Bele vime rejected list-ಬೆಳೆ ವಿಮೆ ತಿರಸ್ಕೃತಗೊಂಡ ಅರ್ಜಿಗಳ ಪಟ್ಟಿ ಬಿಡುಗಡೆ,ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಆಕ್ಷೇಪಣೆ ಸಲ್ಲಿಸಿ

<Krushirushi> <ಬೆಳೆವಿಮೆ> <ಬೆಳೆ ವಿಮೆ> <crop survey status> <ಬೆಳೆಸಮೀಕ್ಷೆ> <belevime> <bele samikshe> <cropinsurance> <bele darshak App> <ಬೆಳೆ ದರ್ಶಕ> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID> <ಹಣ> <ರೈತ> <crop> <ಬೆಳೆಸುದ್ದಿ><ಬೆಳೆವಿಮೆ> <<dbt Karnataka> <direct benefit transfer> <ಆಧಾರ್> <ನೇರ ಲಾಭ ವರ್ಗಾವಣೆ> <cropinsurance> <ನೇರ ನಗದು ವರ್ಗಾವಣೆ> <FID> <croploss compensation> <belehani list> <crop loss details> <ರೈತ> <ಹಣ> <ಸಂದಾಯ> <bele parihara> <bele parihara list> <ಬೆಳೆಸುದ್ದಿ> <Bele samikshe status> <crop insurance rejected list>

Bele vime rejected list-ಬೆಳೆ ವಿಮೆ ತಿರಸ್ಕೃತಗೊಂಡ ಅರ್ಜಿಗಳ ಪಟ್ಟಿ ಬಿಡುಗಡೆ,ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಆಕ್ಷೇಪಣೆ ಸಲ್ಲಿಸಿ

Bele vime rejected list-ಬೆಳೆ ವಿಮೆ ತಿರಸ್ಕೃತಗೊಂಡ ಅರ್ಜಿಗಳ ಪಟ್ಟಿ ಬಿಡುಗಡೆ

ಪ್ರಧಾನ ಮಂತ್ರಿ ಫಸಲ್ ಭೀಮಾ(Pradan mantri fasal bheema yojana) ಯೋಜನೆಯಡಿ 2023-24 ನೇ ಸಾಲಿನ ಮುಂಗಾರು(Kharif), ಹಿಂಗಾರು(Rabi) ಮತ್ತು ಬೇಸಿಗೆ(Summer) ಹಂಗಾಮುಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ, ಬೆಳೆ ಸಮೀಕ್ಷೆಯ(crop survey) ದತ್ತಾಂಶಗಳನ್ನು ಬೆಳೆ ನೋಂದಣಿಯಾದ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆಯಾದ ವಿನಾಯಿತಿಗಳನ್ನು ಅಳವಡಿಸಿ ತಾಳೆಯಾದ ಪ್ರಸ್ತಾವನೆಗಳಿಗೆ ಸಂರಕ್ಷಣೆ ತಂತ್ರಾಂಶದಲ್ಲಿ ವಿಮಾ ಪರಿಹಾರ ಲೆಕ್ಕಹಾಕಲಾಗಿದೆ. 

ತಾಳೆಯಾಗದೆ ಇರುವ ಪ್ರಸ್ತಾವನೆಗಳನ್ನು ಉಲ್ಲೇಖಿತ ಸರ್ಕಾರದ ಆದೇಶದಂತೆ ಸಂಬಂಧಪಟ್ಟ ತಾಲ್ಲೂಕು (ಕೃಷಿ/ತೋಟಗಾರಿಕೆ/ಬ್ಯಾಂಕ್) ಮಟ್ಟದ ಅಧಿಕಾರಿಗಳಿಗೆ ಪರಿಶೀಲಿಸಲು ಸಂರಕ್ಷಣೆ ತಂತ್ರಾಂಶದ ಮೂಲಕ ಕಳುಹಿಸಲಾಗಿತ್ತು. ತಾಲ್ಲೂಕು ಮಟ್ಟದ ಅಧಿಕಾರಿಗಳು ಸದರಿ ಪ್ರಸ್ತಾವನೆಗಳನ್ನು ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಛಾಯಚಿತ್ರದೊಂದಿಗೆ ಪರಿಶೀಲಿಸಿ ಸಂಬಂಧಪಟ್ಟ ವಿಮಾ ಸಂಸ್ಥೆಯವರಿಗೆ Accept ಅಥವಾ Reject ಮಾಡಲು ಶಿಫಾರಸ್ಸು ಮಾಡಿರುತ್ತಾರೆ, ತದನಂತರ ವಿಮಾ ಸಂಸ್ಥೆಯವರು ಪ್ರಸ್ತಾವನೆಗಳನ್ನು ಮರುಪರಿಶೀಲಿಸಿ ಅಂತಿಮವಾಗಿ Accept ಅಥವಾ Reject ಮಾಡಿರುತ್ತಾರೆ.

ಪ್ರಸ್ತುತ ಸಂರಕ್ಷಣೆ ತಂತ್ರಾಂಶದನ್ವಯ ಮುಂಗಾರು ಹಂಗಾಮಿನಲ್ಲಿ Reject ಆದ 5356 ಪುಸ್ತಾವನೆಗಳು, ಹಿಂಗಾರು ಹಂಗಾಮಿನಲ್ಲಿ Reject ಆದ 2763 ಪ್ರಸ್ತಾವನೆಗಳು ಮತ್ತು ಬೇಸಿಗೆ ಹಂಗಾಮಿನಲ್ಲಿ 4 ಪ್ರಸ್ತಾವನೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 

ಪ್ರಸ್ತುತ ತಿರಸ್ಕೃತಗೊಂಡ(Crop insurance rejected list)ಪ್ರಸ್ತಾವನೆಗಳ ಕುರಿತು ತಾಲ್ಲೂಕು/ಹೋಬಳಿ ಮಟ್ಟದಲ್ಲಿ ರೈತರಿಗೆ ಮಾಹಿತಿಯನ್ನು ನೀಡಲು ಸೂಚಿಸಿದೆ ಹಾಗೂ ಸದರಿ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ ಮತ್ತು ಜಿಲ್ಲೆಯ ಪ್ರಾದೇಶಿಕ ದಿನ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ.

ಮಾಹಿತಿಯನ್ನು ಪ್ರಕಟಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ವಿಮಾ ಅರ್ಜಿ ತಿರಸ್ಕೃತಗೊಂಡ ಬಗ್ಗೆ ಆಕ್ಷೇಪಣೆಗಳನ್ನು ಪಡೆಯಬಹುದಾಗಿರುತ್ತದೆ. ಸಂಬಂಧಪಟ್ಟ ರೈತರು ಆಕ್ಷೇಪಣೆ ಇದ್ದಲ್ಲಿ ಮಾತ್ರ ಮನವಿಯನ್ನು ಸಲ್ಲಿಸಲು ಹಾಗೂ ಮರುಪರಿಶೀಲಿಸಲು, ಸದರಿ ಮನವಿಯೊಂದಿಗೆ ಬೆಳೆ ವಿಮೆಗೆ ನೋಂದಣಿಯಾಗಿರುವ ಬೆಳೆಯನ್ನು ಬೆಳೆದಿರುವ ಕುರಿತು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಅಂತಹ ಮನವಿಗಳನ್ನು ತಾಲ್ಲೂಕು ಮಟ್ಟದ ಸಮಿತಿಯಲ್ಲಿ ಮಂಡಿಸಿ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದು. ತಾಲ್ಲೂಕು ಮಟ್ಟದ ಸಮಿತಿಯ ನಿರ್ಣಯವನ್ನು ರೈತ ಒಪ್ಪದಿದ್ದಲ್ಲಿ, ಜಿಲ್ಲಾ ಮಟ್ಟದ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದು. ಜಿಲ್ಲಾ ಮಟ್ಟದ ಸಮಿತಿಯ ನಿರ್ಧಾರವು ಅಂತಿಮವಾಗಿರುತ್ತದೆ. ಆಯಾ ತಾಲ್ಲೂಕಿನಲ್ಲಿ ಯಾವುದೇ ಆಕ್ಷೇಪಣೆಗಳು 15 ದಿನಗಳೊಳಗಾಗಿ ರೈತರಿಂದ ಬಂದಿಲ್ಲದಿದ್ದರೆ, ತಾಲ್ಲೂಕಿನ ಎಲ್ಲಾ ಪ್ರಸ್ತಾವನೆಗಳನ್ನು reject ಮಾಡುವುದು.

