Bele vime 2024-25 ನೇ ಸಾಲಿನ 23 ಲಕ್ಷ ರೈತರ ಖಾತೆಗೆ 1449 ಕೋಟಿ ಬೆಳೆವಿಮೆ ಪರಿಹಾರ ಜಮಾ,ಜಿಲ್ಲಾವಾರು ಬೆಳೆವಿಮೆ ಮಾಹಿತಿ
Bele vime 2024-25 ನೇ ಸಾಲಿನ 23 ಲಕ್ಷ ರೈತರ ಖಾತೆಗೆ 1449 ಕೋಟಿ ಬೆಳೆವಿಮೆ ಪರಿಹಾರ ಜಮಾ,ಜಿಲ್ಲಾವಾರು ಬೆಳೆವಿಮೆ ಮಾಹಿತಿ

Bele vime 2024-25 ನೇ ಸಾಲಿನ 23 ಲಕ್ಷ ರೈತರ ಖಾತೆಗೆ 1449 ಕೋಟಿ ಬೆಳೆವಿಮೆ ಪರಿಹಾರ ಜಮಾ,ಜಿಲ್ಲಾವಾರು ಬೆಳೆವಿಮೆ ಮಾಹಿತಿ
2024-25ನೇ ಸಾಲಿನ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಹಾನಿಗೆ ಬೆಳೆ ವಿಮೆ ಮಂಜೂರಾಗಿದ್ದು, ರಾಜ್ಯಕ್ಕೆ 1,449 ಕೋಟಿ ರೂ. ಬಿಡುಗಡೆಯಾಗಿದೆ. ಕಲಬುರಗಿ ಹಾಗೂ ಗದಗ ಜಿಲ್ಲೆಗೆ ಬಂಪರ್ ಪರಿಹಾರ ದೊರಕಿದೆ.
ಕಳೆದ ಸಾಲಿನ ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆಗಳಾದ ತೊಗರಿ, ಭತ್ತ, ರಾಗಿ, ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಹೆಸರು, ನೆಲಗಡಲೆ ಮುಂತಾದ ಬೆಳೆಗಳಿಗೆ ಬೆಳೆವಿಮೆ ಮಂಜೂರಾಗಿದೆ.
ಇದರಲ್ಲಿ ಶೇ. ಅರ್ಧಕ್ಕಿಂತ ಹೆಚ್ಚಿನ ಹಣ ಈಗಾಗಲೇ ರೈತರ ಖಾತೆಗಳಿಗೆ ಜಮೆ ಆಗಿದೆ. ಕಳೆದ ಹಲವಾರು ವರ್ಷಗಳಿಂದ 1,400ರಿಂದ 1,600 ಕೋಟಿ ರೂ. ಅಂದಾಜಿನಲ್ಲಿ ರಾಜ್ಯಕ್ಕೆ ಬೆಳೆವಿಮೆ ಬಿಡುಗಡೆಯಾಗುತ್ತಿದೆ. ಅದೇ ರೀತಿ 2024-25ನೇ ಸಾಲಿನ ಮಂಜೂರಾತಿ ಆಗಿರುವ ಒಟ್ಟಾರೆ ಬೆಳೆ ವಿಮೆ ಪರಿಹಾರದಲ್ಲಿ ಸಿಂಹಪಾಲು ಕಲಬುರಗಿ ಹಾಗೂ ಗದಗ ಜಿಲ್ಲೆ ಪಡೆದಿರುವುದು ಗಮನಾರ್ಹ ಸಂಗತಿಯಾಗಿದೆ.
ಕಲಬುರಗಿಗೆ 3 ಪಟ್ಟು ಹೆಚ್ಚಳ
ಕಲಬುರಗಿ ಜಿಲ್ಲೆಗೆ 656 ಕೋಟಿ ರೂ., ಗದಗ ಜಿಲ್ಲೆಗೆ 242 ಕೋ.ರೂ., ಹಾವೇರಿಗೆ 95 ಕೋ. ರೂ., ವಿಜಯಪುರಕ್ಕೆ 97 ಕೋ. ರೂ., ಧಾರವಾಡಕ್ಕೆ 23 ಕೋ. ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದೆ. ಗಮನಾರ್ಹ ಸಂಗತಿ ಎಂದರೆ 2023-24ನೇ ಸಾಲಿನಲ್ಲಿ ಕಲಬುರಗಿಗೆ 189 ಕೋ. ರೂ. ಹಾಗೂ ಹಾವೇರಿಗೆ 400 ಕೋ. ರೂ. ಬೆಳೆವಿಮೆ ಬಿಡುಗಡೆಯಾಗಿತ್ತು. ಗದಗ ಹಾಗೂ ಹಾವೇರಿ ಜಿಲ್ಲೆಗೆ ಸತತವಾಗಿ ಕಳೆದ ಒಂದೂವರೆ ದಶಕದಿಂದ 100 ಕೋಟಿ ರೂ.ಗೂ ಅಧಿಕ ಬೆಳೆವಿಮೆ ಬಿಡುಗಡೆಯಾಗುತ್ತಲೇ ಬರುತ್ತಿದೆ.
