Praja prathinidhi-10ನೇ ತರಗತಿ ಪಾಸಾದವರಿಂದ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಪ್ರಜಾಪ್ರತಿನಿಧಿ ಆಯ್ಕೆಗೆ ಅರ್ಜಿ ಆಹ್ವಾನ-ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್
<Krushirushi> <ಪ್ರಜಾಪ್ರತಿನಿಧಿ> <ಗೃಹಲಕ್ಷ್ಮಿ ಅರ್ಜಿ ನಮೂನೆ> <Gruhalakshmi application form><ಕಾಂಗ್ರೇಸಗ್ಯಾರಂಟಿ> <congressguarantee> <ಗೃಹಲಕ್ಷ್ಮಿ> <ಗೃಹಜ್ಯೋತಿ> <ಅನ್ನಭಾಗ್ಯ> <ಉಚಿತಬಸ್ ಪಾಸ್> <ಯುವನಿಧಿ>
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಮಹಿಳೆಯರ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅನುಕೂಲ ಆಗುವಂತೆ ಗ್ರಾಮಕ್ಕೊಬ್ಬರಂತೆ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲು ಸರ್ಕಾರ ಮುಂದಾಗಿದೆ.
ಇನ್ನು ಈ ಪ್ರಜಾಪ್ರತಿನಿಧಿಗಳು ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಅರ್ಜಿಯನ್ನು ಭರ್ತಿ ಮಾಡಿಕೊಂಡು ಹೋಗುತ್ತಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ 2023-24ನೇ ಸಾಲಿನಲ್ಲಿ ಜಾರಿಗೊಳಿಸುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿದಾರರು Mobile App ಮೂಲಕವು ಸಹ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲು ಪ್ರಜಾ ಪ್ರತಿನಿಧಿ (Citizen Volunteer)ಗಳನ್ನು ಗೌರವ ಸೇವೆ ಆಧಾರದ ಮೇಲೆ ನೇಮಕ ಮಾಡಲು ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದ್ದಾರೆ. ಪ್ರತಿ 1 ಸಾವಿರ ಜನರಿಗೆ ಅಥವಾ ಒಂದು ಸಾವಿರ ಜನರ ಒಂದು ಗ್ರಾಮಕ್ಕೆ ಇಬ್ಬರು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲಾಗುತ್ತಿದೆ. ಇಬ್ಬರಲ್ಲಿ ಒಬ್ಬರು ಮಹಿಳಾ ಪ್ರಜಾಪ್ರತಿನಿಧಿಗಳ ಆಯ್ಕೆ ಕಡ್ಡಾಯವಾಗಿದೆ. ಒಂದು ತಿಂಗಳ ಮಟ್ಟಿಗೆ ಪ್ರಜಾಪ್ರತಿನಿಧಿ ಗಳ ನೇಮಕ ಮಾಡಲಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆಯಡಿ ಪ್ರಜಾ ಪ್ರತಿನಿಧಿ ನೇಮಕಾತಿ ಕುರಿತು ಮಾರ್ಗಸೂಚಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುವ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಂಟಾಗುವ ಒತ್ತಡವನ್ನು ತಪ್ಪಿಸಲು ಹಾಗೂ ಅರ್ಜಿದಾರರಿಗೆ ಅನುಕೂಲವಾಗುವಂತೆ Mobile App ಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವುದು, ಈ Mobile App ನ ಮೂಲಕ ಅರ್ಜಿ ಭರ್ತಿ ಮಾಡಿ ಸಲ್ಲಿಸಲು ಪುಜಾ ಪ್ರತಿನಿಧಿಯವರನ್ನು ನೇಮಕ ಮಾಡುವುದು.
ಜನರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ: ಪ್ರಜಾಪ್ರತಿನಿಧಿಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತಂತ್ರಜ್ಞಾನ ಅಡೆತಡೆಗಳನ್ನು ಎದುರಿಸುತ್ತಿರುವ ನಾಗರಿಕರಿಗೆ ಸಹಾಯ ಮಾಡುತ್ತಾರೆ. ಕರ್ನಾಟಕ ಸರ್ಕಾರವು ಅಭಿವೃದ್ಧಿ ಪಡಿಸಿದ ಮೊಬೈಲ್ ಅಪ್ಲಿಕೇಶನ್ ಅನ್ನು ಅವರು ನೋಂದಣಿಗಾಗಿ ಬಳಸುತ್ತಾರೆ. ಪ್ರಜಾ ಪ್ರತಿನಿಧಿಗಳು ಉದ್ದೇಶಿತ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡುತ್ತಾರೆ. ಜೊತೆಗೆ, ನಾಗರಿಕರ ಪರವಾಗಿ ಅರ್ಜಿ ಸಲ್ಲಿಸುತ್ತಾರೆ. ಪ್ರಜಾ ಪ್ರತಿನಿಧಿಗಳು ಈ ಸೇವೆಯನ್ನು ಸ್ವಯಂ ಪ್ರೇರಣೆಯಿಂದ ಮಾಡುತ್ತಿದ್ದು ಅವರಿಗೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ.
ಪ್ರಜಾ ಪ್ರತಿನಿಧಿಗಳ ಆಯ್ಕೆಗೆ ಮಾನದಂಡಗಳು:
ಗೃಹಲಕ್ಷ್ಮಿ ಯೋಜನೆಗೆ ಮೊಬೈಲ್ ಅಪ್ಲಿಕೇಷನ್ ಮೂಲಕ ಅರ್ಜಿ ಸಲ್ಲಿಸುವ ಪ್ರಜಾ ಪ್ರತಿನಿಧಿಗಳು ಆಯಾ ತಾಲ್ಲೂಕಿನ ನಿವಾಸಿಗಳಾಗಿರಬೇಕು.
ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು.
ಗೃಹಲಕ್ಷ್ಮಿ ಯೋಜನೆಯಡಿ ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸಹಿಸಲು ಆಸಕ್ತಿಯುವುಳ್ಳವರಾಗಿರಬೇಕು.
ಪ್ರಜಾ ಪ್ರತಿನಿಧಿ"ರವರನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಲಾಗುತ್ತದೆ.
ಸರ್ಕಾರಿ ಕೇಂದ್ರಗಳ ಒತ್ತಡ ತಗ್ಗಿಸಲು ಕ್ರಮ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರು ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್‌ಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ಕೇಂದ್ರಗಳಲ್ಲಿ ಉಂಟಾಗಬಹುದಾಗ ಒತ್ತಡವನ್ನು ತಪ್ಪಿಸುವ ಸಲುವಾಗಿ Mobile App ಮೂಲಕವು ಸಹ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲು ಪ್ರಜಾ ಪ್ರತಿನಿಧಿ' (Citizen Volunteer)ಗಳನ್ನು ನೇಮಕ ಮಾಡಲಾಗುತ್ತಿದೆ.
prathinidhi-10ನೇ ತರಗತಿ ಪಾಸಾದವರಿಂದ ಪ್ರಜಾಪ್ರತಿನಿಧಿ ಅರ್ಜಿ ಆಹ್ವಾನ-ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್
https://sevasindhu.karnataka.gov.in/Sevasindhu/Kannada?ReturnUrl=%2F
ಮೊದಲು "ಹೊಸ ಬಳಕೆದಾರರು ಇಲ್ಲಿ ನೊಂದಾಯಿಸಿ" ಮೇಲೆ ಕ್ಲಿಕ್ ಮಾಡಿ
ಮೊದಲ ಬಾರಿ ಲಾಗಿನ್ ಆಗುತ್ತಿದ್ದರೆ,New user? Register here ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಆಧಾರ್ ನಂಬರ್ ಹಾಕಿ,captcha type ಮಾಡಿ,Next ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ Continue ಮೇಲೆ ಕ್ಲಿಕ್ ಮಾಡಿ
ನಂತರ Allow ಮೇಲೆ ಕ್ಲಿಕ್ ಮಾಡಿ
ನಂತರ ಇಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಹಾಕಿ, ನಿಮಗೆ ಬೇಕಾದ Password ಹಾಕಿ, captcha ಟೈಪ್ ಮಾಡಿ, submit ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಸೇವಾ ಸಿಂಧು ಅಕೌಂಟ್ activate ಆಗುತ್ತದೆ. ನಂತರ login ಕ್ಲಿಕ್ ಮಾಡಿ.
ನಂತರ ನೊಂದಾಯಿತ ಬಳಕೆದಾರರು ಇಲ್ಲಿ ಲಾಗಿನ್ ಮಾಡಿ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಹಾಕಿ, ಕ್ರಿಯೇಟ್ ಮಾಡಿದ ಪಾಸ್ವರ್ಡ್ ಹಾಕಿ ಕ್ಯಾಪ್ಚ ಟೈಪ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
ನಂತರ Apply for services ಮೇಲೆ ಕ್ಲಿಕ್ ಮಾಡಿ
ನಂತರ view all available services ಮೇಲೆ ಕ್ಲಿಕ್ ಮಾಡಿದರೆ,758 ಸೇವೆಗಳು ದೊರೆಯುತ್ತವೆ.Search Box ನಲ್ಲಿ Gruhalakshmi CV enrolment ಎಂದು Type ಮಾಡಿ,ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ
ನಂತರ ಅರ್ಜಿ ನಮೂನೆ ತೆರೆಯುತ್ತದೆ ಅದರಲ್ಲಿ ಅರ್ಜಿದಾರರ ಮೊಬೈಲ್ ಸಂಖ್ಯೆ ಹಾಗೂ ಅರ್ಜಿ ಸಲ್ಲಿಸುವವರ ವಿವರಗಳನ್ನು ಭರ್ತಿ ಮಾಡಿ.
ನಂತರ ಕೆಳಗಿನ ಭಾಗದ ಘೋಷಣೆಯಲ್ಲಿ ಐ ಅಗ್ರಿ ಎಂಬ ಚೆಕ್ ಬಾಕ್ಸ್ ಮೇಲೆ ಚೆಕ್ ಮಾಡಿ.
ನಂತರ ವೆರಿಫಿಕೇಶನ್ ಕೋಡನ್ನು ನೋಂದಣಿ ಮಾಡಿ ಅರ್ಜಿಯನ್ನು ಸಲ್ಲಿಸಿ.
ಇದನ್ನೂ ಓದಿ
Annabhagya-ನನ್ನ ಖಾತೆಗೆ 680 ರೂಪಾಯಿ ಅನ್ನಭಾಗ್ಯ ಯೋಜನೆಯ ಹಣ ಜಮಾ,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-409
4 ಸದಸ್ಯರ ನನ್ನ ಕುಟುಂಬಕ್ಕೆ 680 ರೂಪಾಯಿ ಜಮಾ
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಜಮಾ ಚೆಕ್ ಮಾಡಿ
DBT-ಅನ್ನಭಾಗ್ಯ,ಗೃಹಲಕ್ಷ್ಮಿ ಹಾಗೂ ಸರ್ಕಾರದ ಯಾವುದೇ ಯೋಜನೆಯ ನೇರ ನಗದು ವರ್ಗಾವಣೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-418
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಆಧಾರ್ ನಂಬರ್ ಹಾಕಿದರೆ, ಸರ್ಕಾರದಿಂದ ಬರುವ ಯಾವುದೇ ನೇರ ಹಣ ಜಮಾವಣೆ ಚೆಕ್ ಮಾಡಿ
Anna Bhagya-ನಿಮ್ಮ ಹೆಸರಿನ ಮುಂದೆ ಆಧಾರ್ ಸೀಡ್ ಆಗದೇ ಇರುವುದರಿಂದ ದೃಡೀಕರಣದಲ್ಲಿ ವಿಫಲವಾಗಿದೆ ಎಂದು ತೋರಿಸುತ್ತಿದ್ದರೆ ಹೀಗೆ ಮಾಡಿ - https://krushirushi.in/Krushirushi-1000-415
ಅನ್ನ ಭಾಗ್ಯ ಹಣ ಜಮಾ ಆಗಿಲ್ಲವೇ,ಕೂಡಲೇ ಹೀಗೆ ಮಾಡಿ
Annabhagya-ಈ ಪಟ್ಟಿಯಲ್ಲಿರುವವರಿಗೆ ಸಿಗಲಿದೆ ಅನ್ನಭಾಗ್ಯ ಹಣ,ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-416
1 ಸದಸ್ಯರಿರುವ ಕುಟುಂಬಕ್ಕೆ 170 ರೂಪಾಯಿ
2 ಸದಸ್ಯರಿರುವ ಕುಟುಂಬಕ್ಕೆ 340 ರೂಪಾಯಿ
3 ಸದಸ್ಯರಿರುವ ಕುಟುಂಬಕ್ಕೆ 510 ರೂಪಾಯಿ
4 ಸದಸ್ಯರಿರುವ ಕುಟುಂಬಕ್ಕೆ 680 ರೂಪಾಯಿ
ಈ ಲೇಖನದಲ್ಲಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ,ಫಲಾನುಭವಿಗಳ ಪಟ್ಚಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
