Bele vime-ಈ ಜಿಲ್ಲೆಯ 71,177 ರೈತರಿಗೆ 156.14 ಲಕ್ಷ ಬೆಳೆ ವಿಮೆ ಬಿಡುಗಡೆ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ
2226 ರೈತರ ಖಾತೆಗೆ ಈಗಾಗಲೇ ಬೆಳೆ ವಿಮೆ ಪರಿಹಾರ ಜಮೆ ಆಗಿದೆ. ಹಿಂದಿನ 2 ವರ್ಷಗಳಿಗಿಂತ ಈ ವರ್ಷ ಅಧಿಕವಾಗಿ ಬೆಳೆ ವಿಮೆ(bele vime) ಮೊತ್ತವು ರೈತರ ಖಾತೆಗೆ ಜಮೆ ಆಗುತ್ತಿದೆ.

Bele vime-ಈ ಜಿಲ್ಲೆಯ 71,177 ರೈತರಿಗೆ 156.14 ಲಕ್ಷ ಬೆಳೆ ವಿಮೆ ಬಿಡುಗಡೆ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ
ತೋಟಗಾರಿಕೆ ಬೆಳೆಗಳಿಗೆ 2023-24ನೇ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾದ ಬೆಳೆ ನಷ್ಟಕ್ಕೆ 156.14 ಲಕ್ಷ ರೂ. ಬೆಳೆ ವಿಮೆ (crop Insurance) ಪರಿಹಾರ ಬಿಡುಗಡೆಯಾಗಿದೆ. ಡಿ.2ರಂದು ರೈತರ ಖಾತೆಗಳಿಗೆ ವಿಮೆ ಹಣ ಜಮಾ ಆಗಲಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಡಿಕೆ, ಮಾವು, ಮೆಣಸು ಮತ್ತು ಶುಂಠಿ ಬೆಳೆಗಳಿಗೆ 73,271 ರೈತರು ವಿಮೆ ಪಾವತಿಸಿದ್ದರು. ಅದರಲ್ಲಿ 71,177 ರೈತರಿಗೆ ವಿಮೆ ಪರಿಹಾರ ಬಂದಿದೆ. ಅಡಿಕೆ ವಿಮೆ ಮಾಡಿಸಿದ 68,951 ರೈತರಿಗೆ ಸೋಮವಾರದಿಂದ ಅವರ ಖಾತೆಗಳಿಗೆ ನೇರವಾಗಿ ಹಣ ಬಿಡುಗಡೆಯಾಗುತ್ತದೆ. ಮಾವು, ಮೆಣಸು ಮತ್ತು ಶುಂಠಿ ಬೆಳೆದ 2226 ರೈತರ ಖಾತೆಗೆ ಈಗಾಗಲೇ ಬೆಳೆ ವಿಮೆ ಪರಿಹಾರ ಜಮೆ ಆಗಿದೆ. ಹಿಂದಿನ 2 ವರ್ಷಗಳಿಗಿಂತ ಈ ವರ್ಷ ಅಧಿಕವಾಗಿ ಬೆಳೆ ವಿಮೆ(bele vime) ಮೊತ್ತವು ರೈತರ ಖಾತೆಗೆ ಜಮೆ ಆಗುತ್ತಿದೆ.
ಹಾಗಾಗರೆ ನಿಮ್ಮ ಜಮಾ (Belevime hana jama)ಸ್ಟೇಟಸ್ ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://samrakshane.karnataka.gov.in/
ನಂತರ ವರ್ಷದ ಆಯ್ಕೆ "2023-24" ಮತ್ತು ಋುತು "Kharif
" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ
Farmer ಕಾಲಂನಲ್ಲಿ "Check status." ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಆಧಾರ್ ನಂಬರ್(Aadhaar number) ಅಥವಾ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ
(ಸೂಚನೆ-ಬೆಳೆವಿಮೆ/cropinsurance ಕಟ್ಟಿದ ರಶೀದಿ ಕಳೆದಿದ್ದರೆ ಅಥವಾ Acknowledgment number ಗೊತ್ತಿಲ್ಲದಿದ್ದರೆ,ಮೊಬೈಲ್ ನಂಬರ್ select ಮಾಡಿ,ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು)
ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.