Bele vime-ಮಳೆಯಿಂದ ಬೆಳೆ ಹಾನಿಯಾಗಿ 72 ಗಂಟೆಯೊಳಗೆ ಈ ಕೆಲಸ ಮಾಡಿದವರಿಗೆ ಮಾತ್ರ ಜಮಾ ಆಗಲಿದೆ ಬೆಳೆವಿಮೆ

Crop insurance news-ಮಳೆಯಿಂದ ಬೆಳೆ ಹಾನಿಯಾಗಿ 72 ಗಂಟೆಯೊಳಗೆ ಈ ಕೆಲಸ ಮಾಡಿದವರಿಗೆ ಮಾತ್ರ ಜಮಾ ಆಗಲಿದೆ ಬೆಳೆವಿಮೆ

Bele vime-ಮಳೆಯಿಂದ ಬೆಳೆ ಹಾನಿಯಾಗಿ 72 ಗಂಟೆಯೊಳಗೆ ಈ ಕೆಲಸ ಮಾಡಿದವರಿಗೆ ಮಾತ್ರ ಜಮಾ ಆಗಲಿದೆ ಬೆಳೆವಿಮೆ
Bele vime-ಮಳೆಯಿಂದ ಬೆಳೆ ಹಾನಿಯಾಗಿ 72 ಗಂಟೆಯೊಳಗೆ ಈ ಕೆಲಸ ಮಾಡಿದವರಿಗೆ ಮಾತ್ರ ಜಮಾ ಆಗಲಿದೆ ಬೆಳೆವಿಮೆ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಉದ್ದೇಶಬೆಳೆ ವೈಫಲ್ಯದ ಆರ್ಥಿಕ ನಷ್ಟವನ್ನು ಕಡಿಮೆ ಮಾಡುವ ಮೂಲಕ, ಇದು ರೈತರ ಆದಾಯವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಮತ್ತು ರೈತರು ಸ್ಥಿರವಾದ ಆದಾಯವನ್ನು ಹೊಂದಿರುವಾಗ, ಅವರು ಉತ್ತಮ ಕೃಷಿ ಪದ್ಧತಿಗಳಲ್ಲಿ ಹೂಡಿಕೆ ಮಾಡಬಹುದು, ಇದು ಹಲವಾರು ಪ್ರಯೋಜನಗಳನ್ನು ತರುತ್ತದೆ. ಬೆಳೆ ಹಾನಿ/ನಷ್ಟದ ವಿರುದ್ಧ ರೈತರಿಗೆ ಆರ್ಥಿಕ ನೆರವು ನೀಡುವುದು.
ಸ್ಧಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ (Localized calamity) ಆಲೀಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ(ಇನಂಡೇಷನ್), ಮೇಘಸ್ಪೋಟ (Cloud burst) ಮತ್ತು ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಘಡ (Natural fire due to lightning) ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯುಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಯೋಜನೆಯಡಿ ಅವಕಾಶವಿರುತ್ತದೆ.
ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಗುಣವಾಗಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು.
ಇಂತಹ ಸ್ಧಳೀಯ ಗಂಡಾಂತರಗಳ ಕಾರಣದಿಂದ ಬೆಳೆ ನಷ್ಟಸಂಭವಿಸಿದರೆ, ಬೆಳೆ ವಿಮೆ ಮಾಡಿಸಿರುವ ರೈತರು ಬಗ್ಗೆನೇರವಾಗಿ ಸಂಬಂಧಪಟ್ಟ ಅನುಷ್ಠಾನಗೊಳಿಸುವ ವಿಮಾಸಂಸ್ಥೆಗಳ ಕಛೇರಿಗಳಿಗೆ ಅಥವಾ ಹಣಕಾಸು ಸಂಸ್ಧೆ ಅಥವಾ ಕೃಷಿ/ತೋಟಗಾರಿಕೆ ಇಲಾಖೆ ಮೂಲಕ ತಕ್ಷಣಸೂಚನೆ ನೀಡಬೇಕು.
ಇಂತಹ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸಬೇಕು.
ನಷ್ಟದ ಬಗೆಗಿನ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ವಿಮಾಸಂಸ್ಥೆಗಳು ಬೆಳೆ ನಷ್ಟವನ್ನು ನಿರ್ಧರಿಸುವುದಕ್ಕೆ ನಷ್ಟನಿರ್ಧಾರಕರನ್ನು ಸಂಬಂಧಪಟ್ಟ ಪ್ರದೇಶಕ್ಕೆ 48 ಗಂಟೆಯೊಳಗಾಗಿ ನಿಯೋಜಿಸುವುದು.
ವಿಮೆ ಸಂಸ್ಥೆಯಿಂದ ನೇಮಿಸಲ್ಪಟ್ಟ ನಷ್ಟ ನಿರ್ಧಾರಕರುಮತ್ತು ಸ್ಥಳೀಯ ತಾಲ್ಲೂಕು/ಹೋಬಳಿ ಮಟ್ಟದ ಕೃಷಿ ಮತ್ತುತೋಟಗಾರಿಕಾ ಇಲಾಖಾ ಅಧಿಕಾರಿಗಳು ಜಂಟಿಯಾಗಿ, ಹಾನಿಗೊಳಗಾದ ರೈತರ ಸಮ್ಮುಖದಲ್ಲಿ ಬೆಳೆ ನಷ್ಟನಿರ್ಧರಿಸಲಾಗುವುದು.
ಸದರಿ ಬೆಳೆ ನಷ್ಟದ ವರದಿಯನ್ನು ಜಿಲ್ಲೆಗಳ ಇಲಾಖಾಮುಖ್ಯಸ್ಥರು ಅನುಷ್ಟಾನ ವಿಮಾ ಸಂಸ್ಥೆಗಳಿಗೆ ನೇರವಾಗಿಸಲ್ಲಿಸಲು ಕ್ರಮ ಕೈಗೊಳ್ಳುವುದು.
1. Post Harvest Losses
ಯೋಜನೆಯಡಿ ಬೆಳೆ ಕಟಾವಿನ ನಂತರ ಬೆಳೆಯನ್ನುಜಮೀನಿನಲ್ಲೆ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ (Post Harvest Losses) ಕಟಾವು ಮಾಡಿದ ಎರಡುವಾರಗಳೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕಮಳೆಯಿಂದಾಗಿ ಬೆಳೆ ನಾಶವಾದರೆ ವೈಯುಕ್ತಿಕವಾಗಿ(Case to Case basis) ವಿಮಾ ಸಂಸ್ಧೆಯು ನಷ್ಟ ನಿರ್ಧಾರ ಮಾಡಿಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಪಡಿಸಲಾಗಿದೆ.
ಬೆಳೆ ವಿಮೆ ಮಾಡಿಸಿದ ರೈತರು ಯಾರಿಗೆ ಸಂಪರ್ಕಿಸಬೇಕು?

