ದುಡಿಮೆಗಾಗಿ ವಾಹನ ಖರೀದಿಸಲು ಶೇ 75ರಷ್ಟು ಸಹಾಯಧನ: ಅರ್ಜಿ ಸಲ್ಲಿಸುವ ಬಗೆ ಹೇಗೆ?

ದುಡಿಮೆಗಾಗಿ ವಾಹನ ಖರೀದಿಸಲು ಶೇ 75ರಷ್ಟು ಸಹಾಯಧನ: ಅರ್ಜಿ ಸಲ್ಲಿಸುವ ಬಗೆ ಹೇಗೆ?

ದುಡಿಮೆಗಾಗಿ ವಾಹನ ಖರೀದಿಸಲು ಶೇ 75ರಷ್ಟು ಸಹಾಯಧನ: ಅರ್ಜಿ ಸಲ್ಲಿಸುವ ಬಗೆ ಹೇಗೆ?

ಯೋಜನೆ ಅಡಿ ಶೇ 50 ರಿಂದ ಶೇ 75 ರಷ್ಟು ಸಹಾಯಧನ ದೊರೆಯಲಿದೆ. ಫಲಾನುಭವಿಗಳು ಪ್ರಯಾಣಿಕ ಆಟೋ ರಿಕ್ಷಾ, ಸರಕು ಸಾಗಣಿಕೆಯ ವಾಹನ ಅಥವಾ ಟ್ಯಾಕ್ಸಿ ಖರೀದಿಗಾಗಿ ಬ್ಯಾಂಕುಗಳಿಂದ ವಾಹನದ ಬೆಲೆಯ ಶೇ 50 ರಷ್ಟು ಅಥವಾ ಗರಿಷ್ಠ ₹3 ಲಕ್ಷದ ವರೆಗೂ ಸಹಾಯಧನ ಪಡೆಯಬಹುದು.

ರಾಜ್ಯ ಸರ್ಕಾರದ ಹಲವು ಅಭಿವೃದ್ಧಿ ಯೋಜನೆಗಳಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯೂ ಒಂದಾಗಿದೆ.

ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಯುವಜನತೆಗೆ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದರಲ್ಲಿ ವಾಣಿಜ್ಯ ಉಪಯೋಗಗಳಿಗಾಗಿ ವಾಹನ ಖರೀದಿಗೆ ಹಾಗೂ ಹೊಸ ಉದ್ಯಮಗಳ ಆರಂಭಕ್ಕೆ ಸಹಾಯಧನವನ್ನು ನೀಡಲಾಗುತ್ತದೆ.

ಈ ಯೋಜನೆಯಡಿ ಶೇ 50 ರಿಂದ ಶೇ 75 ರಷ್ಟು ಸಹಾಯಧನ ದೊರೆಯಲಿದೆ. ಫಲಾನುಭವಿಗಳು ಪ್ರಯಾಣಿಕ ಆಟೋ ರಿಕ್ಷಾ, ಸರಕು ಸಾಗಣಿಕೆಯ ವಾಹನ ಅಥವಾ ಟ್ಯಾಕ್ಸಿ ಖರೀದಿಗಾಗಿ ಬ್ಯಾಂಕುಗಳಿಂದ ವಾಹನದ ಬೆಲೆಯ ಶೇ 50 ರಷ್ಟು ಅಥವಾ ಗರಿಷ್ಠ ₹3 ಲಕ್ಷದ ವರೆಗೂ ಸಹಾಯಧನ ಪಡೆಯಬಹುದು.

ಈ ಯೋಜನೆಯನ್ನು ಪಡೆಯುವುದು ಹೇಗೆ? ಅಗತ್ಯ ಅರ್ಹತೆಗಳೇನು ಎಂಬ ಮಾಹಿತಿ ಇಲ್ಲಿದೆ....

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ? ಯೋಜನೆಗೆ ಸಂಬಂಧಿಸಿದ ಮಾರ್ಗಸೂಚಿಗಳೇನು?

ಈ ಯೋಜನೆಯನ್ನು ರಾಜ್ಯಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‍ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.

ಮಹಿಳೆಯರಿಗೆ ಆದ್ಯತೆಯನ್ನು ನೀಡಲಾಗುವುದು.

ಈ ಯೋಜನೆಯಡಿ ಖರೀದಿಸಿದ ವಾಹನವನ್ನು ಸಾಲದ ಅವಧಿ ಮುಗಿಯುವವರೆಗೂ ಇತರರಿಗೆ ಮಾರಾಟ ಮಾಡುವಂತಿಲ್ಲ.

ವಾಹನ ಖರೀದಿಯ ನಂತರ ಅದರಿಂದ ಬರುವ ಆದಾಯದ ವಾರ್ಷಿಕ ವಿವರ, ತೆರಿಗೆ ಪಾವತಿ ಹಾಗೂ ವಿಮೆ ಪಾವತಿಯ ವಿವರಗಳನ್ನು ಜಿಲ್ಲಾ ಕಚೇರಿಗೆ ಸಲ್ಲಿಸುವುದು.

