Aadhaar ration card link-ಆಧಾರ್ ರೇಷನ್ ಕಾರ್ಡ್ ಲಿಂಕ್ ಮಾಡದಿದ್ದರೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್,ಹೀಗೆ ಮಾಡಿ ಆಧಾರ್ ರೇಷನ್ ಕಾರ್ಡ್ ಲಿಂಕ್
<Krushirushi> <ಅನ್ನಭಾಗ್ಯ> <ಅನ್ನ ಭಾಗ್ಯ> <Annabhagya> <Anna bhagya> <ಆಧಾರ್ ರೇಷನ್ ಕಾರ್ಡ್ ಲಿಂಕ್> <Aadhaarrationlink> <Rationcard> <BPLcard> <APLcard> <BPL Card> <APL Card> <ರೇಷನ್ ಕಾರ್ಡ್> <How to download ration card> <ಪಡೀತರಚೀಟಿ> <ರೈತ> <ಹಣ> <ಸಂದಾಯ> <Aadhaar ration card link> <ಆಧಾರ್> <ರೇಷನ್ ಕಾರ್ಡ್ ಲಿಸ್ಟ್>
Aadhaar ration card link-ಆಧಾರ್ ರೇಷನ್ ಕಾರ್ಡ್ ಲಿಂಕ್ ಮಾಡದಿದ್ದರೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್,ಹೀಗೆ ಮಾಡಿ ಆಧಾರ್ ರೇಷನ್ ಕಾರ್ಡ್ ಲಿಂಕ್
ಕೇಂದ್ರ ಸರ್ಕಾರವು ಮತ್ತೆ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ವಿಸ್ತರಣೆ ಮಾಡಿದೆ. ಪ್ರಸ್ತುತ ಎಲ್ಲ ಪ್ರಮುಖ ದಾಖಲೆಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಸರ್ಕಾರವು ಕಡ್ಡಾಯಗೊಳಿಸುತ್ತಿದೆ. ಆಧಾರ್ ಲಿಂಕ್ ಮಾಡದಿದ್ದರೆ ದಾಖಲೆಗಳು ನಿಷ್ಕ್ರೀಯವಾಗಲಿದೆ ಎಂದು ವರದಿಯು ಆಗಿದೆ. ಇನ್ನು ನಮ್ಮ ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡಾ ಒಂದಾಗಿದೆ.
ಸರ್ಕಾರದಿಂದ ಸಬ್ಸಿಡಿ ಆಧಾರಿತವಾಗಿ ಅಕ್ಕಿ, ಧಾನ್ಯ, ಸೀಮೆ ಎಣ್ಣೆಯನ್ನು ರೇಷನ್ ಕಾರ್ಡ್ ಮೂಲಕ ಪಡೆಯಲು ಸಾಧ್ಯವಾಗುತ್ತದೆ. ಸುಮಾರು ಐದು ದಶಕಗಳ ಹಿಂದೆಯೇ ಈ ರೇಷನ್ ಕಾರ್ಡ್ ಅನ್ನು ಅಂದಿನ ಸರ್ಕಾರವು ಪರಿಚಯಿಸಿದೆ. ಈಗ ರೇಷನ್ ಕಾರ್ಡ್‌ಗೆ ನೀವು ಆಧಾರ್ ಲಿಂಕ್ ಮಾಡಬೇಕಾಗಿದೆ. ಹಲವು ದಶಕಗಳ ಹಿಂದೆ ಪರಿಚಯಿಸಲ್ಪಟ್ಟ ರೇಷನ್ ಕಾರ್ಡ್ ಇಂದಿಗೂ ಕೂಡಾ ಅತೀ ಪ್ರಮುಖವಾದ ದಾಖಲೆಯಾಗಿದೆ.
ರೇಷನ್ ಕಾರ್ಡ್ ಮೂಲಕ ನಾವು ಅಗತ್ಯ ಆಹಾರ ಧಾನ್ಯಗಳನ್ನು ಕಡಿಮೆ ದರದಲ್ಲಿ ಪಡೆಯಲು ಸಾಧ್ಯವಾಗುವುದು ಮಾತ್ರವಲ್ಲದೆ, ಇದು ನಾವು ಭಾರತ ದೇಶದ ಪ್ರಜೆ ಎಂಬುವುದಕ್ಕೆ ಸಾಕ್ಷಿ ಕೂಡಾ ಹೌದು. ಈಗ ಕೇಂದ್ರ ಸರ್ಕಾರವು ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಗಡುವನ್ನು ವಿಸ್ತರಣೆ ಮಾಡಿದೆ. ಈ ಹಿಂದೆ ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಜೂನ್ 14, 2024ರವರೆಗೆ ಸಮಯವಿತ್ತು, ಅದನ್ನು ಈಗ ಕೇಂದ್ರ ಸರ್ಕಾರವು ಸೆಪ್ಟೆಂಬರ್ 14, 2024ರವರೆಗೆ ವಿಸ್ತರಣೆ ಮಾಡಿದೆ.
