Bele sala-ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ಮೊಬೈಲ್ ನಲ್ಲೇ ಚೆಕ್ ಮಾಡಿ

<Krushirushi> <ಸರ್ವೆನಂಬರ್> <Surveynumber> <ಬೆಳೆಸಾಲ> <croploan> <bele sala> <crop loan> <belesala> <ಬೆಳೆ ಸಾಲ> <ರೈತ> <ಹಣ> <ಸಂದಾಯ> <ಸಹಾಯಧನ> <ಸಾಲ> <bele sala manna> <bele sala manna status> <ಬೆಳೆ ಸಾಲ ಮನ್ನಾ> <ಆಧಾರ್> <ಬ್ಯಾಂಕ್>

Bele sala-ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ಮೊಬೈಲ್ ನಲ್ಲೇ ಚೆಕ್ ಮಾಡಿ

Bele sala-ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ಮೊಬೈಲ್ ನಲ್ಲೇ ಚೆಕ್ ಮಾಡಿ

ರೈತರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆಯಲಾಗಿದೆ ಎಂಬುದನ್ನು ಚೆಕ್ ಮಾಡಲು ಕೇವಲ ಸರ್ವೇ ನಂಬರ್ ನಮೂದಿಸಿದರೆ ಸಾಕು ಎಲ್ಲಾ ಇತಿಹಾಸ ತಿಳಿದುಕೊಳ್ಳಬಹುದು.

 ಹೌದು ರೈತರು ಕೇವಲ ತಮ್ಮ ಸರ್ವೆ ನಂಬರ್ ನಮೂದಿಸಿದರೆ ಸಾಕು ಸರ್ವೆ ನಂಬರ್ ನಲ್ಲಿ ಬರುವ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂಬುದನ್ನು ಚೆಕ್ ಮಾಡಬಹುದು ಇದಕ್ಕಾಗಿ ರೈತರ ಬಳಿ ಸ್ಮಾರ್ಟ್ಫೋನ್ ಇದ್ದರೆ ಸಾಕು ದೇಶದ ಯಾವುದೇ ಭಾಗದಲ್ಲಿ ಕುಳಿತಲ್ಲಿಯೇ ಮಾಹಿತಿ ಪಡೆಯಬಹುದು.

 ಸಾಲ ವಿವರ ಚೆಕ್ ಮಾಡುವುದು ಹೇಗೆ?

 ರೈತರು ತಮ್ಮ ಮೊಬೈಲ್ ನಲ್ಲಿ ಸರ್ವೆ ನಂಬರ್ ನಮೂದಿಸಿ ಸಾಲದ ವಿವರದ ಇತಿಹಾಸ ತಿಳಿದುಕೊಳ್ಳಲು 

https://landrecords.karnataka.gov.in/Service2/

 ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ಭೂಮಿ ತಂತ್ರಾಂಶ ತೆರೆದುಕೊಳ್ಳುತ್ತದೆ. 

 ನಂತರ ನಿಮ್ಮ ಜಿಲ್ಲೆ,ತಾಲೂಕು, ಹೋಬಳಿ,ಗ್ರಾಮ select ಮಾಡಿ ಸರ್ವೆ ನಂಬರ್ ನಂಬರ್ ನಮೂದಿಸಿ Go ಮೇಲೆ ಕ್ಲಿಕ್ ಮಾಡಿ

  ನಂತರ Surnoc,hissa,period ಹಾಗೂ year ಆಯ್ಕೆ ಮಾಡಿ
Fetch details ಮೇಲೆ ಕ್ಲಿಕ್ ಮಾಡಿ

ನಂತರ view ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಪಹಣೆ ತೆರೆದುಕೊಳ್ಳುತ್ತದೆ

 ಮುಟೇಶನ್ ಒಂದನೇ ಕಾಲಂನಲ್ಲಿ ಸರ್ವೆ ನಂಬರ್ ಹಿಸ್ಸಾ ನಂಬರ್ ನಲ್ಲಿರುವ ಮಾಲೀಕರ ಹೆಸರು ಇರುತ್ತದೆ. ಎರಡನೇ ಕಾಲದಲ್ಲಿ ಸರ್ವೆ ನಂಬರ್ ಗಳು ಕರಾಬು ಜಮೀನು ಕಂದಾಯ ವಿವರ ಹಾಗೂ ಜಮೀನಿನ ಮಣ್ಣಿನ ನಮೂನೆ ಹೇಗೆ ಎಂಬ ಮಾಹಿತಿ ಇರುತ್ತದೆ.

 ಸರ್ವೆ ನಂಬರಿನಲ್ಲಿ ಯಾವ ಮಾಲೀಕರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣುತ್ತದೆ. ಸರ್ವೆ ನಂಬರ್ ಹಾಗೂ ಸ್ವಾಧೀನದಾರರ ಹೆಸರು ಮತ್ತು ವಿಸ್ತೀರ್ಣದ ಮಾಹಿತಿ ಇರುತ್ತದೆ.

  ಇದರೊಂದಿಗೆ 11ನೇ ಕಾಲಂನಲ್ಲಿ ಋಣಗಳು ಕಾಲಂ ಕೆಳಗಡೆ ಯಾವ ಬ್ಯಾಂಕಿನಿಂದಎಷ್ಟು ಸಾಲ ಪಡೆಯಲಾಗಿದೆ.  ಎಂಬ ಮಾಹಿತಿ ಇರುತ್ತದೆ.


 ಈ ಮಾಹಿತಿ ರೈತರಿಗೆ ತುಂಬಾ ಅನುಕೂಲವಾಗಿದೆ ಸರ್ವೇ ನಂಬರ್ ನಮೂದಿಸಿದರೆ ಸಾಕು ರೈತರು ದೇಶದ ಯಾವುದೇ ಮೂಲೆಯಿಂದಲೂ ಮಾಹಿತಿ ಪಡೆಯಬಹುದು. ಕೇವಲ ಸರ್ವೆ ನಂಬರ್ ನಮೂದಿಸಿದರೆ ಸಾಕು ಸರ್ವ ಮಾಹಿತಿ ಎಲ್ಲವೂ ರೈತರಿಗೆ ಸಿಗಲಿದೆ.