Bele vime-ಇಲ್ಲಿಯವರೆಗೆ 43 ಲಕ್ಷ ರೈತರಿಗೆ 5534 ಕೋಟಿ ಬೆಳೆವಿಮೆ ಹಣ ಬಿಡುಗಡೆ-ಕೃಷಿ ಸಚಿವ ಚೆಲುವರಾಯಸ್ವಾಮಿ

<Bele vime> <Bele> <vime> <crop> <crop insurance> <pradan mantri fasal bheema yojana> <PMFBY> <ಬೆಳೆ> <ಬೆಳೆ ವಿಮೆ> <ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ>

Bele vime-ಇಲ್ಲಿಯವರೆಗೆ 43 ಲಕ್ಷ ರೈತರಿಗೆ 5534 ಕೋಟಿ ಬೆಳೆವಿಮೆ ಹಣ ಬಿಡುಗಡೆ-ಕೃಷಿ ಸಚಿವ ಚೆಲುವರಾಯಸ್ವಾಮಿ

Bele vime-ಇಲ್ಲಿಯವರೆಗೆ 43 ಲಕ್ಷ ರೈತರಿಗೆ 5534 ಕೋಟಿ ಬೆಳೆವಿಮೆ ಹಣ ಬಿಡುಗಡೆ-ಕೃಷಿ ಸಚಿವ ಚೆಲುವರಾಯಸ್ವಾಮಿ


 ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23 ರಿಂದ 2024-25ನೇ ಸಾಲಿನವರೆಗೆ ಒಟ್ಟು 13,728 ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 945 ರೈತರಿಗೆ ವಿವಿಧ ಕಾರಣಗಳಿಂದ ಬೆಳೆ ವಿಮೆ ಪರಿಹಾರ ಜಮೆಯಾಗಿರುವುದಿಲ್ಲ.

ಸಮಸ್ಯೆಗಳನ್ನು ಪರಿಹರಿಸಿ ಸರ್ಕಾರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬುಧವಾರ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಬೆಳೆವಿಮೆ ಪರಿಹಾರ ಬಾಕಿ ಇರುವ 945 ರೈತರ ಪೈಕಿ ಎನ್.ಪಿ.ಸಿ.ಐ ಸೀಡಿಂಗ್, ಆಧಾರ್ ಕಾರ್ಡ್ ನಿಷ್ಕ್ರೀಯತೆ, ಅಮಾನ್ಯವಾದ ಬ್ಯಾಂಕ್ ಖಾತೆ ಸೇರಿದಂತೆ ತಾಂತ್ರಿಕ ಕಾರಣಗಳಿಂದಾಗಿ ಒಟ್ಟು 133 ರೈತರಿಗೆ ರೂ.40.09 ಲಕ್ಷ ಪರಿಹಾರ ಹಣ ಜಮೆಯಾಗದೆ ಹಿಂದಿರುಗಿದೆ.

ಬೆಳೆ ಕಟಾವು ಇಳುವರಿ ಪ್ರಯೋಗ ವ್ಯತ್ಯಾಸದ ಹಿನ್ನಲೆಯಲ್ಲಿ 798 ಬೆಳೆ ಹೊಂದಾಣಿಕೆಯಾಗದೇ ಹಾಗೂ ಮಾರ್ಗಸೂಚಿಯನುಸಾರ ಬೆಳೆ ಕಟಾವು ಪ್ರಯೋಗಗಳ ಇಳುವರಿ ಲಭ್ಯವಿಲ್ಲದ ಕಾರಣ 14 ರೈತರಿಗೆ ಪರಿಹಾರ ಪಾವತಿ ಬಾಕಿಯಿದೆ. 2025-26ರ ಮುಂಗಾರು ಹಂಗಾಮಿನಲ್ಲಿ ಮಿಮೆ ಮಾಡಿಸುವ ರೈತರ ಸಂಖ್ಯೆ ಹೆಚ್ಚಾಗಿದ್ದು, ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 10,054 ರೈತರು ನೋಂದಾಯಿಸಿಕೊಂಡಿದ್ದಾರೆ. ಮಧ್ಯಂತರ ಬೆಳೆ ವಿಮೆ ನಷ್ಟ ಪರಿಹಾರದಡಿ ಒಟ್ಟು 9861 ರೈತರಿಗೆ ರೂ.906.32 ಲಕ್ಷಗಳ ಬೆಳೆ ವಿಮೆ ಪರಿಹಾರ ಲೆಕ್ಕಾಚಾರ ಮಾಡಲಾಗಿದ್ದು, ವಿಮಾ ಸಂಸ್ಥೆಯವರಿಂದ ಪರಿಹಾರ ಇತ್ಯರ್ಥ ಪ್ರಕ್ರಿಯೆಯಲ್ಲಿದೆ.

