Crop insurance:2024-25ನೇ ಸಾಲಿನ ಬೆಳೆ ವಿಮೆ ಹಣ ಜಮಾ ಪ್ರಾರಂಭ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ
<Krushirushi> <ಬೆಳೆವಿಮೆ ಸ್ಟೇಟಸ್ 2024-25> <belevime status 2024-25> <Cropinsurance Status through Aadhaar number> <Belevime Status check through mobile number> <Pradan mantri fasal bheema yojane> <Belevime hana jama> <madyanthara belevime parihara> <mid term cropinsurance> <interim cropinsurance> <crop loss compensation> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID> <Agriculture department> <ರೈತ> <ಹಣ> <ಸಂದಾಯ> <ಆಧಾರ್> <ಬೆಳೆಸುದ್ದಿ> <Belevime hana bidugade>
Crop insurance:2024-25ನೇ ಸಾಲಿನ ಬೆಳೆ ವಿಮೆ ಹಣ ಜಮಾ ಪ್ರಾರಂಭ,ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ
2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ತುಂಬಿನ ಬೆಳೆಹಾನಿ ಆಗಿರುವ ಹಾಗೂ ಅರ್ಜಿ ಸಲ್ಲಿಸಿರುವ ರೈತರಿಗೆ ಸ್ಥಳಿಯ ಗಂಡಾಂತರದಡಿ(localised calamity) ಇನ್ಸುರೆನ್ಸ್ ಕಂಪನಿಯರು ವಿಮಾದಾರರ ಖಾತೆಗೆ ಬೆಳೆ ವಿಮೆ ಹಣ ಬಿಡುಗಡೆ ಮಾಡಿದ್ದಾರೆ.
ಹಾಗಾಗರೆ ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://samrakshane.karnataka.gov.in/
ನಂತರ ವರ್ಷದ ಆಯ್ಕೆ "2024-25" ಮತ್ತು ಋುತು "Kharif
" ಎಂದು select ಮಾಡಿ, "ಮುಂದೆ/Go" ಮೇಲೆ click ಮಾಡಿ
Farmer ಕಾಲಂನಲ್ಲಿ "Check status." ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಆಧಾರ್ ನಂಬರ್(Aadhaar number) ಅಥವಾ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ
(ಸೂಚನೆ-ಬೆಳೆವಿಮೆ/cropinsurance ಕಟ್ಟಿದ ರಶೀದಿ ಕಳೆದಿದ್ದರೆ ಅಥವಾ Acknowledgment number ಗೊತ್ತಿಲ್ಲದಿದ್ದರೆ,ಮೊಬೈಲ್ ನಂಬರ್ select ಮಾಡಿ,ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಬಹುದು)
ಈ ಕೆಳಗಿನಂತೆ ಬೆಳೆವಿಮೆ(crop insurance) ಜಮಾ ಮಾಹಿತಿ ದೊರೆಯಲಿದೆ.
ಇದನ್ನೂ ಓದಿ
ರಾಜ್ಯದ 6 ಲಕ್ಷ ರೈತರಿಗಿಲ್ಲ ಪಿಎಂ ಕಿಸಾನ್ ಹಣ,ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ-pmkisan 19th instalment ineligible list
https://krushirushi.in/Pmkisan-19th-instalment-ineligible-list-1732
ಅಡಕೆ ಹಿಂಗಾರು ಒಣಗು ರೋಗ-Arecanut inflorescence dieback
ಅಡಕೆ ಬೆಳೆಯಲ್ಲಿ ಕಾಣಿಸಿಕೊಳ್ಳುವ ಹಿಂಗಾರು ಒಣಗು ರೋಗ (Arecanut Inflorescence Die-back) ಮತ್ತು ಹಿಂಗಾರು ಬೆಳೆ ಒಣಗುವಿಕೆಗೆ ಸಂಬಂಧಿಸಿದ ಪ್ರಮುಖ ವಿವರಗಳು ಇಲ್ಲಿವೆ:
1. ಅಡಕೆ ಹಿಂಗಾರು ಒಣಗು ರೋಗ (ಕಾರಣಗಳು)
• ಶಿಲೀಂಧ್ರದ ಸೋಂಕು: ಕೊಲ್ಲೆಟೋಟ್ರೈಕಂ ಗ್ಲಿಯೋಸ್ಪೋರಿಯಾಡಿಸ್ (Colletotrichum gloeosporioides) ಎಂಬ ಶಿಲೀಂಧ್ರದಿಂದ ಈ ರೋಗ ಬರುತ್ತದೆ.
