ಕೃಷಿ ಇಲಾಖೆಯಲ್ಲಿ 945 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ,ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್-AO AAO online application link

<Krushirushi> <ಕೃಷಿ ಅಧಿಕಾರಿ> <ಸಹಾಯಕ ಕೃಷಿ ಅಧಿಕಾರಿ> <Agriculture officer> <Assistant agriculture officer> Agriculture department> <AO> <AAO> <AO AAO recruitment 2024> <ಕೃಷಿ ಇಲಾಖೆ> <ಕೃಷಿ ಇಲಾಖೆ ಹುದ್ದೆಗಳು> <ಕೃಷಿ> <jobs in agriculture department>

ಕೃಷಿ ಇಲಾಖೆಯಲ್ಲಿ 945 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ,ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್-AO AAO online application link

ಕೃಷಿ ಇಲಾಖೆಯಲ್ಲಿ 945 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ,ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್-AO AAO online application link

ಕೆಪಿಎಸ್‌ಸಿ'ಯು ದಿನಾಂಕ 20-09-2024 ರಂದು ಹೊರಡಿಸಲಾದ ಕೃಷಿ ಇಲಾಖೆಯ ಒಟ್ಟು 945 ಹುದ್ದೆಗಳ ನೇಮಕಾತಿಗೆ ಸಂಬಂಧ, ಇದೀಗ ಆನ್‌ಲೈನ್‌ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ. ಇಲಾಖೆಯ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಈ ಹಿಂದೆ ಅಕ್ಟೋಬರ್ 07 ರಿಂದ ನವೆಂಬರ್ 07 ರವರೆಗೆ ಅರ್ಜಿಗೆ ದಿನಾಂಕ ನಿಗದಿಪಡಿಸಿತ್ತು. ಆದರೆ ಸರ್ಕಾರವು ಸೆಪ್ಟೆಂಬರ್ 18 ರಂದು ಜಾರಿ ಮಾಡಿದ್ದ ಕ್ರೀಡಾ ಸಾಧಕ ಅಭ್ಯರ್ಥಿಗಳ ಮೀಸಲಾತಿಯನ್ನು ಸದರಿ ಹುದ್ದೆಗಳಿಗೂ ಅಳವಡಿಸಿಕೊಳ್ಳಬೇಕಾದ್ದರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಮುಂದೂಡಿತ್ತು.
ಪ್ರಸ್ತುತ ಕ್ರೀಡಾ ಸಾಧಕರಿಗೆ ಶೇಕಡ.2 ರಷ್ಟು ಹುದ್ದೆಗಳನ್ನು ಮೀಸಲಿರಿಸಿ, ಹುದ್ದೆಗಳನ್ನು ವರ್ಗೀಕರಿಸಿ ಸಿದ್ಧತೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅರ್ಜಿ ಪ್ರಕ್ರಿಯೆಯನ್ನು ಮುಂದುವರೆಸಿದೆ. ಅರ್ಜಿ ಸಲ್ಲಿಸಲು ಕೆಳಗಿನ ದಿನಾಂಕಗಳನ್ನು ನಿಗದಿಪಡಿಸಿದೆ. ಉಳಿದಂತೆ ಎಲ್ಲ ನಿಯಮ, ಅರ್ಹತೆಗಳನ್ನು 2024 ರ ಸೆಪ್ಟೆಂಬರ್ 20 ರ ಅಧಿಸೂಚನೆಯಂತೆ ಕಾಯ್ದಿರಿಸಿದೆ. ಈ ಹುದ್ದೆಗಳಲ್ಲಿ ಅರ್ಹತೆ ಇರುವವರು, ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಕೃಷಿ ಇಲಾಖೆಯಲ್ಲಿ 128 ಕೃಷಿ ಅಧಿಕಾರಿ ಹುದ್ದೆಗೆ ಹಾಗೂ 817 ಸಹಾಯಕ ಕೃಷಿ ಅಧಿಕಾರಿ ಸೇರಿ ಒಟ್ಟು 945 ಹುದ್ದೆ ಭರ್ತಿಗೆ ಕೆಪಿಎಸ್‌ಸಿ ನೇಮಕ ಪ್ರಕ್ರಿಯೆ ಕೈಗೊಂಡಿದೆ. ಹುದ್ದೆಗಳ ವರ್ಗೀಕರಣವನ್ನು ಕೆಳಗಿನಂತೆ ಗಮನಿಸಬಹುದು.
ಹುದ್ದೆಗಳ ವರ್ಗೀಕರಣ ಮಾಹಿತಿ 

