Agriculture infrastructure fund-ಈ ಯೋಜನೆಯಡಿ ಸಿಗಲಿದೆ ನಿಮ್ಮ ಸಾಲದ ಮೇಲೆ 3% ಬಡ್ಡಿ ಮನ್ನಾ,ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

<Krushirushi> <3% ಬಡ್ಡಿ ಮನ್ನಾ> <interest subsidy> <ಕೃಷಿ ಮೂಲಭೂತ ಸೌಕರ್ಯ> <ಕೃಷಿ ಮೂಲಭೂತ ಸೌಕರ್ಯ> <AIF> <Agriculture Infrastructure fund> <Agricultureinfrastructurefund> <Krushi mulabutha soukarya yojane> <PMFME> <ACABC> <PMEGP> <NLM> <NHB>

Agriculture infrastructure fund-ಈ ಯೋಜನೆಯಡಿ ಸಿಗಲಿದೆ ನಿಮ್ಮ ಸಾಲದ ಮೇಲೆ 3% ಬಡ್ಡಿ ಮನ್ನಾ,ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

Agriculture infrastructure fund-ಈ ಯೋಜನೆಯಡಿ ಸಿಗಲಿದೆ ನಿಮ್ಮ ಸಾಲದ ಮೇಲೆ 3% ಬಡ್ಡಿ ಮನ್ನಾ,ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

 ಕೇಂದ್ರ ವಲಯದ ಯೋಜನೆ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಸರ್ಕಾರವು ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತಿದ್ದು, ರೂ. 2 ಕೋಟಿ ಸಾಲದ ಮೊತ್ತಕ್ಕೆ ವಾರ್ಷಿಕ ಶೇ. 3ರಂತೆ 7 ವರ್ಷದ ಅವಧಿಗೆ ಬಡ್ಡಿ ಸಹಾಯಧನ ಲಭ್ಯವಿರುತ್ತದೆ.


ಅರ್ಹ ಕೃಷಿ ಚಟುವಟಿಕೆಗಳು/ಯೋಜನೆಗಳು ಈ ಕೆಳಗಿನಂತಿವೆ

ಇ-ಮಾರುಕಟ್ಟೆ ವೇದಿಕೆ ಸೇರಿದಂತೆ ಸರಬರಾಜು ಸರಪಳಿ ಸೇವೆಗಳು ಗೋದಾಮುಗಳು ಮತ್ತು ಸೈಲೊಗಳು + ಪ್ಯಾಕ್ ಹೌಸ್‌ಗಳು ವಿಂಗಡಣೆ ಮತ್ತು ಶ್ರೇಣೀಕರಣ ಘಟಕಗಳು ಶೀತಲಗೃಹ ಸರಪಳಿಗಳು ಸಾಗಾಣಿಕೆ ಸೌಲಭ್ಯಗಳು ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು ಹಣ್ಣು ಮಾಗಿಸುವ ಘಟಕಗಳು

ಮೌಲ್ಯಮಾಪನ ಘಟಕಗಳು ಸಂಕುಚಿತ ಜೈವಿಕ ಅನಿಲ (CBG) ಸ್ಥಾವರ + ಸಾವಯವ ಪರಿಕರ ಉತ್ಪಾದನೆ + ಜೈವಿಕ ಉತ್ತೇಜಕ ಉತ್ಪಾದನಾ ಘಟಕಗಳು * ಸಸ್ಯ ನರ್ಸರಿ /ಅಂಗಾಂಶ ಕೃಷಿ ಬೀಜ ಸಂಸ್ಕರಣೆ + ಕೃಷಿ ಯಂತ್ರಧಾರೆ ಕೇಂದ್ರಗಳು ಸ್ಮಾರ್ಟ್ ಮತ್ತು ನಿಖರವಾದ ಕೃಷಿ ಸಂಯೋಜಿತ ಸ್ಪಿರುಲಿನಾ ಉತ್ಪಾದನೆ ಮತ್ತು ಸಂಸ್ಕರಣಾ ಘಟಕಗಳು ರೇಷ್ಮೆ ಕೃಷಿ ಸಂಸ್ಕರಣಾ ಘಟಕ • ಜೇನು ಸಂಸ್ಕರಣಾ ಘಟಕ ಪ್ಲಾಂಟ್ ಕ್ಯಾರಂಟೈನ್ ಘಟಕಗಳು ಮತ್ತು ಸಾಮೂಹಿಕ ಕೃಷಿ ಅಡಿ: ಜಲಕೃಷಿ, ವಾಯುಕೃಷಿ, ಹಸಿರುಮನೆ, ಬಹುಮಹಡಿ ಕೃಷಿ, ಅಣಬೆ ಬೇಸಾಯ

