Free cylinder scheme-75 ಲಕ್ಷ ಉಚಿತ ಗ್ಯಾಸ್ ಸಬ್ಸಿಡಿಗೆ ಅರ್ಜಿ ಆಹ್ವಾನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ
<Krushirushi> <ಗ್ಯಾಸಸಬ್ಸಿಡಿ> <Gassubsidy> <gasbookingnumber> <ಗ್ಯಾಸಬುಕ್ಕಿಂಗನಂಬರ್> <Ujwala yojana> <ಉಜ್ವಲ ಯೋಜನೆ> <free gas subsidy> <Free cylinder scheme> <free cylinder> <ಉಚಿತ ಸಿಲಿಂಡರ್>
Free cylinder scheme-75 ಲಕ್ಷ ಉಚಿತ ಗ್ಯಾಸ್ ಸಬ್ಸಿಡಿಗೆ ಅರ್ಜಿ ಆಹ್ವಾನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ(Pradan mantri ujwal yojane) ಉಚಿತವಾಗಿ ಅನಿಲ ಸಂಪರ್ಕ ಪಡೆಯದೇ ಅವಕಾಶ ವಂಚಿತರಾಗಿರುವ ಬಿಪಿಎಲ್ ಕಾರ್ಡ್(BPL card holder) ಹೊಂದಿರುವ ಮಹಿಳೆಯರಿಗೆ ಸಿಹಿ ಸುದ್ದಿ. ಮತ್ತೆ ಗ್ಯಾಸ್ ಸಂಪರ್ಕ ಪಡೆಯುವ ಅವಕಾಶವನ್ನು ಕೇಂದ್ರ ಸರಕಾರ ಕಲ್ಪಿಸಿದ್ದು, ಗ್ರಾಹಕರು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಗ್ಯಾಸ್ ಸಂಪರ್ಕ ನೀಡುವ ನಾನಾ ತೈಲ ಕಂಪನಿಯ ಗ್ಯಾಸ್ ಏಜೆನ್ಸಿಗಳನ್ನು ಗ್ರಾಹಕರೇ ನೇರವಾಗಿ ಆಯ್ಕೆ ಮಾಡಿಕೊಂಡು ಉಜ್ವಲ್ ಯೋಜನೆಯಡಿ ಸಂಪರ್ಕ ನೀಡುವಂತೆ ಆನ್‌ಲೈನ್ ಮೂಲಕ ಅರ್ಜಿಯೊಂದಿಗೆ ಅಗತ್ಯ ದಾಖಲಾತಿ ಸಲ್ಲಿಸಬೇಕಿದೆ.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಈಗಾಗಲೇ ದೇಶದೆಲ್ಲೆಡೆ 10.35 ಕೋಟಿ ಮಂದಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರವೇ ದೇಶದಲ್ಲಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳ ಮಾಹಿತಿ ಇರುವ ಎಸ್‌ಇಸಿಸಿ ದತ್ತಾಂಶವನ್ನು ಐಒಸಿ, ಎಚ್‌ಪಿಸಿಎಲ್, ಬಿಪಿಸಿಎಲ್ ತೈಲ ಕಂಪನಿಗಳಿಗೆ ನೀಡಿದ್ದು, ತೈಲ ಕಂಪನಿಗಳು ಉಜ್ವಲ್ ಯೋಜನೆಯಡಿ ತಮ್ಮ ವ್ಯಾಪ್ತಿಯಲ್ಲಿರುವ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಕಡ್ಡಾಯವಾಗಿ ಅನಿಲ ಸಂಪರ್ಕ ಕಲ್ಪಿಸುವಂತೆ ಗ್ಯಾಸ್ ಏಜೆನ್ಸಿಗಳಿಗೆ ಟಾರ್ಗೆಟ್ ನೀಡಲಾಗಿತ್ತು.
ಪರಿಣಾಮ ಗ್ಯಾಸ್ ಏಜೆನ್ಸಿಗಳ ಮಾಲೀಕರು, ತಮಗೆ ನೀಡಿದ್ದ ಗುರಿ ತಲುಪಲು ನಗರ ಸೇರಿದಂತೆ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿರುವ ಕಡು ಬಡ ಕುಟುಂಬಗಳನ್ನು ಪತ್ತೆ ಹಚ್ಚಿ ಅವರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡುವ ಮೂಲಕ ಯೋಜನೆಯ ಯಶಸ್ವಿಗೆ ಶ್ರಮಿಸಿದ್ದರು. ಮೈಸೂರಿನಲ್ಲಿಯೇ 50 ಸಾವಿರಕ್ಕೂ ಹೆಚ್ಚು ಮಂದಿ ಉಜ್ವಲ್ ಯೋಜನೆಯ ಫಲಾನುಭವಿಗಳಿದ್ದಾರೆ.
