ಪ್ರತಿ ಕೆಜಿಗೆ 34 ರೂಪಾಯಿಯಂತೆ 10 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ದಾರರಿಂದ ದಂಡ ವಸೂಲಿಗೆ ಮುಂದಾದ ರಾಜ್ಯ ಸರ್ಕಾರ,ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ-Fake ration card list

<Krushirushi> <ರದ್ದಾದ ರೇಷನ್ ಕಾರ್ಡ್ ಪಟ್ಟಿ 2024> <Canceled suspended ration card list 2024> <ರೇಷನ್ ಕಾರ್ಡ್ ಲಿಸ್ಟ್> <ರೇಷನ್ ಕಾರ್ಡ್ ಪಟ್ಟಿ> <ರೇಷನ್ ಕಾರ್ಡ್ ತಿದ್ದುಪಡಿ ಸ್ಟೇಟಸ್><Ration Card correction status 2024> <amendment requests> <ಅಗಸ್ಟ ತಿಂಗಳ ಅನ್ನಭಾಗ್ಯ ಹಣ> <August month Annabhagya amount> <ಆಧಾರ್ ಬ್ಯಾಂಕ್ ಲಿಂಕ್> <ಅನ್ನ ಭಾಗ್ಯ> <Annabhagya> <Anna bhagya> <ಆಧಾರ್ ರೇಷನ್ ಕಾರ್ಡ್ ಲಿಂಕ್> <Aadhaarrationlink> <Rationcard> <BPLcard> <APLcard> <BPL Card> <APL Card> <ರೇಷನ್ ಕಾರ್ಡ್> <How to download ration card> <ಪಡೀತರಚೀಟಿ> <ಅನ್ನಭಾಗ್ಯ> <Ration card name addition> <ration card name change> <Ration card name deletion> <ration card name addition and deletion> <fake ration card list>

ಪ್ರತಿ ಕೆಜಿಗೆ 34 ರೂಪಾಯಿಯಂತೆ 10 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ದಾರರಿಂದ ದಂಡ ವಸೂಲಿಗೆ ಮುಂದಾದ ರಾಜ್ಯ ಸರ್ಕಾರ,ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ-Fake ration card list

ಪ್ರತಿ ಕೆಜಿಗೆ 34 ರೂಪಾಯಿಯಂತೆ 10 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ದಾರರಿಂದ ದಂಡ ವಸೂಲಿಗೆ ಮುಂದಾದ ರಾಜ್ಯ ಸರ್ಕಾರ,ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ-Fake ration card list 

ರಾಜ್ಯದಲ್ಲಿ ಅಕ್ರಮ ರೇಷನ್‌ ಕಾರ್ಡ್‌ದಾರರ ಸಂಖ್ಯೆ ಹೆಚ್ಚಳವಾಗಿದೆ. ಆಹಾರ ಇಲಾಖೆಯು 10 ಲಕ್ಷ ಕಾರ್ಡ್‌ಗಳನ್ನು ಪತ್ತೆ ಮಾಡಿದ್ದು, ಇದರಲ್ಲಿ ಶ್ರೀಮಂತರು, 4 ಸಾವಿರ ಸರ್ಕಾರಿ ನೌಕರರು ಇದ್ದಾರೆ. ಯಾರೆಲ್ಲಾ ಅನರ್ಹವಾಗುತ್ತಾರೆ? ಏನೆಲ್ಲಾ ನಿಯಮಗಳಿವೆ? ಎಷ್ಟು ದಂಡ ಹಾಕಲಾಗುತ್ತದೆ? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ಅಕ್ರಮ ದಾಖಲೆ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಿರುವವರ ಪತ್ತೆಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಅಧಿಕಾರಿಗಳು ಸಮರ ಸಾರಿದ್ದಾರೆ.

ರಾಜ್ಯದಲ್ಲಿ 10,97,621 ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆಯಾಗಿದೆ. ಈ ಪೈಕಿ 98,431 ಮಂದಿ ಆದಾಯ ತೆರಿಗೆ ಪಾವತಿದಾರರು, 10,04,716 ಮಂದಿ 1.20 ಲಕ್ಷ ರೂ.ಗೂ ಅಧಿಕ ಆದಾಯ ಹೊಂದಿರುವವರು, 4,036 ಮಂದಿ ಸರ್ಕಾರಿ ನೌಕರರಿರುವುದು ಇಲಾಖೆಯ ದಾಖಲೆಯಲ್ಲಿದೆ.