Aadhaar Ration Card link:ಆಧಾರ್ ಜೊತೆ ರೇಷನ್ ಕಾರ್ಡ್ ಲಿಂಕ್ ಮಾಡುವ ಡೈರೆಕ್ಟ್ ಲಿಂಕ್
https://ahara.kar.nic.in/Home/EServices
ಮೊದಲು ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ, ಇ-ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ "ಯುಐಡಿ ಲಿಂಕ್ ಮಾಡಿ" ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ UID linking for RC members ಮೇಲೆ ಕ್ಲಿಕ್ ಮಾಡಿ
ನಂತರ ಆಧಾರ್ ನಂಬರ್ Select ಮಾಡಿ,ಆಧಾರ್ ನಂಬರ್ ಹಾಕಿ,Go ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ Go ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ,Go ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ನಂಬರ್ ರೇಷನ್ ಕಾರ್ಡ್ ಗೆ ಲಿಂಕ್ ಆಗುತ್ತದೆ.
ಆಫ್ ಲೈನ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಹಂತ 1: ಹತ್ತಿರದ PDS ಕೇಂದ್ರ ಅಥವಾ ಪಡಿತರ ಅಂಗಡಿ/ಸ್ಥಳೀಯ ಪಡಿತರ ಕಚೇರಿಗೆ ಭೇಟಿ ನೀಡಿ
ಹಂತ 2: ನಿಮ್ಮ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್‌ನ ನಕಲುಗಳ ಜೊತೆಗೆ ನಿಮ್ಮ ಪಡಿತರ ಚೀಟಿಯ ನಕಲು ಪ್ರತಿಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, ಕುಟುಂಬದ ಮುಖ್ಯಸ್ಥರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ತೆಗೆದುಕೊಳ್ಳಿ.
ಹಂತ 3: ನಿಮ್ಮ ಬ್ಯಾಂಕ್ ಖಾತೆಯು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಬ್ಯಾಂಕ್ ಪಾಸ್‌ಬುಕ್‌ನ ನಕಲನ್ನು ಸಹ ನೀವು ಸಲ್ಲಿಸಬೇಕಾಗುತ್ತದೆ.
ಹಂತ 4: ಈ ಎಲ್ಲಾ ದಾಖಲೆಗಳನ್ನು ನಿಮ್ಮ ಆಧಾರ್‌ನ ಪ್ರತಿಯೊಂದಿಗೆ PDS ಅಂಗಡಿಯಲ್ಲಿ ಸಲ್ಲಿಸಿ.
ಹಂತ 5: ಪಡಿತರ ಅಂಗಡಿಯಲ್ಲಿ ಲಭ್ಯವಿರುವ ಪ್ರತಿನಿಧಿಯು ಮೊದಲ ಬಾರಿಗೆ ಆಧಾರ್ ದೃಢೀಕರಣಕ್ಕಾಗಿ ಫಿಂಗರ್‌ಪ್ರಿಂಟ್ ದೃಢೀಕರಣಕ್ಕಾಗಿ ನಿಮ್ಮನ್ನು ಕೇಳಬಹುದು.
ದಾಖಲೆಗಳನ್ನು ಸಲ್ಲಿಸಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಅಧಿಸೂಚನೆಯನ್ನು ಕಳುಹಿಸಲಾಗುತ್ತದೆ. ಎರಡು ಡಾಕ್ಯುಮೆಂಟ್‌ಗಳನ್ನು ಯಶಸ್ವಿಯಾಗಿ ಲಿಂಕ್ ಮಾಡಿದಾಗ ನೀವು ಇನ್ನೊಂದು SMS ಅಧಿಸೂಚನೆಯನ್ನು ಸ್ವೀಕರಿಸುತ್ತೀರಿ.
ಆಗ ನೀವು ಸಂಪೂರ್ಣವಾಗಿ ಆಫ್ ಲೈನ್ ಮೂಲಕ ration card ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವದು ಪೂರ್ಣವಾಗುತ್ತದೆ.
ರೇಷನ್ ಕಾರ್ಡ್ ಆಧಾರ್ ಲಿಂಕ್ ಮಾಡಲು ಅಪ್ಲೋಡ್ ಮಾಡಬೇಕಾದ ದಾಖಲೆಗಳನ್ನು ಕೆಳಗೆ ನೀಡಲಾಗಿದೆ:
ಮೂಲ ಪಡಿತರ ಚೀಟಿಯ ನಕಲು ಪ್ರತಿ
ನಿಮ್ಮ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್‌ನ ಫೋಟೋಕಾಪಿಗಳು
ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್‌ನ ಫೋಟೋಕಾಪಿ
ಬ್ಯಾಂಕ್ ಪಾಸ್ ಬುಕ್ ನ ಪ್ರತಿ
ಕುಟುಂಬದ ಮುಖ್ಯಸ್ಥನ ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋಗಳು.