Agriculture department recruitment 2024-ಕೃಷಿ ಇಲಾಖೆಯ 945 AO, AAO ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

<Krushirushi> <ಕೃಷಿ ಅಧಿಕಾರಿ> <ಸಹಾಯಕ ಕೃಷಿ ಅಧಿಕಾರಿ> <Agriculture officer> <Assistant agriculture officer> Agriculture department> <AO> <AAO> <AO AAO recruitment 2024> <ಕೃಷಿ ಇಲಾಖೆ> <ಕೃಷಿ ಇಲಾಖೆ ಹುದ್ದೆಗಳು> <ಕೃಷಿ> <jobs in agriculture department>

Agriculture department recruitment 2024-ಕೃಷಿ ಇಲಾಖೆಯ 945 AO, AAO ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Agriculture department recruitment 2024-ಕೃಷಿ ಇಲಾಖೆಯ 945 AO, AAO ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ


ಕರ್ನಾಟಕ ಲೋಕಸೇವಾ ಆಯೋಗವು(KPSC) ಇದೀಗ ಮತ್ತೊಂದು ಹೊಸ ಅಧಿಸೂಚನೆ ಪ್ರಕಟಿಸಿದೆ. ಅದು ಸಹ ಕೃಷಿ ಇಲಾಖೆಯ(Agriculture department) ಹುದ್ದೆಗಳಿಗೆ. ಗ್ರೂಪ್‌ ಬಿ ವೃಂದದ ಹುದ್ದೆಗಳು ಇವಾಗಿದ್ದು, ಅರ್ಜಿ ಸಲ್ಲಿಸಲು ಸಹ ವಯಸ್ಸಿನ ಅರ್ಹತೆ ವಿಷಯದಲ್ಲಿ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಖುಷಿ ಪಡುವ ವಿಚಾರವಿದೆ. ಈ ಹುದ್ದೆಗಳ ಕುರಿತು ಕಂಪ್ಲೀಟ್‌ ಡೀಟೇಲ್ಸ್‌ ಅನ್ನು ಈ ಕೆಳಗಿನಂತೆ ನೀಡಲಾಗಿದೆ ನೋಡಿ. ಅರ್ಜಿ ಸಲ್ಲಿಸಲು ನವೆಂಬರ್ 07 ಕೊನೆ ದಿನವಾಗಿದೆ.

ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳೆದ ಏಪ್ರಿಲ್, ಮೇ ಹಾಗೂ ಜೂನ್‌ ತಿಂಗಳ ನಡುವೆ ಹಲವು ಇಲಾಖೆಗಳು ಹಲವು ವೃಂದದ ಹುದ್ದೆಗಳ ಭರ್ತಿಗೆ ನೇಮಕ ಪ್ರಸ್ತಾವನೆ ನೀಡಿದ್ದವು. ಅವುಗಳ ಪೈಕಿ ಕೃಷಿ ಇಲಾಖೆಯ ಕೃಷಿ ಅಧಿಕಾರಿಗಳು(Agriculture officer), ಸಹಾಯಕ ಕೃಷಿ ಅಧಿಕಾರಿ(Assistant Agriculture officer) ಹುದ್ದೆಗಳ ಭರ್ತಿಗೆ ಸಹ ಪ್ರಸ್ತಾವನೆ ಬಿಡುಗಡೆ ಮಾಡಲಾಗಿದೆ ಎಂಬುದನ್ನು ತಿಳಿಸಿದ್ದೆವು. ಇದೀಗ ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧ ಅಧಿಕೃತವಾಗಿ ಕೆಪಿಎಸ್‌ಸಿ ನೇಮಕ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 128 ಕೃಷಿ ಅಧಿಕಾರಿ ಹುದ್ದೆಗೆ ಹಾಗೂ 817 ಸಹಾಯಕ ಕೃಷಿ ಅಧಿಕಾರಿ ಸೇರಿ ಒಟ್ಟು 945 ಹುದ್ದೆ ಭರ್ತಿಗೆ ಅಧಿಸೂಚನೆ ಹೊರಬಿದ್ದಿದ್ದು, ಈ ಹುದ್ದೆಗಳಿಗೆ ಈಗ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಇಲಾಖೆ ಹುದ್ದೆಗಳ ವರ್ಗೀಕರಣ ಮಾಹಿತಿ

ಕೃಷಿ ಅಧಿಕಾರಿಗಳು 86 RPC + 42HK :128 ಒಟ್ಟು
ಸಹಾಯಕ ಕೃಷಿ ಅಧಿಕಾರಿಗಳು 586 RPC + 231 HK : 817 ಒಟ್ಟು
ಕೃಷಿ ಇಲಾಖೆಯಲ್ಲಿ ಭರ್ತಿ ಮಾಡುವ ಒಟ್ಟು ಹುದ್ದೆಗಳ ಸಂಖ್ಯೆ 945

 

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

ಅಧಿಸೂಚನೆ ಬಿಡುಗಡೆ ಆದ ದಿನಾಂಕ 20-09-2024
ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ 07-10-2024
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 07-11-2024

 

ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ ಎರಡು ಹುದ್ದೆಗಳಿಗೆ ಈ ಕೆಳಗಿನ ವಿದ್ಯಾರ್ಹತೆ ಪರಿಗಣಿಸಲಾಗುತ್ತದೆ.

ಶೇಕಡ.85 ರಷ್ಟು ಹುದ್ದೆಗಳಿಗೆ - ಬಿಎಸ್ಸಿ (ಕೃಷಿ) ಅಥವಾ ಬಿಎಸ್ಸಿ (ಆನರ್ಸ್‌) ಕೃಷಿ
ಶೇಕಡ.15 ರಷ್ಟು ಹುದ್ದೆಗಳಿಗೆ ಕೆಳಗಿನ ವಿದ್ಯಾರ್ಹತೆ ಪರಿಗಣಿಸಲಾಗುವುದು.