• ಕಾಣಿಸಿಕೊಳ್ಳುವ ಸಮಯ: ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್ ತಿಂಗಳಿನಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
• ಕೀಟಗಳ ಬಾಧೆ: ಕೆಲವು ಸಂದರ್ಭಗಳಲ್ಲಿ ಹಿಂಗಾರನ್ನು ತಿನ್ನುವ ಹುಳುಗಳು ಅಥವಾ ಕೀಟಗಳ ಬಾಧೆಯಿಂದಲೂ ಹಿಂಗಾರು ಒಣಗುತ್ತದೆ.
2. ಹತೋಟಿ ಮತ್ತು ಪರಿಹಾರ ಕ್ರಮಗಳು
• ಔಧಷ ಸಿಂಪಡಣೆ: ಶಿಲೀಂಧ್ರನಾಶಕ ಔಷಧಗಳನ್ನು (200 ಲೀಟರ್ ನೀರಿಗೆ 2 ಲೀಟರ್ ಅಥವಾ 2 ಕೆಜಿ ಟ್ರೈಕೊಡರ್ಮಾ ಹಾಕಿ ಹಿಂಗಾರು ಅರಳಿದ ನಂತರ ಒಮ್ಮೆ ಮತ್ತು 20 ರಿಂದ 25 ದಿನಗಳ ನಂತರ ಮತ್ತೊಮ್ಮೆ ಸಿಂಪಡಿಸಬೇಕು.
• ತೋಟದ ನಿರ್ವಹಣೆ: ಅಡಕೆ ತೋಟದಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ರೋಗಗ್ರಸ್ತ ಹಿಂಗಾರನ್ನು ಕತ್ತರಿಸಿ ನಾಶಪಡಿಸುವುದು ಉತ್ತಮ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
8431212910
ಬಾಳೆಯಲ್ಲಿ ಪನಾಮಾ ಸೊರಗು ರೋಗ-Panama wilt in Banana
ಬಾಳೆಯಲ್ಲಿ ಬರುವ ಪನಾಮಾ ಸೊರಗು ರೋಗ (Panama Wilt / Panama Disease) ಮಣ್ಣಿನಲ್ಲಿ ವಾಸಿಸುವ ಫ್ಯುಸಾರಿಯಮ್ ಆಕ್ಸಿಸ್ಪೊರಮ್ (Fusarium oxysporum f. sp. cubense) ಎಂಬ ಶಿಲೀಂಧ್ರದಿಂದ (Fungus) ಉಂಟಾಗುವ ಅತ್ಯಂತ ವಿನಾಶಕಾರಿ ರೋಗವಾಗಿದೆ.
ರೋಗದ ಲಕ್ಷಣಗಳು:
• ಎಲೆಗಳ ಹಳದಿ ಬಣ್ಣ: ಗಿಡದ ಕೆಳಗಿನ ಅಥವಾ ಹಳೆಯ ಎಲೆಗಳ ಅಂಚುಗಳು ಮತ್ತು ತುದಿಗಳು ಮೊದಲು ಹಳದಿ ಬಣ್ಣಕ್ಕೆ ತಿರುಗುತ್ತವೆ.
• ಎಲೆಗಳು ಒಣಗಿ ಜೋತು ಬೀಳುವಿಕೆ: ಹಳದಿ ಬಣ್ಣಕ್ಕೆ ತಿರುಗಿದ ಎಲೆಗಳು ತೊಟ್ಟಿನ ಬಳಿ ಮುರಿದು ಕಾಂಡದ ಸುತ್ತಲೂ 'ಸ್ಕರ್ಟ್' (Skirt) ರೂಪದಲ್ಲಿ ಜೋತು ಬೀಳುತ್ತವೆ.