ಬೆಳೆ ವಿಮೆ ಮಾಡಿಸಿದ ರೈತರು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೋ ಆ ವಿಮಾ ಕಂಪನಿಗೆ ಸಂಪರ್ಕಿಸಬೇಕು. ಒಂದು ವೇಳೆ ವಿಮಾ ಕಂಪನಿಯ ನಂಬರ್‌ ಗೊತ್ತಿಲ್ಲದಿದ್ದರೆ ಬೆಳೆ ವಿಮೆ ಉಚಿತ ಸಹಾಯವಾಣಿ 1800 180 1551 ನಂಬರಿಗೆ ಕರೆ ಮಾಡಿ ನಿಮ್ಮ ಜಿಲ್ಲೆ ವಿಮಾ ಕಂಪನಿಯ ನಂಬ‌ರ್ ಪಡೆದು ಕರೆ ಮಾಡಬೇಕು.

ಬೆಳೆ ವಿಮೆ ಹಣ ಎಷ್ಟು ಜಮೆಯಾಗುತ್ತದೆ?

ಬೆಳೆ ವಿಮೆ ಮಾಡಿಸಿದ ನಂತರ ಬೆಳೆ ಎಷ್ಟು ಪ್ರಮಾಣದಲ್ಲಿ ಹಾಳಾಗಿದೆ ಹಾಗೂ ಬೆಳೆ ಯಾವ ಹಂತದಲ್ಲಿ ಹಾಳಾಗಿದೆ ಎಂಬುದನ್ನು ನಿರ್ಧರಿಸಿ ರೈತರಿಗೆ ವಿಮೆ ಹಣ ಪಾವತಿಸಲಾಗುವುದು.

