Bele parihara-250 ಕೋಟಿ ಬೆಳೆಹಾನಿ ಪರಿಹಾರ ಬಿಡುಗಡೆ,ವಾರದೊಳಗೆ ರೈತರ ಖಾತೆಗೆ ಹಣ ಜಮಾ
<ಬೆಳೆ ಪರಿಹಾರ> <ಬೆಳೆ ಹಾನಿ> <Bele hani> <Bele parihara> <bele> <parihara payment> <input subsidy for crop loss>
Bele parihara-250 ಕೋಟಿ ಬೆಳೆಹಾನಿ ಪರಿಹಾರ ಬಿಡುಗಡೆ,ವಾರದೊಳಗೆ ರೈತರ ಖಾತೆಗೆ ಹಣ ಜಮಾ
ಮುಂಗಾರಿನ ಬೆಳೆ ಹಾನಿಗೆ ಎನ್‌ಡಿಆರ್‌ಎಫ್‌ನ ನಿಯಮದಂತೆ, ಪ್ರತಿ ಹೆಕ್ಟೇರ್‌ಗೆ 8500 ರೂ. ಪರಿಹಾರ ನೀಡಬೇಕಿತ್ತು. ಆದರೆ, ಕರ್ನಾಟಕದಲ್ಲಿ ಹಲವು ಜಿಲ್ಲೆಗಳು ಅತಿವೃಷ್ಟಿಗೆ ತುತ್ತಾಗಿದ್ದವು. ಸತತ ಮಳೆಯಿಂದ ಬೆಳೆ ಹಾಳಾಗಿರುವುದನ್ನು ಸೆ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದಾಗಿ ತಮ್ಮ ಸಂಪುಟದ ಸಚಿವರೊಂದಿಗೆ ವೀಕ್ಷಣೆ ಮಾಡಿದ್ದರು. ನಂತರ ಎನ್‌ಡಿಆರ್‌ಎಫ್ ಪರಿಹಾರದ ಜತೆ ಪ್ರತಿ ಹೆಕ್ಟೇರ್‌ಗೆ 8,500 ರೂ. ಹೆಚ್ಚಿನ ಪರಿಹಾರ ಘೋಷಣೆ ಮಾಡಿ ಹೋಗಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪರಿಹಾರ ಬಂದಿದೆ. ಇನ್ನೊಂದು ಕಂತಿನಲ್ಲಿಯೂ ಸುಮಾರು 250 ಕೋಟಿ ರೂ. ಪರಿಹಾರ ಬರುವ ಅಂದಾಜಿದೆ.
ಬೆಳೆಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service89/PaymentDetailsReport.aspx
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,payment Success cases select ಮಾಡಿ Get reports ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಈ ಕೆಳಗಿನಂತೆ ಪರಿಹಾರ ಯಶಸ್ಸಿನ ಪ್ರಕರಣಗಳ ಪಟ್ಟಿ ದೊರೆಯಲಿದೆ
ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾದ ಮುಂಗಾರಿನ ಬೆಳೆಗೆ ಪರಿಹಾರವಾಗಿ ಮೊದಲ ಕಂತಿನಲ್ಲಿ ಜಿಲ್ಲೆಗೆ 268 ಕೋಟಿ ರೂ. ಮಂಜೂರಾಗಿದೆ. ಕನಿಷ್ಠ ಒಂದು ಹೆಕ್ಟೇರ್ ಖುಷ್ಕಿ ಜಮೀನಿನ ಬೆಳೆ ಹಾಳಾದ ಪ್ರತಿ ರೈತರ ಖಾತೆಗೆ 8,500 ರೂ. ಹಣ ಶೀಘ್ರ ಬರಲಿದೆ.
ಮುಂಗಾರಿನ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆ ಹಾಗೂ ಭೀಮೆಯ ನೆರೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿತ್ತು. ನಂತರ ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆಯಲ್ಲಿ ಸುಮಾರು 3.07 ಲಕ್ಷ ಹೆಕ್ಟೇರ್ ಬೆಳೆ ಹಾಳಾಗಿದೆ ಎಂದು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದವು. ಅದರ ಆಧಾರದ ಮೇಲೆ 4,15,989 ರೈತರಿಗೆ ಮೊದಲ ಹಂತದಲ್ಲಿ ಸುಮಾರು 268.33 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಯೋಗದಲ್ಲಿ ಮೊದಲ ಹಂತದ ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನುಳಿದಂತೆ ಎರಡನೇ ಹಂತದ ಹೆಚ್ಚುವರಿ ಪರಿಹಾರವು ಕೂಡ ಶೀಘ್ರ ಬರಲಿದೆ ಎನ್ನುತ್ತಾರೆ ಅಧಿಕಾರಿಗಳು.
ವಾರದೊಳಗೆ ಖಾತೆಗೆ
ಬೆಳೆ ಪರಿಹಾರಕ್ಕೆ ಆಯಾ ತಾಲೂಕುಗಳಲ್ಲಿ ರೈತರ ಅಂತಿಮ ಪಟ್ಟಿ ಪರಿಷ್ಕರಣೆ ಮತ್ತು ತಹಸೀಲ್ದಾರ್ ಅಪ್ರೂವಲ್ ಕೆಲಸ ನಡೆದಿದೆ. ಎಲ್ಲ ತಾಲೂಕುಗಳಲ್ಲಿ ಅಪ್ರೂವಲ್ ಆದ ಕೂಡಲೇ ರೈತರ ಖಾತೆಗೆ ಪರಿಹಾರ ಹಣದ ವರ್ಗಾವಣೆ ಶುರುವಾಲಿದೆ. ಕನಿಷ್ಠ ಒಂದು ವಾರದೊಳಗೆ ಎಲ್ಲ ಪ್ರಕ್ರಿಯೆ ಮುಗಿದು ಹಣ ಜಮಾ ಶುರುವಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

