Annabhagya list-ಈ ಪಟ್ಟಿಯಲ್ಲಿರುವವರಿಗೆ 3 ತಿಂಗಳ ಪಡಿತರ ಮುಂಗಡ ವಿತರಿಸಲು ಮುಂದಾದ ಸರ್ಕಾರ
<Annabhagya list>ಅನ್ನಭಾಗ್ಯ ಫಲಾನುಭವಿಗಳಿಗೆ ಸಿಹಿಸುದ್ದಿ ಎನ್ನುವಂತೆ ಈ ತಿಂಗಳು ಕುಟುಂಬದ ಪ್ರತಿ ಸದಸ್ಯರಿಗೆ ತಲಾ 15 ಕೆ.ಜೆ ಅಕ್ಕಿಯನ್ನು ವಿತರಿಸಲಾಗುತ್ತದೆ.

Annabhagya list-ಈ ಪಟ್ಟಿಯಲ್ಲಿರುವವರಿಗೆ 3 ತಿಂಗಳ ಪಡಿತರ ಮುಂಗಡ ವಿತರಿಸಲು ಮುಂದಾದ ಸರ್ಕಾರ
ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಫಲಾನುಭವಿಗಳಿಗೆ ಮೂರು ತಿಂಗಳ ಪಡಿತರವನ್ನು ಮುಂಗಡವಾಗಿ ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನ್ಯಾಯಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಪಡಿತರ ವಿತರಿಸಲು ಕೇಂದ್ರ ಸರ್ಕಾರ ಆದೇಶ ನೀಡಿದೆ. ಮೂರು ತಿಂಗಳ ಅವಧಿಗೆ ಆಹಾರ ಧಾನ್ಯಗಳನ್ನು ಮುಂಗಡವಾಗಿ ಭಾರತೀಯ ಆಹಾರ ನಿಗಮದ ಗೋದಾಮುಗಳಿಗೆ ಸಾಗಿಸಲು ಕ್ರಮ ಕೈಗೊಳ್ಳಲಾಗಿದೆ.
ಇದರಿಂದಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡ್ ಪ್ರತಿ ಸದಸ್ಯರಿಗೆ ತಲಾ 15 ಕೆಜಿ ಅಕ್ಕಿ ಸಿಗಲಿದೆ. ಜೂನ್, ಜುಲೈ, ಆಗಸ್ಟ್ ಅವಧಿಗೆ ಆಹಾರ ಭದ್ರತೆ ಕಾಯ್ದೆಯಡಿ ಪಡಿತರ ಹಂಚಿಕೆಗೆ ಸಂಬಂಧಿಸಿದಂತೆ ಭಾರತೀಯ ಆಹಾರ ನಿಗಮ ಆಹಾರ ಪದಾರ್ಥಗಳ ಬೇಡಿಕೆ ವಿವರಗಳನ್ನು ಸಿದ್ಧಪಡಿಸಿದೆ.
Annabhagya list-ಈ ಪಟ್ಟಿಯಲ್ಲಿರುವವರಿಗೆ ಈ ತಿಂಗಳು ಸಿಗಲಿದೆ 15 ಕೆಜಿ ಅನ್ನಭಾಗ್ಯ ಅಕ್ಕಿ
ಅನ್ನಭಾಗ್ಯ ಫಲಾನುಭವಿಗಳಿಗೆ ಸಿಹಿಸುದ್ದಿ ಎನ್ನುವಂತೆ ಈ ತಿಂಗಳು ಕುಟುಂಬದ ಪ್ರತಿ ಸದಸ್ಯರಿಗೆ ತಲಾ 15 ಕೆ.ಜೆ ಅಕ್ಕಿಯನ್ನು ವಿತರಿಸಲಾಗುತ್ತದೆ.
ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್ ಮುನಿಯಪ್ಪ ಮಾಹಿತಿ ನೀಡಿದ್ದು, ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಪ್ರತಿ ಫಲಾನುಭವಿಗೆ 10 ಅಕ್ಕಿಯನ್ನು ನೀಡುವುದರೊಂದಿಗೆ ಫೆಬ್ರವರಿ ತಿಂಗಳ 5 ಕೆ.ಜಿ. ಅಕ್ಕಿಯನ್ನು ಸೇರಿಸಿ, ಈ ತಿಂಗಳು 15 ಕೆ.ಜಿ. ಅಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಂದಹಾಗೇ ರಾಜ್ಯ ಸರ್ಕಾರದಿಂದ ಈ ಮೊದಲು ಹತ್ತು ಕೆಜಿ ಅಕ್ಕಿ ಹಾಗೂ ಹೆಚ್ಚುವರಿ ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ಅನ್ನಭಾಗ್ಯ ಫಲಾನುಭವಿಗಳ ಖಾತೆಗೆ ಸಂದಾಯ ಮಾಡಲಾಗುತ್ತಿತ್ತು. ಅದನ್ನು ನಿಲ್ಲಿಸಲಾಗಿದ್ದು, ಈ ತಿಂಗಳು ಅನ್ನಭಾಗ್ಯ ಫಲಾನುಭವಿಗಳಿಗೆ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 15 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತದೆ.
ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ
ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ ಪಂಚಾಯತಿ,ಗ್ರಾಮ select ಮಾಡಿ,Go ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನ ಪಟ್ಟಿಯಲ್ಲಿರುವವರಿಗೆ ಸಿಗಲಿದೆ 10ಕೆಜಿ ಅನ್ನಭಾಗ್ಯ ಅಕ್ಕಿ(Annabhagya)