Crop loss-ಈ ಜಿಲ್ಲೆಯ ರೈತರ ಖಾತೆಗೆ 140 ಕೋಟಿ ಬೆಳೆ ಪರಿಹಾರ,ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ

ಅತಿವೃಷ್ಟಿಗೆ 1.69 ಲಕ್ಷ ಹೆಕ್ಟೇರ್ ಬೆಳೆ ಹಾನಿ – 140 ಕೋಟಿ ರೈತರ ಖಾತೆಗೆ ಜಮೆ: ಈಶ್ವರ್ ಖಂಡ್ರೆ

Crop loss-ಈ ಜಿಲ್ಲೆಯ ರೈತರ ಖಾತೆಗೆ 140 ಕೋಟಿ ಬೆಳೆ ಪರಿಹಾರ,ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ

Crop loss-ಈ ಜಿಲ್ಲೆಯ ರೈತರ ಖಾತೆಗೆ 140 ಕೋಟಿ ಬೆಳೆ ಪರಿಹಾರ,ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ


ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಯಿಂದ 1.69 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದ್ದು, NDRF & SDRF ನಿಯಮ ಪ್ರಕಾರ 140 ಕೋಟಿ ರೂ. ಹಣ ರೈತರ ಖಾತೆಗೆ ಜಮೆ ಆಗಿದೆ ಎಂದು ಸಚಿವ ಈಶ್ವರ್ ಖಂಡ್ರೆ (Eshwar Khandre) ತಿಳಿಸಿದರು.

1.80 ಲಕ್ಷ ರೈತರ ಖಾತೆಗೆ 140 ಕೋಟಿ ರೂ. ಪರಿಹಾರ ಹಣ ಜಮೆ ಆಗಿದ್ದು, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ 8500 ರೂ. ಕೂಡ ಬಿಡುಗಡೆ ಆಗಿದೆ. ಜೊತೆಗೆ ವೈಮಾನಿಕ ಸಮೀಕ್ಷೆ ನಡೆಸಿ ಸಿಎಂ ಘೋಷಣೆ ಮಾಡಿದ್ದ 130 ಕೋಟಿ ರೂ. ಬಿಡುಗಡೆಯಾಗಿದೆ. ಒಟ್ಟು 280 ಕೋಟಿ ರೂ.ಗಳ ಪೈಕಿ ಈವರೆಗೆ 258 ಕೋಟಿ ರೂ. ರೈತರ ಖಾತೆಗೆ ಜಮೆಯಾಗಿದೆ ಎಂದು ಮಾಹಿತಿ ನೀಡಿದರು

ಇನ್ನೂ 20 ಕೋಟಿ ರೂ. ತಾಂತ್ರಿಕ ಸಮಸ್ಯೆಯಿಂದ ಖಾತೆಗೆ ಜಮೆ ಆಗಿಲ್ಲ. ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಆ ಹಣವು ಕೂಡ ಬರುತ್ತೆ. ಕಡಿಮೆ ಸಮಯದಲ್ಲಿ ಕೊಟ್ಟ ಮಾತಿನಂತೆ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಜಮೆ ಮಾಡಿದ್ದೇವೆ. ಬೆಳೆ ವಿಮೆಯ 40 ಕೋಟಿ ರೂ. ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದು, ನಮ್ಮ ಸರ್ಕಾರ ರೈತರ ಪರ ಹಾಗೂ ರೈತರ ಬಗ್ಗೆ ಕಾಳಜಿಯುಳ್ಳ ಸರ್ಕಾರವಾಗಿದೆ ಎಂದು ಹೇಳಿದರು.

ಆದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ಬೆಳೆ ಪರಿಹಾರ ಬಿಡುಗಡೆಯಾಗಿದೆ

ಬೆಳೆಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service89/PaymentDetailsReport.aspx

 

ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,payment Success cases select ಮಾಡಿ Get reports ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಈ ಕೆಳಗಿನಂತೆ ಪರಿಹಾರ ಯಶಸ್ಸಿನ ಪ್ರಕರಣಗಳ ಪಟ್ಟಿ ದೊರೆಯಲಿದೆ