ಮಳೆಯಿಂದ ಬೆಳೆ ಹಾನಿ: ಒಂದು ಎಕರೆ ಪ್ರದೇಶಕ್ಕೆ ₹25 ಸಾವಿರ ಪರಿಹಾರಕ್ಕೆ ನಿಖಿಲ್ ಕುಮಾರಸ್ವಾಮಿ ಒತ್ತಾಯ
ಮಳೆಯಿಂದ ಬೆಳೆ ಹಾನಿ: ಒಂದು ಎಕರೆ ಪ್ರದೇಶಕ್ಕೆ ₹25 ಸಾವಿರ ಪರಿಹಾರಕ್ಕೆ ನಿಖಿಲ್ ಕುಮಾರಸ್ವಾಮಿ ಒತ್ತಾಯ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆ. ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ಒಂದು ಎಕರೆ ಪ್ರದೇಶ ಬೆಳೆ ನಾಶಕ್ಕೆ ₹25000 ಪರಿಹಾರ ಘೋಷಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಗಂಭೀರವಾಗಿ ಒತ್ತಾಯಿಸಿದರು.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದೆ
ಈ ಸರ್ಕಾರ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಅಭಿವೃದ್ಧಿ ಮಾಡುವಲ್ಲಿ ಈ ಸರ್ಕಾರ ವಿಫಲವಾಗಿದೆ. ಘೋಷಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ಖಜಾನೆಯಲ್ಲಿ ದುಡ್ಡ ಇದಿಯೋ, ಇಲ್ಲವೋ ಸರ್ಕಾರನೇ ಉತ್ತರಿಸಬೇಕೆಂದು ನಿಖಿಲ್ ಅವರು ಆಗ್ರಹಿಸಿದರು.
ಕೆಕೆಆರ್ ಡಿ ಬಿ ಯ ಕೆಲಸಗಳನ್ನು ಶೇ 30% ಗೆ ಲ್ಯಾಂಡರ್ಮಿಗೆ ಮಾರಿಕೊಂಡಿದ್ದಾರೆ.KKRDB ಇರೋದು ದುಡ್ಡು ಮಾಡಕ್ಕೆ. ಕಮಿಷ ನಡೆಯೋಕೆ. ಪರ್ಸೆಂಟೇಜ್ ರಾಜಕಾರಣಕ್ಕೆ ಇಟ್ಟಿರುವುದು. ಅಭಿವೃದ್ಧಿ ವಿಷಯ ಬಂದಾಗ ಕೆಕೆಆರ್ ಡಿಬಿ ಹೆಸರನ್ನು ಮುಂದೆ ಇಡುತ್ತಾರೆ ಎಂದು ಆರೋಪಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಕಲ್ಯಾಣ ಆಗ್ತಿಲ್ಲ, ರಸ್ತೆಗಳೆಲ್ಲ ಗುಂಡಿಗಳು ಬಿದ್ದಿವೆ
ಕಲ್ಬುರ್ಗಿ ನಗರದ ರಸ್ತೆಗಳೆಲ್ಲ ಗುಂಡಿಗಳು ಬಿದ್ದಿವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5000 ಕೊಟ್ಟಿದೆ ಅಂತ ಹೇಳ್ತಾರೆ. ಕಲ್ಬುರ್ಗಿಯ ರಸ್ತೆಗಳನ್ನು ನಿರ್ಮಿಸುವುದನ್ನು ಬಿಡಿ. ಗುಂಡಿಗಳನ್ನು ಮುಚ್ಚುವ ಕೆಲಸ ಕಲ್ಬುರ್ಗಿಯಿಂದ ಆರಂಭಿಸಲಿ ಎಂದು ಸರ್ಕಾರ ವಿರುದ್ಧ ಗುಡುಗಿದರು.
ಇಡೀ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಸರ್ಕಾರಿ ಹಾಗೂ ಖಾಸಗಿ ಆಸ್ತಿ ಹಾಳು ಮಾಡಿದೆ. ಜನ ಜಾನುವಾರುಗಳ ಮೇವು ಕೂಡ ಪರಿಣಾಮ ಆಗಿದೆ. ರೈತರ ಮೇಲೆ ಮಳೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಆಗಸ್ಟ್ ತಿಂಗಳಲ್ಲಿ ಬಾರಿ ಮಳೆ ಆಗಿದೆ. 1ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಉದ್ದು ಹೆಸರು ಮತ್ತಿತರ ಬೆಳೆಗಳು ಹಾಳಗಿದೆ ಎಂದು ತಿಳಿಸಿದರು.