PM Surya Ghar Yojana 2024-ಪಿಎಂ ಸೂರ್ಯಘರ್ ಯೋಜನೆಯಡಿ 300 ಯುನಿಟ್ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್
<Krushirushi> <ಪಿಎಂ ಸೂರ್ಯಘರ್ ಯೋಜನೆ> <pm suryaghar yojane> <PMSY> <Solar roof top yojane> <solar panel> <300 unit free electricity>

PM Surya Ghar Yojana 2024-ಪಿಎಂ ಸೂರ್ಯಘರ್ ಯೋಜನೆಯಡಿ 300 ಯುನಿಟ್ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್
"PM Surya Ghar Yojana" ಈ ಯೋಜನೆಯಡಿ ಸರ್ಕಾರ ಜನರಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲು ಯೋಜನೆ ರೂಪಿಸುತ್ತಿದೆ, ಇದಕ್ಕಾಗಿ ನಿಜವಾದ ಸಬ್ಸಿಡಿಯನ್ನು ನೀಡಲಾಗುವುದು ಅದನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎನ್ನಲಾಗಿದೆ.
75,000 ಕೋಟಿಗೂ ಹೆಚ್ಚು ಹೂಡಿಕೆಯೊಂದಿಗೆ ಈ ಯೋಜನೆಯು ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುವ ಮೂಲಕ 1 ಕೋಟಿ ಮನೆಗಳನ್ನು ಬೆಳಗಿಸುವ ಗುರಿಯನ್ನು ಹೊಂದಿದೆ.
ಕಳೆದ ತಿಂಗಳು (ಜನವರಿ) ಪ್ರಧಾನಿ ಮೋದಿ ಅವರು ಪಿಎಂ ಸೂರ್ಯೋದಯ ಯೋಜನೆಯನ್ನು ಅನಾವರಣಗೊಳಿಸಿದರು. ಮನೆಗಳ ಮೇಲ್ಛಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸುವ ದೊಡ್ಡ ಯೋಜನೆ ಅದು. ಅದರ ಭಾಗವಾಗಿ ಪಿಎಂ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆ ಚಾಲನೆಗೆ ತರಲಾಗಿದೆ. ಒಂದು ಮನೆಗೆ ಪ್ರತೀ ತಿಂಗಳು 300 ಯೂನಿಟ್ಗಳಷ್ಟು ಉಚಿತ ವಿದ್ಯುತ್ ಒದಗಿಸುವ ಒಂದು ಯೋಜನೆ ಇದು. ಈ ರೀತಿ ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಈ ಯೋಜನೆ ತಲುಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.
ಆರಂಭದಲ್ಲಿ ಒಂದು ವಿಷಯ ಸ್ಪಷ್ಟಪಡಿಸಬೇಕಿದೆ. 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದರೂ ಇದು ಉಚಿತವಲ್ಲ. ಮನೆ ಛಾವಣಿ ಮೇಲೆ ಸೌರ ಯೂನಿಟ್ಗಳನ್ನು ಸ್ಥಾಪಿಸಲು ಹಣ ವ್ಯಯಿಸಬೇಕು. ಆದರೆ, ಇದಕ್ಕೆ ಸರ್ಕಾರ ಸಬ್ಸಿಡಿ ಕೊಡುತ್ತದೆ. ಬಜೆಟ್ನಲ್ಲಿ ಈ ಯೋಜನೆಗೆ 75,000 ಕೋಟಿ ರೂ ಹಣವನ್ನು ಸರ್ಕಾರ ತೆಗೆದಿರಿಸಿದೆ. ಬ್ಯಾಂಕ್ನಿಂದಲೂ ಕಡಿಮೆ ಬಡ್ಡಿದರದಲ್ಲಿ ಸಾಲದ ವ್ಯವಸ್ಥೆ ಸಿಗುತ್ತದೆ. ಹೀಗಾಗಿ, ಈ ಯೋಜನೆ ಪಡೆಯುವವರಿಗೆ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಇವರು ಮಾಡುವ ವೆಚ್ಚ ಒಂದರಿಂದ ಎರಡು ವರ್ಷದಲ್ಲಿ ಸರಿದೂಗುತ್ತದೆ.
ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಕ್ರಮ
ಪಿಎಂ ಸೂರ್ಯ ಘರ್ ಯೋಜನೆಗೆಂದು ಪೋರ್ಟಲ್ ಸಿದ್ಧಪಡಿಸಲಾಗಿದೆ. ಅಲ್ಲಿ ನೊಂದಾಯಿಸಿಕೊಳ್ಳಬೇಕು. ಅದರ ಲಿಂಕ್ ಇಲ್ಲಿದೆ: www.pmsuryaghar.gov.in
ನಂತರ Apply for rooftop solar ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ರಾಜ್ಯ, ಡಿಸ್ಕಾಂ ಕಂಪನಿ ಆಯ್ಕೆ ಮಾಡಿ
ನಂತರ ವಿದ್ಯುತ್ ಬಿಲ್ನ ಕನ್ಸೂಮರ್ ನಂಬರ್, ಮೊಬೈಲ್ ನಂಬರ್ ಮತ್ತು ಇಮೇಲ್ ನಮೂದಿಸಿ,Captcha code ಹಾಕಿ Submit ಮೇಲೆ ಕ್ಲಿಕ್ ಮಾಡಿ
Register ಆದ ನಂತರ ಕನ್ಸೂಮರ್ ನಂಬರ್ ಮತ್ತು ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿರಿ.
ಲಾಗಿನ್ ಆದ ಬಳಿಕ ರೂಫ್ಟಾಪ್ ಸೋಲಾರ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬೇಕು.
ಇದಕ್ಕೆ ಅನುಮೋದನೆ ಸಿಗುವವರೆಗೂ ಕಾಯಬೇಕು. ಅನುಮೋದನೆ ದೊರೆತ ಬಳಿಕ ನೊಂದಾಯಿತ ಮಾರಾಟಗಾರರು ನಿಮ್ಮ ಮನೆಗೆ ಬಂದು ಸೌರ ಘಟಕವನ್ನು ಸ್ಥಾಪಿಸುತ್ತಾರೆ.
ಇದಾದ ಬಳಿಕ ನೆಟ್ ಮೀಟರ್ಗೆ ಅರ್ಜಿ ಸಲ್ಲಿಸಬೇಕು.
ನೆಟ್ ಮೀಟರ್ ಇನ್ಸ್ಟಾಲ್ ಆಗಿ ಡಿಸ್ಕಾಂ ಅಧಿಕಾರಿಗಳಿಂದ ಪರಿಶೀಲನೆ ಆದ ಬಳಿಕ ಕಮಿಷನಿಂಗ್ ಸರ್ಟಿಫಿಕೇಟ್ ಸಿಗುತ್ತದೆ.
ಬಳಿಕ ಪಿಎಂ ಸೂರ್ಯಘರ್ ಪೋರ್ಟಲ್ಗೆ ಹೋಗಿ ಮತ್ತೆ ಲಾಗಿನ್ ಆಗಿ, ನಿಮ್ಮ ಬ್ಯಾಂಕ್ ಖಾತೆ ವಿವರ ನೀಡಿ. ಕ್ಯಾನ್ಸಲ್ ಮಾಡಿದ ಚೆಕ್ನ ಸ್ಕ್ಯಾನ್ಡ್ ಕಾಪಿಯನ್ನು ಅಪ್ಲೋಡ್ ಮಾಡಿ. ಇದು ಕೊನೆಯ ಪ್ರಕ್ರಿಯೆ. ಇದು ಮುಗಿದ ಬಳಿಕ 30 ದಿನದೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಸಬ್ಸಿಡಿ ಹಣ ಬಂದು ಸೇರುತ್ತದೆ.