Male Mahithi 2024-ಈ ವರ್ಷದ ಮುಂಗಾರು ಹೇಗಿರಲಿದೆ? ಮಳೆ ಬೆಳೆ ಹೇಗೆ?
<Krushirushi> <ಈ ವರ್ಷದ ಮಳೆ ಮಾಹಿತಿ> <This year weather forecast> <ಮಳೆ ಮಾಹಿತಿ> <Male Mahiti> <Mungaru male> <Male Mahiti 2024> <Male munsuchane> <ಮಳೆ ಮುನ್ಸೂಚನೆ> <ಮುಂಗಾರು ಮಳೆ>
Male Mahithi 2024-ಈ ವರ್ಷದ ಮುಂಗಾರು ಹೇಗಿರಲಿದೆ? ಮಳೆ ಬೆಳೆ ಹೇಗೆ?
ಭಾರತೀಯ ಹವಾಮಾನ ಇಲಾಖೆ ದೇಶದ ಜನತೆಗೆ ವಿಶೇಷವಾಗಿ ರೈತರಿಗೆ ಸಿಹಿಸುದ್ದಿ ನೀಡಿದೆ. ಮುಂದಿನ ಮುಂಗಾರು ಹಂಗಾಮಿನಲ್ಲಿ ದೇಶದಾದ್ಯಂತ ಸಮೃದ್ಧ ಮಳೆಯಾಗಲಿದೆ ಎಂದು ತಿಳಿದು ಬಂದಿದೆ.
ಜೂನ್ನಿಂದ ಆರಂಭವಾಗುವ ಮುಂಗಾರು ದೇಶದಾದ್ಯಂತ ಉತ್ತಮ ರೀತಿಯಲ್ಲಿ ಮಳೆಯಾಗಲಿದೆ. ಮೇ ತಿಂಗಳ ನಂತರ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ ಮತ್ತು ಲಾ ನಿನಾ ಪರಿಸ್ಥಿತಿಗಳ ಪ್ರಭಾವ ಕಡಿಮೆಯಾಗಲಿದೆ ಎಂದು ಐಎಂಡಿ ಪ್ರಕಟಿಸಿದೆ.
ಈ ವರ್ಷದ ಮಾನ್ಸೂನ್ ಸಮಯದಲ್ಲಿ, ದೇಶದಾದ್ಯಂತ ಭಾರಿ ಮಳೆಯಾಗುತ್ತದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
'ಮುಂಬರುವ ಮುಂಗಾರು ಹಂಗಾಮಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಈ ಬೇಸಿಗೆಯಲ್ಲಿ ಎಲ್ ನಿನೋ ಪ್ರಭಾವ ತೀವ್ರವಾಗಿರುತ್ತದೆ. ಈಶಾನ್ಯ ಪೆನಿನ್ಸುಲರ್ ಇಂಡಿಯಾ, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಕರ್ನಾಟಕ, ಮಹಾರಾಷ್ಟ್ರ, ಒಡಿಶಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಗಳು ಕಂಡುಬರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಮಾರ್ಚ್ ನಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಇದು ದೀರ್ಘಾವಧಿಯ ಸರಾಸರಿ 29.9 ಎಂಎಂನ 117 ಪ್ರತಿಶತಕ್ಕಿಂತ ಹೆಚ್ಚು. ಮತ್ತು ಮಾರ್ಚ್ ಮತ್ತು ಮೇ ನಡುವೆ, ದೇಶದ ಹೆಚ್ಚಿನ ಭಾಗಗಳು ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸುವ ಸಾಧ್ಯತೆಯಿದೆ' ಎಂದು ಮೃತ್ಯುಂಜಯ್ ಹೇಳಿದ್ದಾರೆ.
ಆದಾಗ್ಯೂ, ಚಾಲ್ತಿಯಲ್ಲಿರುವ ಎಲ್ ನಿನೊ ಪರಿಸ್ಥಿತಿಗಳು ಬೇಸಿಗೆಯ ನಂತರ ತಟಸ್ಥವಾಗುವ ಸಾಧ್ಯತೆಯಿದೆ. ಇದರಿಂದ ಮುಂಗಾರು ಆರಂಭದಿಂದಲೇ ದೇಶದಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ನಿರ್ದೇಶಕರು ತಿಳಿಸಿದ್ದಾರೆ.
