ಕೃಷಿ ಇಲಾಖೆಯಿಂದ "ಪವರ್ ಸ್ಪ್ರೇಯರ್" ಖರೀದಿಗೆ ಸಿಗಲಿದೆ 90 ಸಹಾಯಧನ.!
ಕೃಷಿ ಇಲಾಖೆಯಿಂದ "ಪವರ್ ಸ್ಪ್ರೇಯರ್" ಖರೀದಿಗೆ ಸಿಗಲಿದೆ 90 ಸಹಾಯಧನ.!
ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸಿಂಪರಣೆಯನ್ನು ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ನಡೆಸಲು ಸಹಕಾರಿಯಾಗುವ ಹೈ ಪ್ರೆಶರ್ ಪವರ್ ಸ್ಪ್ರೇಯರ್ ಅನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಹಾಯಧನದಲ್ಲಿ ಪಡೆಯಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಹೈ ಪ್ರೆಶರ್ ಪವರ್ ಸ್ಪ್ರೇಯರ್ ಬಳಸಿ ರಾಸಾಯನಿಕ ಸಿಂಪರಣೆಯ ಜೊತೆಗೆ ಕೊಟ್ಟಿಗೆ ಸ್ವಚ್ಛತೆ, ವಾಹನ ಮತ್ತು ಟ್ರಾಕ್ಟರ್ ತೊಳೆಯುವುದು ಸೇರಿದಂತೆ ವಿವಿಧ ಕೃಷಿ ಪೂರಕ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ರೋಗ ಹಾಗೂ ಕೀಟ ನಿಯಂತ್ರಣಕ್ಕೆ ಇದು ಅತ್ಯಂತ ಉಪಯುಕ್ತ ಯಂತ್ರವಾಗಿದ್ದು, ವಿಶೇಷವಾಗಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಇದು ಹೆಚ್ಚಿನ ಸಹಕಾರ ನೀಡಲಿದೆ.
ಸಹಾಯಧನದ ವಿವರ:
ಕೃಷಿ ಯಾಂತ್ರೀಕರಣ ಯೋಜನೆಯಡಿ ಹೈ ಪ್ರೆಶರ್ ಪವರ್ ಸ್ಪ್ರೇಯರ್ ವಿತರಣೆ ಮಾಡಲಾಗುತ್ತಿದ್ದು, ಸಾಮಾನ್ಯ ವರ್ಗದ (GEN) ರೈತರಿಗೆ ನಿಗದಿಪಡಿಸಿರುವ ದರ ಹಾಗೂ ಸಹಾಯಧನದ ವಿವರ ಈ ಕೆಳಗಿನಂತಿದೆ:
ಒಟ್ಟು ದರ: ರೂ.24,844
ಸಹಾಯಧನ: ರೂ.11,500
ರೈತರ ವಂತಿಕೆ: ರೂ.13,344
ಒಟ್ಟು ದರ: ರೂ.23,000
ಸಹಾಯಧನ: ರೂ.20,700
ರೈತರ ವಂತಿಕೆ: ರೂ.4,144
ಕಂಪನಿ ಹಾಗೂ ಮಾದರಿಯ ಆಧಾರದಲ್ಲಿ ಯಂತ್ರದ ದರ ಮತ್ತು ಸಹಾಯಧನದಲ್ಲಿ ವ್ಯತ್ಯಾಸ ಇರಬಹುದು. ಆಯಾ ಜಿಲ್ಲೆಯ ಕೃಷಿ ಇಲಾಖೆಯ ಅನುದಾನ ಲಭ್ಯತೆಯ ಆಧಾರದ ಮೇಲೆ ಸಹಾಯಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ:
ಸಹಾಯಧನದಲ್ಲಿ ಹೈ ಪ್ರೆಶರ್ ಪವರ್ ಸ್ಪ್ರೇಯರ್ ಪಡೆಯಲು ಆಸಕ್ತ ರೈತರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ತಮ್ಮ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಇಲಾಖೆಯಿಂದ ಸೂಚಿಸಲಾದ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸುವ ಅವಕಾಶವಿದೆ.
ಅರ್ಜಿಗೆ ಅಗತ್ಯ ದಾಖಲೆಗಳು:
ರೈತರ ಆಧಾರ್ ಕಾರ್ಡ್
ಬ್ಯಾಂಕ್ ಪಾಸ್‌ಬುಕ್
ಜಮೀನಿನ ಪಹಣಿ
ರೈತರ ಪೋಟೋ
ಬಾಂಡ್ ಪೇಪರ್
ರೇಷನ್ ಕಾರ್ಡ್
ಮೊಬೈಲ್ ಸಂಖ್ಯೆ
ಸಹಾಯಧನದ ಸೌಲಭ್ಯವನ್ನು ಬಳಸಿಕೊಂಡು ರೈತರು ಆಧುನಿಕ ಕೃಷಿ ಉಪಕರಣಗಳನ್ನು ಪಡೆದು ಉತ್ಪಾದಕತೆ ಹೆಚ್ಚಿಸಿಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.

