Bele parihara rejected list-ಇನ್ನೂ 60 ರಿಂದ 70% ರೈತರಿಗೆ ತಲುಪದ ಬೆಳೆಪರಿಹಾರ,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
ರಾಜ್ಯ ಸರ್ಕಾರ ಒಟ್ಟು 34.50 ಲಕ್ಷ ರೈತರಿಗೆ ಬೆಳೆ ನಷ್ಟ ಪರಿಹಾರ ಕೊಟ್ಟಂತಾಗಲಿದೆ. ಆದರೆ ಶೇ.60 ರಿಂದ 70 ರೈತರು ಬಿಟ್ಟು ಹೋಗಿದ್ದಾರೆ.

Bele parihara rejected list-ಇನ್ನೂ 60 ರಿಂದ 70% ರೈತರಿಗೆ ತಲುಪದ ಬೆಳೆಪರಿಹಾರ
ರಾಜ್ಯ ಸರ್ಕಾರ ಒಟ್ಟು 34.50 ಲಕ್ಷ ರೈತರಿಗೆ ಬೆಳೆ ನಷ್ಟ ಪರಿಹಾರ ಕೊಟ್ಟಂತಾಗಲಿದೆ. ಆದರೆ ಶೇ.60 ರಿಂದ 70 ರೈತರು ಬಿಟ್ಟು ಹೋಗಿದ್ದಾರೆ. ಪರಿಹಾರ ಪಡೆದವರಿಗಿಂತ ವಂಚಿತರೇ ಹೆಚ್ಚು ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಪ್ರತಿ ಹೆಕ್ಟೇರ್ ಖುಷ್ಕಿ ಬೆಳೆಗೆ 8,300 ರೂ., ನೀರಾವರಿ- 17,000 ತೋಟಗಾರಿಕೆ ಬೆಳೆಗೆ 22,500 ರೂ. ನಿಗದಿಪಡಿಸಿ, ಗರಿಷ್ಠ ಎರಡು ಹೆಕ್ಟೇರ್ಗೆ ನೀಡಿದ್ದು, ರೈತರು ಹೂಡಿದ ಬಂಡವಾಳಕ್ಕೆ ಹೋಲಿಸಿದರೆ ಭಿಕ್ಷೆ ಹಾಕಿದಂತಿದೆ. ಕೇಂದ್ರದ ಜತೆಗೆ ರಾಜ್ಯ ಸರ್ಕಾರವೂ ತನ್ನ ಪಾಲಿನ ಮೊತ್ತ ಸೇರಿಸಿದ್ದರೆ ಒಂದಿಷ್ಟು ಪ್ರಯೋಜನವಾಗುತ್ತಿತ್ತು. ಕಿಸಾನ್ ಸಮ್ಮಾನ್ ನಿಧಿಯಡಿ 4000 ರೂ. ಕೊಡುವುದನ್ನು ಮುಂದುವರಿಸಿದ್ದರೆ ಕಷ್ಟ ಕಾಲದಲ್ಲಿ ಆಸರೆಯಾಗುತ್ತಿತ್ತು ಎನ್ನುವುದು ರೈತರ ವೇದನೆಯಾಗಿದೆ.
ತಿರಸ್ಕೃತ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service89/PaymentDetailsReport.aspx
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,payment failed cases select ಮಾಡಿ Get reports ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಕೆಳಗಿನಂತೆ ಪರಿಹಾರ ವಿಫಲ ಪ್ರಕರಣಗಳ ಪಟ್ಟಿ ದೊರೆಯಲಿದೆ
ಅದೇ ರೀತಿ payment Success cases select ಮಾಡಿ Get reports ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಕೆಳಗಿನಂತೆ ಪರಿಹಾರ ಯಶಸ್ಸಿನ ಪ್ರಕರಣಗಳ ಪಟ್ಟಿ ದೊರೆಯಲಿದೆ