Bele vime-ಇನ್ನು ಮುಂದೆ ವಾರದೊಳಗೆ ಬೆಳೆ ವಿಮೆ ಪರಿಹಾರ-ಕೃಷಿ ಸಚಿವ ಚೆಲುವರಾಯಸ್ವಾಮಿ

ವಾರದಲ್ಲಿ ವಿಮೆ ಹಣ ಜಮಾ: 'ಬೆಳೆ ವಿಮೆ' 
ಪರಿಹಾರ ಮೊತ್ತ ವಿಳಂಬವಾಗುತ್ತಿರುವುದಕ್ಕೆ ಹೆಚ್ಚಿನ ಕರೆಗಳ ಬಂದವು. ರಾಣೆಬೆನ್ನೂರು ತಾಲೂಕಿನ ಜೋಯಿಸರ ಹಳ್ಳಿಯ ಶಂಕರಪ್ಪ ರಾಮಪ್ಪ, ಕಲಬುರಗಿಯ ಬಾಬು ಸಾಬ್ ಪಾಟೀಲ್, ಶಿರಾ ತಾಲೂಕಿನ ತಿಮ್ಮರಾಜು, ವಿಜಯಪುರದ ಹನುಮಂತ, ರಾಯಚೂರು ಮಾನ್ವಿ ತಾಲೂಕಿನ ಮಿರಾಜುದ್ದೀನ್, ಗೌರಿಬಿದನೂರು ತಾಲೂಕಿನ ಸತೀಶ್ ಸೇರಿದಂತೆ ಇನ್ನೂ ಕೆಲವರು ಪ್ರಸ್ತಾಪಿಸಿದ ಬೆಳೆ ವಿಮೆ ಸೂಕ್ತ ಸಮಯಕ್ಕೆ ಬಾರದಿರುವ ವಿಚಾರಕ್ಕೆ ಸಚಿವರು ಸ್ಪಂದಿಸಿದರು. 



"ಸಮೀಕ್ಷೆ ನಡೆಸಿ ಬೆಳೆ ಹಾನಿಯಾಗಿರುವುದು ಖಾತರಿಯಾಗಷ್ಟೇ ಬೆಳೆ ವಿಮೆ ಪರಿಹಾರ ನೀಡಲಾಗುತ್ತದೆ. ಈಗಾಗಲೇ ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕಳೆದ ವರ್ಷದ ಬೆಳೆ ವಿಮೆ ಪರಿಹಾರ ವಾರರೊಳಗೆ ರೈತರ ಖಾತೆಗೆ ಜಮೆಯಾಗಲಿದೆ. ಕಲಬುರಗಿಯಲ್ಲಿ ಕಳೆದ ಅಕ್ಟೋಬ‌ರ್-ನವೆಂಬರ್ ನಲ್ಲಿ ಆದ ಬೆಳೆಹಾನಿಗೆ 600 ಕೋಟಿ ಪರಿಹಾರ ನೀಡಲಾಗಿದೆ ಎಂದು ಹೇಳಿದರು.

 ನಿಮ್ಮ ಜಮಾ (Belevime hana jama)ಸ್ಟೇಟಸ್ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://samrakshane.karnataka.gov.in/ 

ನಂತರ ವರ್ಷದ ಆಯ್ಕೆ "2023-24" ಮತ್ತು ಋುತು "Kharif

" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ

Farmer ಕಾಲಂನಲ್ಲಿ "Check status." ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್(Aadhaar number) ಅಥವಾ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ

(ಸೂಚನೆ-ಬೆಳೆವಿಮೆ/cropinsurance ಕಟ್ಟಿದ ರಶೀದಿ ಕಳೆದಿದ್ದರೆ ಅಥವಾ Acknowledgment number ಗೊತ್ತಿಲ್ಲದಿದ್ದರೆ,ಮೊಬೈಲ್ ನಂಬರ್ select ಮಾಡಿ,ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು)

ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.