Weather forecast 2024-ಈ ವರ್ಷದ ಮುಂಗಾರು ಮಳೆ ಕುರಿತು ಹವಾಮಾನ ಇಲಾಖೆಯಿಂದ ಸಿಹಿಸುದ್ದಿ
ಎಲ್ ನಿನೊ ಪರಿಣಾಮವು ಜೂನ್ ತಿಂಗಳಿಗೂ ಮೊದಲು ದುರ್ಬಲಗೊಳ್ಳಲಿದೆ, ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಸುರಿಯಲಿದೆ ಎಂಬ ಆಶಾಭಾವನೆಯನ್ನು ಹವಾಮಾನ ತಜ್ಞರು ವ್ಯಕ್ತಪಡಿಸಿದ್ದಾರೆ.
ಜಗತ್ತಿನಾದ್ಯಂತ ಹವಾಮಾನದ ಮೇಲೆ ಪರಿಣಾಮ ಉಂಟುಮಾಡುವ ಎಲ್ ನಿನೊ ದುರ್ಬಲಗೊಳ್ಳುವುದು ಶುರುವಾಗಿದೆ ಎಂಬುದನ್ನು ಎರಡು ಜಾಗತಿಕ ಹವಾಮಾನ ಸಂಸ್ಥೆಗಳು ಕಳೆದ ವಾರ ಹೇಳಿವೆ. ಆಗಸ್ಟ್ಗೂ ಮೊದಲು ಲಾ ನಿನಾ ಪರಿಣಾಮ ಶುರುವಾಗಬಹುದು ಎಂದು ಅವು ಹೇಳಿವೆ.
ಈ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿರುವ ಭಾರತದ ಹವಾಮಾನ ತಜ್ಞರು, ಜೂನ್-ಆಗಸ್ಟ್ಗೆ ಮೊದಲು ಲಾ ನಿನಾ ಪರಿಣಾಮ ಶುರುವಾದರೆ ಮುಂಗಾರು ಮಳೆಯು ಹಿಂದಿನ ವರ್ಷಕ್ಕಿಂತ ಚೆನ್ನಾಗಿ ಆಗಲಿದೆ ಎಂದು ಹೇಳಿದ್ದಾರೆ.
ಜೂನ್-ಜುಲೈಗೆ ಮೊದಲು ಲಾ ನಿನಾ ಪರಿಸ್ಥಿತಿ ನಿರ್ಮಾಣ ಆಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಭೂವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಮಾಧವನ್ ರಾಜೀವನ್ ಹೇಳಿದ್ದಾರೆ. 'ಎಲ್ ನಿನೊ ಪರಿಸ್ಥಿತಿಯು ಬದಲಾಗಿ, ಎಲ್ ನಿನೊ ಹಾಗೂ ಲಾ ನಿನಾ ಎರಡೂ ಇಲ್ಲದ ಸ್ಥಿತಿ (ಎನ್ನೊ-ತಟಸ್ಥ ಸ್ಥಿತಿ) ಎದುರಾದರೂ ಮುಂಗಾರು ಮಳೆಯು ಈ ವರ್ಷದಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಸುರಿಯುವ ಒಟ್ಟು ಮಳೆಯಲ್ಲಿ ಶೇಕಡ 70ರಷ್ಟು ಮಳೆ ನೈಋತ್ಯ ಮಾರುತಗಳಿಂದಾಗಿ ಆಗುತ್ತದೆ. ದೇಶದ ಜಿಡಿಪಿಗೆ ಶೇಕಡ 14ರಷ್ಟು ಕೊಡುಗೆ ನೀಡುವ ಕೃಷಿ ಕ್ಷೇತ್ರಕ್ಕೆ ಈ ಮಳೆಯು ಬಹಳ ಮಹತ್ವದ್ದು.
ಎಲ್ ನಿನೊ ಪರಿಣಾಮವು ಎನ್ನೊ ತಟಸ್ಥ ಸ್ಥಿತಿಯಾಗಿ ಪರಿವರ್ತನೆ ಕಾಣುವ ಸಾಧ್ಯತೆಯು ಶೇಕಡ 79ರಷ್ಟು ಇದೆ ಎಂದು ಅಮೆರಿಕದ ಎನ್‌ಒಎಎ ಸಂಸ್ಥೆ ಅಂದಾಜು ಮಾಡಿದೆ. ಹಾಗೆಯೇ, ಜೂನ್-ಆಗಸ್ಟ್ ವೇಳೆಗೆ ಲಾ ನಿನಾ ಪರಿಸ್ಥಿತಿ ನಿರ್ಮಾಣ ಆಗುವ ಸಾಧ್ಯತೆಯು ಶೇ 55ರಷ್ಟು ಇದೆ ಎಂದು ಕೂಡ ಅದು ಹೇಳಿದೆ.
ಎಲ್ ನಿನೊ ಪರಿಸ್ಥಿತಿ ದುರ್ಬಲಗೊಳ್ಳುವುದು ಶುರುವಾಗಿದೆ ಎಂದು ಐರೋಪ್ಯ ಒಕ್ಕೂಟದ ಕೋಪರ್ನಿಕಸ್ ಕ್ರೈಮೇಟ್ ಚೇಂಜ್ ಸರ್ವಿಸ್ (ಸಿಡಿಎಸ್) ಸಂಸ್ಥೆ ಖಚಿತಪಡಿಸಿದೆ. 'ಈ ಸಂದರ್ಭದಲ್ಲಿ ನಾವು ಯಾವುದನ್ನೂ ಖಚಿತವಾಗಿ ಹೇಳುವ ಸ್ಥಿತಿಯಲ್ಲಿಲ್ಲ. ಕೆಲವು ಅಧ್ಯಯನಗಳು ಲಾ ನಿನಾ ಪರಿಸ್ಥಿತಿ ನಿರ್ಮಾಣ ಆಗಬಹುದು ಎನ್ನುತ್ತವೆ. ಇನ್ನು ಕೆಲವು ಅಧ್ಯಯನಗಳು ಎನ್ನೊ ತಟಸ್ಥ ಸ್ಥಿತಿ ನಿರ್ಮಾಣವಾಗಬಹುದು ಎನ್ನುತ್ತಿವೆ. ಆದರೆ ಎಲ್ಲ ಅಧ್ಯಯನಗಳೂ ಎಲ್ ನಿನೊ ಕೊನೆಗೊಳ್ಳುತ್ತಿರುವುದನ್ನು ಸೂಚಿಸುತ್ತಿವೆ' ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಡಿ. ಶಿವಾನಂದ ಪೈ ತಿಳಿಸಿದರು.
'ಎಲ್ ನಿನೊ ಪರಿಸ್ಥಿತಿಯು ಎನ್ನೊ ತಟಸ್ಥ ಸ್ಥಿತಿಯಾಗಿ
ಪರಿವರ್ತನೆ ಕಂಡರೂ ಮುಂಗಾರು ಮಳೆಯು ಈ ವರ್ಷ
ಹಿಂದಿನ ವರ್ಷಕ್ಕಿಂತ ಚೆನ್ನಾಗಿ ಆಗಲಿದೆ' ಎಂದು ಪೈ ತಿಳಿಸಿದರು.
2023ರ ಮುಂಗಾರು ಅವಧಿಯಲ್ಲಿ ಭಾರತವು ಸರಾಸರಿ
ವಾಡಿಕೆಗಿಂತ ಕಡಿಮೆ ಮಳೆಯನ್ನು ಕಂಡಿತ್ತು. ಎಲ್ ನಿನೊ
ಪರಿಣಾಮದಿಂದಾಗಿ ಹೀಗಾಗಿದೆ ಎಂದು ತಜ್ಞರು ಹೇಳಿದ್ದರು.
ಜೂನ್ ತಿಂಗಳಿಗೂ ಮೊದಲು ನಾ ನಿನಾ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತಿವೆ. ಹೀಗಾದರೆ ಮುಂಗಾರು ಮಳೆಯು ಸಕಾಲದಲ್ಲಿ, ಚೆನ್ನಾಗಿ ಸುರಿಯುತ್ತದೆ ಎಂದು ಹವಾಮಾನ ತಜ್ಞ ರೊಕ್ಸಿ ಮ್ಯಾಲ್ಯೂ ಕೆ. ಹೇಳಿದರು. ತಾಪಮಾನ ಕಡಿಮೆ ಆಗದೆ ಇದ್ದರೆ, ಮಾರುತಗಳ ಪ್ರಭಾವ ಹೆಚ್ಚಿರುತ್ತದೆ, ಅತಿವೃಷ್ಟಿಯೂ ಆಗಬಹುದು ಎಂದರು.
February month Gruhalakshmi amount-ನಮ್ಮ ಮನೆಯವರ ಖಾತೆಗೆ ಫೆಬ್ರುವರಿ ತಿಂಗಳ ಗೃಹಲಕ್ಷ್ಮಿ ಹಣ ಜಮಾ, ರೇಷನ್ ಕಾರ್ಡ ನಂಬರ್ ಹಾಕಿ ಜಮಾ ಚೆಕ್ ಮಾಡುವ ಹೊಸ ಡೈರೆಕ್ಟ್ ಲಿಂಕ್
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://mahitikanaja.karnataka.gov.in/Service/Service/3136
ನಂತರ ಗೃಹಲಕ್ಷ್ಮಿ ಅಪ್ಲಿಕೇಷನ್ ಸ್ಥಿತಿ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ,Submit ಮೇಲೆ ಕ್ಲಿಕ್ ಮಾಡಿ
ನಂತರ Details ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ಯಾವ ತಿಂಗಳು,ಯಾವ ದಿನಾಂಕದಂದು ಗೃಹಲಕ್ಷ್ಮಿ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.
DBT Karnataka:ನಿಮ್ಮ ಖಾತೆಗೆ ಇಲ್ಲಿಯವರೆಗೂ ಎಷ್ಟು ಕಂತಿನ ಗೃಹಲಕ್ಷ್ಮಿ ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್
https://play.google.com/store/apps/details?id=com.dbtkarnataka
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ
ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ
ನಂತರ seeding status of Aadhar in bank account ಮೇಲೆ ಕ್ಲಿಕ್ ಮಾಡಿದರೆ ಆಧಾರ್ ಲಿಂಕ್ ಮಾಹಿತಿ ದೊರೆಯುತ್ತದೆ
payment status ಮೇಲೆ ಕ್ಲಿಕ್ ಮಾಡಿದರೆ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ತಿಳಿಯಬಹುದು
ಈ ಕೆಳಗಿನಂತೆ ಯಾವ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಲಿಂಕ್ ಆಗಿದೆ ಎಂಬ ಮಾಹಿತಿ ದೊರೆಯುತ್ತದೆ.
ಇದನ್ನೂ ನೋಡಿ
https://youtu.be/-84ud1OKiL8?si=0BT27WQxVaPHWgN7
ಹಾವೇರಿಯಿಂದ ದೇಶ ವಿದೇಶಗಳಿಗೂ ಸಿರಿಧಾನ್ಯ ರಪ್ತು
ಸಿರಿಧಾನ್ಯ ಬೆಳೆ,ಸಂಸ್ಕರಣೆ ಹಾಗೂ ಮಾರುಕಟ್ಟೆಯ ಸಂಪೂರ್ಣ ಮಾಹಿತಿ
ಇದನ್ನೂ ಓದಿ
Annabhagya-ನನ್ನ ಖಾತೆಗೆ 680 ರೂಪಾಯಿ ಅನ್ನಭಾಗ್ಯ ಯೋಜನೆಯ ಹಣ ಜಮಾ,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-409
4 ಸದಸ್ಯರ ನನ್ನ ಕುಟುಂಬಕ್ಕೆ 680 ರೂಪಾಯಿ ಜಮಾ
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಜಮಾ ಚೆಕ್ ಮಾಡಿ
DBT-ಅನ್ನಭಾಗ್ಯ,ಗೃಹಲಕ್ಷ್ಮಿ ಹಾಗೂ ಸರ್ಕಾರದ ಯಾವುದೇ ಯೋಜನೆಯ ನೇರ ನಗದು ವರ್ಗಾವಣೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-418
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಆಧಾರ್ ನಂಬರ್ ಹಾಕಿದರೆ, ಸರ್ಕಾರದಿಂದ ಬರುವ ಯಾವುದೇ ನೇರ ಹಣ ಜಮಾವಣೆ ಚೆಕ್ ಮಾಡಿ
Anna Bhagya-ನಿಮ್ಮ ಹೆಸರಿನ ಮುಂದೆ ಆಧಾರ್ ಸೀಡ್ ಆಗದೇ ಇರುವುದರಿಂದ ದೃಡೀಕರಣದಲ್ಲಿ ವಿಫಲವಾಗಿದೆ ಎಂದು ತೋರಿಸುತ್ತಿದ್ದರೆ ಹೀಗೆ ಮಾಡಿ - https://krushirushi.in/Krushirushi-1000-415
ಅನ್ನ ಭಾಗ್ಯ ಹಣ ಜಮಾ ಆಗಿಲ್ಲವೇ,ಕೂಡಲೇ ಹೀಗೆ ಮಾಡಿ
Annabhagya-ಈ ಪಟ್ಟಿಯಲ್ಲಿರುವವರಿಗೆ ಸಿಗಲಿದೆ ಅನ್ನಭಾಗ್ಯ ಹಣ,ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-416
