Bara parihara status-ರಾಜ್ಯದ 19.84 ಲಕ್ಷ ರೈತರ ಖಾತೆಗೆ ತಲಾ 2874 ರೂಪಾಯಿ ಬರಪರಿಹಾರ ಹಣ ಜಮಾ, ನಿಮ್ಮ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್

<Krushirushi> <ಬರ ಪರಿಹಾರ ಸ್ಟೇಟಸ್> <bara parihara status> <ಬೆಳೆಪರಿಹಾರ> <ಆಧಾರ್ ನಂಬರ್> <FID> <FRUITS ID> <mobile number> <Survey number> <ಸರ್ವೆ ನಂಬರ್ ಆಧಾರಿತ ಬೆಳೆಹಾನಿ ಪರಿಹಾರ> <survey number based croploss compensation> Belehani rejected list> <ಬೆಳೆಹಾನಿ ಪರಿಹಾರ ಪಾವತಿ ವಿಫಲ ಪ್ರಕರಣ> <Belehani parihara payment failed cases> <Belehani parihara jama> <Modala kanthina belehani parihara> <Direct benefit transfer> <ಬೆಳೆಹಾನಿ ಪರಿಹಾರ ಪಟ್ಟಿ> <crop loss compensation to eligible farmers> <Baraparihara patti> <Drought relief eligible list> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID> <Belehani eligible and ineleigible list> <ಬೆಳೆಹಾನಿ ಅರ್ಹ ಅನರ್ಹ ಪಟ್ಟಿ> <bele parihara list> <bele parihara> <ರೈತ> <ಹಣ> <ಸಂದಾಯ> <ಬೆಳೆ ವಿಮೆ> <ಬೆಳೆ ಸುದ್ದಿ>

Bara parihara status-ರಾಜ್ಯದ 19.84 ಲಕ್ಷ ರೈತರ ಖಾತೆಗೆ ತಲಾ 2874 ರೂಪಾಯಿ ಬರಪರಿಹಾರ ಹಣ ಜಮಾ, ನಿಮ್ಮ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್

Bara parihara status-ರಾಜ್ಯದ 19.84 ಲಕ್ಷ ರೈತರ ಖಾತೆಗೆ ತಲಾ 2874 ರೂಪಾಯಿ ಬರಪರಿಹಾರ ಹಣ ಜಮಾ, ನಿಮ್ಮ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್


ಕಳೆದ ವರ್ಷ ಕಾಡಿದ ಬರದಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಮಳೆಯಾಶ್ರಿತ/ ಒಣಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತ ಕುಟುಂಬಕ್ಕೆ ಜೀವನ ನಿರ್ವಹಣೆಗಾಗಿ ರಾಜ್ಯ ಸರಕಾರ ಇದೇ ಮೊದಲ ಬಾರಿಗೆ ಗರಿಷ್ಠ 2874 ರೂ. ಜೀವನೋಪಾಯ ನಷ್ಟ ಪರಿಹಾರ(Bara parihara) ವಿತರಿಸಲು ಮುಂದಾಗಿದೆ.

ರಾಜ್ಯದಲ್ಲಿ ಅರ್ಹರೆಂದು ಗುರುತಿಸಲಾದ 19,82,677 ರೈತರನ್ನು ಒಳಗೊಂಡ 17,84,398 ಸಣ್ಣ, ಅತಿ ಸಣ್ಣ ರೈತ ಕುಟುಂಬಳಿಗೆ ಜೀವನೋಪಾಯ ನಷ್ಟ ಪರಿಹಾರ ವಿತರಣೆ ಪ್ರಕ್ರಿಯೆಗೆ ಚಾಲನೆ ದೊರತಿದೆ. ಸದ್ಯದಲ್ಲೇ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ.
ಕಳೆದ ವರ್ಷ ತೀವ್ರ ಬರದಿಂದಾಗಿ 223 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು. ಬರದಿಂದ ಆರ್ಥಿಕವಾಗಿ ಹಿಂದುಳಿದ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಆ ಕುಟುಂಬದವರ ಜೀವನೋಪಾಯಕ್ಕೆ ಆರ್ಥಿಕ ನೆರವು ನೀಡಿ ಸಹಾನುಭೂತಿ ಹೇಳುವ ನಿಟ್ಟಿನಲ್ಲಿ ಜೀವನೋಪಾಯ ನಷ್ಟ ಪರಿಹಾರ ವಿತರಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿದೆ.