ಏನೆಲ್ಲಾ ನೀಡುತ್ತಾರೆ?ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ನಿಗದಿತ ಗುರಿಗಿಂತ ಹೆಚ್ಚು ಮಂದಿಗೆ ಉಜ್ವಲ್ ಯೋಜನೆಯಡಿ ಅನಿಲ ಸಂಪರ್ಕ ಕಲ್ಪಿಸಿ, ಗ್ಯಾಸ್ ಸಂಪರ್ಕದೊಂದಿಗೆ ಸ್ಟೌ, ರೆಗ್ಯುಲೇಟರ್, ರಬ್ಬರ್ ಟ್ಯೂಬ್‌ಗಳನ್ನು ನೀಡಲಾಗಿತ್ತು. ಈ ಹೆಚ್ಚುವರಿ ಹಣವನ್ನು ಕಂತಿನ ರೂಪದಲ್ಲಿಪಡೆಯಲು ಗ್ರಾಹಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಹಣವನ್ನು ಕಡಿತಗೊಳಿಸಲಾಗುತ್ತಿತ್ತು.
75 ಲಕ್ಷ ಮಂದಿಗೆ ಅನಿಲ ಸಂಪರ್ಕಕ್ಕೆ ನಿರ್ಧಾರಈ ಮಧ್ಯೆ ಉಜ್ವಲ್ ಯೋಜನೆಯಡಿ ಅನಿಲ ಸಂಪರ್ಕ ಪಡೆದ ಗ್ರಾಹಕರಿಗೆ ಸಬ್ಸಿಡಿ ಹಣ ಕೂಡ ಖೋತಾ ಆಗಿದೆ. ಈಗ ಮತ್ತೆ ಕೇಂದ್ರ ಸರಕಾರ ಸಬ್ಸಿಡಿ ನೀಡುವುದನ್ನು ಪುನಾರಂಭಿಸುವುದರೊಂದಿಗೆ ಹೊಸದಾಗಿ ಉಜ್ವಲ್ ಯೋಜನೆಯಡಿ 75 ಲಕ್ಷ ಮಂದಿಗೆ ಅನಿಲ ಸಂಪರ್ಕ ನೀಡಲು ನಿರ್ಧರಿಸಿದೆ.
ಬೇಗ ಅರ್ಜಿ ಸಲ್ಲಿಸಿದವರಿಗೆ ಅವಕಾಶ''ಯಾವುದೇ ಜಿಲ್ಲೆ, ರಾಜ್ಯಕ್ಕೆ ಇಂತಿಷ್ಟು ಎಂದು ನಿಗದಿ ಮಾಡದೇ ಇರುವುದರಿಂದ ಬೇಗ ಅರ್ಜಿ ಸಲ್ಲಿಸಿದವರು, ಯೋಜನೆಯ ಫಲಾನುಭವಿಗಳಾಗಬಹುದು'' ಎನ್ನುತ್ತಾರೆ ಅಮರ್‌ದೀಪ್ ಗ್ಯಾಸ್ ಏಜೆನ್ಸಿಯ ಮಾಲೀಕ ಮೆಹುಲ್ ಜೆ.ಪಟೇಲ್.
ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸುವುದೇಗೆ? ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವೆಬ್‌ಸೈಟ್‌ನಲ್ಲಿ ಹೆಸರು, ವಿಳಾಸ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಸಂಖ್ಯೆಯನ್ನು ಅಪ್‌ಲೋಡ್ ಮಾಡಬೇಕು. ಗ್ರಾಹಕರು ತಮಗೆ ಬೇಕಾದ ಗ್ಯಾಸ್ ಏಜೆನ್ಸಿಗಳಿಂದ ಸಂಪರ್ಕ ಪಡೆಯಲು ತಾವೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಯೋಜನೆಯಡಿ 14.2 ಕೆಜಿಯ ಒಂದು ಸಿಲಿಂಡರ್ ಪಡೆಯಲು ಮಾತ್ರ ಅವಕಾಶವಿದೆ. ಆದರೆ, 5 ಕೆಜಿಯ ಎರಡು ಸಿಲಿಂಡರ್ ಪಡೆಯಬಹುದು.
ವೆಬ್‌ಸೈಟ್ ವಿಳಾಸ - https://www.pmuy.gov.in/ujjwala2.html
Gas cylinder subsidy-ಕೇಂದ್ರ ಸರ್ಕಾರದಿಂದ ದಸರಾ ಗಿಫ್ಟ್ ಸಿಲಿಂಡರ್ ಸಬ್ಸಿಡಿ 200 ರಿಂದ 300 ರೂಪಾಯಿ ಹೆಚ್ಚಳ, ನಿಮ್ಮ ಸಬ್ಸಿಡಿ ಜಮಾ ಹೀಗೆ ಚೆಕ್ ಮಾಡಿ
ದಸರಾ ಹಬ್ಬಕ್ಕೆ ಮೋದಿ ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ದೊಡ್ಡ ಉಡುಗೊರೆ ನೀಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಈಗ 200 ರೂ.ಗಳ ಸಬ್ಸಿಡಿಯನ್ನ ಮತ್ತೆ 100 ರೂಪಾಯಿ ಹೆಚ್ಚಿಸಲಾಗಿದ್ದು, ಈಗ 300 ರೂಪಾಯಿ ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದರು.
ಕ್ಯಾಬಿನೆಟ್ ಸಭೆಯ ನಂತ್ರ ಮಾತನಾಡಿದ ಸಚಿವರು, ಉಜ್ವಲ ಯೋಜನೆಯಡಿ ಸಹೋದರಿಯರು ಈಗ 300 ರೂ.ಗಳ ಸಬ್ಸಿಡಿ ಪಡೆಯಲಿದ್ದಾರೆ ಎಂದು ಹೇಳಿದರು. ಉಜ್ವಲ ಯೋಜನೆ ಮಹಿಳೆಯರ ಜೀವನಕ್ಕೆ ದೊಡ್ಡ ಕೊಡುಗೆ ನೀಡಿದೆ. ಆದ್ದರಿಂದ, ಈಗ 200 ರೂ.ಗಳ ಬದಲು, 300 ರೂ.ಗಳ ಸಬ್ಸಿಡಿ ಲಭ್ಯವಿರುತ್ತದೆ. ಈ ಹಿಂದೆ, ಉಜ್ವಲ ಯೋಜನೆಯಡಿ, ಜನರು ಸಿಲಿಂಡರ್ನಲ್ಲಿ 200 ರೂ.ಗಳ ಸಬ್ಸಿಡಿಯನ್ನು ಪಡೆಯುತ್ತಿದ್ದರು" ಎಂದರು.
ಅಂದ್ಹಾಗೆ, ರಕ್ಷಾಬಂಧನ ಮತ್ತು ಓಣಂ ಸಂದರ್ಭದಲ್ಲಿ ಕೇಂದ್ರ ಸಚಿವ ಸಂಪುಟವು ಎಲ್ಪಿಜಿಯಲ್ಲಿ 200 ರೂ.ಗಳ ಕಡಿತವನ್ನು ಘೋಷಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದರು. ಇಂದು, ಉಜ್ವಲ ಯೋಜನೆಯ ಫಲಾನುಭವಿಯನ್ನು 200 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲಾಗಿದೆ.
Gas subsidy-ನಿಮ್ಮ ಗ್ಯಾಸ್ ಸಬ್ಸಿಡಿ ಚೆಕ್ ಮಾಡುವ ಡೈರೆಕ್ಟ್ ಲಿಂಕ್
ನಂತರ ನೀವು ಬಳಸುವ ಗ್ಯಾಸ್ ಕಂಪನಿಯ ಸಿಲಿಂಡರ್ ಮೇಲೆ ಕ್ಲಿಕ್ ಮಾಡಿ
ನಂತರ ನೀವು ಮೊದಲ ಬಾರಿ login ಆಗತ್ತಿದ್ದರೆ, New user ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ರಾಜ್ಯ,ಜಿಲ್ಲೆ,ಗ್ಯಾಸ್ ಏಜನ್ಸಿ select ಮಾಡಿ,ನಿಮ್ಮ consumer number,ಮೊಬೈಲ್ ನಂಬರ್ ಹಾಗೂ Captch type ಮಾಡಿ,proceed ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ನಂಬರ್ ಗೆ ಬರುವ OTP ಹಾಕಿ, submit ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಇ-ಮೇಲ್ ಐಡಿ ಹಾಕಿ,ಹೊಸ Password create ಮಾಡಿ,confirm password type ಮಾಡಿ
ನಂತರ ನಿಮ್ಮ ಇಮೇಲ್ ಐಡಿಗೆ ಬರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ Account activate ಆಗುತ್ತದೆ.click here to login ಮೇಲೆ ಕ್ಲಿಕ್ ಮಾಡಿ
ನಂತರ ಮತ್ತೆ signin ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಅಥವಾ email Id ಹಾಕಿ, captcha type ಮಾಡಿ,Login ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಹಾಕಿ, create ಮಾಡಿದ password ಹಾಕಿ login ಮಾಡಿ
ನಂತರ login ಆದ ನಂತರ ಮುಖಪುಟದ ಎಡಭಾಗದಲ್ಲಿರುವ view cylinder booking history/subsidy transfered ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಗ್ಯಾಸ್ ಸಬ್ಸಿಡಿ ಮಾಹಿತಿ ದೊರೆಯುತ್ತದೆ.