ಅರ್ಹ ಫಲಾನುಭವಿಗಳು

ರೈತರು/ ರೈತ ಉತ್ಪಾದಕ ಸಂಸ್ಥೆಗಳು, ಪ್ರಾಂತೀಯ ಸಹಕಾರ ಒಕ್ಕೂಟಗಳು ಕೃಷಿ ಉದ್ಯಮಿಗಳು / ನವೋದ್ಯಮಿಗಳು ಪ್ರಾಥಮಿಕ ಕೃಷಿ ಕ್ರೆಡಿಟ್ ಸಹಕಾರ ಸಂಘಗಳು + ವಿವಿಧೋದ್ದೇಶ ಸಹಕಾರ ಸಂಘಗಳು * ಸ್ವ-ಸಹಾಯ ಗುಂಪುಗಳು / ಜಂಟಿ ಬಾಧ್ಯತಾ ಗುಂಪುಗಳು / ಖಾಸಗಿ ಮಾಲೀಕತ್ವ ಸಂಸ್ಥೆಗಳು.
ಯೋಜನೆಯಲ್ಲಿ ಭಾಗವಹಿಸುವ ಹಣಕಾಸು ಸಂಸ್ಥೆಗಳು:
ರಾಷ್ಟ್ರೀಕೃತ ಬ್ಯಾಂಕುಗಳು + ಶೆಡ್ಯೂಲ್ಡ್ ಸಹಕಾರಿ ಬ್ಯಾಂಕ್ ಗಳು + ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಗಳು ಸಣ್ಣ ಹಣಕಾಸು ಬ್ಯಾಂಕುಗಳು + ಬ್ಯಾಂಕೇತರ ಹಣಕಾಸು ಸಂಸ್ಥೆಗಳು + ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್ ಸಿಡಿಸಿ).

ಅರ್ಜಿ ಸಲ್ಲಿಕೆ ಪ್ರಕ್ರಿಯೆ


ಮೊದಲು ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ನಂತರ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ Beneficiary ಮೇಲೆ ಕ್ಲಿಕ್ ಮಾಡಿ
ನಂತರ Benefit under other scheme ಮೇಲೆ ಕ್ಲಿಕ್ ಮಾಡಿ

ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಯೋಜನೆಯ ಮೇಲೆ ಕ್ಲಿಕ್ ಮಾಡಿ
ಉದಾಹರಣೆಗೆ ಈಗಾಗಲೇ ನೀವು PMFME ಯೋಜನೆಯ ಫಲಾನುಭವಿಗಳಾಗಿದ್ದು,ನಿಮ್ಮ ಸಾಲದ ಮೇಲೆ 3% ಬಡ್ಡಿ ಸಬ್ಸಿಡಿ ಪಡೆಯಬಹುದು

ನಂತರ ನಿಮ್ಮ ಹೆಸರು, ಮೊಬೈಲ್ ನಂಬರ್, ಆಧಾರ್ ನಂಬರ್ ಹಾಕಿ Send OTP ಮೇಲೆ ಕ್ಲಿಕ್ ಮಾಡಿ,ಮೊಬೈಲ್ ಗೆ ಬರುವ OTP ಹಾಕಿ Register ಮಾಡಿ

ನಿಮ್ಮ ಮೊಬೈಲ್ ಗೆ ID ಮತ್ತು password ಬರುತ್ತದೆ,ಅದನ್ನು ಹಾಕಿ ಲಾಗಿನ್ ಮಾಡಿ

ನಂತರ setting icon ಮೇಲೆ ಕ್ಲಿಕ್ ಮಾಡಿ Apply for interest subvention under other scheme ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಮಾಹಿತಿ ತುಂಬಿ,ನಿಮ್ಮ ಬ್ಯಾಂಕ್ ನ ಲೋನ್ Saction letter ಹಾಗೂ ಯೋಜನಾ ವರದಿಯನ್ನು ಅಪ್ಲೌಡ್ ಮಾಡಿ,Submit ಮೇಲೆ ಕ್ಲಿಕ್ ಮಾಡಿ


CPMU, ಕೃಷಿ ಮತ್ತು ರೈ ಕಲ್ಯಾಣ ಮಂತ್ರಾಲಯದ ಮೂಲಕ ಪರಿಶೀಲಿಸಲಾದ ಅರ್ಜಿಯನ್ನು ಬ್ಯಾಂಕ್‌ ಶಾಖೆಗೆ ಆನ್‌ ಲೈನ್‌ ನಲ್ಲಿ ವರ್ಗಾಯಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ/ತೋಟಗಾರಿಕೆ ಇಲಾಖೆ, ಜಿಲ್ಲಾ ನಬಾರ್ಡ್‌ ವ್ಯವಸ್ಥಾಪಕರು, ನಿಮ್ಮ ವ್ಯಾಪ್ತಿಯ ಬ್ಯಾಂಕ್/‌ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಬಹುದು.