Vilage map-ರಾಜ್ಯ ಸರ್ಕಾರದಿಂದ ರೈತಸಮುದಾಯಕ್ಕೆ ಕಾಲುದಾರಿ,ಬಂಡಿದಾರಿ ಕುರಿತು ಸಿಹಿಸುದ್ದಿ, ಹೀಗೆ ಚೆಕ್ ಮಾಡಿ ನಿಮ್ಮ ಗ್ರಾಮದ ಕಾಲುದಾರಿ ಬಂಡಿದಾರಿ
<Krushirushi> <ಕಾಲುದಾರಿ> <ಬಂಡಿದಾರಿ> <villagemap> <ಗ್ರಾಮನಕ್ಷೆ>
Village map-ರಾಜ್ಯ ಸರ್ಕಾರದಿಂದ ರೈತಸಮುದಾಯಕ್ಕೆ ಕಾಲುದಾರಿ,ಬಂಡಿದಾರಿ ಕುರಿತು ಸಿಹಿಸುದ್ದಿ, ಹೀಗೆ ಚೆಕ್ ಮಾಡಿ ನಿಮ್ಮ ಗ್ರಾಮದ ಕಾಲುದಾರಿ ಬಂಡಿದಾರಿ
ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರೈತರು ವ್ಯವಸಾಯದ ಉದ್ದೇಶಕ್ಕಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನು ಗಳಲ್ಲಿ ಕಾಲುದಾರಿ, ಬಂಡಿದಾರಿ ಅಥವಾ ಸೌಲಭ್ಯ ಒದಗಿಸುವ ಸಲುವಾಗಿ ಕ್ರಮ ವಹಿಸುವ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ವಿಷಯ:ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿ ಅಥವಾ ಸೌಲಭ್ಯ ಒದಗಿಸುವ ಸಲುವಾಗಿ ಕ್ರಮವಹಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.
ರಾಜ್ಯದಲ್ಲಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಭೂಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ‘ದಾರಿ’ ಸಮಸ್ಯೆ ಇದ್ದು ಬಳಕೆದಾರ ರೈತರುಗಳಿಗೆ ತೊಂದರೆಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ‘ದಾರಿ’ ಸಮಸ್ಯೆ ಬಹುಕಾಲದಿಂದಲೂ ಇದ್ದು ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಜರುಗಿಸಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದೆ ನಮ್ಮ ಹೊಂದುತ್ತಿರುವುದು ಕೆಲವು ಮಾಧ್ಯಮಗಳಿಂದ ತಿಳಿದು ಬಂದಿರುತ್ತದೆ ಹಾಗೂ ಈ ಬಗ್ಗೆ ಸಾರ್ವಜನಿಕರಿಂದ ಮನವಿ/ದೂರುಗಳು ಸ್ವೀಕೃತವಾಗಿರುತ್ತವೆ.
ಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ಬಳಕೆದಾರ ರೈತರು ತಿರುಗಾಡಲು ಅವಕಾಶವಿದ್ಯಾಗ್ಯೂ ಕೆಲವು ಭೂಮಾಲೀಕರು ಬಳಕೆದಾರ ರೈತರುಗಳಿಗೆ ತಿರುಗಾಡಲು ಅಡ್ಡಿಪಡಿಸುತ್ತಿರುವುದು ಅಥವಾ ಅಂತಹ ಜಾಗಗಳನ್ನು ಮುಚ್ಚಿರುವುದು ಹಾಗೂ ರೈತರು ಬಹುಕಾಲದಿಂದಲೂ ಬಳಸುವ ದಾರಿಗಳಲ್ಲಿ ತಿರುಗಾಡಲು ಕೆಲವು ರೈತರ ಮಧ್ಯದ ವೈಯಕ್ತಿಕ ದ್ವೇಷ/ಆಸೂಯೆಗಳು ಮತ್ತು ಹೊಂದಾಣಿಕೆಯ ಕೊರತೆಯಿಂದಾಗಿ ಬಳಕೆದಾರ ರೈತರ ತೊಂದರೆಗಳಿಗೆ ಬಹುತೇಕ ಕಾರಣಗಳಾಗಿರುವುದು ಕಂಡುಬರುತ್ತದೆ.
ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 59 ರಲ್ಲಿ ‘ದಾರಿಯ ಹಕ್ಕುಗಳು ಮತ್ತು ಇತರ ಅನುಭೋಗದ ಹಕ್ಕುಗಳ ಬಗ್ಗೆ ತಿಳಿಸಲಾಗಿದ್ದು ಸಂಬಂಧಪಟ್ಟ ಜಮೀನುಗಳ ಭಾಗಿದಾರರು ಒಪ್ಪಿರುವಂತಹ ಸಂದರ್ಭದಲ್ಲಿ ಹಕ್ಕುಗಳ ದಾಖಲೆ ರಿಜಿಸ್ಟರ್‌ನಲ್ಲಿ ನಮೂದು ಮಾಡಲು ಅವಕಾಶವಿದೆ.
