90% ಸಬ್ಸಿಡಿಯಲ್ಲಿ ಕೃಷಿಹೊಂಡ,ಡಿಸೇಲ್ ಪಂಪಸೆಟ್,ಟಾರ್ಪಲಿನ್,ತಂತಿಬೇಲಿ ನಿರ್ಮಾಣಕ್ಕೆ ಅರ್ಜಿ ಆಹ್ವಾನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ-Krushi Honda yojane 

<Krushirushi> <ಕೃಷಿ ಹೊಂಡ> < <Farm pond> <Krushi Honda> <ಕೃಷಿ ಇಲಾಖೆ> <ಕೃಷಿ ಇಲಾಖೆ ಯೋಜನೆಗಳು> <Agriculture> <Agriculture department> <Agriculture department schemes> <ರೈತ> <ಹಣ> <ಸಂದಾಯ> <ಸಹಾಯಧನ> <ಡಿಸೇಲ್ ಪಂಪ್ ಸೆಟ್> <ಟಾರ್ಪಲಿನ್> <ತಾಡಪತ್ರಿ> <ತಂತಿಬೇಲಿ> <diseal pumpset> <Tarpaulin>

90% ಸಬ್ಸಿಡಿಯಲ್ಲಿ ಕೃಷಿಹೊಂಡ,ಡಿಸೇಲ್ ಪಂಪಸೆಟ್,ಟಾರ್ಪಲಿನ್,ತಂತಿಬೇಲಿ ನಿರ್ಮಾಣಕ್ಕೆ ಅರ್ಜಿ ಆಹ್ವಾನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ-Krushi Honda yojane 

90% ಸಬ್ಸಿಡಿಯಲ್ಲಿ ಕೃಷಿಹೊಂಡ,ಡಿಸೇಲ್ ಪಂಪಸೆಟ್,ಟಾರ್ಪಲಿನ್,ತಂತಿಬೇಲಿ ನಿರ್ಮಾಣಕ್ಕೆ ಅರ್ಜಿ ಆಹ್ವಾನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ-Krushi Honda yojane 

ಕೃಷಿ ಇಲಾಖೆಯು ಮಳೆ ನೀರನ್ನು ಸಂಗ್ರಹಿಸಿ ಕೃಷಿಯಲ್ಲಿ ಸದ್ಬಳಕೆ ಮಾಡಲು ರೈತರನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ವಿವಿದ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಕೃಷಿ ಭಾಗ್ಯ ಯೋಜನೆಯು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಟಾನಗೊಳ್ಳುತ್ತಿದ್ದು, ಬದು, ಕೃಷಿ ಹೊಂಡ,(Farm pond) ಕೃಷಿಹೊಂಡದ ಸುತ್ತ ತಂತಿ ಬೇಲಿ, ಕೃಷಿಹೊಂಡಕ್ಕೆ ಪಾಲೀಥಿನ್ ಹೊದಿಕೆ(Tarpualin), ಪಂಪ್ ಸೆಟ್(Diseal Pumpset)  ಹಾಗೂ ಲಘು ನೀರಾವರಿ ಘಟಕಗಳನ್ನು ಅನುಷ್ಠಾನ ಮಾಡಲು ಸಹಾಯಧನ ನೀಡಲಾಗುತ್ತಿದೆ. ರೈತರು ಈ ಎಲ್ಲಾ ಘಟಕಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕಾಗಿರುತ್ತದೆ. ಸಾಮಾನ್ಯ ವರ್ಗದ ರೈತರಿಗೆ ಶೇ. 80 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ. 90% ಸಹಾಯಧನ ನೀಡಲು ಅವಕಾಶವಿರುತ್ತದೆ.

ಆಸಕ್ತ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಪಾಸ್ ಪೋರ್ಟ್ ಸೈಜ್ ಪೋಟೊ, ಪಹಣಿ, ಜಾತಿ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಕೃಷಿ ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://raitamitra.karnataka.gov.in/english