ಅಡಿಕೆ-ತೆಂಗಿನ ನಡುವೆ ಜಾಯಿಕಾಯಿ ಆಪತ್ಭಾಂದವ! ಜಾಯಿಕಾಯಿ ಕೃಷಿಯಿಂದ ಎಷ್ಟೆಲ್ಲಾ ಲಾಭಗಳಿವೆ ನಿಮಗೆ ಗೊತ್ತಾ..?-adike jayikai

<Krushirushi> <ಅಡಿಕೆ ಜಾಯಿಕಾಯಿ> <Adike jayikai> <ಜಾಯಿಕಾಯಿ> <ಅಡಿಕೆ ರೇಟು> >ಅಡಿಕೆ ಧಾರಣೆ> <ಅಡಿಕೆ ಬೆಲೆ> <ಅಡಿಕೆ ಮಾರುಕಟ್ಟೆ> <ಅಡಿಕೆ ರೇಟ್> <ಅಡಿಕೆ> <ಅಡಿಕೆ ಮಂಡಿ> <ಅಡಿಕೆ ಗಿಡ> <ಅಡಿಕೆ ತೋಟ> <Adike> <Adike rate> <adike plantation> <adike gida> <adike market> <adike mandi> <arecanut> <arecanut rate> <arecanut market> <arecanut plantation> <arecanut plant> <Arecanut export> <ರೈತ>

ಅಡಿಕೆ-ತೆಂಗಿನ ನಡುವೆ ಜಾಯಿಕಾಯಿ ಆಪತ್ಭಾಂದವ! ಜಾಯಿಕಾಯಿ ಕೃಷಿಯಿಂದ ಎಷ್ಟೆಲ್ಲಾ ಲಾಭಗಳಿವೆ ನಿಮಗೆ ಗೊತ್ತಾ..?-adike jayikai

ಅಡಿಕೆ-ತೆಂಗಿನ ನಡುವೆ ಜಾಯಿಕಾಯಿ ಆಪತ್ಭಾಂದವ!
ಜಾಯಿಕಾಯಿ ಕೃಷಿಯಿಂದ ಎಷ್ಟೆಲ್ಲಾ ಲಾಭಗಳಿವೆ ನಿಮಗೆ ಗೊತ್ತಾ..?

ಅಡಿಕೆ ಮತ್ತು ತೆಂಗು ನಮ್ಮ ಬಹುತೇಕ ರೈತರ ನೆಚ್ಚಿನ ತೋಟಗಾರಿಕೆ ಬೆಳೆಗಳು. ಬೆಳೆಯಲು ಸಾಧ್ಯತೆ ಇಲ್ಲದವರೂ ಈ ತೋಟಗಳೆಡೆಗೆ ಒಂದು ಸೆಳೆತ ಹೊಂದೇ ಇರುವರು. ಈ ಸೆಳೆತಕ್ಕೆ ಮುಖ್ಯ ಕಾರಣ ಅಡಿಕೆ ಮತ್ತು ತೆಂಗಿನ ತೋಟಗಳ ಲಾಭ ಮತ್ತು ಆ ಮರಗಳ ನೆರಳು ಬಳಸಿ ಅಂತರ ಬೆಳೆಯಾಗಿ ಮತ್ತಷ್ಟು ಲಾಭದಾಯಕ ಬೆಳೆಗಳ ಬೆಳೆಸಲು ಇರುವ ಸಾಧ್ಯತೆಗಳು.

ಕಣ್ಣಿಗೆ ಹಚ್ಚಸಿರ ನೋಟ ಬಹು ಬೆಳೆಗಳ ಅಡಿಕೆ-ತೆಂಗಿನ ತೋಟ. ಸೂಕ್ತ ಅಂತರ ನೋಡಿಕೊಂಡು ಯೋಜಿತವಾಗಿ ಅಡಿಕೆ ಮತ್ತು ತೆಂಗಿನ ನಡುವೆ ಜಾಯಿಕಾಯಿ, ಲವಂಗ, ಕೋಕೋ, ಕಿತ್ತಳೆ, ಕಾಳು ಮೆಣಸು, ಕಾಫಿ, ಏಲಕ್ಕಿ, ಸುವರ್ಣ ಗೆಡ್ಡೆ, ಕೆಸುವಿನ ಗೆಡ್ಡೆ, ಸಿಹಿ ಗೆಣಸು, ಗಾಂಧಾರಿ ಮೆಣಸು, ಶುಂಠಿ, ಅರಿಶಿಣ ಹೀಗೆ ಇನ್ನೂ ಹತ್ತು ಹಲವಾರು ಬೆಳೆಗಳನ್ನು ಬೆಳೆಯಲು ಮತ್ತು ಲಾಭಗಳಿಸಲು ಸದಾವಕಾಶಗಳುಂಟು.

