ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ವೇತನ ಪರಿಷ್ಕರಣೆಯ ದಿನಾಂಕ ಫಿಕ್ಸ್, ಎಷ್ಟು ಹೆಚ್ಚಳ ಸಿಗಲಿದೆ?

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ವೇತನ ಪರಿಷ್ಕರಣೆಯ ದಿನಾಂಕ ಫಿಕ್ಸ್, ಎಷ್ಟು ಹೆಚ್ಚಳ ಸಿಗಲಿದೆ?

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ವೇತನ ಪರಿಷ್ಕರಣೆಯ ದಿನಾಂಕ ಫಿಕ್ಸ್, ಎಷ್ಟು ಹೆಚ್ಚಳ ಸಿಗಲಿದೆ?

ಕೇಂದ್ರ ಸರ್ಕಾರಿ ನೌಕರರು ಡಿಎ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಸದ್ಯದಲ್ಲೇ ಸಿಹಿಸುದ್ದಿಯನ್ನು ಕೊಡುವ ಸಾಧ್ಯತೆಯಿದೆ. ಕಳೆದ ಕೆಲವು ತಿಂಗಳುಗಳಿಂದ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8 ನೇ ವೇತನ ಆಯೋಗದ ಅನುಷ್ಠಾನದ ಬಗ್ಗೆ ಗೊಂದಲದಲ್ಲಿದ್ದಾರೆ.

ಇದೀಗ ಈ ಗೊಂದಲದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿದ್ದು, ಸರ್ಕಾರಿ ನೌಕರರಿಗೆ ಖುಷಿಸುದ್ದಿ ಸಿಕ್ಕಂತಾಗಿದೆ.

ಎಂಟನೇ ವೇತನ ಆಯೋಗ ಯಾವತ್ತಿನಿಂದ ಜಾರಿಗೆ ಬರಲಿದೆ ಎನ್ನುವ ಕುತೂಹಲಕ್ಕೆ ಸದ್ಯದಲ್ಲೇ ತೆರೆಬೀಳುವ ಸಾಧ್ಯತೆಯಿದೆ. ಮೂಲಗಳ, ಪ್ರಕಾರ ಮುಂದಿನ ವರ್ಷದ ಮೊದಲ ದಿನದಿಂದಲೇ ಅನ್ವಯವಾಗುವಂತೆ ಜಾರಿಗೆ ಬರಬಹುದು ಎಂದು ಹೇಳಲಾಗುತ್ತಿದೆ. ಬಹುನಿರೀಕ್ಷಿತ, ಎಂಟನೇ ಆಯೋಗದ ಶಿಫಾರಸನ್ನು, ಮುಂದಿನ ವರ್ಷದ ಮೊದಲ ದಿನದಿಂದಲೇ ಜಾರಿಗೆ ತರುವ ಸಾಧ್ಯತೆಯಿದೆ ಎಂದು ವದರಿಯಾಗಿದೆ. ಈಗಾಗಲೇ ಎಂಟನೇ ವೇತನ ಆಯೋಗದ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆರಂಭವಾಗಿದ್ದು, ವೇತನ ಮತ್ತು ಪಿಂಚಣಿ ಪರಿಷ್ಕರಣೆ ಜನವರಿ 1, 2026ರಿಂದಲೇ ಜಾರಿಗೆ ಬರುವಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನೌಕರರ ಸಂಘಟನೆಗಳು, ಕೇಂದ್ರ ಹಣಕಾಸು ಇಲಾಖೆಯನ್ನು ಒತ್ತಾಯಿಸಿದೆ.