• ಕಾಂಡದ ಒಳಭಾಗದಲ್ಲಿ ಬಣ್ಣ ಬದಲಾವಣೆ: ರೋಗಪೀಡಿತ ಬಾಳೆ ಗಿಡದ ಕಾಂಡವನ್ನು ಸೀಳಿ ನೋಡಿದರೆ, ಅದರ ಒಳನಾಳಗಳು ಹಳದಿಯಿಂದ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗಿರುತ್ತವೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
8431212910
ಅಡಿಕೆಗೆ ಗೊಬ್ಬರದ ಜೊತೆ ಏನು ಕೊಡಬೇಕು?
ಅಡಿಕೆಗೆ ನೀವು ಕೊಡುವ ಸಾರಜನಕ,ರಂಜಕ,ಪೊಟ್ಯಾಶ್,ಜಿಂಕ್ ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ಸಿಗಲು bio NPK Consortia ಬಳಸಬೇಕು, ಇದು ನೀವು ಕೊಡುವ ಗೊಬ್ಬರದಲ್ಲಿರುವ ಸಾರಜನಕ,ರಂಜಕ,ಪೊಟ್ಯಾಶ್,ಜಿಂಕ್ ನ್ನು ಕರಗಿಸಿ ಗಿಡಗಳಿಗೆ ಒದಗಿಸಿ ಬೆಳವಣಿಗೆ ಮತ್ತು ಹೆಚ್ಚಿನ ಇಳುವರಿಗೆ ಸಹಾಯ ಮಾಡುತ್ತದೆ.
ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳು:
• ಸಂಯೋಜನೆ: ಇದರಲ್ಲಿ ಸಾರಜನಕವನ್ನು ಸ್ಥಿರೀಕರಿಸುವ (N-fixing), ರಂಜಕ ಮತ್ತು ಸತುವು ಕರಗಿಸುವ (P & Zn-solubilizing) ಹಾಗೂ ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುವ (PGPR) ಸೂಕ್ಷ್ಮಜೀವಿಗಳು ಒಂದೇ ಸೂತ್ರೀಕರಣದಲ್ಲಿ (Single formulation) ಇರುತ್ತವೆ.
• ಸಾರಜನಕ,ರಂಜಕ,ಪೊಟ್ಯಾಶ್,ಜಿಂಕ್ ಗೊಬ್ಬರವನ್ನು ಕರಗಿಸಿ ಗಿಡಗಳಿಗೆ ಒದಗಿಸುತ್ತದೆ.
• ಸಮಯ ಮತ್ತು ವೆಚ್ಚ ಉಳಿತಾಯ: ರೈತರು ಬೇರೆ ಬೇರೆ ಬ್ಯಾಕ್ಟೀರಿಯಾ ಉತ್ಪನ್ನಗಳನ್ನು ಪ್ರತ್ಯೇಕವಾಗಿ ತಂದು ಬಳಸುವ ಅವಶ್ಯಕತೆ ಇರುವುದಿಲ್ಲ. ಇದು ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತದೆ.
• ಬಳಕೆಯ ವಿಧಾನ: ಇದನ್ನು ಬೀಜೋಪಚಾರ, ಮಣ್ಣಿಗೆ ಹಾಕುವುದು, ನೀರಿನೊಂದಿಗೆ ಬೆರೆಸಿ (ಡ್ರಿಪ್ ಇರಿಗೇಶನ್) ಅಥವಾ ನರ್ಸರಿ ಮಾಧ್ಯಮದಲ್ಲಿ (ಕೊಕೊ-ಪೀಟ್) ಬಳಸಬಹುದು.
• 200 ಲೀಟರ್ ನೀರಿಗೆ 2 ಕೆಜಿ ಅಥವಾ 2 ಲೀಟರ್ NPK consortia ಬಳಸಿ ಡ್ರೆಂಚ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
8431212910
ಅಡಿಕೆ ಗಿಡಕ್ಕೆ ಅಡಿಕೆ ಸಿಪ್ಪೆ ಹಾಕಬೇಕಾ? ಬೇಡವಾ?