ತದನಂತರ, ತಾಲ್ಲೂಕು/ ಜಿಲ್ಲಾ ಸಮಿತಿಯ ನಡವಳಿಯನ್ವಯ ಸಂರಕ್ಷಣೆ ತಂತ್ರಾಂಶದಲ್ಲಿ PMFBY(loanee and Non Loanee proposals) ಅಧಿಕಾರಿಗಳ login ನಲ್ಲಿ ಹಾಗೂ PMFBY ತೋಟಗಾರಿಕೆ ಬೆಳೆಗಳನ್ನು (loanee and Non Loanee proposals) ತಾಲ್ಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳ login ನಲ್ಲಿ ಸಿಂಧುವಾದ ಪ್ರಸ್ತಾವನೆಗಳನ್ನು (accepted proposals) accept ಮಾಡುವುದು, ಉಳಿದ ಪ್ರಸ್ತಾವನೆಗಳನ್ನು reject ಮಾಡುವುದು. ಸಂರಕ್ಷಣೆ ತಂತ್ರಾಂಶದಲ್ಲಿ ಪ್ರಸ್ತಾವನೆಗಳನ್ನು accept ಅಥವ reject ಮಾಡುವಲ್ಲಿ ಜಾಗೃತತೆಯನ್ನು ವಹಿಸಲು ಸೂಚಿಸಿದೆ. 


ವಿಶೇಷ ಸೂಚನೆ: ಎಲ್ಲಾ ಹಂತದ ಸಭೆಗಳಲ್ಲಿ ವಿಮಾ ಸಂಸ್ಥೆ ಹಾಗೂ ತೋಟಗಾರಿಕೆ ಇಲಾಖೆ 
ಅಧಿಕಾರಿಯವರ ಉಪಸ್ಥಿತಿ ಹಾಗೂ ಕೈಗೊಳ್ಳುವ ನಿರ್ಧಾರಗಳಲ್ಲಿ ವಿಮಾ ಸಂಸ್ಥೆಯವರ ಸಹಮತಿ * ಅವಶ್ಯವಿರುತ್ತದೆ. ತಿರಸ್ಕೃತಗೊಂಡ ಪ್ರಸ್ತಾವನೆಗಳ ಕುರಿತು ಪ್ರಚಾರ ಪಡಿಸಿರುವ ಬಗ್ಗೆ, ಸಭೆಯ ನಡವಳಿಯ ಪ್ರತಿಯನ್ನು ಹಾಗೂ ಸಿಂಧುವಾದ ಪ್ರಸ್ತಾವನೆಗಳ (accepted proposals) ಅಗತ್ಯ ದಾಖಲೆಗಳನ್ನು ವಿಮಾ ಸಂಸ್ಥೆಯವರಿಗೆ ಒದಗಿಸತಕ್ಕದು. ಕೇಂದ್ರ ಕಛೇರಿಗೆ ತಿರಸ್ಕೃತಗೊಂಡ ಪ್ರಸ್ತಾವನೆಗಳ ಕುರಿತು ಪ್ರಚಾರ ಪಡಿಸಿರುವ ಬಗ್ಗೆ ಮತ್ತು ಸಭೆಯ ನಡವಳಿಯ ಪ್ರತಿಯನ್ನು ಸಲ್ಲಿಸಿದ ನಂತರ ಸಭೆಯ ನಡವಳಿಯಂತೆ ಪ್ರಸ್ತಾವನೆಗಳನ್ನು ಇತ್ಯರ್ಥಪಡಿಸಲು ವಿಮಾ ಸಂಸ್ಥೆಯವರಿಗೆ ಸೂಚಿಸಲಾಗುವುದು. 