ಮೂಲಗಳ ಪ್ರಕಾರ, 8ನೇ ವೇತನ ಆಯೋಗವು ಜನವರಿ 2026 ರಿಂದ ಜಾರಿಗೆ ಬರುವ ಸಾಧ್ಯತೆ ಇದ್ದು, ಸಮಿತಿ ರಚನೆಯಾದ ನಂತರ, ವೇತನ ಹೆಚ್ಚಳ, ಫಿಟ್‌ಮೆಂಟ್ ಅಂಶ, ತುಟ್ಟಿ ಭತ್ಯೆ ಲಿಂಕ್ ಕುರಿತು ಕೆಲಸವು ತ್ವರಿತವಾಗಿ ಪ್ರಾರಂಭವಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ವೇತನ ಆಯೋಗವು ನೀಡುವ ಶಿಫಾರಸನ್ನು ಜಾರಿಗೆ ತರಲು ಹತ್ತು ವರ್ಷಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಾರದು ಎಂದು ನೌಕರರ ಸಂಘಟನೆಯ ಶಿವಗೋಪಾಲ್ ಮಿಶ್ರಾ ಅಭಿಪ್ರಾಯ ಪಟ್ಟಿದ್ದಾರೆ. ಏಳನೇ ವೇತನ ಆಯೋಗ ಜನವರಿ 1, 2016ಕ್ಕೆ ಜಾರಿಗೆ ಬಂದಿತ್ತು. ಹಾಗಾಗಿ, ಎಂಟನೇ ಆಯೋಗ ಶಿಫಾರಸು, ಜನವರಿ 2026ಕ್ಕೆ ಜಾರಿಗೆ ಬರುತ್ತದೆ ಎನ್ನುವುದು ಕೇಂದ್ರ ಸರ್ಕಾರೀ ನೌಕರರ ನಿರೀಕ್ಷೆಯಾಗಿದೆ.

ಇನ್ನೂ ಕೇಂದ್ರ ನೌಕರರಿಗೆ ದೀಪಾವಳಿ ಹಬ್ಬದ ಉಡುಗೊರೆ ನೀಡಲು ಮೋದಿ ಸರ್ಕಾರ ಸಿದ್ಧತೆ ನಡೆಸುತ್ತಿದೆ. 8 ನೇ ವೇತನ ಆಯೋಗಕ್ಕಾಗಿ ಸಮಿತಿಯನ್ನು ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ 2025 ರ ಆರಂಭದಲ್ಲಿ ರಚಿಸಬಹುದು ಎಂಬ ಮೂಲಗಳು ತಿಳಿಸಿವೆ. ಇದು ಪ್ರಕ್ರಿಯೆಯ ಅಧಿಕೃತ ಆರಂಭವಾಗಿದ್ದು, ಈ ಆರಂಭವು ದೇಶದ 1 ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಸಾವಿರಾರು ಮತ್ತು ಲಕ್ಷ ಆದಾಯ ಹೆಚ್ಚಳವನ್ನು ತರುತ್ತದೆ ಎಂದು ಹೇಳಲಾಗಿದೆ.

ಎಂಟನೇ ವೇತನ ಆಯೋಗವು ಜನವರಿ 2026ರಲ್ಲಿ ಜಾರಿಗೆ ಬರಬಹುದು ಎಂಬ ನಿರೀಕ್ಷಿಯಲ್ಲಿದ್ದು, ಹಣದುಬ್ಬರವನ್ನು ಶೇ. 6 - 7ರಷ್ಟು ನಿಗದಿ ಪಡಿಸುವ ಸಾಧ್ಯತೆಯಿದೆ. ಫಿಟ್‌ಮೆಂಟ್ ಅಂಶ, ತುಟ್ಟಿ ಭತ್ಯೆ ಲಿಂಕ್, ಹೊಸ ವೇತನ ಮ್ಯಾಟ್ರಿಕ್ಸ್ ಮತ್ತು ಪಿಂಚಣಿಯ ಸಂಪೂರ್ಣ ಲೆಕ್ಕಾಚಾರ ಮುಂದಿನ ಹಂತಕ್ಕೆ ಸಾಗುವ ಮೊದಲು ಈ ಕಾಲಮಿತಿಯನ್ನು ಒಂದು ಅಡಿಪಾಯದ ಹೆಜ್ಜೆಯಾಗಿ ನೋಡಲಾಗುತ್ತದೆ. ಇನ್ನೂ 8 ನೇ ವೇತನ ಆಯೋಗದ ಸಮಿತಿ ರಚನೆಯಾದ ನಂತರ, ಸಚಿವಾಲಯಗಳೊಂದಿಗೆ ಸಭೆ ಮತ್ತು ಕಾರ್ಮಿಕ ಸಂಘಗಳೊಂದಿಗೆ ಮಾತುಕತೆ ನಡೆಯುತ್ತವೆ. ನಂತರ, ಸಮಿತಿಯ ವರದಿಯನ್ನು ಸಲ್ಲಿಸಲಾಗುತ್ತದೆ.