ಕೃಷಿ ಅಧಿಕಾರಿಗಳು 86 RPC + 42HK :128 ಒಟ್ಟು
ಸಹಾಯಕ ಕೃಷಿ ಅಧಿಕಾರಿಗಳು 586 RPC + 231 HK : 817 ಒಟ್ಟು
ಕೃಷಿ ಇಲಾಖೆಯಲ್ಲಿ ಭರ್ತಿ ಮಾಡುವ ಒಟ್ಟು ಹುದ್ದೆಗಳ ಸಂಖ್ಯೆ 945

ಅರ್ಜಿ ಪ್ರಕ್ರಿಯೆಗೆ ನಿಗದಿತ ದಿನಾಂಕಗಳು

ಅಧಿಸೂಚನೆ ಬಿಡುಗಡೆ ಆದ ದಿನಾಂಕ 20-09-2024
ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ 03-01-2025
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 01-02-2025

ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆ ವಿಧಾನ

  • - ಕೆಪಿಎಸ್‌ಸಿ ವೆಬ್‌ಸೈಟ್‌ http://www.kpsc.kar.nic.in ಗೆ ಭೇಟಿ ನೀಡಿ.
  • - ಆಯೋಗದ ಮುಖಪುಟದಲ್ಲಿ 'Apply Online for Various Notifications' ಎಂದಿರುವಲ್ಲಿ ಕ್ಲಿಕ್ ಮಾಡಿ.
  • - ಕೆಪಿಎಸ್‌ಸಿ'ಯ ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ.
  • - 'Agriculture Officer and Asst.Agriculture Officer in the Dept.of Agriculture(RPC and HK)' ಎಂದಿರುವ ಲಿಂಕ್ ಕ್ಲಿಕ್ ಮಾಡಿ.
  • - ಅಪ್ಲಿಕೇಶನ್‌ ಪೋರ್ಟಲ್ ತೆರೆಯುತ್ತದೆ. ಸ್ಕ್ರಾಲ್‌ ಡೌನ್‌ ಮಾಡಿ.
  • - 'New Registration' ಎಂದಿರುವ ಬಟನ್‌ ಮೇಲೆ ಕ್ಲಿಕ್ ಮಾಡಿ.
  • - ಈ ಹಂತದಲ್ಲಿ ತೆರೆಯುವ ವೆಬ್‌ಪೇಜ್‌ನಲ್ಲಿ ಕೇಳಲಾದ ಮಾಹಿತಿ ನೀಡಿ ರಿಜಿಸ್ಟ್ರೇಷನ್‌ ಪಡೆಯಿರಿ. ನಂತರ ಮತ್ತೆ ಲಾಗಿನ್‌ ಆಗಿ ಅರ್ಜಿ ಹಾಕಿ.
  • - ಈಗಾಗಲೇ ಕೆಪಿಎಸ್‌ಸಿ ವೆಬ್‌ನಲ್ಲಿ ರಿಜಿಸ್ಟ್ರೇಷನ್‌ ಮಾಡಿದ್ದಲ್ಲಿ, ಯೂಸರ್ ನೇಮ್, ಪಾಸ್‌ವರ್ಡ್‌ ನೀಡಿ ಲಾಗಿನ್ ಆಗಲು 'Login' ಎಂದಿರುವಲ್ಲಿ ಕ್ಲಿಕ್ ಮಾಡಿ.
  • - ಈ ಹಂತದಲ್ಲಿ ಅಗತ್ಯ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಿ. ಈ ಹಂತದಲ್ಲಿ ಓಟಿಆರ್‌ನಲ್ಲಿ ನೀಡಿದ ಯಾವುದೇ ದಾಖಲೆ, ಮಾಹಿತಿ ನೀಡುವ ಅಗತ್ಯ ಇರುವುದಿಲ್ಲ. ಕೆಲವು ಇತರೆ ಡೀಟೇಲ್ಸ್‌ ನೀಡಬೇಕಾಗುತ್ತದೆ.
  • - ಶುಲ್ಕ ಪಾವತಿ ನಂತರ, ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ವಿದ್ಯಾರ್ಹತೆ ವಿವರ
  • ಶೇಕಡ.85 ರಷ್ಟು ಹುದ್ದೆಗಳಿಗೆ - ಬಿಎಸ್ಸಿ (ಕೃಷಿ) ಅಥವಾ ಬಿಎಸ್ಸಿ (ಆನರ್ಸ್‌) ಕೃಷಿ
  • ಶೇಕಡ.15 ರಷ್ಟು ಹುದ್ದೆಗಳಿಗೆ ಕೆಳಗಿನ ವಿದ್ಯಾರ್ಹತೆ ಪರಿಗಣಿಸಲಾಗುವುದು.
  • ಬಿ.ಟೆಕ್ - ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ
  • ಬಿ.ಟೆಕ್ - ಆಹಾರ ತಂತ್ರಜ್ಞಾನ ಅಥವಾ
  • ಬಿ.ಎಸ್ಸಿ - ಕೃಷಿ ಜೈವಿಕ ತಂತ್ರಜ್ಞಾನ ಅಥವಾ
  • ಬಿ.ಟೆಕ್ - ಜೈವಿಕ ತಂತ್ರಜ್ಞಾನ ಅಥವಾ
  • ಬಿಎಸ್ಸಿ - ಅಗ್ರಿಕಲ್ಚರ್ ಇಂಜಿನಿಯರಿಂಗ್ ಅಥವಾ
  • ಬಿಎಸ್ಸಿ - ಕೃಷಿ ಮಾರುಕಟ್ಟೆ ಮತ್ತು ಸಹಕಾರ ಅಥವಾ
  • ಬಿಎಸ್ಸಿ ಆನರ್ಸ್- ಕೃಷಿ ಮಾರಾಟ ಮತ್ತು ಸಹಕಾರ ಅಥವಾ
  • ಬಿಎಸ್ಸಿ ಆನರ್ಸ್‌ - ಅಗ್ರಿ ಬಿಸಿನೆಸ್ ಮ್ಯಾನೇಜ್ಮೆಂಟ್ ಅಥವಾ
  • ಬಿ.ಟೆಕ್ ಅಗ್ರಿಕಲ್ಚರ್ ಇಂಜಿನಿಯರಿಂಗ್


ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ವೇತನ ಶ್ರೇಣಿ ವಿವರ

  • ಕೃಷಿ ಅಧಿಕಾರಿ ಹುದ್ದೆಗಳಿಗೆ ವೇತನ ಶ್ರೇಣಿ : Rs.43,100-83,900.
  • ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ವೇತನ ಶ್ರೇಣಿ : Rs.40,900- 78,200.


ಕೃಷಿ ಇಲಾಖೆ ಹುದ್ದೆಗಳಿಗೆ ವರ್ಗಾವಾರು ನಿಗದಿತ ಕನಿಷ್ಠ, ಗರಿಷ್ಠ ವಯಸ್ಸಿನ ಅರ್ಹತೆಗಳು

  • ಕನಿಷ್ಠ-18 ವರ್ಷಗಳು.
  • ಸಾಮಾನ್ಯ ಅರ್ಹತೆಯವರಿಗೆ ಗರಿಷ್ಠ 38 ವರ್ಷಗಳು.
  • ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅರ್ಹತೆಯವರಿಗೆ ಗರಿಷ್ಠ 41 ವರ್ಷಗಳು.
  • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1- ಅರ್ಹತೆಯವರಿಗೆ ಗರಿಷ್ಠ 43 ವರ್ಷಗಳು.


ಕೃಷಿ ಇಲಾಖೆ ಹುದ್ದೆಗಳಿಗೆ ಅರ್ಜಿ ಶುಲ್ಕ ವಿವರ

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600.
  • ಇತರೆ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.300.
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.


ನೋಟಿಫಿಕೇಶನ್‌ ಹಾಗೂ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ https://www.kpsc.kar.nic.in/notification.html  ವೆಬ್‌ಸೈಟ್‌ಗೆ ಭೇಟಿ ನೀಡಿರಿ.

ಇದನ್ನೂ ಓದಿ

ರಾಜ್ಯದ 6 ಲಕ್ಷ ರೈತರಿಗಿಲ್ಲ ಪಿಎಂ ಕಿಸಾನ್ ಹಣ,ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ-pmkisan 19th instalment ineligible list

https://krushirushi.in/Pmkisan-19th-instalment-ineligible-list-1732