Male nakshatra-2023 ನೇ ಸಾಲಿನ ಮಳೆ ನಕ್ಷತ್ರಗಳು ಹಾಗೂ ಮಳೆ ದಿನಾಂಕ - https://krushirushi.in/Krushirushi-1000-261
Crop insurance-ನನ್ನ ಖಾತೆಗೆ 11,354 ರೂಪಾಯಿ ಬೆಳೆವಿಮೆ ಜಮಾ-ನಿಮ್ಮ ಬೆಳೆವಿಮೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-257
District incharge ministers-ಇವರೇ ನೋಡಿ ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು - https://krushirushi.in/Krushirushi-1000-268
Karnataka ministers-ಕೊನೆಗೂ ಖಾತೆ ಹಂಚಿಕೆ ಅಂತಿಮ ಪಟ್ಟಿ ಬಿಡುಗಡೆ - https://krushirushi.in/Krushirushi-1000-254
DBT Karnataka-ಸರ್ಕಾರದಿಂದ ನಿಮಗೆ ಇಲ್ಲಿಯವರೆಗೂ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-259
Yuvanidhi-ಯುವನಿಧಿ ಯೋಜನೆಯಡಿ 3000 ರೂಪಾಯಿ-ಷರತ್ತು ಮತ್ತು ನಿಬಂಧನೆಗಳ ಅಧಿಕೃತ ಆದೇಶ - https://krushirushi.in/Krushirushi-1000-267
Aadhaar-ಆಧಾರ್ ನಂಬರ್ ಹಾಕಿ ರಾಜ್ಯ ಸರ್ಕಾರದಿಂದ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡಿ - https://krushirushi.in/Krushirushi-1000-266
Aadhaar bank seeding status-ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-260
5 Guarantees approved-5 ಗ್ಯಾರಂಟಿಗಳಿಗೆ ಸಚಿವ ಸಂಪುಟ ಸಭೆಯಿಂದ ಒಪ್ಪಿಗೆ - https://krushirushi.in/Krushirushi-1000-265
Crop loss-20160 ಹೇಕ್ಟೆರ್ ಬೆಳೆಹಾನಿ ಪರಿಹಾರ ಬಿಡುಗಡೆ-ಕಂದಾಯ ಸಚಿವ ಕೃಷ್ಞಬೈರೆಗೌಡ - https://krushirushi.in/Krushirushi-1000-264
Krushi bhagya-ಕೃಷಿ ಭಾಗ್ಯ ಮರು ಜಾರಿ, ಬೆಳೆ ವಿಮೆ ರೈತರ ಕಂತು ಕಡಿತ- ಕೃಷಿ ಸಚಿವ ಚೆಲುವರಾಯಸ್ವಾಮಿ - https://krushirushi.in/Krushirushi-1000-262
Free bus pass-ನಾಳೆಯಿಂದ ರಾಜ್ಯದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ - https://krushirushi.in/Krushirushi-1000-256
Pmkisan name correction as per Aadhaar-ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಬದಲಾವಣೆ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-252
Crop insurance-ಬೆಳೆವಿಮೆ ಜಮಾ ಪ್ರಾರಂಭವಾಗಿದ್ದು,ನಿಮ್ಮ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ - https://krushirushi.in/Krushirushi-1000-253