Fid based bele parihara-ಫ್ರೂಟ್ಸ್ ತಂತ್ರಾಂಶದಲ್ಲಿರುವ ಶೇಕಡಾ 75% ರೈತರಿಗೆ ಮಾತ್ರ ಬೆಳೆ ಪರಿಹಾರ, ತಂತ್ರಾಂಶದಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್
ಬೆಳೆ ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿರುವ ಅಂಕಿ ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗಲಿದೆ(Fid based bele parihara)

Fid based bele parihara-ಫ್ರೂಟ್ಸ್ ತಂತ್ರಾಂಶದಲ್ಲಿರುವ ಶೇಕಡಾ 75% ರೈತರಿಗೆ ಮಾತ್ರ ಬೆಳೆ ಪರಿಹಾರ, ತಂತ್ರಾಂಶದಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್ ಲಿಂಕ್
ಬೆಳೆ ಪರಿಹಾರದಲ್ಲಿ(Bele parihara) ಬೆಳೆ ಸಮೀಕ್ಷೆ(crop survey) ದತ್ತಾಂಶ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿರುವ(Fruits portal) ಅಂಕಿ ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ(crop loss compensation)ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ(DBT) ಪಾವತಿಯಾಗುವುದರಿಂದ, ರೈತರು ತಮ್ಮ ಜಮೀನಿನ ನಿಖರವಾದ ವಿಸ್ತೀರ್ಣವನ್ನು ಫ್ರುಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ನಷ್ಟ ವಿವರವನ್ನು ನಮೂದಿಸಿ, ಅದಕ್ಕನುಗುಣವಾಗಿ ಪರಿಹಾರ ಮೊತ್ತ ನೀಡುವ ವ್ಯವಸ್ಥೆ ಇತ್ತು. ಸರ್ಕಾರವು 2024-25 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವನ್ನು ಬೆಳೆ ಸಮೀಕ್ಷೆ ಮತ್ತು ಫ್ರುಟ್ಸ್ ನಲ್ಲಿ ನೊಂದಣಿಯಾಗಿರುವ ಬೆಳೆ ಮತ್ತು ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಿರುವುದರಿಂದ, ರೈತರು ತಮ್ಮ ಜಮೀನಿನ ಯಾವುದೇ ಸರ್ವೆ ನಂಬರ್(Survey number) ಬಿಟ್ಟುಹೋಗದಂತೆ, ಎಲ್ಲಾ ಸರ್ವೆ ನಂಬರ್‍ಗಳನ್ನು ನೊಂದಣಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.
ಬೆಳೆಹಾನಿ ಪರಿಹಾರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://fruitspmk.karnataka.gov.in/MISReport/FarmerDeclarationReport.aspx
ನಂತರ ನಿಮ್ಮ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮ select ಮಾಡಿ ವಿಕ್ಷಿಸು ಮೇಲೆ ಕ್ಲಿಕ್ ಮಾಡಿ
ನಂತರ ಈ ಕೆಳಗಿನಂತೆ FID ಇರುವ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಬೆಳೆಹಾನಿ ಪರಿಹಾರ ಸಿಗಲಿದೆ
FID-ನಿಮ್ಮ ಮೊಬೈಲ್ ನಲ್ಲೇ FID ನೊಂದಣೆ ಮಾಡುವುದು ಹೇಗೆ?
