Ayodya Ram Darshan free pass-ಕಿಲೊಮಿಟರ್ ಗಟ್ಟಲೇ ಸಾಲಿನಲ್ಲಿ ಕಾಯದೆ ಕೇವಲ 5 ರಿಂದ 10 ನಿಮಿಷದಲ್ಲಿ ಅಯೊದ್ಯಾ ರಾಮ ಮಂದಿರ ದರ್ಶನಕ್ಕೆ ಆನ್ಲೈನ್ ಬುಕ್ಕಿಂಗ್ ಹೀಗೆ ಮಾಡಿ

<Krushirushi> <Ayodya ram Darshana> <Ayodya Ram mandir Darshana free pass> <Ayodya Ram mandir online booking> <How to book Ram mandir free pass> <Ayodya> <Ram mandir> <ಅಯೊದ್ಯಾ> <ರಾಮ ಮಂದಿರ> <ಮಹಾಕುಂಭಮೇಳ> <Maha kumba mela>

Ayodya Ram Darshan free pass-ಕಿಲೊಮಿಟರ್ ಗಟ್ಟಲೇ ಸಾಲಿನಲ್ಲಿ ಕಾಯದೆ ಕೇವಲ 5 ರಿಂದ 10 ನಿಮಿಷದಲ್ಲಿ ಅಯೊದ್ಯಾ ರಾಮ ಮಂದಿರ ದರ್ಶನಕ್ಕೆ ಆನ್ಲೈನ್ ಬುಕ್ಕಿಂಗ್ ಹೀಗೆ ಮಾಡಿ

Ayodya Ram Darshan free pass-ಕಿಲೊಮಿಟರ್ ಗಟ್ಟಲೇ ಸಾಲಿನಲ್ಲಿ ಕಾಯದೆ ಕೇವಲ 5 ರಿಂದ 10 ನಿಮಿಷದಲ್ಲಿ ಅಯೊದ್ಯಾ ರಾಮ ಮಂದಿರ ದರ್ಶನಕ್ಕೆ ಆನ್ಲೈನ್ ಬುಕ್ಕಿಂಗ್ ಹೀಗೆ ಮಾಡಿ

ಭಗವಾನ್ ಬಾಲರಾಮನ ದರ್ಶನ ಬಯಸುವ ಭಕ್ತರಿಗೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ವೆಬ್‌ಸೈಟ್‌ನಲ್ಲಿ ನಿರ್ದಿಷ್ಟ ಸಮಯದ ಸ್ಲಾಟ್‌ಗಳನ್ನು ಒದಗಿಸಿದೆ. ಇದರಂತೆ ನಿತ್ಯ ಬೆಳಿಗ್ಗೆ 6 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 9 ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರಲಿದೆ.ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿದರೆ ಕಿಲೊಮಿಟರ್ ಗಟ್ಟಲೇ ಸಾಲಿನಲ್ಲ ಕಾಯದೆ ಕೇವಲ 5 ರಿಂದ 10 ನಿಮಿಷದಲ್ಲಿ ಅಯೊದ್ಯಾ ರಾಮ ಮಂದಿರ ದರ್ಶನ ಮಾಡಬಹುದು.

ಆರತಿಗೂ ಸಹ ಬುಕ್ಕಿಂಗ್ ಮಾಡಬಹುದು

ಬೆಳಗ್ಗೆ ಬಾಲರಾಮನ ಆರತಿ ಸಮಯ 6.30ಕ್ಕೆ ಇದ್ದು, ಜಾಗರಣ/ ಶೃಂಗಾರ ಎಂದು ನಮೂದಿಸಲಾಗಿದೆ. ಸಂಜೆ 7:30 ಕ್ಕೆ ಸಂಧ್ಯಾ ಆರತಿಯನ್ನು ಒಳಗೊಂಡಿದೆ. ಆಫ್‌ಲೈನ್‌ ಮತ್ತು ಆನ್‌ಲೈನ್ ಎರಡರಲ್ಲೂ 'ಆರತಿ' ಗಾಗಿ ಪಾಸ್‌ಗಳನ್ನು ಪಡೆಯಬಹುದು. ಆಫ್‌ಲೈನ್‌ ಪಾಸ್‌ಗಳು ಶ್ರೀ ರಾಮ ಜನ್ಮಭೂಮಿಯ ಶಿಬಿರ ಕಚೇರಿಯಲ್ಲಿ ಲಭ್ಯವಿದ್ದು, ಮಾನ್ಯ ಸರ್ಕಾರಿ ಗುರುತಿನ ಪುರಾವೆ ಒದಗಿಸುವ ಅಗತ್ಯವಿದೆ.

