Golden chariot train-ಗೊಲ್ಡನ್ ಚಾರಿಯಟ್ ಐಷಾರಾಮಿ ರೈಲು ಪ್ರವಾಸ,ಬುಕ್ಕಿಂಗ್ ಸೇರಿದಂತೆ ಪ್ರವಾಸದ ಸಂಪೂರ್ಣ ಮಾಹಿತಿ

<Krushirushi> <Golden chariot train> <Train> <goa> <Train time to Goa> <tourism train> <ಗೊಲ್ಡನ್ ಚಾರಿಯಟ್> <ಗೋವಾ>

Golden chariot train-ಗೊಲ್ಡನ್ ಚಾರಿಯಟ್ ಐಷಾರಾಮಿ ರೈಲು ಪ್ರವಾಸ,ಬುಕ್ಕಿಂಗ್ ಸೇರಿದಂತೆ ಪ್ರವಾಸದ ಸಂಪೂರ್ಣ ಮಾಹಿತಿ

Golden chariot train-ಗೊಲ್ಡನ್ ಚಾರಿಯಟ್ ಐಷಾರಾಮಿ ರೈಲು ಪ್ರವಾಸ,ಬುಕ್ಕಿಂಗ್ ಸೇರಿದಂತೆ ಪ್ರವಾಸದ ಸಂಪೂರ್ಣ ಮಾಹಿತಿ


ರೈಲಿನ ವಿವರ: ರೈಲಿನ ಒಳಾಂಗಣವನ್ನು
ಕಲಾತ್ಮಕವಾಗಿ ನಿರ್ಮಿಸಲಾಗಿದೆ. 18 ಕೋಚ್‌ಗಳಲ್ಲಿ ಕರ್ನಾಟಕವನ್ನು ಆಳಿದ ಕದಂಬ, ಹೊಯ್ಸಳ, ವಿಜಯನಗರದ ಅರಸರು, ಚಾಲುಕ್ಯರ ಹೆಸರನ್ನು ಇಡಲಾಗಿದೆ. ಗೋಲ್ಡನ್ ಚಾರಿಯಟ್, ವಿಶ್ವದ ಪ್ರಸಿದ್ಧ ಪರಂಪರೆಯ ತಾಣಗಳ ಜೊತೆಗೆ ಪಶ್ಚಿಮ ಘಟ್ಟಗಳು, ಪ್ರಾಚೀನ ಕಡಲತೀರಗಳು, ಸಾಂಸ್ಕೃತಿಕ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತದೆ.


44 ಸುಸುಜ್ಜಿತ ಕ್ಯಾಬಿನ್‌ಗಳು, ಎನ್-ಸೂಟ್ ಸ್ನಾನಗೃಹ, ವೈಫೈ ವ್ಯವಸ್ಥೆಯನ್ನು ಒಳಗೊಂಡಿದೆ. ರುಚಿ ಮತ್ತು ನಳಪಾಕ ಹೆಸರಿನ ಎರಡು ಹೋಟೆಲ್‌ಗಳಲ್ಲಿ ಭಾರತೀಯ ಮತ್ತು ಅಂತರರಾಷ್ಟ್ರೀಯ ಪಾಕಪದ್ದತಿ ಇರಲಿದೆ. ಲಾಂಜ್ ಬಾರ್, ಫಿಟ್‌ನೆಸ್ ಸೆಂಟರ್ ಇತರೆ ಸೌಕರ್ಯ ಕಲ್ಪಿಸಲಾಗಿದೆ.

ಗೋಲ್ಡನ್ ಚಾರಿಯಟ್ ರೈಲು ಯಾತ್ರೆ ಪುನಾರಾರಂಭವಾಗಿದ್ದು, ಡಿಸೆಂಬರ್ 21 ರಿಂದ 26 ರವರೆಗೆ ಜುವೆಲ್ ಆಫ್ ಸೌತ್ ಪ್ರವಾಸವು ಬೆಂಗಳೂರಿನಿಂದ ಆರಂಭಗೊಂಡು ಮೈಸೂರು, ಕಾಂಚಿಪುರಂ, ಮಹಾಬಲಿಪುರಂ, ತಂಜಾವೂರು, ಚೆಟ್ಟಿನಾಡು, ಕೊಚ್ಚಿ ಮಾರ್ಗವಾಗಿ ಸಂಚಾರ ಮಾಡಲಿದೆ. ಈ ರೈಲಿಗೆ 44 ಸುಸುಜ್ಜಿತ ಕ್ಯಾಬಿನ್‍ಗಳು, ಎನ್ ಸೂಟ್ ಸ್ನಾನಗೃಹ, ವೈಫೈ ಸಹ ಒಳಗೊಂಡಿದೆ. ರುಚಿ ಮತ್ತು ನಳಪಾಕ ಹೆಸರಿನ ಎರಡು ಹೋಟೆಲ್‍ಗಳು, ಲಾಂಜ್ ಬಾರ್, ಫಿಟ್‍ನೆಸ್ ಸೆಂಟರ್ ಇತರೆ ಸೌಕರ್ಯ ಕಲ್ಪಿಸಲಾಗಿದೆ. 

ಕರ್ನಾಟಕ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇದು ಪ್ರತಿನಿಧಿಸಲಿದೆ. ಗೋಲ್ಡನ್ ಚಾರಿಯಟ್ ರೈಲು ಜಾಗತಿಕವಾಗಿ ಅತ್ಯುತ್ತಮ ಐಷಾರಾಮಿ ರೈಲು ಪ್ರಯಾಣಗಳಲ್ಲಿ ಒಂದಾಗಿದ್ದು ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಲಿದೆ. 

ಜೂವೆಲ್ ಆಫ್‌ ಸೌತ್ ಪ್ರವಾಸ ಡಿ.21 ರಿಂದ 26ರ ವರೆಗೆ ಇರಲಿದೆ. ಬೆಂಗಳೂರಿನಿಂದ ಆರಂಭಗೊಂಡು ಮೈಸೂರು ಕಾಂಚೀಪುರಂ ಮಹಾಬಲಿಪುರಂ ತಂಜಾವೂರು ಕೊಚ್ಚಿನ್ ಮರಾರಿಕುಲಂಗೆ ತೆರಳಿ ಬೆಂಗಳೂರಿಗೆ ಹಿಂದಿರುಗಲಿದೆ. (Golden chariot train price)ಒಬ್ಬರಿಗೆ ₹ 4.07 ಲಕ್ಷ ವೆಚ್ಚವಾಗಲಿದೆ. ಪ್ರೈಡ್ ಆಫ್ ಕರ್ನಾಟಕ ಪ್ರವಾಸವು ಜ.1ರಿಂದ 6ರವರೆಗೆ ಇರಲಿದೆ. ಬೆಂಗಳೂರಿನಿಂದ ನಂಜನಗೂಡು ಮೈಸೂರು ಹಳೆಬೀಡು ಚಿಕ್ಕಮಗಳೂರು ಹೊಸಪೇಟೆ ಗೋವಾಕ್ಕೆ ತೆರಳಿ ಬೆಂಗಳೂರಿಗೆ ವಾಪಸ್ಸಾಗಲಿದೆ. ಈ ಪ್ರವಾಸಕ್ಕೆ ಒಬ್ಬರಿಗೆ ₹2.81 ಲಕ್ಷ ವೆಚ್ಚ ಇರಲಿದೆ. ಸೋಜರ್ನ್ ಆಫ್ ಸೌತ್ ಚಾರ್ಟಡ್  ಪ್ರವಾಸವನ್ನು ಡಿ. 29ರಿಂದ ಜ.12ರವರೆಗೆ ಆಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.

ಸುಪ್ರಸಿದ್ಧ ಗೋಲ್ಡನ್ ಚಾರಿಯಟ್ ರೈಲು ಪ್ರವಾಸವು 'ಪ್ರೈಡ್ ಆಫ್ ಕರ್ನಾಟಕ' ಹೆಸರಿನಲ್ಲಿ ಫೆಬ್ರವರಿ 1 ರಿಂದ 6 ರವರೆಗೆ ಸಂಚರಿಸಲಿದೆ. ಬೆಂಗಳೂರಿನಿಂದ ಆರಂಭಗೊಂಡು ನಂಜನಗೂಡು, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹೊಸಪೇಟೆ, ಗೋವಾ ಮಾರ್ಗವಾಗಿ ಸಂಚಾರಿಸಿ ಬೆಂಗಳೂರಿಗೆ ಹಿಂತಿರುಗಲಿದೆ. ಪ್ರವಾಸದ ಬಗ್ಗೆ ಹೆಚ್ಚಿನ ವಿವರಗಳಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ. 

ಗೋಲ್ಡನ್ ಚಾರಿಯಟ್ ರೈಲು(Golden chariot train route) ಯಾತ್ರೆ ಪುನಾರಾರಂಭಗೊಂಡಿದ್ದು, ಫೆಬ್ರವರಿ 29 ರಿಂದ 12 ರವರೆಗೆ ಗ್ಲಿಂಪ್ಸಸ್ ಆಫ್ ಕರ್ನಾಟಕ ಪ್ರವಾಸವು ಬೆಂಗಳೂರಿನಿಂದ ನಂಜನಗೂಡು, ಮೈಸೂರು, ಹೊಸಪೇಟೆ ಮಾರ್ಗವಾಗಿ ಸಂಚಾರ ಮಾಡಲಿದೆ. ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇದು ಪ್ರತಿನಿಧಿಸಲಿದೆ. ಗೋಲ್ಡನ್ ಚಾರಿಯಟ್ ರೈಲು ಜಾಗತಿಕವಾಗಿ ಅತ್ಯುತ್ತಮ ಐಷಾರಾಮಿ ರೈಲು ಪ್ರಯಾಣಗಳಲ್ಲಿ ಒಂದಾಗಿದ್ದು ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ. 

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಲಿಂಕ್-https://www.goldenchariot.org/

Video link-https://x.com/karnatakavarthe/status/1870411541587296632?s=46&t=QZVD80BP2b61GD4oVgwLvA