ಕೃಷಿ ಮೇಳ-2024 ದಿನಾಂಕ ಪ್ರಕಟ, ಈ ವರ್ಷದ ವಿಶೇಷತೆಗಳ ಸಂಪೂರ್ಣ ಮಾಹಿತಿ-Dharwad krishimela 2024

<Krushirushi><ಕೃಷಿಮೇಳ 2024> <ಧಾರವಾಡ ಕೃಷಿಮೇಳ 2024> <ಧಾರವಾಡ ಕೃಷಿಮೇಳ><Krishi mela 2024> <Dharwad Krishi mela 2024> <Dharwad Krushi mela 2024> <Dharwad Krushi meal date> Dharwad krishimela 2024 date> <krushimela 2024> <UAS Dharwad Krushi meal 2024> <UASD> <UAS Dharwad krishimela 2024> <University of agricultural sciences Dharwad> <ಕೃಷಿ ವಿಶ್ವವಿದ್ಯಾಲಯ ಧಾರವಾಡ>

ಕೃಷಿ ಮೇಳ-2024 ದಿನಾಂಕ ಪ್ರಕಟ, ಈ ವರ್ಷದ ವಿಶೇಷತೆಗಳ ಸಂಪೂರ್ಣ ಮಾಹಿತಿ-Dharwad krishimela 2024

ಕೃಷಿ ಮೇಳ-2024 ದಿನಾಂಕ ಪ್ರಕಟ, ಈ ವರ್ಷದ ವಿಶೇಷತೆಗಳ ಸಂಪೂರ್ಣ ಮಾಹಿತಿ-Dharwad krishimela 2024


ಉತ್ತರ ಕರ್ನಾಟಕ ಭಾಗದ ರೈತ ಜಾತ್ರೆ ಎಂಬ ಪ್ರತೀತಿ ಪಡೆದ ಧಾರವಾಡ ಕೃಷಿ ಮೇಳಕ್ಕೆ ಕೃಷಿ ವಿಶ್ವ ವಿದ್ಯಾಲಯದ ಆವರಣ ಸಜ್ಜುಗೊಂಡಿದೆ. ನಾಲ್ಕು ದಿನ ಕೃಷಿ- ಖುಷಿ ಮೂಡಿಸಲಿರುವ ಮೇಳದಲ್ಲಿ ಜಾನುವಾರು, ಶ್ವಾನ ಪ್ರದರ್ಶನ ಗಮನ ಸೆಳೆಯಲಿದೆ. ಆವಿಷ್ಕಾರಗೊಂಡ ತಂತ್ರಜ್ಞಾನ, ಯಂತ್ರಧಾರೆ, ಸಂಶೋಧಿತ ಬೀಜ ಮಾರಾಟ ನಡೆಯಲಿದ್ದು ಕೃಷಿಕರ ಸಾಧನೆಯೂ ಅನಾವರಣಗೊಳ್ಳಲಿದೆ.

ರೈತರ ಪಾಲಿಗೆ ಹಬ್ಬದ ಸಂಭ್ರಮ ಮೂಡಿಸುವ ಧಾರವಾಡ ಕೃಷಿ ಮೇಳ ಸೆ. 21ರಿಂದ 24ರವರೆಗೆ ನಡೆಯಲಿದೆ. ಇದು ಸಿರಿಧಾನ್ಯಗಳ ಮಹತ್ವ ಸಾರಲಿದೆ. ಬರ ನಿರ್ವಹಣೆ ಕ್ರಮಗಳ ಬಗ್ಗೆಯೂ ರೈತರಿಗೆ ಅರಿವು ಮೂಡಿಸುವ ಕೆಲಸ ಆಗಲಿದೆ. ಇದರೊಂದಿಗೆ ಆವಿಷ್ಕಾರಗೊಂಡ ಯಂತ್ರಗಳ ಪ್ರದರ್ಶನ ಗಮನ ಸೆಳೆಯಲಿದೆ. ಇಲ್ಲಿಕೃಷಿಗೆ ಸಂಬಂಧಿಸಿದ ಸಂಪೂರ್ಣ ವೈಜ್ಞಾನಿಕ ಮಾಹಿತಿ ರೈತರಿಗೆ ಸಿಗಲಿದೆ.