ಆನ್ಲೈಲ್ ಬುಕ್ಕಿಂಗ್ ಹೀಗೆ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://srjbtkshetra.org/

ನಂತರ click here to"Reserve your free passes for experiencing Aarti and Darshana of Ramalalla"

ನಂತರ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ Free Sugama Darshana ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ,Get OTP ಮೇಲೆ ಕ್ಲಿಕ್ ಮಾಡಿ,ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Login ಮೇಲೆ ಕ್ಲಿಕ್ ಮಾಡಿ

ನಂತರ Select Devotees ಮೇಲೆ ಕ್ಲಿಕ್ ಮಾಡಿ,ನೀವು ಎಷ್ಟು ಜನ ದರ್ಶನ ಮಾಡಲು ಹೊಗುತ್ತಿದ್ದೀರಾ, ಅಷ್ಟು ಸಂಖ್ಯೆಯನ್ನು Select ಮಾಡಿ

ನಂತರ ನೀವು ದರ್ಶನ ಮಾಡಲು ಬಯಸುವ ದಿನಾಂಕವನ್ನು Select ಮಾಡಿ

ನಂತರ ದರ್ಶನದ ಸಮಯವನ್ನು select ಮಾಡಿ,Proceed ಮೇಲೆ ಕ್ಲಿಕ್ ಮಾಡಿ

(ಸೂಚನೆ-ನೀವು ದರ್ಶನ ಮಾಡುವ ದಿನಾಂಕದಿಂದ 15 ದಿನ ಮೊದಲೇ ಬುಕ್ಕಿಂಗ್ ಗೆ ಅವಕಾಶ ಇರುತ್ತದೆ.ರಾತ್ರಿ 12 ಗಂಟೆಯಿಂದ 1 ಗಂಟೆಯೊಳಗಡೆ ಬುಕ್ ಮಾಡುವವರಿಗೆ ಮಾತ್ರ ಅವಕಾಶ ಸಿಗಲಿದೆ)

ನಂತರ ನಿಮ್ಮ ವಯಕ್ತಿಕ ಮಾಹಿತಿಯನ್ನು ತುಂಬಿ(ಹೆಸರು,ವಯಸ್ಸು,ಲಿಂಗ,ಆಧಾರ್ ನಂಬರ್ ಹಾಕಿ), ಒಬ್ಬ ವ್ಯಕ್ತಿಯ passport size photo ಅಪ್ಲೊಡ್ ಮಾಡಿ,ಈ ಕೆಳಗಿನಂತೆ ನಿಮ್ಮ Free pass ಡೌನ್ಲೊಡ್ ಮಾಡಿಕೊಂಡು,ಅದನ್ನು ದೇವಸ್ಥಾನ ಪ್ರವೇಶಿಸುವ ಮೊದಲು ತೋರಿಸಿದರೆ ನಿಮಗೆ ಉಚಿತವಾಗಿ ಕೇವಲ 5 ರಿಂದ 10 ನಿಮಿಷದಲ್ಲಿ ಸುಗಮ ದರ್ಶನವಾಗಲಿದೆ.

(ಸೂಚನೆ-ವಯಸ್ಸಾದವರಿಗೆ ವಿಲ್ ಚೇರ್ ಸೌಲಭ್ಯವಿದ್ದು,ಬುಕ್ಕಿಂಗ್ ಮಾಡುವಾಗ select ಮಾಡಿದರೆ,150 ರೂಪಾಯಿಗೆ ವಿಲ್ ಚೇರ್ ದುಡಿಕೊಂಡು ಹೊಗಲು ಒಬ್ಬ ಸಹಾಯಕರನ್ನು ಒದಗಿಸುತ್ತಾರೆ)