Belevime last date 2024-ಈ ಬೆಳೆಗಳಿಗೆ ಬೆಳೆವಿಮೆ ಕಟ್ಟಲು ಎರಡು ದಿನ ಮಾತ್ರ ಬಾಕಿ,ಯಾವ ಬೆಳೆಗೆ ಯಾವುದು ಕೊನೆಯ ದಿನಾಂಕ ಚೆಕ್ ಮಾಡಿ ಬೆಳೆವಿಮೆ ಕಟ್ಟಿ

Belevime last date 2024-ಈ ಬೆಳೆಗಳಿಗೆ ಬೆಳೆವಿಮೆ ಕಟ್ಟಲು ಎರಡು ದಿನ ಮಾತ್ರ ಬಾಕಿ, ಆದರೆ ಮುಗಿಯದ ಗೋಳು,ಸಮಸ್ಯೆಗಳು ಸಾಲು ಸಾಲು

Belevime last date 2024-ಈ ಬೆಳೆಗಳಿಗೆ ಬೆಳೆವಿಮೆ ಕಟ್ಟಲು ಎರಡು ದಿನ ಮಾತ್ರ ಬಾಕಿ,ಯಾವ ಬೆಳೆಗೆ ಯಾವುದು ಕೊನೆಯ ದಿನಾಂಕ ಚೆಕ್ ಮಾಡಿ ಬೆಳೆವಿಮೆ ಕಟ್ಟಿ

Belevime last date 2024-ಈ ಬೆಳೆಗಳಿಗೆ ಬೆಳೆವಿಮೆ ಕಟ್ಟಲು ಎರಡು ದಿನ ಮಾತ್ರ ಬಾಕಿ,ಆದರೆ ಮುಗಿಯದ ಗೋಳು,ಸಮಸ್ಯೆಗಳು ಸಾಲು ಸಾಲು

ರೈತರ ಜಮೀನಿನ ಫೂಟ್‌ ಐಡಿ (Farmer Registration and a Unified beneficiary Information System (FRUITS) s ಇದೇ ಸಮಸ್ಯೆ, ಆಧಾ‌ರ್-ಪಹಣಿ ಸೀಡಿಂಗ್ ಮಾಡುವಾಗಲೂ ಇದೇ ಸಮಸ್ಯೆ, ಈಗ ಬೆಳೆ ವಿಮೆ ನೊಂದಣಿ ಮಾಡಿಸುವಾಗಲೂ ಇದೇ ಗೋಳು. ಅಡಿಕೆ, ಮೆಣಸು ಬೆಳೆಗಳಿಗೆ ವಿಮೆ ನೊಂದಣಿ ಮಾಡಿಸಲು ಹತ್ತು ಜನ ರೈತರು ಬ್ಯಾಂಕ್, ಕೋ ಆಪರೇಟಿವ್ ಸಂಸ್ಥೆಗಳಿಗೆ ಹೋದರೆ, ಸುಸೂತ್ರವಾಗಿ ಇಬ್ಬರು ರೈತರಿಗೂ ಬೆಳೆ ವಿಮೆ ನೊಂದಣಿ ಆಗ್ತಾ ಇಲ್ಲ ಅಂತ ಅಧಿಕಾರಿಗಳು ಹೇಳ್ತಾ ಇದಾರೆ. ತಂತ್ರಜ್ಞಾನದಲ್ಲಿ ಒಬ್ಬೊಬ್ಬ ರೈತರ ನೋಂದಣಿಗೆ ಒಂದೊಂದು ಸಮಸ್ಯೆ.

FRUITS ID-ಬೆಳೆವಿಮೆ ಕಟ್ಟಲು ಬೇಕು ಎಫ್ ಐಡಿ,ಆಧಾರ್ ನಂಬರ್ ಹಾಕಿ ನಿಮ್ಮ FID ತಿಳಿದುಕೊಳ್ಳಿ,FID ಇಲ್ಲದವರು ಮೊಬೈಲ್ ನಲ್ಲೇ ನಿಮ್ಮ FID ಮಾಡಿಕೊಳ್ಳಿ - https://krushirushi.in/FRUITS-ID-1389 