ಕಲಬುರಗಿ ಜಿಲ್ಲೆಗೆ ಮಧ್ಯಂತರ ಬೆಳೆ ವಿಮೆ ನಷ್ಟ ಪರಿಹಾರದಡಿ ರೂ.990 ಕೋಟಿ ಪರಿಹಾರವನ್ನು ನೀಡಲಾಗಿದೆ. ರಾಜ್ಯದ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ರೈತರಿಗೆ ಬೆಳೆಮಿಮೆ ನೊಂದಣಿಗೆ ಪ್ರೋತ್ಸಾಹಿಸಬೇಕು. ಇದರಿಂದ ರೈತರಿಗೆ ಯಾವುದೇ ನಷ್ಟವಿಲ್ಲ. ವಿಮೆ ಮೊತ್ತ ಶೇ.2 ರಷ್ಟು ಮಾತ್ರ ರೈತರು ಪಾವತಿಸಬೇಕು. ಉಳಿದ ಬೆಳೆ ವಿಮೆ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರ ನೋಂದಣಿಯಿಂದ ಪ್ರಾರಂಭವಾಗಿ ಪರಿಹಾರ ವಿತರಣೆಯವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಸಂರಕ್ಷಣೆ ಪೋರ್ಟಲ್ ಮೂಲಕವೇ ನಿರ್ವಹಿಸಲಾಗುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ವಿಶೇಷವಾಗಿ ಕಪ್ & ಕ್ಯಾಪ್ ಮಾದರಿಯಲ್ಲಿ ವಿಮೆ ಪರಿಹಾರವನ್ನು ನಿರ್ಧರಿಸಲು ಕ್ತಮ ಕೈಕೊಂಡಿರುವುದರಿಂದ ವಿಮೆ ಪರಿಹಾರ ವಿತರಣೆಯಲ್ಲಿ ಸುಧಾರಣೆಯನ್ನು ತರಲಾಗಿದೆ. ಈ ಕುರಿತು ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿರುವುದಲ್ಲದೇ, ಕ್ರಾಪ್ ಕಟಿಂಗ್ ಎಕ್ಸಪರಿಮೇಟ್ ಸರಿಯಾಗಿ ಹಾಗೂ ವೈಜ್ಞಾನಿಕವಾಗಿ ನಡೆಸಬೇಕೆಂದು ಸೂಚನೆ ನೀಡಲಾಗಿದ್ದರ ಪರಿಣಾಮ ರಾಜ್ಯದಲ್ಲಿ ಬೆಳೆ ವಿಮೆ ಯೋಜನೆಯನ್ನು ಅತ್ಯಂತ ಯಶ್ವಸಿಯಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು..

ಈ ಮೂರು ವರ್ಷಗಳಲ್ಲಿ ಎಲ್ಲಾ ಹಂಗಾಮುಗಳಲ್ಲಿ ರಾಜ್ಯದಲ್ಲಿ ಒಟ್ಟು 73 ಲಕ್ಷ ರೈತರು ವಿಮೆ ಹಣ ಪಾವತಿಸಿ ನೊಂದಾಯಿಸಿಕೊಂಡವರ ಪೈಕಿ ಶೇ ಅಂದಾಜು 60% ರಷ್ಟು ರೈತರು, 43 ಲಕ್ಷ ನೊಂದಾಯಿಸಿಕೊಂಡ ರೈತರಿಗೆ ಒಟ್ಟು 5534 ಕೋಟಿ ರೂಪಾಯಿಗಳ ವಿಮೆ ಪರಹಾರವನ್ನು ನೀಡಿ ರೈತರ ಸಂಕಷ್ಟದ ಸಮಯದಲ್ಲಿ ನಮ್ಮ ಸರ್ಕಾರ ರೈತರಿಗೆ ವಿಮೆ ಪರಿಹಾರ ನೀಡುವಲ್ಲಿ ಇತಿಹಾಸ ನಿರ್ಮಿಸಿದೆ ಎಂದು ಚಲುವರಾಯಸ್ವಾಮಿಯವರು ತಿಳಿಸಿದರು..

ಇನ್ನೂ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ, ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2022- 23 ನೇ ಸಾಲಿನಿಂದ 2025-26 ನೇ ಸಾಲಿನ ಮುಂಗಾರು ಹಂಗಾಮಿನವರೆಗೆ ಒಟ್ಟು 23782 ರೈತರು 31338.13 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ವಿಮೆಗೆ ನೊಂದಾಯಿಸಿಕೊಂಡಿದ್ದು, ಇಲ್ಲಿಯವರೆಗೆ 5 ಲಕ್ಷದ 5 ಸಾವಿರ ರೈತರಿಗೆ 990 ಕೋಟಿ ರೂಪಾಯಿ ಬೆಳೆ ವಿಮಾ ಪರಿಹಾರ ಹಣ ನೀಡಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು.

ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ

 ನಿಮ್ಮ ಜಮಾ (Belevime hana jama)ಸ್ಟೇಟಸ್ ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://samrakshane.karnataka.gov.in/ 

ನಂತರ ವರ್ಷದ ಆಯ್ಕೆ "2023-24" ಮತ್ತು ಋುತು "Kharif

" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ

Farmer ಕಾಲಂನಲ್ಲಿ "Check status." ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಆಧಾರ್ ನಂಬರ್(Aadhaar number) ಅಥವಾ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ

(ಸೂಚನೆ-ಬೆಳೆವಿಮೆ/cropinsurance ಕಟ್ಟಿದ ರಶೀದಿ ಕಳೆದಿದ್ದರೆ ಅಥವಾ Acknowledgment number ಗೊತ್ತಿಲ್ಲದಿದ್ದರೆ,ಮೊಬೈಲ್ ನಂಬರ್ select ಮಾಡಿ,ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು)

ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.