ಕಳೆದ ಮಾರ್ಚ್‌ನಲ್ಲೇ ಮುಂಗಾರು ಹಂಗಾಮಿನ ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ ಸೇರಿ ಇತರ ಬೆಳೆಗಳಿಗೆ ಬೆಳೆ ವಿಮೆ ಪರಿಹಾರ ಮಂಜೂರಾಗಿದ್ದು, ಅಕಾಲಿಕ ಹಾಗೂ ಕೊರತೆ ಮಳೆಯಿಂದ ಹಾನಿಗೀಡಾದ ರೈತರಿಗೆ ಈ ಬೆಳೆ ಪರಿಹಾರ ನಿಜಕ್ಕೂ ಆಸರೆಯಾಗುವಂತೆ ಮಾಡಿದೆ. ರಾಜ್ಯದಲ್ಲಿ 1,449 ಕೋಟಿ ರೂ. ಬೆಳೆವಿಮೆ ಪರಿಹಾರ 23 ಲಕ್ಷ ರೈತರಿಗೆ ದೊರಕಲಿದೆ.
ಯಾವ ಜಿಲ್ಲೆಗೆ ಎಷ್ಟು ಪರಿಹಾರ?
ಬೆಂಗಳೂರು ಗ್ರಾಮಾಂತರ 79 ಲಕ್ಷ ರೂ., ಬೆಂಗಳೂರು ನಗರ 4 ಲಕ್ಷ ರೂ., ದಕ್ಷಿಣ ಕನ್ನಡ 2.40 ಲಕ್ಷ ರೂ., ಧಾರವಾಡ 23 ಕೋ. ರೂ., ಹಾವೇರಿ 95 ಕೋ. ರೂ., ಉತ್ತರ ಕನ್ನಡ 1 ಕೋ. ರೂ., ಚಿಕ್ಕಬಳ್ಳಾಪುರ 38 ಕೋ. ರೂ., ಕಲಬುರಗಿ 656 ಕೋ.ರೂ., ಉಡುಪಿ 3 ಲಕ್ಷ ರೂ., ಚಿಕ್ಕಮಗಳೂರು 48 ಲಕ್ಷ ರೂ., ಚಿತ್ರದುರ್ಗ 33 ಕೋ. ರೂ., ದಾವಣಗೆರೆ 44 ಕೋ. ರೂ. ಗದಗ 242 ಕೋ. ರೂ., ಹಾಸನ 26 ಕೋ. ರೂ., ಕೊಡಗು 23 ಲಕ್ಷ ರೂ., ಕೊಲಾರ 1 ಕೋ. ರೂ., ರಾಮನಗರ 2 ಕೋ. ರೂ., ಶಿವಮೊಗ್ಗ 13 ಕೋ. ರೂ., ತುಮಕೂರು 1 ಕೋ. ರೂ., ವಿಜಯನಗರ 70 ಕೋ. ರೂ., ವಿಜಯಪುರ 97 ಕೋ. ರೂ., ಬಳ್ಳಾರಿ 32 ಲಕ್ಷ ರೂ., ಕೊಪ್ಪಳ 34 ಕೋ. ರೂ., ಮೈಸೂರು 39 ಲಕ್ಷ ರೂ., ಯಾದಗಿರಿ 18 ಕೋ. ರೂ., ಬಾಗಲಕೋಟೆ 14 ಕೋ. ರೂ., ಬೆಳಗಾವಿ 24 ಕೋ. ರೂ., ಬೀದರ್ 13 ಕೋ. ರೂ., ಚಾಮರಾಜನಗರ 2 ಕೋ.ರೂ., ಮಂಡ್ಯ 3 ಕೋ. ರೂ., ರಾಯಚೂರು 3 ಕೋ. ರೂ., ಒಟ್ಟು 1,449 ಕೋ. ರೂ.
ನಿಮ್ಮ ಜಮಾ (Belevime hana jama)ಸ್ಟೇಟಸ್ ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://samrakshane.karnataka.gov.in/
ನಂತರ ವರ್ಷದ ಆಯ್ಕೆ "2023-24" ಮತ್ತು ಋುತು "Kharif
" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ
Farmer ಕಾಲಂನಲ್ಲಿ "Check status." ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಆಧಾರ್ ನಂಬರ್(Aadhaar number) ಅಥವಾ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ
(ಸೂಚನೆ-ಬೆಳೆವಿಮೆ/cropinsurance ಕಟ್ಟಿದ ರಶೀದಿ ಕಳೆದಿದ್ದರೆ ಅಥವಾ Acknowledgment number ಗೊತ್ತಿಲ್ಲದಿದ್ದರೆ,ಮೊಬೈಲ್ ನಂಬರ್ select ಮಾಡಿ,ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು)
ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.