Pmkisan 22nd instalment status-ನಾಳೆಯೊಳಗೆ ಇಕೆವೈಸಿ ಮಾಡಿದವರಿಗೆ ಸಿಗಲಿದೆ ಪಿಎಂ ಕಿಸಾನ್ 22ನೇ ಕಂತು,ನಿಮ್ಮ ಸ್ಟೇಟಸ್ ಒಮ್ಮೆ ಚೆಕ್ ಮಾಡಿಕೊಳ್ಳಿ
<Krushirushi> <ಪಿಎಂಕಿಸಾನ್> < ಪಿಎಂ ಕಿಸಾನ್> <ಪಿಎಂಕಿಸಾನ್ ಮೊಬೈಲ್ ಆ್ಯಪ್> <pmkisan mobile application> <pmkisan mobile app> <pmkisan face scan mobile application> <pradan mantri kisan samman nidhi> <Modi duddu> <ಮೋದಿ ದುಡ್ಡು> <ಇಕೆವೈಸಿ> <ಪಿಎಂ ಕಿಸಾನ್> <pmkisan> <ekyc>
Pmkisan 22nd instalment-ನಾಳೆಯೊಳಗೆ ಈ ಕೆಲಸ ಮಾಡಿದವರಿಗೆ ಸಿಗಲಿದೆ ಪಿಎಂ ಕಿಸಾನ್ 22ನೇ ಕಂತು
ರೈತರು ಪಿಎಂ–ಕಿಸಾನ್ ಪೋರ್ಟಲ್‌ನಲ್ಲಿರುವ ತಮ್ಮ ವಿವರಗಳನ್ನು ಪರಿಶೀಲಿಸಬೇಕು, ಇ–ಕೆವೈಸಿ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. ಪಿಎಂ–ಕಿಸಾನ್ ಯೋಜನೆಯ 22ನೆಯ ಕಂತಿನ ಹಣವನ್ನು ಕೇಂದ್ರ ಸರ್ಕಾರವು ಶುಕ್ರವಾರ ಬಿಡುಗಡೆ ಮಾಡಲಿದೆ.
ಅಸ್ಸಾಂನ ಗುವಾಹಟಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ–ಕಿಸಾನ್ ಯೋಜನೆಯ ಮೊತ್ತವನ್ನು 9.32 ಕೋಟಿ ರೈತರಿಗೆ ವರ್ಗಾವಣೆ ಮಾಡಲಿದ್ದಾರೆ.
‘ಅಗತ್ಯ ಕಂಡುಬಂದರೆ ಇ–ಕೆವೈಸಿ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಿ. ಆಗ, 22ನೆಯ ಕಂತಿನ ಹಣವು ರೈತರ ಖಾತೆಗೆ ಸರಿಯಾದ ಸಮಯಕ್ಕೆ ಜಮಾ ಆಗುತ್ತದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದ್ದಾರೆ.
ಅರ್ಹರಿಗೆ ನೆರವು ಒದಗಿಸುವ ಉದ್ದೇಶದಿಂದ ‘ನಿಮ್ಮ ಸ್ಥಿತಿ ತಿಳಿಯಿರಿ’ (Know Your Status–KYS) ಸೌಲಭ್ಯವನ್ನು ಪೋರ್ಟಲ್‌ನಲ್ಲಿ ನೀಡಲಾಗಿದೆ. ಇದರ ಮೂಲಕ ಪಾವತಿ ಸ್ಥಿತಿ, ಅರ್ಹತೆ, ಆಧಾರ್ ಜೋಡಣೆ ಮತ್ತು ಇ–ಕೆವೈಸಿ ಸ್ಥಿತಿಯನ್ನು ತಿಳಿಯಬಹುದು.
ರೈತರು ಇ–ಕೆವೈಸಿ ಪ್ರಕ್ರಿಯೆಯನ್ನು ಮನೆಗಳಿಂದಲೇ ಪೂರ್ಣಗೊಳಿಸಲು ಅವಕಾಶ ಕಲ್ಪಿಸುವ ಆ್ಯಪ್ ಒಂದನ್ನು ಕೂಡ ಕೇಂದ್ರವು ಬಿಡುಗಡೆ ಮಾಡಿದೆ.
ಆದ್ದರಿಂದ ಈಗಾಗಲೇ ಇಕೆವೈಸಿ ಆಗಿದ್ದರೂ ಸಹ ಇನ್ನೊಂದು ಬಾರಿ ಈ ಕೆಳಗಿನ 3 ವಿಧಾನಗಳ ಮೂಲಕ ಇಕೆವೈಸಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
ವಿಧಾನ 1.
OTP ಆಧಾರಿತ ಇಕೆವೈಸಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://pmkisan.gov.in/aadharekyc.aspx
ನಂತರ ನಿಮ್ಮ ಆಧಾರ್ ನಂಬರ್ ಹಾಕಿ search ಮೇಲೆ ಕ್ಲಿಕ್ ಮಾಡಿ
ಈಗಾಗಲೇ ಇಕೆವೈಸಿ ಆಗಿದ್ದರೆ,Ekyc is already done ಎಂದು ತೋರಿಸುತ್ತದೆ.
ಇಲ್ಲದಿದ್ದರೆ ನಿಮ್ಮ ಮೊಬೈಲ್ ನಂಬರ್ ಹಾಕಿ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ ಇಕೆವೈಸಿ ಮಾಡಿಕೊಳ್ಳಿ
ವಿಧಾನ 2.
Biometric ಆಧಾರಿತ ಇಕೆವೈಸಿ
ನಿಮಗೆ OTP ಬರದಿದ್ದರೆ ನಾಗರಿಕ ಸೇವಾ ಕೇಂದ್ರ ಅಥವಾ ಗ್ರಾಮಒನ್ ಗೆ ಹೋಗಿ ನಿಮ್ಮ ಹೆಬ್ಬೆಟ್ಟನ್ನು ಒತ್ತಿ ಇಕೆವೈಸಿ ಮಾಡಿಸಿಕೊಳ್ಳಿ
ವಿಧಾನ 3.
ಮುಖಚರ್ಯೆ(Face authentication) ಆಧಾರಿತ ಇಕೆವೈಸಿ
ಈ ಕೆಳಗಿನ ಲಿಂಕ್ ಮೋಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಡೌನ್ಲೊಡ್ ಮಾಡಿಕೊಳ್ಳಿ
https://play.google.com/store/apps/dev?id=6767333309690298459
ನಂತರ ನಿಮ್ಮ ಮುಖ ಸ್ಕ್ಯಾನ್ ಮಾಡಿ Ekyc ಮಾಡಿ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ಕಛೇರಿಯನ್ನು ಸಂಪರ್ಕಿಸಿ ಇಕೆವೈಸಿ ಮಾಡಿಸಿಕೊಳ್ಳಿ,ಈ ಮಾಹಿತಿಯನ್ನು ಇತರೆ ರೈತರಿಗೂ ಹಂಚಿಕೊಳ್ಳಿ