ದಶಕಗಳಿಂದೀಚೆಗೆ ಬಿಪಿಎಲ್ ಕಾರ್ಡ್ ರಾಜ್ಯಾದ್ಯಂತ ವಿಪರೀತ ಏರಿಕೆಯಾಗಿದ್ದು, ಇದು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ತಿಂಗಳಿಗೆ ಕೋಟ್ಯಂತರ ರೂ. ಹೊರೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಕ್ರಮ ಬಿಪಿಎಲ್‌ ಕಾರ್ಡ್‌ಗಳ ಪತ್ತೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಯಾವುದೇ ಕುಟುಂಬದಲ್ಲಿ ಸರ್ಕಾರಿ , ಅರೆ ಸರ್ಕಾರಿ ನೌಕರರಿದ್ದಲ್ಲಿ, ತೆರಿಗೆ ಪಾವತಿದಾರರಿದ್ದಲ್ಲಿ, 4 ಚಕ್ರದ ಬಿಳಿ ಬೋರ್ಡ್‌ ವಾಹನ ಹೊಂದಿದವರು, ಆದಾಯ ತೆರಿಗೆ ಪಾವತಿಸುವ ಕುಟುಂಬ, ಒಂದೇ ಮನೆಯಲ್ಲಿ ವಾಸವಿದ್ದು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿದ್ದರೆ, 7.5 ಎಕರೆಗಿಂತ ಹೆಚ್ಚಿನ ಡಿ ವರ್ಗದ ಅಥವಾ ತತ್ಸಮಾನ ಭೂಮಿ ಹೊಂದಿದ್ದರೆ, ವಾರ್ಷಿಕ 1,20,000 ರೂ.ಗಿಂತ ಹೆಚ್ಚು ಆದಾಯ ಹೊಂದಿದ್ದರೆ, ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವ ಕುಟುಂಬ ಬಿಪಿಎಲ್ ಪಡೆಯಲು ಅವಕಾಶವಿಲ್ಲ. ಈ ಮಾನದಂಡ ಉಲ್ಲಂಘಿಸಿ ರಾಜ್ಯಾದ್ಯಂತ ಬಿಪಿಎಲ್‌ ಕಾರ್ಡ್ ಪಡೆದುಕೊಂಡಿದ್ದಾರೆ. ಇದರಲ್ಲಿ ರಾಜ್ಯ, ಕೇಂದ್ರ ಸರ್ಕಾರಿ ನೌಕರರು, ಅರೆ ಸರ್ಕಾರಿ ನೌಕರರು ಅಕ್ರಮವಾಗಿ ಬಿಪಿಎಲ್ ಪಡೆಯುತ್ತಿರುವುದು ಪತ್ತೆಯಾಗಿದೆ.

ಕಲಬುರಗಿ ಹೆಚ್ಚು! ಚಿಕ್ಕಬಳ್ಳಾಪುರ ಕಡಿಮೆ
ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಪಡೆದ ಜಿಲ್ಲೆಗಳ ಪೈಕಿ ಕಲಬುರಗಿ ಜಿಲ್ಲೆ (78,058 ) ಯಲ್ಲಿ ಅತಿ ಹೆಚ್ಚಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಅತೀ ಕಡಿಮೆ (8,346) ಸಂಖ್ಯೆ ಹೊಂದಿದೆ. ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಅಕ್ರಮ ಬಿಪಿಎಲ್ ಕಾರ್ಡ್ ಇರುವ ಜಿಲ್ಲೆಗಳಲ್ಲಿ ಬೆಳಗಾವಿ, ಬೆಂಗಳೂರು, ಬೀದ‌ರ್, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕಲಬುರಗಿ, ಕೋಲಾರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿವೆ. 10 ಸಾವಿರಕ್ಕಿಂತ ಕಡಿಮೆ ಅಕ್ರಮ ಬಿಪಿಎಲ್ ಕಾರ್ಡ್ ಪಡೆದ ಜಿಲ್ಲೆಗಳಲ್ಲಿ ಬೆಂಗಳೂರು ಪೂರ್ವ, ಚಿಕ್ಕಬಳ್ಳಾಪುರ, ಕೊಪ್ಪಳ, ಯಾದಗಿರಿ ಜಿಲ್ಲೆಗಳಿವೆ.

4 ಸಾವಿರ ಸರ್ಕಾರಿ ಉದ್ಯೋಗಿಗಳು
ಅಕ್ರಮ ಕಾರ್ಡ್ ಪಡೆದವರಲ್ಲಿ 4,036 ಮಂದಿ ಸರ್ಕಾರಿ ಉದ್ಯೋಗಿಗಳಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 369 ಸರ್ಕಾರಿ ಉದ್ಯೋಗಿಗಳು ಅಕ್ರಮವಾಗಿ ಬಿಪಿಎಲ್ ಪಡೆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಮಂದಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಬಾಗಲಕೋಟೆ, ಬೆಳಗಾವಿ, ಬೆಂಗಳೂರು, ಕಲಬುರಗಿ, ರಾಯಚೂರು, ತುಮಕೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ತಲಾ 150ಕ್ಕೂ ಅಧಿಕ ಸರ್ಕಾರಿ ಉದ್ಯೋಗಿಗಳು ಅಕ್ರಮವಾಗಿ ಬಿಪಿಎಲ್ ಪಡೆದಿದ್ದಾರೆ.

