Baddi sahayadana-ಕೇವಲ 4% ಬಡ್ಡಿ ಸಹಾಯಧನದೊಂದಿಗೆ ಸಿಗಲಿದೆ 1ಕೋಟಿ ಸಾಲಸೌಲಭ್ಯ

<Krushirushi> <3% ಬಡ್ಡಿ ಮನ್ನಾ> <interest subsidy> <ಕೃಷಿ ಮೂಲಭೂತ ಸೌಕರ್ಯ> <ಕೃಷಿ ಮೂಲಭೂತ ಸೌಕರ್ಯ> <AIF> <Agriculture Infrastructure fund> <Agricultureinfrastructurefund> <Krushi mulabutha soukarya yojane> <PMFME> <ACABC> <PMEGP> <NLM> <NHB>

Baddi sahayadana-ಕೇವಲ 4% ಬಡ್ಡಿ ಸಹಾಯಧನದೊಂದಿಗೆ ಸಿಗಲಿದೆ 1ಕೋಟಿ ಸಾಲಸೌಲಭ್ಯ

Baddi sahayadana-ಕೇವಲ 4% ಬಡ್ಡಿ ಸಹಾಯಧನದೊಂದಿಗೆ ಸಿಗಲಿದೆ 1ಕೋಟಿ ಸಾಲಸೌಲಭ್ಯ


ನಿಮ್ಮ ಕನಸಿನ ಸ್ವಂತ ಉದ್ಯಮಕ್ಕೆ ಕರ್ನಾಟಕ ಸರ್ಕಾರದ ಮಹತ್ವದ ಕೊಡುಗೆ. ₹1 ಕೋಟಿ ವರೆಗಿನ ಸಾಲಕ್ಕೆ ಕೇವಲ ಶೇ. 4ರಷ್ಟು ಬಡ್ಡಿ ಮಾತ್ರ ನೀವು ಕಟ್ಟಬೇಕು. ಉಳಿದ ಬಡ್ಡಿಯನ್ನು ಸರ್ಕಾರವೇ ಭರಿಸುತ್ತದೆ. ಕೈಗಾರಿಕೆ, ಐಟಿ, ಆರೋಗ್ಯ, ಪ್ರವಾಸೋದ್ಯಮ ಹೀಗೆ ಯಾವುದೇ ಕ್ಷೇತ್ರದಲ್ಲಿ ನಿಮ್ಮ ಉದ್ಯಮವನ್ನು ಐದು ವರ್ಷದೊಳಗೆ ಸ್ಥಾಪಿಸಿ, ಬೆಳೆಸಿ. ಇದು ನಿಮ್ಮ ಆರ್ಥಿಕ ಸ್ವಾವಲಂಬನೆಗೆ ಸುವರ್ಣಾವಕಾಶ!

ಸ್ವಂತ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸಬಲರಾಗಲು ನಿಮಗೊಂದು ಸುವರ್ಣಾವಕಾಶ. ಕರ್ನಾಟಕ ಸರ್ಕಾರವು ಪರಿಶಿಷ್ಟ ಪಂಗಡದ ಸಮುದಾಯದ ಅಭ್ಯರ್ಥಿಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ವಿಶೇಷ ಬಡ್ಡಿ ಸಹಾಯಧನ ಯೋಜನೆಯನ್ನು ಜಾರಿಗೆ ತಂದಿದೆ. ನೀವು ಹೊಸ ಉದ್ಯಮವನ್ನು ಪ್ರಾರಂಭಿಸಲು ಬಯಸಿದ್ದರೆ ಅಥವಾ ಅಸ್ತಿತ್ವದಲ್ಲಿರುವ ಘಟಕವನ್ನು ವಿಸ್ತರಿಸಲು ಆಲೋಚಿಸುತ್ತಿದ್ದರೆ, ಈ ಯೋಜನೆಯು ನಿಮಗೆ ಭದ್ರ ಬುನಾದಿ ಒದಗಿಸಲಿದೆ. ಈ ಹಿನ್ನೆಲೆಯಲ್ಲಿ ಏನಿದು ಬಡ್ಡಿ ಸಹಾಯಧನ ಯೋಜನೆ? ಈ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ? ಪ್ರಯೋಜನಗಳು ಏನು ಎಂಬುದನ್ನು ತಿಳಿಯೋಣ.

ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಪರಿಶಿಷ್ಟ ಪಂಗಡದ ಉದ್ಯಮಿಗಳ ಆರ್ಥಿಕ ಸಬಲೀಕರಣಕ್ಕಾಗಿ ಈ ವಿಶೇಷ ಬಡ್ಡಿ ಸಹಾಯಧನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಎಂ.ಎಸ್.ಎಂ.ಇ ಘಟಕಗಳು, ಹೋಟೆಲ್, ಫ್ರಾಂಚೈಸಿ ಅಥವಾ ಡೀಲರ್‌ಶಿಪ್‌ಗಳಂತಹ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅಥವಾ ಅಸ್ತಿತ್ವದಲ್ಲಿರುವ ಘಟಕಗಳನ್ನು ಆಧುನೀಕರಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಥವಾ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಿಂದ ಪಡೆಯುವ ಗರಿಷ್ಠ ರೂ. 1.00 ಕೋಟಿ ವರೆಗಿನ ಸಾಲಕ್ಕೆ ಕೇವಲ 4% ರಿಯಾಯಿತಿ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ (ಉಳಿದ ಬಡ್ಡಿಯನ್ನು ಸರ್ಕಾರವೇ ಭರಿಸುತ್ತದೆ). ಉದ್ಯಮದ ಸಂಪೂರ್ಣ ಮಾಲೀಕತ್ವವು ಎಸ್‌ಟಿ ಸಮುದಾಯದವರದ್ದೇ ಆಗಿರಬೇಕು ಎಂಬ ಷರತ್ತಿನೊಂದಿಗೆ, ಪಡೆದ ಸಾಲವನ್ನು 5 ವರ್ಷಗಳ ಅವಧಿಯಲ್ಲಿ ಮರುಪಾವತಿಸಲು ಅವಕಾಶವಿದ್ದು, ಇದು ಸಮುದಾಯದ ಯುವ ಉದ್ಯಮಿಗಳು ಕಡಿಮೆ ಬಂಡವಾಳ ವೆಚ್ಚದಲ್ಲಿ ಸ್ವಾವಲಂಬಿಗಳಾಗಲು ಅತ್ಯುತ್ತಮ ವೇದಿಕೆಯಾಗಿದೆ

ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಕೈಗೆಟುಕುವ ದರದಲ್ಲಿ ಬಂಡವಾಳ ಒದಗಿಸುವುದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಉತ್ತೇಜಿಸುವುದು ಮತ್ತು ಸೇವಾ ವಲಯಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ

ಬಡ್ಡಿ ದರದ ರಿಯಾಯಿತಿ: ಈ ಯೋಜನೆಯಡಿ ಆಯ್ಕೆಯಾದ ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಕೇವಲ 4% ರಷ್ಟು ರಿಯಾಯಿತಿ ಬಡ್ಡಿ ದರದಲ್ಲಿ ಸಾಲದ ಸೌಲಭ್ಯ ದೊರೆಯುತ್ತದೆ. ಬ್ಯಾಂಕಿನ ಅಸಲಿ ಬಡ್ಡಿ ದರ ಮತ್ತು ಈ 4% ನಡುವಿನ ವ್ಯತ್ಯಾಸದ ಮೊತ್ತವನ್ನು ಸರ್ಕಾರವೇ ಬಡ್ಡಿ ಸಹಾಯಧನದ ರೂಪದಲ್ಲಿ ಭರಿಸುತ್ತದೆ.

