FID survey number link-ಎಫ್ ಐಡಿಗೆ ಲಿಂಕ್ ಆದ ಸರ್ವೆ ನಂಬರ್ ಗಳಿಗೆ ಮಾತ್ರ ಬೆಳೆಹಾನಿ ಪರಿಹಾರ,ನಿಮ್ಮ FID ಗೆ ಎಷ್ಟು ಸರ್ವೆ ನಂಬರ್ ಲಿಂಕ್ ಆಗಿದೆ ಚೆಕ್ ಮಾಡಿ
<Krushirushi> <ಸರ್ವೆ ನಂಬರ್> <Survey number> <Direct benefit transfer> <DBT> <ಬರಪರಿಹಾರ ಪಟ್ಟಿ> <Baraparihara patti> <Drought relief eligible list> <ಫ್ರೂಟ್ಸ್ ಐಡಿ> <ಬೆಳೆವಿಮೆ> <ಬೆಳೆಸಾಲ> <Cropinsurance> <crop insurance> <belevime> <bele vime> <bele sala> <belesala> <ಬೆಳೆ ಸಾಲ> <ಬೆಳೆ ವಿಮೆ> <FID> <Fruits ID> <How many survey numbers are in your FID> <ರೈತ> <ಹಣ> <ಸಂದಾಯ> <ಬೆಳೆಸುದ್ದಿ> <ನೇರ ನಗದು ವರ್ಗಾವಣೆ> <ನೇರ ಲಾಭ ವರ್ಗಾವಣೆ>
FID survey number link-ಎಫ್ ಐಡಿಗೆ ಲಿಂಕ್ ಆದ ಸರ್ವೆ ನಂಬರ್ ಗಳಿಗೆ ಮಾತ್ರ ಬೆಳೆಹಾನಿ ಪರಿಹಾರ
ಫ್ರುಟ್ಸ್ ನಲ್ಲಿ ನೊಂದಣಿ ಮಾಡಿಕೊಳ್ಳದೇ ಇರುವ ರೈತರು ಕೂಡಲೆ ಫ್ರುಟ್ಸ್ನಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೆ ಫ್ರುಟ್ಸ್ನಲ್ಲಿ ನೊಂದಣಿ ಮಾಡಿಸಿಕೊಂಡವರು ಎಲ್ಲಾ ಸರ್ವೆ ನಂಬರ್ ಗಳನ್ನು ನಿಮ್ಮ FIDಗೆ ಲಿಂಕ್ ಮಾಡಬೇಕು, ಅಂದರೆ ಉದಾಹರಣೆಗೆ 7 ಎಕರೆ ಇದ್ದರೂ, ಕೇವಲ 01 ಎಕರೆ ಮಾತ್ರ ನಮೂದಿಸಿರುತ್ತಾರೆ, ಅಂತಹವರಿಗೆ ಕೇವಲ 01 ಎಕರೆಗೆ ಮಾತ್ರ ಪರಿಹಾರ ಮೊತ್ತ ಬರುತ್ತದೆ, ಹೀಗಾಗಿ ರೈತರು ತಮ್ಮ ಜಮೀನಿನ ಸರಿಯಾದ ಪಹಣಿಯ ವಿಸ್ತೀರ್ಣದ ಪ್ರಮಾಣವನ್ನು ಫ್ರುಟ್ಸ್ ನಲ್ಲಿ ದಾಖಲಿಸಿಕೊಂಡಲ್ಲಿ ಮಾತ್ರ, ಅಂತಹವರಿಗೆ ಅವರ ಜಮೀನಿನ ವಿಸ್ತೀರ್ಣತೆಗೆ ಅನುಗುಣವಾಗಿ ಗರಿಷ್ಟ ಬೆಳೆ ಪರಿಹಾರ ಹಣ ಪಾವತಿಯಾಗುತ್ತದೆ, ಇಲ್ಲದಿದ್ದಲ್ಲಿ ಅವರು ನಮೂದಿಸಿರುವ ಜಮೀನಿನ ವಿಸ್ತೀರ್ಣತೆಗೆ ಮಾತ್ರ ಪರಿಹಾರ ಹಣ ಪಾವತಿಯಾಗುತ್ತದೆ. ಹೀಗಾಗಿ ರೈತರು ತಮ್ಮ ಜಮೀನಿನ ಸರಿಯಾದ ವಿಸ್ತೀರ್ಣದ ಪ್ರಮಾಣವನ್ನು ಫ್ರುಟ್ಸ್ ನಲ್ಲಿ ನೊಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ನಿಮ್ಮ FID ಗೆ ಎಷ್ಟು ಸರ್ವೆ ನಂಬರ್ ಲಿಂಕ್ ಆಗಿದೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://fruits.karnataka.gov.
ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ."Citizen Registration" ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,I agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ನಂಬರ್, ಇಮೆಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Submit ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಬೇಕಾದ password create ಮಾಡಿ
Mobile number,Create ಮಾಡಿದ password ಹಾಗೂ captcha code ಹಾಕಿ ಲಾಗಿನ್ ಮಾಡಿ
ನಂತರ ಮುಖಪುಟದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, Search ಮೇಲೆ ಕ್ಲಿಕ್ ಮಾಡಿ
ನಂತರ Registration status ಮೇಲೆ ಕ್ಲಿಕ್ ಮಾಡಿದರೆ ನಿಮ್ಮ FIDಗೆ ಯಾವ ಯಾವ ಸರ್ವೆ ನಂಬರ್ ಗಳನ್ನು ಸೇರಿಸಲಾಗಿದೆ ಎಂದು ತೋರಿಸುತ್ತದೆ
ನಿಮ್ಮ ಸರ್ವೆ ನಂಬರ್ ಗಳು ನಿಮ್ಮ FIDಯಲ್ಲಿ ಸೇರಿಸದಿದ್ದರೆ,ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಬೇಟಿ ಕೊಟ್ಟು ನಿಮ್ಮ ಎಲ್ಲಾ ಸರ್ವೆ ನಂಬರ್ ಗಳನ್ನು ಸೇರಿಸಿಕೊಳ್ಳಿ.
FID based bele parihara-FID ಇದ್ದವರಿಗೆ ಮಾತ್ರ ಬೆಳೆಹಾನಿ ಪರಿಹಾರ,ನಿಮ್ಮ FID ಹಾಕಿ ಬೆಳೆಹಾನಿ ಪರಿಹಾರ ಚೆಕ್ ಮಾಡಿ
ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರ ಮೇಲೆ (FRUITS ID) ಪ್ರೊಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮೆ ಮಾಡಲಾಗಿದೆ. ಬಾಕಿ ಉಳಿದ ಅರ್ಹ ರೈತರಿಗೆ ಹಂತ ಹಂತವಾಗಿ ಪರಿಹಾರ ಪಾವತಿಸುವ ಕಾರ್ಯವು ಪ್ರಗತಿಯ ಹಂತದಲ್ಲಿದ್ದು ತುರ್ತಾಗಿ ಕ್ರಮಕೈಗೊಳ್ಳಲಾಗುವುದು.
ಈಗಾಗಲೇ ಅನುಮೊದನೆ ನೀಡಿರುವ ರೈತರ ಮಾಹಿತಿಯ ಪಟ್ಟಿಯನ್ನು ನಾಡ ಕಚೇರಿಗಳು, ಗ್ರಾಮ ಪಂಚಾಯತಿಗಳು, ರೈತ ಸಂಪರ್ಕ ಕೇಂದ್ರಗಳು ಹಾಗೂ ತಹಶೀಲ್ದಾರ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಚುರಪಡಿಸಲಾಗಿದೆ.
ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು (FRUITS ID) ಪ್ರೊಟ್ಸ್ ಐಡಿ ಕಡ್ಡಾಯವಾಗಿರುವುದರಿಂದ ಇದುವರೆಗೂ ಪ್ರೊಟ್ಸ್ ಐಡಿ ಮಾಡಿಸಿಕೊಳ್ಳದೇ ಇರುವ ರೈತರು ನಿಗದಿತ ಅವಧಿಯಲ್ಲಿ ತಮ್ಮ ಆಧಾರ್, ಬ್ಯಾಂಕ್ ಖಾತೆಯ ವಿವರ ಹಾಗೂ ಪಹಣಿ ಮಾಹಿತಿಯನ್ನುಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ (FRUITS ID) ಪ್ರೊಟ್ಸ್ ಐಡಿ ಸೃಜಿಸಿಕೊಳ್ಳಬಹುದು. (FRUITS ID) ಪ್ರೊಟ್ಸ್ ಐಡಿ ಇಲ್ಲದ ರೈತರು ಬೆಳೆ ಪರಿಹಾರ ಪಡೆಯಲು ಸಾಧ್ಯಾವಾಗುವುದಿಲ್ಲವೆಂದು ಅವರು ತಿಳಿಸಿದ್ದಾರೆ.
ಮೊದಲು ನಿಮ್ಮ FID ನಂಬರ್ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://fruitspmk.karnataka.gov.in/MISReport/GetDetailsByAadhaar.aspx
ನಂತರ ನಿಮ್ಮ ಆಧಾರ್ ನಂಬರ್ ಹಾಕಿ,search ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ FID ದೊರೆಯಲಿದೆ.
ನಂತರ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service92/
ನಂತರ ವರ್ಷ,ಋುತು,ವಿಪತ್ತು ಆಯ್ಕೆ ಮಾಡಿ, Get data/ಹುಡುಕು ಮೇಲೆ ಕ್ಲಿಕ್ ಮಾಡಿ
ನಂತರ Farmer ID/ರೈತರ ಗುರುತಿನ ಸಂಖ್ಯೆ (FID) ನಂಬರ್ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ FID ನಂಬರ್ ಹಾಕಿ Fetch/ಪಡೆಯಿರಿ ಮೇಲೆ ಕ್ಲಿಕ್ ಮಾಡಿದರೆ ಈ ಕೆಳಗಿನಂತೆ ನಿಮ್ಮ FID ನಂಬರ್ ಗೆ ಎಷ್ಟು ಬೆಳೆಹಾನಿ ಪರಿಹಾರ ಜಮಾ ಆಗಿದೆ ಎಂದು ತಿಳಿಯಲಿದೆ
ಇದನ್ನೂ ಓದಿ
Survey number based croploss compensation-ನಿಮ್ಮ ಸರ್ವೆ ನಂಬರ್ ಹಾಕಿ ನಿಮ್ಮ ಸರ್ವೆ ನಂಬರ್ ಗೆ ಎಷ್ಟು ಬೆಳೆಹಾನಿ ಪರಿಹಾರ ಜಮಾ ಆಗಿದೆ ಎಂದು ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service92/
ನಂತರ ವರ್ಷ,ಋುತು,ವಿಪತ್ತು ಆಯ್ಕೆ ಮಾಡಿ, Get data/ಹುಡುಕು ಮೇಲೆ ಕ್ಲಿಕ್ ಮಾಡಿ
ನಂತರ Survey number/ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ,ಸರ್ವೆ ನಂಬರ್,ಸರ್ ನಾಕ್,ಹಿಸ್ಸಾ ನಂಬರ್ select ಮಾಡಿ Get data/ಪಡೆಯಿರಿ ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ ನಿಮ್ಮ ಸರ್ವೆ ನಂಬರ್ ಗೆ ಎಷ್ಟು ಬೆಳೆಹಾನಿ ಪರಿಹಾರ ಜಮಾ ಆಗಿದೆ ಎಂದು ತಿಳಿಯಲಿದೆ.