Bele vime-ಈ ಜಿಲ್ಲೆಯ ರೈತರ ಖಾತೆಗೆ ಬಾಕಿ ಬೆಳೆವಿಮೆ ಹಣ ಜಮಾ
ರಾಜ್ಯ ಸರಕಾರ ಮಳೆ ಮಾಪನ ಕೇಂದ್ರ ಸಹಿತ ಹಲವು ಸಂಗತಿಗಳ ನಿರ್ವಹಣೆ ಸರಿಯಾಗಿ ಮಾಡದ ಪರಿಣಾಮ ಪರಿಹಾರಕ್ಕೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸುವಂತೆ ಆಗಿತ್ತು. ಇನ್ನು 3-4 ದಿನದಲ್ಲಿ ಹಣ ಬಂದು ರೈತರ ಖಾತೆಗೆ ಜಮಾ

Bele vime-ಈ ಜಿಲ್ಲೆಯ ರೈತರ ಖಾತೆಗೆ ಬಾಕಿ ಬೆಳೆವಿಮೆ ಹಣ ಜಮಾ
ಹವಾಮಾನ ಆಧರಿತ ಬೆಳೆ ವಿಮೆಯಿಂದ ವಂಚಿತಗೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ರೈತ ಫಲಾನುಭವಿಗಳಿಗೆ ಖುಷಿ ಸುದ್ದಿಯೊಂದನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದ್ದಾರೆ.
ಜಿಲ್ಲೆಯ ಕೆಲ ಪಂಚಾಯ್ ವ್ಯಾಪ್ತಿಯ ರೈತರಿಗಷ್ಟೇ ಸುಮಾರು 10 ಕೋಟಿ ಅಷ್ಟು ಬೆಳೆ ವಿಮೆ ಬಂದಿದ್ದು, ಉಳಿದ ಬಹುಪಾಲು ಫಲಾನುಭವಿ ರೈತರಿಗೆ ತಾಂತ್ರಿಕ ಕಾರಣ ನೆಪವೊಡ್ಡಿ ವಿಮಾ ಕಂಪನಿ ವಿಮಾ ಪರಿಹಾರ ಮೊತ್ತ ಜಮಾ ಮಾಡಿರಲಿಲ್ಲ. ಕೇಂದ್ರ ಸರಕಾರದ ಬಳಿ ಜಿಲ್ಲೆಯ ರೈತರ ಸಮಸ್ಯೆ ಪ್ರಸ್ತಾಪಿಸಿದ್ದೆ. ಕಾಲಮಿತಿಯ ಗಡುವು ನೀಡಿ ಕೇಂದ್ರ ಸರಕಾರವೂ 3 ಸಲ ವಿಮಾ ಕಂಪನಿಗೆ ಆದೇಶ ಮಾಡಿತ್ತು. ಆದರೆ ವಿಮಾ ಪಾವತಿಗೆ ರಾಜ್ಯ ಸರಕಾರದಿಂದ ಮಾಹಿತಿ ಸಮರ್ಪಕವಾಗಿ ಸಿಕ್ಕಿಲ್ಲ ಎಂದು ವಿಮಾ ಕಂಪನಿ ಪುನಃ ದೂರುತ್ತಲೇ ಇತ್ತು. ಕೇಂದ್ರದ ಆದೇಶಕ್ಕೆ ಅಂತೂ ಮಣಿದ ವಿಮಾ ಕಂಪನಿ ಎ.29ರ ಮಂಗಳವಾರ ದಿಂದ ಜಿಲ್ಲೆಯ ರೈತರಿಗೆ ವಿಮಾ ಪರಿಹಾರ ಮೊತ್ತ ಪಾವತಿಸಲು ಆರಂಭಿಸಿದೆ ಎಂದು ಸಂಸದ ಕಾಗೇರಿ ವಿವರಿಸಿದ್ದಾರೆ.
ರಾಜ್ಯ ಸರಕಾರ ಮಳೆ ಮಾಪನ ಕೇಂದ್ರ ಸಹಿತ ಹಲವು ಸಂಗತಿಗಳ ನಿರ್ವಹಣೆ ಸರಿಯಾಗಿ ಮಾಡದ ಪರಿಣಾಮ ಪರಿಹಾರಕ್ಕೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸುವಂತೆ ಆಗಿತ್ತು. ಇನ್ನು 3-4 ದಿನದಲ್ಲಿ ಹಣ ಬಂದು ರೈತರ ಖಾತೆಗೆ ಜಮಾ ಆಗಲಿದೆ ಎಂದಿದ್ದಾರೆ.