  • ಬಿ.ಟೆಕ್ - ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ
  • ಬಿ.ಟೆಕ್ - ಆಹಾರ ತಂತ್ರಜ್ಞಾನ ಅಥವಾ
  • ಬಿಎಸ್ಸಿ - ಕೃಷಿ ಮಾರುಕಟ್ಟೆ ಮತ್ತು ಸಹಕಾರ ಅಥವಾ
  • ಬಿಎಸ್ಸಿ ಆನರ್ಸ್- ಕೃಷಿ ಮಾರಾಟ ಮತ್ತು ಸಹಕಾರ ಅಥವಾ
  • ಬಿಎಸ್ಸಿ ಆನರ್ಸ್‌ - ಅಗ್ರಿ ಬಿಸಿನೆಸ್ ಮ್ಯಾನೇಜ್ಮೆಂಟ್ ಅಥವಾ
  • ಬಿ.ಎಸ್ಸಿ - ಕೃಷಿ ಜೈವಿಕ ತಂತ್ರಜ್ಞಾನ ಅಥವಾ
  • ಬಿ.ಟೆಕ್ - ಜೈವಿಕ ತಂತ್ರಜ್ಞಾನ ಅಥವಾ
  • ಬಿಎಸ್ಸಿ - ಅಗ್ರಿಕಲ್ಚರ್ ಇಂಜಿನಿಯರಿಂಗ್ ಅಥವಾ
  • ಬಿ.ಟೆಕ್ ಅಗ್ರಿಕಲ್ಚರ್ ಇಂಜಿನಿಯರಿಂಗ್

ಕೃಷಿ ಅಧಿಕಾರಿ ಹುದ್ದೆಗಳಿಗೆ ವೇತನ ಶ್ರೇಣಿ : Rs.43,100-83,900
ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ವೇತನ ಶ್ರೇಣಿ :Rs.40,900- 78,200


ಕೃಷಿ ಇಲಾಖೆ ಹುದ್ದೆಗಳಿಗೆ ವರ್ಗಾವಾರು ನಿಗದಿತ ಕನಿಷ್ಠ, ಗರಿಷ್ಠ ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ-18 ವರ್ಷಗಳು.
ಅರ್ಜಿ ಸಲ್ಲಿಸಲು ಸಾಮಾನ್ಯ ಅರ್ಹತೆಯವರಿಗೆ ಗರಿಷ್ಠ 38 ವರ್ಷಗಳು.
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅರ್ಹತೆಯವರಿಗೆ ಗರಿಷ್ಠ 41 ವರ್ಷಗಳು.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1- ಅರ್ಹತೆಯವರಿಗೆ ಗರಿಷ್ಠ 43 ವರ್ಷಗಳು.

ಕೃಷಿ ಇಲಾಖೆ ಹುದ್ದೆಗಳಿಗೆ ಅರ್ಜಿ ಶುಲ್ಕ ವಿವರ

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600.
ಇತರೆ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ

ನೋಟಿಫಿಕೇಶನ್‌ ಹಾಗೂ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ https://www.kpsc.kar.nic.in/notification.html ವೆಬ್‌ಸೈಟ್‌ಗೆ ಭೇಟಿ ನೀಡಿರಿ.

ನೇಮಕಾತಿ ವಿಧಾನ
ಈ ಹುದ್ದೆಗಳಿಗೆ ನೇಮಕಾತಿ ವಿಧಾನದಲ್ಲಿ ಕೆಳಗಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಕನ್ನಡ ಭಾಷಾ ಪರೀಕ್ಷೆ - 150 ಅಂಕಗಳಿಗೆ
ಸಾಮಾನ್ಯ ಪತ್ರಿಕೆ : 300 ಅಂಕಗಳಿಗೆ 01-30 ಗಂಟೆ.
ನಿರ್ದಿಷ್ಟ ಪತ್ರಿಕೆ : 300 ಅಂಕಗಳಿಗೆ 2 ಗಂಟೆ.

ಉದ್ಯೋಗ ವಿವರ

ಹುದ್ದೆಯ ಹೆಸರು ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು.
ವಿವರ ಕೃಷಿ ಇಲಾಖೆ ಹುದ್ದೆಗಳಿಗೆ ಕೆಪಿಎಸ್‌ಸಿ ಅಧಿಸೂಚನೆ
ಪ್ರಕಟಣೆ ದಿನಾಂಕ 2024-09-20
ಕೊನೆ ದಿನಾಂಕ 2024-11-07
ಉದ್ಯೋಗ ವಿಧ ಪೂರ್ಣಾವಧಿ
ಉದ್ಯೋಗ ಕ್ಷೇತ್ರ ಕೃಷಿ ಇಲಾಖೆ ಸರ್ಕಾರಿ ಹುದ್ದೆಗಳು
ವೇತನ ವಿವರ INR 43100 to 83900 /Month

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ --
ವಿದ್ಯಾರ್ಹತೆ ಕೃಷಿ ಹಾಗೂ ಇತರೆ ಕೃಷಿ ಮತ್ತು ಆಹಾರ ಸಂಬಂಧಿತ ಇಂಜಿನಿಯರಿಂಗ್ ಪದವಿ
ಕಾರ್ಯಾನುಭವ 0 Years

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರು ಕರ್ನಾಟಕ ಲೋಕಸೇವಾ ಆಯೋಗ
ವೆಬ್‌ಸೈಟ್‌ ವಿಳಾಸ https://www.kpsc.kar.nic.in/index.html