1 ಸದಸ್ಯರಿರುವ ಕುಟುಂಬಕ್ಕೆ 170 ರೂಪಾಯಿ
2 ಸದಸ್ಯರಿರುವ ಕುಟುಂಬಕ್ಕೆ 340 ರೂಪಾಯಿ
3 ಸದಸ್ಯರಿರುವ ಕುಟುಂಬಕ್ಕೆ 510 ರೂಪಾಯಿ
4 ಸದಸ್ಯರಿರುವ ಕುಟುಂಬಕ್ಕೆ 680 ರೂಪಾಯಿ
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಫಲಾನುಭವಿಗಳ ಪಟ್ಚಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
Male nakshatra-2023 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ - https://krushirushi.in/Krushirushi-1000-261
Crop insurance-ನನ್ನ ಖಾತೆಗೆ 11,354 ರೂಪಾಯಿ ಬೆಳೆವಿಮೆ ಜಮಾ-ನಿಮ್ಮ ಬೆಳೆವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-257
District incharge ministers-ಇವರೇ ನೋಡಿ ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು - https://krushirushi.in/Krushirushi-1000-268
Karnataka ministers-ಕೊನೆಗೂ ಖಾತೆ ಹಂಚಿಕೆ ಅಂತಿಮ ಪಟ್ಟಿ ಬಿಡುಗಡೆ - https://krushirushi.in/Krushirushi-1000-254
DBT Karnataka-ಸರ್ಕಾರದಿಂದ ನಿಮಗೆ ಇಲ್ಲಿಯವರೆಗೂ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-259
Yuvanidhi-ಯುವನಿಧಿ ಯೋಜನೆಯಡಿ 3000 ರೂಪಾಯಿ-ಷರತ್ತು ಮತ್ತು ನಿಬಂಧನೆಗಳ ಅಧಿಕೃತ ಆದೇಶ - https://krushirushi.in/Krushirushi-1000-267
Aadhaar-ಆಧಾರ್ ನಂಬರ್ ಹಾಕಿ ರಾಜ್ಯ ಸರ್ಕಾರದಿಂದ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡಿ - https://krushirushi.in/Krushirushi-1000-266
Aadhaar bank seeding status-ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-260
5 Guarantees approved-5 ಗ್ಯಾರಂಟಿಗಳಿಗೆ ಸಚಿವ ಸಂಪುಟ ಸಭೆಯಿಂದ ಒಪ್ಪಿಗೆ - https://krushirushi.in/Krushirushi-1000-265
Crop loss-20160 ಹೇಕ್ಟೆರ್ ಬೆಳೆಹಾನಿ ಪರಿಹಾರ ಬಿಡುಗಡೆ-ಕಂದಾಯ ಸಚಿವ ಕೃಷ್ಞಬೈರೆಗೌಡ - https://krushirushi.in/Krushirushi-1000-264
Krushi bhagya-ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ- ಕೃಷಿ ಸಚಿವ ಚೆಲುವರಾಯಸ್ವಾಮಿ - https://krushirushi.in/Krushirushi-1000-262
Free bus pass-ನಾಳೆಯಿಂದ ರಾಜ್ಯದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ - https://krushirushi.in/Krushirushi-1000-256
Pmkisan name correction as per Aadhaar-ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಬದಲಾವಣೆ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-252
Crop insurance-ಬೆಳೆವಿಮೆ ಜಮಾ ಪ್ರಾರಂಭವಾಗಿದ್ದು,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-253