The Indian Easement Act, 1882 ರಂತೆ ಪ್ರತಿ ಜಮೀನು ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ (Easement) ಹಕ್ಕನ್ನು ಹೊಂದಿದ್ದು, ಇದಕ್ಕೆ ಬಾಜುದಾರರಿಂದ ಯಾವುದೇ ಹಸ್ತಕ್ಷೇಪಕ್ಕೆ ಅಥವಾ ಈ ಬಗ್ಗೆ ಸದರಿ ಹಕ್ಕನ್ನು ಕ್ಷೀಣಿಸುವುದಕ್ಕೆ ಸಾಧ್ಯವಿರುವುದಿಲ್ಲ ಎಂಬುದಾಗಿ ತಿಳಿಸಲಾಗಿದ್ದು, ಈ ನಿಟ್ಟಿನಲ್ಲಿ (b) ad se, Code of Criminal Procedure, 19730 0 147 ರನ್ವಯ ಭೂಮಿ ಮತ್ತು ನೀರಿನ ಹಕ್ಕಿನ ಉಪಯೋಗದ ಕುರಿತು ಸ್ಥಳೀಯ ಶಾಂತಿಗೆ ಭಂಗ ಉಂಟಾಗುವ ಸಂದರ್ಭಗಳಲ್ಲಿ ಅದನ್ನು ನಿವಾರಿಸಲು ಕಾನೂನು ರೀತ್ಯಾ ತಹಶೀಲ್ದಾರ್ ರವರು ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿ ಕ್ರಮವಹಿಸುವ ಅಧಿಕಾರ ಹೊಂದಿರುತ್ತಾರೆ.
ಅದರಂತೆ, ತಾಲ್ಲೂಕಿನ ತಹಶೀಲ್ದಾರ್ಗಗಳು ನಕಾಶೆ ಕಂಡ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಅನ್ನ ಕೃಷಿ ಬಳಕೆದಾರರು ತಿರುಗಾಡಲು ಅವಕಾಶ ನೀಡದೆ ಅಡ್ಡಿಪಡಿಸುವಂತಹ ಅಥವಾ ಬಳಸಲು ಮುಚ್ಚಿರುವಂತಹ ಸಂದರ್ಭದಲ್ಲಿ ಅವುಗಳನ್ನು ತೆರವುಗೊಳಿಸಿ ಅಂತಹ ತಿರುಗಾಡಲು ದಾರಿಗಳನ್ನು ಸುಗಮಗೊಳಿಸಲು ಕ್ರಮವಹಿಸುವಂತೆ ಸೂಚಿಸಿದೆ.
Village map-ನಿಮ್ಮ ಊರಿನ ಕಾಲುದಾರಿ,ಬಂಡಿದಾರಿ ತಿಳಿಯುವ ಡೈರೆಕ್ಟ್ ಲಿಂಕ್
https://landrecords.karnataka.gov.in/indexkn.aspx
ನಂತರ ಕಂದಾಯ ನಕ್ಷೆಗಳು ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೋಬಳಿ,ಗ್ರಾಮ select ಮಾಡಿ, search ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ನಿಮ್ಮ ಗ್ರಾಮದ ಹೆಸರು ಕಾಣೆಸುತ್ತದೆ. ಆಗ ನಿಮ್ಮ ಗ್ರಾಮದ ಮುಂದಿರುವ pdf file ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಗ್ರಾಮದ ನಕ್ಷೆ ಕಾಣೆಸುತ್ತದೆ. ಅದರಲ್ಲಿ ಕಾಲುದಾರಿ,ಬಂಡಿದಾರಿ,ಕೆರೆ ಕಟ್ಟೆಯನ್ನು ನೋಡಬಹುದು.
ಎಲ್ಲ ರೈತಬಾಂದವರಿಗೂ ನಮಸ್ಕಾರ
ಇಂದಿನ ದಿನಗಳಲ್ಲಿ ಬಹಳಷ್ಟು ಸುಳ್ಳು ವೆಬ್ಸೈಟ್ ಗಳು ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿದ್ದು,ನಮ್ಮ ವೆಬ್ಸೈಟ್ನಲ್ಲಿ ಅಂತಹ ಸುಳ್ಳು ಸುದ್ದಿಗಳಿಗೆ ಅವಕಾಶವಿಲ್ಲ.
ನಿಖರ ಹಾಗೂ ವಸ್ತುನಿಷ್ಟ ಕೃಷಿ ಸಂಬಂದಿತ ಮಾಹಿತಿಯನ್ನು ವೀಡಿಯೋ ಮೂಲಕ ತಿಳಿಸಲು Krushi Rushi ಎಂಬ ಯೂಟೂಬ್ ಚಾನೆಲ್ https://youtu.be/vVbsb6q_eqs ಹಾಗೂ ಕೃಷಿ ಸಂಬಂದಿತ ಲೇಖನಗಳ ಮೂಲಕ ತಿಳಿಸಲು www.krushirushi.in ಹಾಗೂ www.Krushirushii.in website ಪ್ರಾರಂಬಿಸಿದ್ದು, ರೈತರು ಅದರ ಪ್ರಯೋಜನ ಪಡೆಯಲು ಈ ಕೆಳಗಿನ ಲಿಂಕ್ ಮೂಲಕ Whats app ನಲ್ಲಿ ಜಿಲ್ಲಾವಾರು Krushi Rushi group ಸೇರಬೆಕೆಂದು ಈ ಮೂಲಕ ವಿನಂತಿಸುಕೊಳ್ಳುತ್ತೇನೆ.
http://krushirushi.in/Krushi-Rushi-80
ನಿರಂತರ ಹಾಗೂ ನಿಖರ ಕೃಷಿ ಮಾಹಿತಿಗಾಗಿ ಲೇಖನದ ಕೊನೆಯಲ್ಲಿರುವ ಬೆಲ್ ಬಟನ್ ಮೇಲೆ ಕ್ಲಿಕ್ ಮಾಡಿ
ಇಂತಿ ನಿಮ್ಮ
Team Krushi Rushi