ಜಾಯಿಕಾಯಿ ಒಂದು ದೀರ್ಘಾವಧಿ ಅಂತರ ಬೆಳೆಯಾಗಿ ನಮ್ಮ ರೈತರಿಗೆ ಹಾಗೂ ಅಡಿಕೆ ಮತ್ತು ತೆಂಗಿನ ತೋಟಕ್ಕೆ ಹೆಚ್ಚು ಲಾಭದಾಯಕ. ಅಂತರ ಬೆಳೆಯಾಗಿ ಏನೆಲ್ಲಾ ಉಪಯೋಗಗಳಿವೆ ಎಂದು ನೋಡುವುದಾದರೆ...

ಅ. ಜಾಯಿಕಾಯಿ ಮತ್ತು ಜಾಯಿ ಪತ್ರೆಗೆ ಇಳಿಕೆಯಿಲ್ಲದ ಏರುಗತಿಯ ಮಾರುಕಟ್ಟೆ ಬೆಲೆ ಮತ್ತು ಬೇಡಿಕೆ ಇದೆ. ಆಯುರ್ವೇದ ಮತ್ತು ಆಹಾರದಲ್ಲಿನ ಹೆಚ್ಚೆಚ್ಚು ಬಳಕೆಯೇ ಇದಕ್ಕೆ ಕಾರಣ. ಉದಾಹರಣೆಗೆ ನೋಡುವುದಾದರೆ ಇತ್ತೀಚಿನ ವರ್ಷಗಳಲ್ಲಿ ರೈಸ್ ಬಾತ್, ಪಲಾವ್, ಬಿರಿಯಾನಿ ಮತ್ತಿತರ ಸ್ಪೈಸಿ ಅಡುಗೆಗಳ ಆಸ್ವಾದನೆ 24*7 ಆಗಿದೆ.

ಆ. ಜಾಯಿಕಾಯಿ ಮರವು ತಾಯಿ ಬೇರಿನ ಜಾತಿಯದಾದ್ದ ಕಾರಣ ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಭೂಮಿಯ ಆಳಕ್ಕೆ ಮಳೆ ನೀರು ಹಿಂಗುವುದು. ನೀರು ಅಗತ್ಯವಿರುವ ಬೇಸಿಗೆಯ ದಿನಗಳಲ್ಲಿ ಭೂಮಿಯ ಆಳದಿಂದ ತೇವಾಂಶ ಪೂರೈಕೆಯಾಗುವುದು. 

ಇ. ಜಾಯಿಕಾಯಿ ಮರಗಳು ತೋಟಕ್ಕೆ ನೆರಳು ನೀಡಿ ಸೂರ್ಯನ ಬಿಸಿಲಿನಿಂದ  ಎರೆ ಹುಳುಗಳು ಮತ್ತು ಇತ್ಯಾದಿ ಸೂಕ್ಷ್ಮಾಣು ಜೀವಿಗಳನ್ನು ಸಂರಕ್ಷಿಸುವವು, ತೋಟದ ಫಲವತ್ತತೆ ಹೆಚ್ಚಲು ಹಾಗೂ ಮಣ್ಣಿನ ಆರೋಗ್ಯ ಕಾಯಲು ಸಹಕರಿಸುವವು.

ಈ. ಜಾಯಿಕಾಯಿ ಮರದ ಎಲೆಗಳು ಹಣ್ಣಾಗಿ ಬಿದ್ದು ಮಣ್ಣಿನಲ್ಲಿ ಹ್ಯೂಮಸ್ ಸೃಷ್ಟಿಯಾಗುವುದು. ಮಣ್ಣು ಸ್ವಾವಲಂಬಿ ಆಗುವುದು.