ಸಂವಾದ, ಮಾಹಿತಿ, ಮಾರಾಟ

ಕೃಷಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ನೀಡಲು ನಾಲ್ಕೂ ದಿನ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರ ಆದಾಯ ದ್ವಿಗುಣ ಬಗ್ಗೆ ರೈತರೊಂದಿಗೆ ಸಂವಾದವೂ ನಡೆಯಲಿದೆ. ಸಂಶೋಧಿತ ತಳಿಗಳ ಬೀಜ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ನೈಸರ್ಗಿಕ, ಸಾವಯವ ಕೃಷಿ ಪದ್ಧತಿ, ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಡ್ರೋಣ್‌ ಬಳಕೆ, ಬರ ನಿರ್ವಹಣೆ, ಜಲಾನಯನ ಅಭಿವೃದ್ಧಿ, ಮಣ್ಣು ಆರೋಗ್ಯ, ಕೃಷಿ ಹಾಗೂ ತೋಟಗಾರಿಕೆ ಹುಟ್ಟುವಳಿಗಳ ರಫ್ತಿಗೆ ಇರುವ ಅವಕಾಶಗಳನ್ನು ಬಿಂಬಿಸುವ ಪ್ರದರ್ಶನಗಳು ನಡೆಯಲಿವೆ. ವಿವಿಧ ಆಹಾರ ಖಾದ್ಯಗಳ ರುಚಿಯನ್ನೂ ಸವಿಯಬಹುದು

500ಕ್ಕೂ ಹೆಚ್ಚು ಮಳಿಗೆಗಳು

ಕೃಷಿ ವಸ್ತು ಪ್ರದರ್ಶನಕ್ಕೆ 199 ಹೈಟೆಕ್‌ ಮಳಿಗೆಗಳು, 351 ಸಾಮಾನ್ಯ ಮಳಿಗೆಗಳು, 24 ಯಂತ್ರೋಪಕರಣ, 40 ಆಹಾರ ಮಳಿಗೆಗಳಿದ್ದು, 50 ಮಳಿಗೆಗಳಲ್ಲಿಜಾನುವಾರು ಪ್ರದರ್ಶನ ನಡೆಯಲಿದೆ. ಪರಿಸರ ಸಂರಕ್ಷಣೆ, ಕೃಷಿ ಯಂತ್ರೋಪಕರಣಗಳು, ಕೃಷಿ ಸಮಾಲೋಚನೆ, ವಿವಿಧ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಕೃಷಿ, ಅರಣ್ಯ ಜಾನುವಾರುಗಳ ಪ್ರದರ್ಶನ ಹುಟ್ಟುವಳಿಗಳ ಮೌಲ್ಯವರ್ಧನೆಗಾಗಿ ಅನುಷ್ಠಾನಗೊಂಡಿರುವ ವಿವಿಧ ಪ್ರಾತ್ಯಕ್ಷಿಕೆಗಳ ವೀಕ್ಷಣೆ ಮತ್ತು ಪ್ರದರ್ಶನ. ವಸ್ತ್ರ ವಿನ್ಯಾಸ ಇತ್ಯಾದಿ ವಿಶಿಷ್ಟತೆಗಳನ್ನು ಮೇಳದಲ್ಲಿ ನೋಡಬಹುದು.


ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://uasd.edu/%e0%b2%95%e0%b3%83%e0%b2%b7%e0%b2%bf%e0%b2%ae%e0%b3%87%e0%b2%b3-2024/

ಮಳಿಗೆ ಬುಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ,ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ತುಂಬಿ ಕೃಷಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು

Files