ಮಿ(Gruhalakahmi) ಕಂತಿನ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.

