Bara parihara hana jama-ರಾಜ್ಯ ಸರ್ಕಾರದಿಂದ 16 ಲಕ್ಷ ರೈತರಿಗೆ ಹೆಚ್ಚುವರಿ 3000 ಪರಿಹಾರ-ಕೃಷ್ಣ ಬೈರೆಗೌಡ,ಯಾವ ರೈತರಿಗೆ ಸಿಗಲಿದೆ ಹೆಚ್ಚುವರಿ ಪರಿಹಾರ ಹಣ

<Krushirushi> <ಬರಪರಿಹಾರ ಹಣ ಜಮಾ> <Baraparihara hana jama> <ಬೆಳೆಹಾನಿ ಹಣ ಜಮಾ> <Belehani hana jama> <drought relief fund released> <Belehani rejected list> <ಬೆಳೆಹಾನಿ ಪರಿಹಾರ ಪಾವತಿ ವಿಫಲ ಪ್ರಕರಣ> <Belehani parihara payment failed cases> <Belehani parihara jama> <Modala kanthina belehani parihara> <Direct benefit transfer> <ಬೆಳೆಹಾನಿ ಪರಿಹಾರ ಪಟ್ಟಿ> <crop loss compensation to eligible farmers> <Baraparihara patti> <Drought relief eligible list> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <ರೈತ> <ಹಣ> <ಸಂದಾಯ> <direct benefit transfer> <dbt> <DBT Karnataka> <ಬೆಳೆಸುದ್ದಿ> <ನೇರ ಲಾಭ ವರ್ಗಾವಣೆ> <ಡಿಬಿಟಿ>

Bara parihara hana jama-ರಾಜ್ಯ ಸರ್ಕಾರದಿಂದ 16 ಲಕ್ಷ ರೈತರಿಗೆ ಹೆಚ್ಚುವರಿ 3000 ಪರಿಹಾರ-ಕೃಷ್ಣ ಬೈರೆಗೌಡ,ಯಾವ ರೈತರಿಗೆ ಸಿಗಲಿದೆ ಹೆಚ್ಚುವರಿ ಪರಿಹಾರ ಹಣ

Bara parihara hana jama-ರಾಜ್ಯ ಸರ್ಕಾರದಿಂದ 16 ಲಕ್ಷ ರೈತರಿಗೆ ಹೆಚ್ಚುವರಿ 3000 ಪರಿಹಾರ-ಕೃಷ್ಣ ಬೈರೆಗೌಡ,ಯಾವ ರೈತರಿಗೆ ಸಿಗಲಿದೆ ಹೆಚ್ಚುವರಿ ಪರಿಹಾರ ಹಣ

ರಾಜ್ಯ ಸರ್ಕಾರ, ಬರ ಪರಿಹಾರವಾಗಿ 16 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ತಲಾ 3,000 ರೂಪಾಯಿ ನೀಡಲು ನಿರ್ಧರಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರು ಗುರುವಾರ ಹೇಳಿದ್ದಾರೆ.

ರಾಜ್ಯದಲ್ಲಿ ಬರ ಪರಿಹಾರ ಪಟ್ಟಿಯಿಂದ ಹೊರಗುಳಿದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರಧನ ನೀಡಲು ಸರ್ಕಾರ ನಿರ್ಧರಿಸಿದೆ.ರಾಜ್ಯದ ಬರ ಪರಿಹಾರ ಪಟ್ಟಿಯಲ್ಲಿ ಸೇರದೆ ಅನೇಕ ರೈತರು ಹೊರಗುಳಿದಿದ್ದಾರೆ. ಅಂತಹ ಹಿಡುವಳಿದಾರರಿಗೂ ಪರಿಹಾರ ಸಿಗಲಿದೆ. ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ವಿತರಿಸಲಾಗುವುದು.'

ಅಷ್ಟೇ ಅಲ್ಲ, 2 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಇದಲ್ಲದೆ, ಸಣ್ಣ ಮತ್ತು ಅತಿ ಸಣ್ಣ ಒಣಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯದ ನಷ್ಟಕ್ಕೆ ಪರಿಹಾರವಾಗಿ ತಲಾ 3000 ರೂ. ಪರಿಹಾರ ನೀಡಲೂ ಸರ್ಕಾರ ತೀರ್ಮಾನಿಸಿದೆ. ಈ ರೈತರಿಗೆ ಒಟ್ಟಾರೆ 460 ಕೋಟಿ ರೂ. ಪರಿಹಾರ ರೂಪದಲ್ಲಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಎರಡರಿಂದಲೂ ರೈತರಿಗೆ ಹಣ ಪಾವತಿಸಲಾಗುವುದು ಮತ್ತು ರಾಜ್ಯ ಸರ್ಕಾರದ ಹಣವನ್ನು ಸಹ ಪಾವತಿಸಲಾಗುವುದು. ಮೊದಲ ಬಾರಿಗೆ ಇದು ಸುಮಾರು 460 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗುತ್ತಿದೆ. ಬರ ಕೈಪಿಡಿಯಲ್ಲಿ ಇದಕ್ಕೆ ಅವಕಾಶವಿದೆ. ರಾಜ್ಯ 240 ತಾಲ್ಲೂಕುಗಳಲ್ಲಿ 223 ಅನ್ನು ಬರಪೀಡಿತ ಎಂದು ಘೋಷಿಸಿದ್ದು, ಅವುಗಳಲ್ಲಿ 196 ತೀವ್ರ ಬರ ಪೀಡಿತ ಎಂದು ವರ್ಗೀಕರಿಸಲಾಗಿದೆ ಎಂದರು.