ಅಡಿಕೆ ಮೆಣಸು ಬೆಳೆ ವಿಮೆ ಸಮಸ್ಯೆ
ಮಲೆನಾಡು-ಕರಾವಳಿಗಳಲ್ಲಿ ಅಡಿಕೆ ಮೆಣಸು ಬೆಳೆ ವಿಮೆ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಿ 12 ದಿನಗಳಾದವು. ಸಾಫ್ಟ್‌ವೇರ್ ಸಮಸ್ಯೆಗಳು ಇನ್ನೂ ಮುಂದುವರೆದಿವೆ. ಬೆಳೆ ವಿಮೆ ನೊಂದಣಿಯಲ್ಲಿ ಕಾಣಿಸುತ್ತಿರುವ ಸಾಮಾನ್ಯ ಸಮಸ್ಯೆಗಳು, ದೂರುಗಳು ಇಲ್ಲಿವೆ.

1) Aadhar not valided. You cannot generate this application
2) No FRUIT details available for this district, taluk and Gram panchayat ULB combinations
3) Error connecting to FRUIT server
4) FRUIT details not available for this Aadhar No. You can not enroll
5) ಕೆಲವು ರೈತರ ಬೆಳೆ ವಿಮೆ ಕಟ್ಟಿಯಾಗಿದೆ. ಆದರೆ, ಬೆಳೆ ವಿಸ್ತೀರ್ಣವೇ ವ್ಯತ್ಯಾಸ ಆಗಿದೆ. 17 ಗುಂಟೆ ಭಾಗಾಯ್ತು ಅಂತ ಪಹಣಿ ಇದೆ, ಸಿಸ್ಟಮ್‌ನಲ್ಲಿ ಎಂಟು ಗುಂಟೆಗೆ ಬೆಳೆ ವಿಮೆ ನೊಂದಣಿ ಆಗಿದೆ.
6) ಕಳೆದ ವರ್ಷ ಜಮೀನು ಜಾಯಿಂಟ್ ಅಕೌಂಟ್‌ನಲ್ಲಿದ್ದರೂ ಬೆಳೆ ವಿಮೆ ಮಾಡಿಸಬಹುದಿತ್ತು. ಈ ವರ್ಷ ಅದಕ್ಕೆ “ಎಲ್ಲಾ ಸದಸ್ಯರ FRUIT ID ಇಲ್ಲ, ಹಾಗಾಗಿ ನೊಂದಣಿ ಆಗ್ತಾ ಇಲ್ಲ” ಅನ್ನುವ ಕಂಪ್ಲೇಂಟ್.
7) ಕಳೆದ ವರ್ಷ ಬೆಳೆ ಸರ್ವೆಯಲ್ಲಾದ ಲೋಪಗಳನ್ನು ಸರಿಪಡಿಸಲಾಗಿಲ್ಲ, ಹಾಗಾಗಿ ನೊಂದಣಿ ಆಗ್ತಾ ಇಲ್ಲ. ಹೀಗೆ ಬೇರೆ ಬೇರೆ ರೈತರ ಪಹಣಿಗೆ ಬೇರೆ ಬೇರೆ ಸಮಸ್ಯೆಗಳು

ಅದಕ್ಕಾಗಿ ಯಾವ ಬೆಳೆಗೆ ಯಾವುದು ಕೊನೆಯ ದಿನಾಂಕ ಚೆಕ್ ಮಾಡಿ ಆದಷ್ಟು ಬೇಗ ಬೆಳೆವಿಮೆ ಕಟ್ಟಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://samrakshane.karnataka.gov.in/ 

ನಂತರ ವರ್ಷದ ಆಯ್ಕೆ "2024-25" ಮತ್ತು ಋುತು "Kharif

" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ

Farmer ಕಾಲಂನಲ್ಲಿ "View cutoff dates" ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ನಿಮ್ಮ ಜಿಲ್ಲೆ select ಮಾಡಿ

ನಂತರ ಈ ಕೆಳಗಿನಂತೆ ಯಾವ ಬೆಳೆಗೆ ಯಾವುದು ಕೊನೆಯ ದಿನಾಂಕ ಎಂದು ತೋರಿಸುತ್ತದೆ.ನಿಮ್ಮ ಬೆಳೆಗೆ ಯಾವುದು ಕೊನೆಯ ದಿನಾಂಕ ತಿಳಿದುಕೊಂಡು ಬೆಳೆವಿಮೆ ಕಟ್ಟಿ