ಗರಿಷ್ಠ ಸಾಲದ ಮಿತಿ: ಉದ್ಯಮಿಗಳು ತಮ್ಮ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆಗಾಗಿ ಈ ಯೋಜನೆಯ ಅಡಿಯಲ್ಲಿ ಗರಿಷ್ಠ 1.00 ಕೋಟಿ ರೂಪಾಯಿಗಳವರೆಗೆ ಸಾಲವನ್ನು ಪಡೆಯಲು ಅವಕಾಶವಿದೆ.


ಸಾಲ ಮರುಪಾವತಿಯ ಕಾಲಾವಕಾಶ: ಪಡೆದ ಸಾಲವನ್ನು ಮರುಪಾವತಿ ಮಾಡಲು ಉದ್ಯಮಿಗಳಿಗೆ 5 ವರ್ಷಗಳ ಕಾಲಾವಧಿಯನ್ನು ನಿಗದಿಪಡಿಸಲಾಗಿದೆ. ಈ ಅವಧಿಯಲ್ಲಿ ನಿಗದಿತ ಕಂತುಗಳ ಮೂಲಕ ಸಾಲ ತೀರಿಸಬಹುದಾಗಿದೆ.

ಸಾಲ ಒದಗಿಸುವ ಹಣಕಾಸು ಸಂಸ್ಥೆಗಳು: ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಉದ್ಯಮಿಗಳು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ , ಯಾವುದಾದರು ರಾಷ್ಟ್ರೀಕೃತ ಬ್ಯಾಂಕ್‌ಗಳು, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ಗಳು ಅಥವಾ ಅಪೆಕ್ಸ್ ಸಹಕಾರಿ ಬ್ಯಾಂಕ್‌ಗಳಿಂದ ಸಾಲವನ್ನು ಪಡೆಯಬಹುದಾಗಿದೆ.

ಕೈಗಾರಿಕಾ ವಲಯ: ಆಹಾರ ಸಂಸ್ಕರಣಾ ಘಟಕಗಳು, ಜವಳಿ ಉದ್ಯಮ, ಸಿದ್ಧ ಉಡುಪುಗಳ ತಯಾರಿಕೆ, ಎಂಜಿನಿಯರಿಂಗ್ ವರ್ಕ್‌ಶಾಪ್‌ಗಳು ಮತ್ತು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಈ ಯೋಜನೆಯಡಿ ಸಾಲ ಪಡೆಯಬಹುದು.

ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ವಲಯ: ಸಾಫ್ಟ್‌ವೇರ್ ಅಭಿವೃದ್ಧಿ ಕೇಂದ್ರಗಳು, ಐಟಿ ಆಧಾರಿತ ಸೇವೆಗಳು ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್‌ನಂತಹ ಸೇವಾ ಆಧಾರಿತ ಉದ್ಯಮಗಳಿಗೆ ಸರ್ಕಾರವು ಪ್ರೋತ್ಸಾಹ ನೀಡುತ್ತದೆ.

ವಾಣಿಜ್ಯ ಮತ್ತು ವ್ಯಾಪಾರ ಚಟುವಟಿಕೆಗಳು: 2021-22ನೇ ಸಾಲಿನಿಂದ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು, ಇದರ ಅಡಿಯಲ್ಲಿ ಸ್ವಂತ ಮಳಿಗೆ, ಪ್ರಮುಖ ಕಂಪನಿಗಳ ಡೀಲರ್‌ಶಿಪ್, ಫ್ರಾಂಚೈಸಿಗಳು ಮತ್ತು ಹೋಟೆಲ್ ಉದ್ಯಮಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ.

ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರ: ಸುಸಜ್ಜಿತ ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ಸ್ಕ್ಯಾನಿಂಗ್ ಅಥವಾ ಡಯಾಗ್ನೋಸ್ಟಿಕ್ ಸೆಂಟರ್‌ಗಳು, ದಂತ ಚಿಕಿತ್ಸಾಲಯ ಮತ್ತು ಕಣ್ಣಿನ ಆಸ್ಪತ್ರೆಗಳನ್ನು ತೆರೆಯಲು ಹಾಗೂ ಆಧುನಿಕ ವೈದ್ಯಕೀಯ ಉಪಕರಣಗಳ ಖರೀದಿಗೆ ಸಹಾಯಧನ ಲಭ್ಯವಿದೆ.

ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯ: ಪ್ರವಾಸಿಗರನ್ನು ಸೆಳೆಯಲು ಹೋಟೆಲ್, ರೆಸಾರ್ಟ್, ಕ್ಯಾಟರಿಂಗ್ ಸೇವೆಗಳು, ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ಪ್ರವಾಸಿ ಏಜೆನ್ಸಿಗಳನ್ನು ನಡೆಸಲು ಆಸಕ್ತಿಯಿರುವ ಉದ್ಯಮಿಗಳು ಈ ಯೋಜನೆಯ ಲಾಭ ಪಡೆಯಬಹುದು.

ಉದ್ಯಮವು ಸಂಪೂರ್ಣವಾಗಿ ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮಾಲೀಕತ್ವದಲ್ಲಿರಬೇಕು. ಪಾಲುದಾರಿಕೆ ಸಂಸ್ಥೆಯಾಗಿದ್ದರೆ, ಎಲ್ಲಾ ಪಾಲುದಾರರು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದವರಾಗಿರಬೇಕು.

ಅರ್ಜಿದಾರರು ಈ ಹಿಂದೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಥವಾ ಯಾವುದೇ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಮರುಪಾವತಿ ಮಾಡದೆ ಸುಸ್ತಿದಾರರಾಗಿರಬಾರದು.

ಈ ಹಿಂದೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಬಡ್ಡಿ ಸಹಾಯಧನ ಯೋಜನೆಯಡಿ ಪ್ರಯೋಜನ ಪಡೆದಿದ್ದರೆ ಈ ಯೋಜನೆಗೆ ಅರ್ಹರಲ್ಲ.

ಹಂತ 1: ನಿಮ್ಮ ಜಿಲ್ಲೆಯ ಹತ್ತಿರದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಶಾಖಾ ಕಚೇರಿ ಅಥವಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ.

ಹಂತ 2: ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಎಲ್ಲಾ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ.

ಹಂತ 3: ಅಗತ್ಯವಿರುವ ದಾಖಲೆಗಳ ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಲಗತ್ತಿಸಿ.

ಹಂತ 4: ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ಕಚೇರಿಯಲ್ಲಿ ಸಲ್ಲಿಸಿ ಮತ್ತು ಸ್ವೀಕೃತಿ ಪತ್ರ ಪಡೆಯಿರಿ.

ದಾಖಲೆಗಳು

ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ.

ಜಾತಿ ಪ್ರಮಾಣಪತ್ರ (SC/ST ಧೃಢೀಕರಣ).

ಬಯೋ-ಡೇಟಾ ಮತ್ತು ನಿವ್ವಳ ಮೌಲ್ಯದ ಹೇಳಿಕೆ.

ನಿಗದಿತ ನಮೂನೆಯಲ್ಲಿ ಪ್ರಮಾಣಪತ್ರ.

ಬ್ಯಾಂಕ್ ಖಾತೆಯ ವಿವರಗಳು.

ಹೆಚ್ಚಿನ ಮಾಹಿತಿಗಾಗಿ ಅಥವಾ ಯಾವುದೇ ಸಂದೇಹಗಳಿದ್ದಲ್ಲಿ ನಿಮ್ಮ ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಸಹಾಯವಾಣಿ ಸಂಖ್ಯೆ: 080-22261703 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು.

Bele sala baddi manna-ಈ ಯೋಜನೆಯಡಿ ಸಿಗಲಿದೆ ನಿಮ್ಮ ಸಾಲದ ಮೇಲೆ 3% ಬಡ್ಡಿ ಮನ್ನಾ,ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

https://krushirushi.in/Bele-sala-baddi-manna-1905