ಬೆಳೆ ಸಾಲ ಪಡೆಯುವ ಸಮಯ ಇದು ಈ ಸಲ ಬೆಳೆ ಸಾಲ ಪಡೆಯಲು ಫ್ರೂಟ್ಸ್ ನಲ್ಲಿ ನೋಂದಣಿ ಮಾಡಿಸಿಕೊಂಡಿರುವುದು ಕಡ್ಡಾಯವಾಗಿದೆ. ಫ್ರೂಟ್ಸ್ (FID)ಎಂದರೆ ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯೂನಿಫೈಡ್ ಬೆನಿಫಿಷಿಯರಿ ಇನ್ಫಾರ್ಮಶನ್ ಸಿಸ್ಟಮ್. ಇದು ಕೃಷಿ ಇಲಾಖೆಗೆ ಸಂಬಂಧಿಸಿದ ಕೃಷಿಕರ ಮಾಹಿತಿಗಳನ್ನು ಒಂದೇ ಸೂರಿನಡಿ ಹಿಡಿದಿಟ್ಟುಕೊಳ್ಳುವ ಪೋರ್ಟಲ್. ಇದರ ಮೂಲಕ ಕೃಷಿಕರು ಹಲವು ಪ್ರಯೋಜನ ಪಡೆಯಬಹುದಾಗಿದೆ ರಾಜ್ಯ ಸರ್ಕಾರದ ಆದೇಶದಂತೆ ಈ ವೆಬ್ ಪೋರ್ಟಲ್ ನಲ್ಲಿ ಎಲ್ಲ ತರಹದ ವಾಣಿಜ್ಯ ಬೆಳೆ ಆಹಾರ ಬೆಳೆಯನ್ನು ಒಳಗೊಂಡ ಎಲ್ಲ ವರ್ಗದ ಕೃಷಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ.
ಏನಿದು ಫ್ರೂಟ್ಸ್ ನಂಬರ್
ಕೃಷಿಕ ತಮ್ಮ ಕೃಷಿ ಜಮೀನಿನ ಮಾಹಿತಿಯನ್ನು ಈ ಪೋರ್ಟಲ್ ನಲ್ಲಿ ನೋಂದಾಯಿಸಿದಾಗ ಆತನಿಗೆ FID( ಫಾರ್ಮರ್ ಐಡೆಂಟಿಟಿ) ನಂಬರ್ ದೊರೆಯುತ್ತದೆ. ಹೇಗೆ ಒಬ್ಬ ವ್ಯಕ್ತಿಗೆ ಆಧಾರ್ ಗುರುತಿನ ಚೀಟಿಯಾಗಿದೆಯೋ ಅಂತೆಯೇ ಕೃಷಿಕನಿಗೆ FID ಗುರುತಿನ ಚೀಟಿ ಇದ್ದಂತೆ. ಇದು ಕೃಷಿಕನ ಜಾಗದ ವಿವರ ಹಾಗೂ ತಾನು ಬೆಳೆದ ಬೆಳೆಗಳ ವಿವರವನ್ನು ಒಳಗೊಂಡ ಪೋರ್ಟಲ್ ಆಗಿದೆ. ಸರ್ಕಾರದಿಂದ ದೊರೆಯುವ ಕೃಷಿ ಸೌಲಭ್ಯ ಪಡೆದುಕೊಳ್ಳಲು ಕೃಷಿಕ ಇಲ್ಲಿ ಮಾಹಿತಿ ನೋಂದಾಯಿಸಿಕೊಳ್ಳಬೇಕಿದೆ.
ನೋಂದಣಿ ಹೇಗೆ?
ಸಮೀಪದ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ಪಶುಸಂಗೋಪನ ಇಲಾಖೆ,ಕಂದಾಯ ಇಲಾಖೆಗಳ ಪೈಕಿ ಯಾವುದಾದರೂ ಒಂದು ಇಲಾಖೆಗೆ ಭೇಟಿ ನೀಡಿ ಕೃಷಿಕನ RTC ಉತಾರ, ಆಧಾರ್ ಕಾರ್ಡ, ರಾಷ್ಟೀಕೃತ ಬ್ಯಾಂಕ್‍ನ ಪಾಸ್ ಬುಕ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಫೋಟೋ,ಮೊಬೈಲ್ ನಂಬರ್ ನೀಡಿದರೆ 24 ಗಂಟೆಯೊಳಗೆ ನಿಮ್ಮ ಹೆಸರು ಪೋರ್ಟಲ್ ನಲ್ಲಿ ಸೇರ್ಪಡೆಗೊಳ್ಳುತ್ತದೆ.
