ಬೆಳೆ ಸಮಿಕ್ಷೆ ವರದಿಯಲ್ಲಿ approved ಎಂದು ಇದ್ದವರಿಗೆ ಮಾತ್ರ ಬೆಳೆವಿಮೆ,ಬೆಳೆಹಾನಿ ಪರಿಹಾರ,ನಿಮ್ಮ ಸ್ಟೇಟಸ್ ಒಮ್ಮೆ ಚೆಕ್ ಮಾಡಿಕೊಳ್ಳಿ-Crop survey report
ಬೆಳೆ ಸಮಿಕ್ಷೆ ವರದಿಯಲ್ಲಿ approved ಎಂದು ಇದ್ದವರಿಗೆ ಮಾತ್ರ ಬೆಳೆವಿಮೆ,ಬೆಳೆಹಾನಿ ಪರಿಹಾರ,ನಿಮ್ಮ ಸ್ಟೇಟಸ್ ಒಮ್ಮೆ ಚೆಕ್ ಮಾಡಿಕೊಳ್ಳಿ-Crop survey report

ಬೆಳೆ ಸಮಿಕ್ಷೆ ವರದಿಯಲ್ಲಿ approved ಎಂದು ಇದ್ದವರಿಗೆ ಮಾತ್ರ ಬೆಳೆವಿಮೆ,ಬೆಳೆಹಾನಿ ಪರಿಹಾರ,ನಿಮ್ಮ ಸ್ಟೇಟಸ್ ಒಮ್ಮೆ ಚೆಕ್ ಮಾಡಿಕೊಳ್ಳಿ-Crop survey report
ಬೆಳೆ ಸಮೀಕ್ಷೆ(Bele samikshe) ಮೂಲಕ ಸಂಗ್ರಹಿಸಲಾದ ಬೆಳೆ
ಮಾಹಿತಿ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರೈತರು ಬೆಳೆ ದರ್ಶಕ ಮೊಬೈಲ್ ಆ್ಯಪ್(Bele darshaka App)ಅಥವಾ ಬೆಳೆ ಸಮೀಕ್ಷೆ ತಂತ್ರಾಂಶದ(Crop survey portal) ಮೂಲಕ ಆಕ್ಷೇಪಣೆ ಸಲ್ಲಿಸಬಹುದು.
ಬೆಳೆ ಸಮೀಕ್ಷೆ ದತ್ತಾಂಶವನ್ನು ಬೆಳೆವಿಮೆ(Bele vime), ಬೆಂಬಲ ಬೆಲೆ ಯೋಜನೆಯಡಿ(MSP) ಬೆಳೆ ಮಾರಾಟ ಮಾಡಲು, ಬೆಳೆ ನಷ್ಟ ಪರಿಹಾರ(bele hani) ಹಾಗೂ ಇತರ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಳಕೆ ಮಾಡಲಾಗುವುದು. ಆದ್ದರಿಂದ ರೈತರು ತಾವು ಬೆಳೆದ ಬೆಳೆ ಹಾಗೂ ಬೆಳೆ ಸಮೀಕ್ಷೆಯಲ್ಲಿ (crop survey)ದಾಖಲಾದ ಬೆಳೆಯು ಒಂದೇ ಇರುವ ಕುರಿತು ಬೆಳೆ ದರ್ಶಕ ಮೊಬೈಲ್ ಆ್ಯಪ್ ಮೂಲಕ ಖಾತ್ರಿಪಡಿಸಿಕೊಳ್ಳಬೇಕು. ಒಂದು ವೇಳೆ ಭಿನ್ನವಾಗಿದ್ದಲ್ಲಿ, ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ನಂತರದ ಆಕ್ಷೇಪಣೆ ಸ್ವೀಕರಿಸಲಾಗುವುದಿಲ್ಲ.
ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ
ಮೊದಲು ಗೂಗಲ್ ಪ್ಲೇ ಸ್ಟೋರ್ ಮೂಲಕ ಅಥವಾ https://play.google.com/
ನಂತರ ರೈತ select ಮಾಡಿ
ನಂತರ ವರ್ಷ,ಋುತು, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ.
ನಂತರ ಸರ್ವೇ ನಂಬರ್ ಹಾಕಿ,ಹಿಸ್ಸಾಆಯ್ಕೆ ಮಾಡಿ,ಸಮೀಕ್ಷೆಯ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿ
ನಂತರ ಬೆಳೆವಿವರ ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ
ನಂತರ photo ಮೇಲೆ ಕ್ಲಿಕ್ ಮಾಡಿದರೆ ನೀವು ಬೆಳೆದ ಬೆಳೆ ಹಾಗೂ ಫೋಟೊ ಅಪ್ಲೊಡ್ ಸರಿಯಾಗಿರುವುದನ್ನು ಪರಿಕ್ಷೀಸಿ.