ಅಡಿಕೆ ಸಿಪ್ಪೆ ಗೊಬ್ಬರವಾಗುತ್ತೆ ಅಂತಾ ನೀವೆನಾದರೂ ಅಡಿಕೆೆ ತೋಟಕ್ಕೆ ಹಾಕಿದರೆ ಅದು ಸರಿಯಾಗಿ ಕಳೆಯುವುದಿಲ್ಲ, ಹೀಗೆ ಸರಿಯಾಗಿ ಕಳಿಯದ ಅಡಿಕೆ ಸಿಪ್ಪೆಯಿಂದ ಅಡಿಕೆ ಗಿಡದ ಬುಡದಲ್ಲಿ ಅಣಬೆ ಬೆಳೆಯುತ್ತದೆ.
ಅಡಿಕೆ ತೋಟದಲ್ಲಿ ಕಾಣಿಸಿಕೊಳ್ಳುವ ಅಣಬೆ ರೋಗ (ಇದನ್ನು 'ಬುಡಕೊಳೆ ರೋಗ' ಅಥವಾ Ganoderma Wilt / Foot Rot ಎಂದು ಕರೆಯಲಾಗುತ್ತದೆ) ಗ್ಯಾನೋಡರ್ಮಾ ಲೂಸಿಡಂ (Ganoderma lucidum) ಎಂಬ ಶಿಲೀಂಧ್ರದಿಂದ ಬರುವ ಅತ್ಯಂತ ಮಾರಣಾಂತಿಕ ರೋಗವಾಗಿದೆ.
ಪ್ರಮುಖ ರೋಗ ಲಕ್ಷಣಗಳು
• ಎಲೆಗಳು ಬಾಡುವುದು: ಅಡಿಕೆ ಮರದ ಹೊರಭಾಗದ ಎಲೆಗಳು ಹಳದಿಯಾಗಿ, ನಂತರ ಒಣಗಿ ತಳಕ್ಕೆ ಬಾಗುತ್ತವೆ.
• ಕಾಂಡದ ಬುಡದಲ್ಲಿ ಅಂಟು: ಮರದ ಬುಡದ ಭಾಗದಲ್ಲಿ ಕಂದು ಬಣ್ಣದ ಕಲೆಗಳು ಮೂಡಿ, ಒಸರು ಅಥವಾ ಅಂಟು ದ್ರವ ಸೋರುತ್ತದೆ.
• ಅಣಬೆಗಳ ಬೆಳವಣಿಗೆ: ರೋಗ ತೀವ್ರವಾದಂತೆ ಮರದ ಬುಡದ ಬಳಿ ಅಥವಾ ಬೇರುಗಳ ಹತ್ತಿರ ಅಣಬೆಗಳಂತಹ (Bracket fungi / Basidiocarps) ಕಠಿಣವಾದ ರಚನೆಗಳು ಹೊರಹೊಮ್ಮುತ್ತವೆ.
• ಬೇರು ಕೊಳೆತ: ಮರದ ಬೇರುಗಳು ಸಂಪೂರ್ಣವಾಗಿ ಕೊಳೆತು, ಮರವು ತನ್ನ ಆಧಾರ ಕಳೆದುಕೊಂಡು ಗಾಳಿಗೆ ಅಥವಾ ಭಾರಕ್ಕೆ ಸುಲಭವಾಗಿ ಉರುಳಿ ಬೀಳುತ್ತದೆ.