ಏಕೆ ನೋಂದಾಯಿಸಬೇಕು?
ಸರ್ಕಾರದ ಆದೇಶದಂತೆ ಈ ಪೋರ್ಟಲ್ಲಿ ಕೃಷಿಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳದೆ ಇದ್ದರೆ ಆತನಿಗೆ ಬೆಳೆ ಸಾಲ, ಬೆಳೆ ವಿಮೆ,ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ, ಕೃಷಿಗೆ ಪೂರಕವಾದ ಇತರೆ ಸೌಲಭ್ಯಗಳು ದೊರೆಯುವುದಿಲ್ಲ. ಈಗಾಗಲೇ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ ರೈತ ಶಕ್ತಿ ಯೋಜನೆ ಅಡಿ ಪ್ರತಿಯೊಬ್ಬ ಕೃಷಿಕನಿಗೆ ಒಂದು ಎಕರೆಗೆ 250 ನಂತೆ ಗರಿಷ್ಠ 5 ಎಕರೆಗೆ 1,250 ಇಂಧನ ವೆಚ್ಚ ಕೃಷಿಕನ ಖಾತೆಗೆ ನೇರ ಜಮೆಗೊಳ್ಳಲಿದೆ. ಎಲ್ಲಾ ದಾಖಲೆಗಳಿದ್ದರೂ ಫ್ರೂಟ್ಸ್ ಪೋರ್ಟಲ್ ನಲ್ಲಿ ಹೆಸರು ನಮೂದಿಸದಿದ್ದರೆ ಸರ್ಕಾರದಿಂದ ಪಡೆಯುವ ಎಲ್ಲಾ ಸೌಲಭ್ಯಗಳಿಂದ ವಂಚಿತನಾಗುತ್ತಾನೆ.ಅದಕ್ಕಾಗಿ ಕೂಡಲೇ ಫ್ರೂಟ್ಸ್ ಪೋರ್ಟಲ್ ನಲ್ಲಿ ನಿಮ್ಮ ಹೆಸರು ನೊಂದಾಯಿಸಿಕೊಂಡು,ನಿಮ್ಮ FID ಪಡೆದುಕೊಳ್ಳಿ ಹಾಗೂ ಅದನ್ನು ಸರ್ಕಾರದ ಸೌಲತ್ತು ಪಡೆಯಲು ಬಳಸಿ
ನಿಮ್ಮ ಮೊಬೈಲ್ ನಲ್ಲೇ FID ನೊಂದಣೆ ಮಾಡುವುದು ಹೇಗೆ?
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://fruits.karnataka.gov.
ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ."Citizen Registration" ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,I agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ನಂಬರ್, ಇಮೆಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Submit ಮೇಲೆ ಕ್ಲಿಕ್ ಮಾಡಿ
ನಂತರ Password create ಮಾಡಿ,ಲಾಗಿನ್ ಆಗಿ ಅಗತ್ಯ ಮಾಹಿತಿ ಭರ್ತಿ ಮಾಡಿದರೆ ನಿಮ್ಮ FID ಸಿಗಲಿದೆ.
ಹೀಗೆ ಸೃಜಿಸಲಾದ FID ಯನ್ನು ಕೃಷಿ ಇಲಾಖೆ,ರೇಷ್ಮೆ ಇಲಾಖೆ,ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರೀಶಿಲಿಸಿ Approve ಕೊಡಬೇಕು.
ಈ FID ಯನ್ನು ಪಿಎಂಕಿಸಾನ್,ಬೆಳೆಸಾಲ,ಬೆಳೆವಿಮೆ ಹಾಗೂ ಸರ್ಕಾರದ ಸವಲತ್ತು ಪಡೆಯಲು ಬಳಸಬಹುದು