ಬೆಳೆ ಸಮಿಕ್ಷೆ ಸರಿಯಾಗಿರದಿದ್ದರೆ, ಆಕ್ಷೇಪಣೆ ಸಲ್ಲಿಸಿದರೆ, ಪುನಃ ಬೆಳೆ ಸಮಿಕ್ಷೆ ಮಾಡಿ ಸರಿಪಡಿಸಲು ಅವಕಾಶವಿರುತ್ತದೆ.
ಏನಿದು ಬೆಳೆ ದರ್ಶಕ ಆ್ಯಪ್?
ಈ ಅಪ್ಲಿಕೇಶನ್ ಮಾಡಿದ ಉದ್ದೇಶ ಬೆಳೆ ಸಮೀಕ್ಷೆಯನ್ನು (Crop survey)ನೋಡಲು.. ಇದರಲ್ಲಿ ನೀವು ಅಪ್‌ಲೋಡ್ ಮಾಡಿದ ಚಿತ್ರಗಳನ್ನು ಮತ್ತು ಸಮೀಕ್ಷೆ ಮಾಡಿದ ಸರ್ವೇಯರ್ ವಿವರಗಳನ್ನು ನೋಡಬಹುದು.
ತಮ್ಮ ಮೊಬೈಲ್ ಮೂಲಕ ಬೆಳೆಗಳ ಸಮೀಕ್ಷೆ(Bele samikshe) ಮಾಡಬಹುದು. ಅಥವಾ ನೆರೆಯ ಖಾಸಗಿ ವ್ಯಕ್ತಿಗಳ (Private resident) ಮೊಬೈಲ್ ಮೂಲಕ ಜಮೀನುಗಳ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ನಿಮ್ಮ ಜಮೀನಿನ ಸರ್ವೆ ನಂಬರ್(Survey number) ಮತ್ತು ಜಮೀನಿನ ಫೊಟೋ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಮೊಬೈಲ್ ನಲ್ಲಿ Bele darshak app ಮೂಲಕ ಕ್ಷಣಾರ್ಧದಲ್ಲಿ ನೋಡಬಹುದು. ಒಂದು ವೇಳೆ ತಪ್ಪಾಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು.
ಬೆಳೆ ದರ್ಶಕ್ ಆ್ಯಪ್(bele darshaka app) ಇನ್ಸ್ ಸ್ಟಾಲ್ ಮಾಡಿಕೊಂಡ ನಂತರ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಇನ್ನಿತರ ಮಾಹಿತಿ ನಮೂದಿಸಬೇಕು. ಬೆಳೆ ದರ್ಶಕ್ ಆ್ಯಪ್(Bele darshaka application) ಮೂಲಕ ಜಮೀನಿನಲ್ಲಿ ಬೆಳೆ ಸಮೀಕ್ಷೆ (Bele samikshe)ಪ್ರಕಾರ ದಾಖಲಾಗಿರುವ ಬೆಳೆ ವಿವರಗಳು ಮತ್ತು ವಿಸ್ತೀರ್ಣದ ಮಾಹಿತಿ ಪಡೆಯಬಹುದು. ಬೆಳೆ ಸಮೀಕ್ಷೆ (Crop survey)ಸಮಯದಲ್ಲಿ ತೆಗೆಯಲಾದ ಜಿಪಿಎಸ್ ಆಧಾರಿತ (GPS Photo)ಛಾಯಾಚಿತ್ರಗಳನ್ನು ವೀಕ್ಷಿಸಬಹುದು. ಅಲ್ಲದೆ ರೈತರ ಜಮೀನಿನ ಬೆಳೆ ಸಮೀಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರ, (Mobile number)ರೈತರು ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ನೋಡಬಹುದು.
ಒಂದು ವೇಳೆ ಮಾಹಿತಿ ತಪ್ಪಾಗಿದ್ದರೆ ಆಕ್ಷೇಪಣೆ ಸಲ್ಲಿಸಬಹುದು.ಮೇಲ್ವಿಚಾರಕರು ಸೂಕ್ತ ಬೆಳೆಗಳನ್ನು ದಾಖಲಿಸಿ ರೈತರ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುತ್ತಾರೆ. ಇನ್ನೇಕೆ ತಡ ಒಮ್ಮೆ ನಿಮ್ಮ ಬೆಳೆ ಸಮೀಕ್ಷೆಯಲ್ಲಿ ಎಲ್ಲಾ ಸರ್ವೆ ನಂಬರ್, ಮಾಹಿತಿ ಹಾಗೂ ಫೋಟೋ ಸರಿಯಾಗಿ ಅಪ್ಲೋಡ್ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ಕೊಡಿ