ಬರ ಪರಿಹಾರವಾಗಿ ಎನ್‌ಡಿಆರ್‌ಎಫ್‌ನಡಿ ಕೇಂದ್ರ ಸರಕಾರಕ್ಕೆ 18,171 ಕೋಟಿ ರೂ. ಅನುದಾನ ಬಿಡುಗಡೆಗೆ ರಾಜ್ಯ ಸರಕಾರ ಮನವಿ ಸಲ್ಲಿಸಿತ್ತು. ಬರಗಾಲದಿಂದ ತತ್ತರಿಸಿದ ರೈತ ಕುಟುಂಬಗಳ ಜೀವನೋಪಾಯಕ್ಕಾಗಿ (ಗ್ಯಾಟಿಟುಯಸ್ ರಿಲೀಫ್) ಪಾವತಿಗೆ 12,577.90 ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರಕ್ಕೆ ಕೋರಿತ್ತು. ಆದರೆ ಕೇಂದ್ರ ಸರಕಾರ ಎನ್‌ಡಿಆರ್ ಎಫ್‌ನಡಿ ಕೇವಲ 232.40 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿತ್ತು ಎಂದು ಕಂದಾಯ ಇಲಾಖೆ ಮೂಲಗಳು ಹೇಳಿವೆ.


ರಾಜ್ಯದಿಂದ 280 ಕೋಟಿ ರೂ.ಒಟ್ಟು 19,82,677 ರೈತರನ್ನು ಒಳಗೊಂಡ 17,84,398 ಮಳೆಯಾಶ್ರಿತ/ ಒಣಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳನ್ನು ಜೀವನೋಪಾಯ ಪರಿಹಾರ ಪಡೆಯಲು ಗುರುತಿಸಲಾಗಿದೆ. ಪ್ರತಿ ಕುಟುಂಬಕ್ಕೆ ಗರಿಷ್ಠ 2874 ರೂ. ಪಾವತಿಗೆ 512.92 ಕೋಟಿ ರೂ. ಅಗತ್ಯವಿದೆ. ಎನ್‌ಡಿಆರಫ್‌ನಡಿ ಕೇಂದ್ರ 232.40 ಕೋಟಿ ರೂ. ನೀಡಿದೆ. ಪ್ರಸಕ್ತ 2024-25ನೇ ಸಾಲಿನ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಹಂಚಿಕೆಯಾಗಿರುವ 488 ಕೋಟಿ ರೂ. ಪೈಕಿ ಶೇ.50ರಷ್ಟನ್ನು ಅಂದರೆ 244 ಕೋಟಿ ರೂ. ಹಾಗೂ ಉಳಿಕೆ 36.52 ಕೋಟಿ ರೂ.ಗಳನ್ನು ರಾಜ್ಯದಿಂದ ಹೆಚ್ಚುವರಿಯಾಗಿ ಭರಿಸಲಾಗುತ್ತಿದೆ.


Bara parihara status-ಆಧಾರ್ ನಂಬರ್,ಸರ್ವೆ ನಂಬರ್,ಎಫ್ ಐಡಿ,ಮೊಬೈಲ್ ನಂಬರ್ ಹಾಕಿ ಬೆಳೆ ಪರಿಹಾರ ಚೆಕ್ ಮಾಡುವ ಡೈರೆಕ್ಟ್ ಲಿಂಕ್

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://parihara.karnataka.gov.in/service92/

 ನಂತರ ವರ್ಷ,ಋುತು,ವಿಪತ್ತು ಆಯ್ಕೆ ಮಾಡಿ, Get data/ಹುಡುಕು ಮೇಲೆ ಕ್ಲಿಕ್ ಮಾಡಿ

ನಂತರ Aadhaar number/ಆಧಾರ್ ಸಂಖ್ಯೆ,Farmer ID/ರೈತರ ಗುರುತಿನ ಸಂಖ್ಯೆ,Mobile number/ಮೊಬೈಲ್ ಸಂಖ್ಯೆ,Survey number/ಸರ್ವೆ ನಂಬರ್ ಯಾವುದಾದರೂ ಒಂದರ ಮೇಲೆ ಕ್ಲಿಕ್ ಮಾಡಿ

ಉದಾಹರಣೆಗೆ ನಿಮ್ಮ Aadhaar number/ಆಧಾರ್ ಸಂಖ್ಯೆ ಹಾಕಿ Fetch/ಪಡೆಯಿರಿ ಮೇಲೆ ಕ್ಲಿಕ್ ಮಾಡಿ

 ಈ ಕೆಳಗಿನಂತೆ ನಿಮ್ಮ ಆಧಾರ್ ನಂಬರ್ ನ ಕೊನೆಯ 4 ಸಂಖ್ಯೆ ಒಂದೆೇ ಇರುವ ಎಲ್ಲಾ ರೈತರ ಪಟ್ಟಿ ಸಿಗಲಿದೆ.ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಲು Search ಬಾಕ್ಸನಲ್ಲಿ ನಿಮ್ಮ ಹೆಸರು ಹಾಕಿ Search ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆಹಾನಿ ಪರಿಹಾರ ಜಮಾ ಮಾಹಿತಿ ಸಿಗಲಿದೆ.

ಅದೇ ರೀತಿ Farmer ID/ರೈತರ ಗುರುತಿನ ಸಂಖ್ಯೆ,Mobile number/ಮೊಬೈಲ್ ಸಂಖ್ಯೆ,Survey number/ಸರ್ವೆ ನಂಬರ್ ಹಾಕಿ ಬೆಳೆಪರಿಹಾರ ಚೆಕ್ ಮಾಡಬಹುದು