ರೈತರಿಗೆ ನ್ಯಾಯ ಕೊಡಿಸಲು ನೆರವಾದ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್, ಕೇಂದ್ರದ ಅಧಿಕಾರಿಗಳನ್ನು ಹಾಗೂ ತಡವಾದರೂ ರೈತರಿಗೆ ನ್ಯಾಯ ಕೊಡಿಸಲು ಸಹಕಾರ ನೀಡಿದ ರಾಜ್ಯ ಸರಕಾರದ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ಮರಳಿ ಈ ಸಮಸ್ಯೆ ಆಗದಂತೆ ರಾಜ್ಯ ಸರಕಾರ ತಕ್ಷಣ ಕ್ರಮವಹಿಸಿ ಮಳೆ ಮಾಪನ ಕೇಂದ್ರ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದೂ ಸಂಸದ ಕಾಗೇರಿ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.
Bele vime-ಈ ಜಿಲ್ಲೆಯ 71,177 ರೈತರಿಗೆ 156.14 ಲಕ್ಷ ಬೆಳೆ ವಿಮೆ ಬಿಡುಗಡೆ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ
ತೋಟಗಾರಿಕೆ ಬೆಳೆಗಳಿಗೆ 2023-24ನೇ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾದ ಬೆಳೆ ನಷ್ಟಕ್ಕೆ 156.14 ಲಕ್ಷ ರೂ. ಬೆಳೆ ವಿಮೆ (crop Insurance) ಪರಿಹಾರ ಬಿಡುಗಡೆಯಾಗಿದೆ. ಡಿ.2ರಂದು ರೈತರ ಖಾತೆಗಳಿಗೆ ವಿಮೆ ಹಣ ಜಮಾ ಆಗಲಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಡಿಕೆ, ಮಾವು, ಮೆಣಸು ಮತ್ತು ಶುಂಠಿ ಬೆಳೆಗಳಿಗೆ 73,271 ರೈತರು ವಿಮೆ ಪಾವತಿಸಿದ್ದರು. ಅದರಲ್ಲಿ 71,177 ರೈತರಿಗೆ ವಿಮೆ ಪರಿಹಾರ ಬಂದಿದೆ. ಅಡಿಕೆ ವಿಮೆ ಮಾಡಿಸಿದ 68,951 ರೈತರಿಗೆ ಸೋಮವಾರದಿಂದ ಅವರ ಖಾತೆಗಳಿಗೆ ನೇರವಾಗಿ ಹಣ ಬಿಡುಗಡೆಯಾಗುತ್ತದೆ. ಮಾವು, ಮೆಣಸು ಮತ್ತು ಶುಂಠಿ ಬೆಳೆದ 2226 ರೈತರ ಖಾತೆಗೆ ಈಗಾಗಲೇ ಬೆಳೆ ವಿಮೆ ಪರಿಹಾರ ಜಮೆ ಆಗಿದೆ. ಹಿಂದಿನ 2 ವರ್ಷಗಳಿಗಿಂತ ಈ ವರ್ಷ ಅಧಿಕವಾಗಿ ಬೆಳೆ ವಿಮೆ(bele vime) ಮೊತ್ತವು ರೈತರ ಖಾತೆಗೆ ಜಮೆ ಆಗುತ್ತಿದೆ.
ಹಾಗಾಗರೆ ನಿಮ್ಮ ಜಮಾ (Belevime hana jama)ಸ್ಟೇಟಸ್ ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://samrakshane.karnataka.gov.in/
ನಂತರ ವರ್ಷದ ಆಯ್ಕೆ "2023-24" ಮತ್ತು ಋುತು "Kharif
" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ
Farmer ಕಾಲಂನಲ್ಲಿ "Check status." ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಆಧಾರ್ ನಂಬರ್(Aadhaar number) ಅಥವಾ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ
(ಸೂಚನೆ-ಬೆಳೆವಿಮೆ/cropinsurance ಕಟ್ಟಿದ ರಶೀದಿ ಕಳೆದಿದ್ದರೆ ಅಥವಾ Acknowledgment number ಗೊತ್ತಿಲ್ಲದಿದ್ದರೆ,ಮೊಬೈಲ್ ನಂಬರ್ select ಮಾಡಿ,ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು)
ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.