ಉ. ಜಾಯಿಕಾಯಿ ಮರಗಳು ಅಡಿಕೆ ಮತ್ತು ತೆಂಗಿನ ಮರಗಳ ನಡುವೆ ಸಾವಕಾಶವಾಗಿ, ಎತ್ತರವಾಗಿ ಬೆಳೆಯುವುದರಿಂದ ಬೇಸಿಗೆ ಮತ್ತು ಭೀಕರ ಬರಗಾಲದಲ್ಲೂ ಅಡಿಕೆ ಮತ್ತು ತೆಂಗಿನ ತೋಟ ಒಣಗದಂತೆ ಕಾಯುತ್ತವೆ.

ಊ. ಅಡಿಕೆ ಮತ್ತು ತೆಂಗಿನ ತೋಟಕ್ಕೆ ಬೀಸುವ ಬಿಸಿಗಾಳಿ ಮತ್ತು ಬಿರುಗಾಳಿ ನಿಯಂತ್ರಿಸಿ ತೋಟವನ್ನ ತಂಪಾಗಿಡುತ್ತವೆ, ತೇವಾಂಶ ಕಾಪಾಡುತ್ತವೆ.

ಋ. ಸೂಕ್ತ ಅಂತರ ಕೊಟ್ಟು ಅಡಿಕೆ ಮತ್ತು ತೆಂಗಿನ ನಡುವೆ ಜಾಯಿಕಾಯಿ ಬೆಳೆಯುವುದರಿಂದ ಅಡಿಕೆ ಮತ್ತು ತೆಂಗಿಗೆ ಬರುವ ರೋಗಗಳು ನಿಯಂತ್ರಣವಾಗುತ್ತವೆ. ಅಡಿಕೆ ಮತ್ತು ತೆಂಗಿನ ಮರಗಳು ಆರೋಗ್ಯವಾಗಿದ್ದು ಹೆಚ್ಚು ಫಸಲು ಕೊಡುತ್ತವೆ.

ಎ. ಯೋಜಿತವಾಗಿ ಅಂತರ ಬೆಳೆಯಾಗಿ ಜಾಯಿಕಾಯಿ ಗಿಡಗಳ ನೆಟ್ಟು ಬೆಳೆಸಿದರೆ ಜಾಯಿಕಾಯಿ ಮರಗಳು ಬೆಳೆದಂತೆಲ್ಲಾ ಅಡಿಕೆ ಮತ್ತು ತೆಂಗಿಗಿಂತಲೂ ಹೆಚ್ಚು ಲಾಭ ಜಾಯಿಕಾಯಿ ಮರಗಳಿಂದ ಸಿಗುವುದು.


ಹೆಚ್ಚಿನ ಮಾಹಿತಿಗಾಗಿ ಮತ್ತು ನೈಸರ್ಗಿಕ ಕೃಷಿಯಲ್ಲಿ ಬೆಳೆಸಿರುವ ಹಾಗೂ ಆರೈಕೆ ಮಾಡಲ್ಪಡುತ್ತಿರುವ ವೈವಿಧ್ಯ ಹಣ್ಣಿನ ಗಿಡಗಳು, ಸಾಂಬಾರ ಪದಾರ್ಥ ಹಾಗೂ ಮತ್ತಿತರ ಗಿಡಗಳಿಗಾಗಿ ಸಂಪರ್ಕಿಸಿ : 

ಪೂಚಂತೇ ಪರಪಂಚ 
ವಿಸ್ಮಯಗಳ ಅಕ್ಷಯ ಪಾತ್ರೆ!
ಬೆಳವಾಡಿ 
9591066583
_________________________

ತಮ್ಮ ಕನಸಿನ ತೋಟ ಕಟ್ಟಲು ಇದು ಸಕಾಲ  'ಪೂಚಂತೇ ಪರಪಂಚ'ದಲ್ಲಿ ವೈವಿಧ್ಯ ಗಿಡಗಳು ಲಭ್ಯ-Punchathe parapanch -
 https://krushirushi.in/Punchate-prapanch