ವಾಹನದ ಮೇಲೆ ಕೆಎಂಡಿಸಿ 'ಸಹಾಯಧನ ಪಡೆದಿದೆ' ಎಂದು ನಮೂದಿಸುವುದು ಕಡ್ಡಾಯ.

ಪ್ಯಾಸೆಂಜರ್‌ ಆಟೋರಿಕ್ಷಗಳಿಗೆ ಪರ್ಮಿಟ್ ಕಡ್ಡಾಯ.

ಯಾರೆಲ್ಲಾ ಈ ಯೋಜನೆಗೆ ಅರ್ಹರು?

ಈ ಯೋಜನೆಯಲ್ಲಿ ಸಾಲ ಸೌಲಭ್ಯ ಪಡೆಯುವವರು ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.

ಅರ್ಜಿದಾರರು ಲಘುವಾಹನ ಚಾಲನಾ ಪರವಾನಿಗೆಯನ್ನು ಹೊಂದಿರುವುದು ಕಡ್ಡಾಯ.

ಕುಟುಂಬದ ಆದಾಯ ₹6 ಲಕ್ಷ ಮೀರಬಾರದು.

ಕರ್ನಾಟಕದ ನಿವಾಸಿಯಾಗಿರಬೇಕು.

ಅರ್ಜಿದಾರನ ವಯೋಮಿತಿ 18 ರಿಂದ 55 ವರ್ಷಗಳೊಳಗೆ ಇರಬೇಕು.

ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿರಬಾರದು.

ಸ್ಥಳೀಯ ರಾಷ್ಟೀಕೃತ ಬ್ಯಾಂಕಿನಲ್ಲಿ ಆಧಾರ್ ಸಂಯೋಜನೆಯಾಗಿರುವ ಬ್ಯಾಂಕ್ ಖಾತೆಯನ್ನು ಅರ್ಜಿದಾರರು ಹೊಂದಿರಬೇಕು.

ತೃತೀಯ ಲಿಂಗಿ ಹಾಗೂ ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.

ವಾಹನಗಳನ್ನು ಬಾಡಿಗೆ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬಸ್ಥರು ಸರ್ಕಾರಿ ಉದ್ಯೋಗದಲ್ಲಿ ಇರಬಾರದು

ಅರ್ಜಿಸಲ್ಲಿಸಲು ಅಗತ್ಯ ದಾಖಲೆಗಳೇನು? ಯಾರಿಗೆಲ್ಲ ಸಿಗಲಿದೆ ಭಾಗ್ಯಲಕ್ಷ್ಮಿಯ ಫಲ? ಏನೆಲ್ಲಾ ಲಾಭ, ಅರ್ಹತೆಗಳೇನು?

ಆನ್‌ಲೈನ್‌ ಮೂಲಕ ಆರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು ಯಾವುವು ಎಂಬ ಪಟ್ಟಿ ಇಲ್ಲಿದೆ.

ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.

ಜಾತಿ, ಆದಾಯ ಪ್ರಮಾಣ ಪತ್ರ.

ಆಧಾರ್ ಕಾರ್ಡ್ ಪ್ರತಿ.

ವಾಹನ ಚಾಲನ ಪರವಾನಗಿ ಪ್ರಮಾಣ ಪತ್ರ.

ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ದೃಢೀಕರಣ ಪತ್ರ.

ಈ ಯೋಜನೆಯಡಿ ಪಡೆದ ವಾಹನವನ್ನು ಅವಧಿಗೆ ಮುನ್ನ ಯಾರಿಗೂ ಮಾರಾಟ ಮಾಡುವುದಿಲ್ಲ ಎಂಬ ದೃಢೀಕರಣ ಪತ್ರ.

ಸಾಲದ ಮರುಪಾವತಿ ಹೇಗೆ?

ಈ ಯೋಜನೆಯಲ್ಲಿ ಬ್ಯಾಂಕುಗಳಿಂದ ಪಡೆದ ಸಾಲವನ್ನು ಬ್ಯಾಂಕುಗಳು ನಿಗದಿ ಪಡಿಸುವ ಕಂತುಗಳಲ್ಲಿ ಪಾವತಿ ಮಾಡಬೇಕಾಗುತ್ತದೆ. ಅನುದಾನ ಹೊರೆತು ಪಡಿಸಿ ಉಳಿದ ಅಸ‍ಲು ಮತ್ತು ಬಡ್ಡಿಯ ಹಣವನ್ನು ಮಾಸಿಕವಾಗಿ ಮರುಪಾವತಿ ಮಾಡಬೇಕು.

ಯೋಜನೆ ಕುರಿತ ಹೆಚ್ಚಿನ ಮಾಹಿತಿ ಪಡೆಯಲು ಸರ್ಕಾರದ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.