ತಾಲ್ಲೂಕು/ಜಿಲ್ಲಾ ಮಟ್ಟದ ಸಮಿತಿಯ ಸಭೆಗಳಲ್ಲಿ ಆಕ್ಷೇಪಿಸಿದ ಪ್ರಸ್ತಾವನೆಗಳನ್ನು ಪರಿಶೀಲಿಸಲು ಗಮನಿಸಬೇಕಾದ ಅಂಶಗಳು ಈ ಕೆಳಕಂಡಂತಿದೆ, 
1) 2023-24ರ ಪಹಣಿ ಪತ್ರಿಕೆಯಲ್ಲಿ (RTC) ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರಬೇಕು. 
2) ಬೆಂಬಲ ಬೆಲೆ ಪ್ರಯೋಜನ ಪಡೆದಿದಲ್ಲಿ, ರಶೀದಿ ಪಡೆದು ಪರಿಶೀಲಿಸುವುದು. 
3) ವಿಮೆಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು APMC ಮಾರುಕಟ್ಟೆಗೆ ಮಾರಾಟ ಮಾಡಿದ್ದಲ್ಲಿ ಸದರಿ ದಾಖಲೆ ಪಡೆದು ಪರಿಶೀಲಿಸುವುದು.

ತಿರಸ್ಕೃತ ಗೊಂಡಿರುವ ಬೆಳೆ ವಿಮೆ ಪ್ರಸ್ತಾವನೆಗಳ ರೈತರ ಪಟ್ಟಿಯನ್ನು ಗ್ರಾಮ ಪಂಚಾಯತ್, ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪ್ರದರ್ಶಿಸಲಾಗಿದೆ. ಸಂಬಂಧಪಟ್ಟ ರೈತರು ಆಕ್ಷೇಪಣೆ ಇದ್ದಲ್ಲಿ ಫೆಬ್ರವರಿ 27 ನೇ ದಿನಾಂಕ ಒಳಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ಕೊಟ್ಟು ಆಕ್ಷೇಪಣೆ ಸಲ್ಲಿಸಿ.


ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

 https://samrakshane.karnataka.gov.in/ 

ನಂತರ ವರ್ಷದ ಆಯ್ಕೆ "2023-24" ಮತ್ತು ಋುತು "kharif" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ

Farmer ಕಾಲಂನಲ್ಲಿ "Check status." ಮೇಲೆ ಕ್ಲಿಕ್ ಮಾಡಿ

ನಂತರ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ

(ಸೂಚನೆ-Proposal number ಎಂದರೆ ಬೆಳೆವಿಮೆ ಕಟ್ಟಿದ ರಶೀದಿಯಲ್ಲಿ 6 ಸಂಖ್ಯೆಯ acknowledgment number.ಒಂದು ವೇಳೆ ಬೆಳೆ ವಿಮೆ ಕಟ್ಟಿದ ರಶೀದಿ ಕಳೆದು ಹೊಗಿದ್ದರೆ ನಿಮ್ಮ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿ) 

ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.

ನಂತರ Select ಮೇಲೆ ಕ್ಲಿಕ್ ಮಾಡಿದರೆ,ಈ ಕೆಳಗಿನಂತೆ ಬೆಳೆವಿಮೆ ಕಂಪನಿಗೆ ನಿಮ್ಮ ಅರ್ಜಿ ಸಲ್ಲಿಕೆಯಾಗಿರುವುದನ್ನು ತೋರಿಸುತ್ತದೆ.ಒಂದು ವೇಳೆ ಅರ್ಜಿ ತಿರಸ್ಕೃತಗೊಂಡಿದ್ದರೆ Application rejected ಎಂದು ತೋರಿಸುತ್ತದೆ.ಹಾಗೇನಾದರು ಅರ್ಜಿ ತಿರಸ್ಕೃತಗೊಂಡಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ಕೊಟ್ಟು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅದೇ ರೀತಿ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆ ವಿಮೆ ತಿರಸ್ಕೃತ ಪಟ್ಟಿಯನ್ನು(Bele vime rejected list) ಲಗತ್ತಿಸಲಾಗಿದ್ದು,ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಆಕ್ಷೇಪಣೆ ಸಲ್ಲಿಸಿ.