ಹತೋಟೆ ಕ್ರಮಗಳು
ಸೋಂಕಿತ ಮರಗಳ ತೆರವು: ರೋಗ ತೀವ್ರವಾಗಿರುವ ಮರಗಳನ್ನು ಬೇರು ಸಹಿತ ಕತ್ತರಿಸಿ, ಬೇರುಗಳ ಸಮೇತ ಕಿತ್ತು ಸುಟ್ಟು ಹಾಕಿರಿ (ಬೇರೆಡೆಗೆ ಎಸೆಯಬಾರದು)
1. ಜೈವಿಕ ನಿಯಂತ್ರಣ: ಮಣ್ಣಿನ ಆರೋಗ್ಯ ಮತ್ತು ರೋಗ ಹತೋಟಿಗೆ ಟ್ರೈಕೋಡರ್ಮಾ (Trichoderma) ಜೈವಿಕ ಶಿಲೀಂಧ್ರನಾಶಕ ಹಾಗೂ ಬೇವಿನ ಹಿಂಡಿಯನ್ನು (1.5 ರಿಂದ 2 ಕೆ.ಜಿ. ಪ್ರತಿ ಮರಕ್ಕೆ) ಕಡ್ಡಾಯವಾಗಿ ಬಳಸಿ.
2. ತೋಟದ ನಿರ್ವಹಣೆ: ತೋಟದಲ್ಲಿ ನೀರು ನಿಲ್ಲದಂತೆ ಉತ್ತಮ ಬಸಿಗಾಲುವೆ ವ್ಯವಸ್ಥೆ ಮಾಡುವುದು ಮತ್ತು ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ ಹಾಗೂ ಹಸಿರೆಲೆಗಳನ್ನು ಸಮರ್ಪಕವಾಗಿ ಒದಗಿಸುವುದು.
ಅಡಿಕೆಯಲ್ಲಿ ಗೊಣ್ಣೆಹುಳು
ಅಡಿಕೆ ತೋಟಗಳಲ್ಲಿ ಗೊಣ್ಣೆ ಹುಳು (Root Grub) ಅಥವಾ ಬೇರು ಹುಳುಗಳ ಬಾಧೆಯು ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಈ ಹುಳುಗಳು ಮಣ್ಣಿನ ಅಡಿಯಲ್ಲಿ ವಾಸಿಸುತ್ತಾ ಅಡಿಕೆ ಮರದ ಬೇರುಗಳನ್ನು ತಿಂದು ನಾಶಪಡಿಸುತ್ತವೆ. ಇದರಿಂದ ಮರಗಳಿಗೆ ಪೋಷಕಾಂಶ ಮತ್ತು ನೀರು ಸರಬರಾಜು ಮಾಡುವ ಸಾಮರ್ಥ್ಯ ಕುಂಠಿತಗೊಂಡು, ಇಳುವರಿ ಕಡಿಮೆಯಾಗುತ್ತದೆ ಮತ್ತು ತೀವ್ರ ಬಾಧೆಯಿದ್ದಲ್ಲಿ ಮರಗಳು ಒಣಗಿ ಸಾಯುತ್ತವೆ.
ಗೊಣ್ಣೆ ಹುಳುವಿನ ಲಕ್ಷಣಗಳು
• ಅಡಿಕೆ ಮರದ ಗರಿಗಳು ಹಳದಿ ಬಣ್ಣಕ್ಕೆ ತಿರುಗುವುದು.
• ಮರದ ಬೆಳವಣಿಗೆ ಸಂಪೂರ್ಣವಾಗಿ ಕುಂಠಿತಗೊಳ್ಳುವುದು.
• ಮರವನ್ನು ಅಲ್ಲಾಡಿಸಿದರೆ ಬೇರುಗಳ ಬಲವಿಲ್ಲದೇ ಸುಲಭವಾಗಿ ಕದಡುವುದು ಅಥವಾ ಬಿದ್ದುಹೋಗುವುದು.
ಹತೋಟೆ ಕ್ರಮಗಳು
1 ಟನ್ ಕೊಟ್ಟಿಗೆ ಗೊಬ್ಬರಕ್ಕೆ 3 ರಿಂದ 5 ಕೆಜಿ ಮೆಟರೈಜಿಯಂ ಬಳಸಿ
200 ಲೀಟರ್ ನೀರಿಗೆ 2 ಕೆಜಿ ಅಥವಾ 2 ಲೀಟರ್ ಮೆಟರೈಜಿಯಂ ಹಾಕಿ ಪ್ರತಿ ಗಿಡಕ್ಕೆ 1 ಲೀಟರ್ ದ್ರಾವಣ ಡ್ರೆಂಚ್ ಮಾಡಿ
