Duplicate Arecanut-ಅಡಿಕೆ ಬೆಳೆಗಾರರಿಗೆ ಸಂಕಷ್ಟ,ಮಾರುಕಟ್ಟೆಗೆ ಲಗ್ಗೆ ಇಟ್ಟ ನಕಲಿ ಅಡಿಕೆ

<Krushirushi> <ಅಡಿಕೆ ಬಿಡಿ ನಿಂಬೆ ನೆಡಿ> <Lemon plantation> <ಅಡಿಕೆ ಬೆಳೆ> <ಅಡಿಕೆ> <ಅಡಿಕೆ ಕ್ಷೇತ್ರ> <ಅಡಿಕೆ ರೇಟ್> <ಅಡಿಕೆ ಬೆಲೆ><Arecanut variety> <Arecanut cultivation> <Arecanut> <Arecanut price> <Arecanut> <Arecanut area> <Areca>

Duplicate Arecanut-ಅಡಿಕೆ ಬೆಳೆಗಾರರಿಗೆ ಸಂಕಷ್ಟ,ಮಾರುಕಟ್ಟೆಗೆ ಲಗ್ಗೆ ಇಟ್ಟ ನಕಲಿ ಅಡಿಕೆ

Duplicate Arecanut-ಅಡಿಕೆ ಬೆಳೆಗಾರರಿಗೆ ಸಂಕಷ್ಟ,ಮಾರುಕಟ್ಟೆಗೆ ಲಗ್ಗೆ ಇಟ್ಟ ನಕಲಿ ಅಡಿಕೆ

 ಅಡಕೆ ಮಾರುಕಟ್ಟೆಗೆ ನಕಲಿ ದಾಳಿ ಇಟ್ಟಿದ್ದು, ಇದರಬಗ್ಗೆ ಜಾಗರೂಕರಾಗಿರುವಂತೆಅಂತಾ ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಪೋ ಬೆಳೆಗಾರ ರಿಗೆ ಎಚ್ಚರಿಕೆ ನೀಡಿದೆ.
ಕೆಲವು ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಕಸ್ಟಮ್ಸ್ ಕಚೇರಿಯಿಂದ ಅಡಕೆಯ ಮಾದರಿ ಯನ್ನು ಅದರವಿಶ್ಲೇಷಣೆಗಾಗಿಅಧಿಕಾರಿಗಳು ಮಂಗಳೂರಿನಕ್ಯಾಂಸ್ಕೋದ ಅಡಕೆ ಸಂಶೋ ಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ ಕಳುಹಿಸಿ ಕೊಟ್ಟಿದ್ದರು. ಕಸ್ಟಮ್ಸ್ ಹೇಳಿಕೆಯ ಪ್ರಕಾರ ಅವರು 900 ಕೆಜಿಯಷ್ಟು ಅಂತಹ ಮಾಲನ್ನು ತಡೆ ಹಿಡಿದಿದ್ದರು. ತಡೆಹಿಡಿದ ಮಾಲಿನ ಮೌಲ್ಯ 4.50ಲಕ್ಷ ಎಂದುತಿಳಿಸಲಾಗಿತ್ತು.
ಆ ಮಾಲು ಹೊರಗಿನಿಂದ ನೋಡಲು ಕೆಂಪು ಅಡಕೆ (ಬೆಟ್ಟೆ)ಯನ್ನು ಹೋಲುತ್ತಿತ್ತು. ಆದರೆ, ಅವುಗಳನ್ನು ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಡಾ.ಕೇಶವ ಭಟ್ ಅವರು ವಿಶ್ಲೇಷಿಸಿದಾಗ ಅವುಗಳು ಯಾವುದೂ ಅಡಕೆಯೇ ಆಗಿರಲಿಲ್ಲ. ಬದ ಲಾಗಿ ಯಾವುದೋ ಬೇರೆ ಕಾಯಿಯನ್ನು ತುಂಡರಿಸಿ ಅದಕ್ಕೆ ಅಡಕೆ ಚೊಗರನ್ನು ಲೇಪಿಸಿ ದಂತೆ ಕಂಡು ಬಂದಿತ್ತು. ಒಳಗಡೆಯ ರಚನೆ ಅಡಕೆಯ ರಚನೆಯಂತೆ ಇರದೆ ಬಿಳಿ ಬಣ್ಣದಿಂದ ಕೂಡಿತ್ತು ಎಂಬುದನ್ನು ಪತ್ತೆ ಮಾಡಿದ್ದರು.


ಈ ರೀತಿಯಲ್ಲಿ ನಕಲಿ ಅಡಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುಂಪು ಇರುವುದು ಅಡಕೆ ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ. ಅಡಕೆ ವರ್ತಕರು ಅದರಲ್ಲೂ ಕೆಂಪಡಕೆ ವ್ಯವಹಾರ ಮಾಡುವವರು ಈ ನಿಟ್ಟಿನಲ್ಲಿ ಅತ್ಯಂತ ಜಾಗರೂಕರಾಗಿರು ವುದು ತುಂಬಾ ಅವಶ್ಯ. ಈ ವಿಷಯವನ್ನು ಕೇಂದ್ರ ಕೃಷಿ ಮಂತ್ರಾ ಲಯದ ಅಧೀನದ ಕಲ್ಲಿಕೋಟೆಯಲ್ಲಿರುವ ಅಡಕೆ ನಿರ್ದೇಶನಾ ಲಯದ ಗಮನಕ್ಕೆ ತರಲಾಗಿದೆ.

ಇದನ್ನೂ ಓದಿ

ರಾಜ್ಯದ 6 ಲಕ್ಷ ರೈತರಿಗಿಲ್ಲ ಪಿಎಂ ಕಿಸಾನ್ ಹಣ,ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ-pmkisan 19th instalment ineligible list

https://krushirushi.in/Pmkisan-19th-instalment-ineligible-list-1732