ಅಕ್ರಮ ಪಡಿತರ ಪಡೆದವರ ದಂಡ ಪ್ರಯೋಗ
ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಮಾನದಂಡಗಳನ್ನು ಮೀರಿ ಬಿಪಿಎಲ್‌ ಕಾರ್ಡ್ ಪಡೆದುಕೊಂಡು ಸರಕಾರಕ್ಕೆ ಪರೋಕ್ಷವಾಗಿ ದೋಖಾ ಮಾಡಿದವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಸರಕಾರ ತೀರ್ಮಾನಿಸಿದೆ. ಬಿಪಿಎಲ್ ಅಕ್ರಮ ಪಡೆದವರು ಯಾವ ವರ್ಷ, ಯಾವ ದಿನಾಂಕದಿಂದ ಅಕ್ರಮ ಪತ್ತೆಯಾಗುವವರೆಗೆ ನಿರಂತರ ಪಡಿತರ ಪಡೆದುಕೊಂಡಿದ್ದಾರೆ ಎಂಬ ಲೆಕ್ಕಾಚಾರ ಮಾಡಿ (ಕೆಜಿಗೆ 34 ರೂ.) ಅವರ ಮೇಲೆ ದಂಡ ಪ್ರಯೋಗ ಮಾಡಲು ನಿರ್ದೇಶನ ನೀಡಲಾಗಿದೆ. ಇದರಿಂದ 5ಕ್ಕೂ ಅಧಿಕ ವರ್ಷಗಳಿಂದ ಅಕ್ರಮ ಬಿಪಿಎಲ್ ಪಡೆದವರು ಭಾರಿ ದೊಡ್ಡ ಮೊತ್ತವನ್ನೇ ದಂಡವಾಗಿ ಕಟ್ಟಬೇಕಾಗಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಕಾರು ಮಾಲೀಕರಿಗೂ ಬಿಪಿಎಲ್ ಕಾರ್ಡ್‌!
ಸ್ವಿಫ್ಟ್ ರಿಟ್ಸ್ ಬಲೆನೋ, ಇಕೊ, ರೆನಾಲ್ಟ್, ಸೆಲೆರಿಯೋ, ಅಲ್ಲೋ, ವ್ಯಾಗನರ್, ಟಾಟಾ ಟಿಯಾಗೋ, ಇಯಾನ್, ಎಸ್-ಕ್ರಾಸ್ ಸ್ಮಾರ್ಟ್ ಹೈಬ್ರಿಡ್, ಬಲೆನೋ ಡೆಲ್ಟ್ ಇನೋವಾ ಕ್ರಿಸ್ಟಾ, ಇಗ್ನಿಸ್ ಡೆಲ್ಟಾ, ಟೊಯೊಟಾ ಯಾರಿಸ್, ಬ್ರೆಝಾ, ಇತಿಯೋಸ್ ಲಿವಾ ಸೇರಿದಂತೆ ಐಷಾರಾಮಿ ಕಾರುಗಳನ್ನು ಹೊಂದಿರುವವರು, ಐಷಾರಾಮಿ ಜೀವನ ನಡೆಸುವವರೇ ಇಲಾಖೆಗೆ ತಪ್ಪು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದಿರುವುದು ಪತ್ತೆಯಾಗಿದೆ.

ಅನರ್ಹ ಪಟ್ಚಿಯಲ್ಲಿ(fake ration card list) ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

https://ahara.kar.nic.in/Home/EServices

ನಂತರ ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ

ನಂತರ ಕೆಳಗಡೆ e-Ration Card ಮೇಲೆ ಕ್ಲಿಕ್ ಮಾಡಿ

ನಂತರ Show cancelled/suspended list ಮೇಲೆ ಕ್ಲಿಕ್ ಮಾಡಿ

ನಂತರ ನಿಮ್ಮ ಜಿಲ್ಲೆ,ತಾಲೂಕು,ತಿಂಗಳು,ವರ್ಷ select ಮಾಡಿ,Go ಮೇಲೆ ಕ್ಲಿಕ್ ಮಾಡಿ

ನಂತರ ಈ ಕೆಳಗಿನಂತೆ ಅನರ್ಹ ಪಟ್ಟಿ ಸಿಗಲಿದೆ,ಇದರಲ್ಲಿ ನಿಮ್ಮ ಹೆಸರಿದ್ದರೆ,ನಿಮಗೆ ಈ ತಿಂಗಳಿನಿಂದ ಅನ್ನಭಾಗ್ಯ ಹಾಗೂ ಗೃಹಲಕ್ಷ್ನಿ ಹಣ ಸಿಗುವುದಿಲ್ಲ

Fake ration card list