Bele parihara-ನನ್ನ ಖಾತೆಗೆ 7,000 ಬೆಳೆ ಪರಿಹಾರ ಜಮಾ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ

<Bele hani> <Bele parihara> <input subsidy for crop loss> <crop loss> <ಬೆಳೆ ಹಾನಿ> <ಬೆಳೆ ಪರಿಹಾರ>

Bele parihara-ನನ್ನ ಖಾತೆಗೆ 7,000 ಬೆಳೆ ಪರಿಹಾರ ಜಮಾ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ

Bele parihara-ರಾಜ್ಯದ 27 ಜಿಲ್ಲೆಗಳ 14.24 ಲಕ್ಷ ರೈತರಿಗೆ ರಾಜ್ಯ ಸರ್ಕಾರ ₹1,033.60 ಕೋಟಿ ಬೆಳೆಹಾನಿ ಪರಿಹಾರ

ಮುಂಗಾರು ಹಂಗಾಮಿನಲ್ಲಾದ ಅತಿವೃಷ್ಟಿಯಿಂದ ಬೆಳೆನಷ್ಟ ಅನುಭವಿಸಿದ 27 ಜಿಲ್ಲೆಗಳ 14.24 ಲಕ್ಷ ರೈತರಿಗೆ ರಾಜ್ಯ ಸರ್ಕಾರ ₹1,033.60 ಕೋಟಿ ಪರಿಹಾರ ನೀಡಿದ್ದು, ಎಲ್ಲ ರೈತರ ಬ್ಯಾಂಕ್‌ ಖಾತೆಗಳಿಗೆ 24 ಗಂಟೆಗಳಲ್ಲಿ ಈ ಮೊತ್ತ ಜಮೆಯಾಗಲಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ರಾಜ್ಯ ವಿಪತ್ತು ನಿರ್ವಹಣಾ ನಿಧಿಯ (ಎಸ್‌ಡಿಆರ್‌ಎಫ್‌) ₹1,218 ಕೋಟಿ ಮೊತ್ತದ ಹೊರತಾಗಿ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹8,500 ಹೆಚ್ಚುವರಿ ಪರಿಹಾರ ಘೋಷಿಸಿದೆ. ಈ ವಿಶೇಷ ಪ್ಯಾಕೇಜ್‌ ವಿತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಂಗಾರಿನಲ್ಲಿ 82.56 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಜೂನ್‌ನಿಂದ ಸೆಪ್ಟಂಬರ್‌ ಅವಧಿಯಲ್ಲಿನ ಅತಿವೃಷ್ಟಿಯಿಂದ 14.58 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿತ್ತು. ₹10,748 ಕೋಟಿ ಹಾನಿ ಅಂದಾಜಿಸಲಾಗಿತ್ತು. ಮುಖ್ಯವಾಗಿ ತೊಗರಿ 5.36 ಲಕ್ಷ ಹೆಕ್ಟೇರ್‌, ಹೆಸರು ಕಾಳು 2.63 ಲಕ್ಷ ಹೆಕ್ಟೇರ್‌, ಹತ್ತಿ 2.68 ಲಕ್ಷ ಹೆಕ್ಟೇರ್‌ ಹಾಗೂ ಮೆಕ್ಕೆಜೋಳ 1.21 ಲಕ್ಷ ಹೆಕ್ಟೇರ್‌ ಹಾನಿಯಾಗಿರುವುದು ಜಂಟಿ ಸಮೀಕ್ಷೆಯಲ್ಲಿ ದೃಢಪಟ್ಟಿತ್ತು’ ಎಂದರು.

ಎಸ್‌ಡಿಆರ್‌ಎಫ್‌ ಮಾನದಂಡಗಳ ಪ್ರಕಾರ ಗರಿಷ್ಠ ಎರಡು ಹೆಕ್ಟೇರ್‌ಗೆ ಸೀಮಿತವಾಗಿ 14.24 ಲಕ್ಷ ರೈತರಿಗೆ ₹1,218.03 ಕೋಟಿ ಪರಿಹಾರ ವಿತರಿಸಲಾಗಿದೆ. ಈಗ ನೀಡುತ್ತಿರುವ ಹೆಚ್ಚುವರಿ ಪರಿಹಾರ ₹1,033.60 ಕೋಟಿ ಸೇರಿ ಒಟ್ಟು ₹2,251.63 ಕೋಟಿ  ನೀಡಿದಂತಾಗುತ್ತದೆ.

Bele parihara-ನನ್ನ ಖಾತೆಗೆ 7,000 ಬೆಳೆ ಪರಿಹಾರ ಜಮಾ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ

https://play.google.com/store/apps/details?id=com.dbtkarnataka

ನಂತರ ನಿಮ್ಮ ಆಧಾರ್ ನಂಬರ್(Aadhaar number) ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Varify OTP ಮೇಲೆ ಕ್ಲಿಕ್ ಮಾಡಿ

ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ನಂತರ payment status ಮೇಲೆ ಕ್ಲಿಕ್ ಮಾಡಿ

ನಂತರ input subsidy for croploss ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಇಲ್ಲಿಯವರೆಗೂ ಜಮಾ ಆದ ಬೆಳೆಹಾನಿ ಪರಿಹಾರ(Bele parihara)ಮಾಹಿತಿ ಸಿಗಲಿದೆ.