ಬರ ಪರಿಹಾರವಾಗಿ ರಾಜ್ಯದ ರೈತರ ಖಾತೆಗಳಿಗೆ 4,300 ಕೋಟಿ ರೂ. ಜಮಾ ಆಗಲಿದೆ ಎಂದು ತಿಳಿಸಿದ ಸಚಿವರು, ಈ ಪ್ರಕ್ರಿಯೆ ಪೂರ್ಣಗೊಳ್ಳಲು 20 ದಿನ ಬೇಕಾಗಬಹುದು ಮತ್ತು ಈಗಾಗಲೇ 32 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 3,000 ಕೋಟಿ ರೂ. ಜಮೆ ಮಾಡಲಾಗಿದೆ ಎಂದರು.

‘ಸುಪ್ರೀಂಕೋರ್ಟ್‌ಗೆ ಹೋಗಿ ಕಾನೂನು ಹೋರಾಟ ನಡೆಸಿ ಇಲ್ಲಿಯವರೆಗೆ ಸುಮಾರು 3,454 ಕೋಟಿ ರೂ.(ಕೇಂದ್ರದಿಂದ) ಬರ ಪರಿಹಾರ ಬಂದಿದ್ದು, ಕಳೆದ ಸೋಮವಾರದಿಂದಲೇ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದುವರೆಗೆ 32.12 ಲಕ್ಷ ರೈತರ ಖಾತೆಗಳಿಗೆ ಪರಿಹಾರವನ್ನು ಸಂಪೂರ್ಣವಾಗಿ ಜಮಾ ಮಾಡಲಾಗಿದೆ. ಮೊದಲ ಮತ್ತು ಎರಡನೇ ಕಂತುಗಳಿಂದ ಇದುವರೆಗೆ 3,000 ಕೋಟಿ ರೂ.ಗಳನ್ನು ನೇರ ವರ್ಗಾವಣೆ(ಡಿಬಿಟಿ) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅವರು ಹೇಳಿದರು.

ಸುಮಾರು 1.5 ಲಕ್ಷ ರೈತರ ಖಾತೆಗಳಿಗೆ ಎರಡನೇ ಕಂತಿನ ಪರಿಹಾರದ ಹಣ ಇನ್ನೂ ಜಮೆ ಆಗಿಲ್ಲ ಎಂದು ತಿಳಿಸಿದ ಅವರು, ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿಂದಾಗಿ ಪರಿಶೀಲನೆ ಹಂತದಲ್ಲಿದೆ. ಒಂದೊಮ್ಮೆ ಅದನ್ನು ತೆರವುಗೊಳಿಸಿದರೆ 33 ಲಕ್ಷಕ್ಕೂ ಅಧಿಕ ರೈತರ ಖಾತೆಗಳಿಗೆ ಪರಿಹಾರ ಹೋಗುತ್ತಿತ್ತು ಎಂದು ಅವರು ತಿಳಿಸಿದರು.

ಈಗಾಗಲೇ ಜಮಾ ಆಗಿರುವ ಸ್ಟೇಟಸ್ ಹೀಗ್ ಚೆಕ್ ಮಾಡಿ


ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service89/PaymentDetailsReport.aspx

 

ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,payment Success cases select ಮಾಡಿ Get reports ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಕೆಳಗಿನಂತೆ ಪರಿಹಾರ ಯಶಸ್ಸಿನ ಪ್ರಕರಣಗಳ ಪಟ್ಟಿ ದೊರೆಯಲಿದೆ



Input subsidy for croploss-ಬೆಳೆಹಾನಿ ಪರಿಹಾರ ಚೆಕ್ ಮಾಡುವ ಆ್ಯಪ್ ಬಿಡುಗಡೆ,ಇಲ್ಲಿದೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://play.google.com/store/apps/details?id=com.dbtkarnataka

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ input subsidy for croploss ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೂ ಜಮಾ ಆದ ಬೆಳೆಹಾನಿ ಪರಿಹಾರ ಮಾಹಿತಿ ಸಿಗಲಿದೆ.

ನಂತರ seeding status of Aadhar in bank account ಮೇಲೆ ಕ್ಲಿಕ್ ಮಾಡಿದರೆ ಆಧಾರ್ ಲಿಂಕ್ ಮಾಹಿತಿ ದೊರೆಯುತ್ತದೆ

ಈ ಕೆಳಗಿನಂತೆ ಯಾವ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಲಿಂಕ್ ಆಗಿದೆ ಎಂಬ ಮಾಹಿತಿ ದೊರೆಯುತ್ತದೆ.